ಸೊಸೆಗೆ ಕಾರ್ ಡ್ರೈವಿಂಗ್ ಕಲಿಸಲು ಮುಂದಾದ ಧರ್ಮರಾಜ್, ಭಾಗ್ಯಾ ಜೊತೆ ಭರತನಾಟ್ಯ ಸ್ಪರ್ಧೆಗೆ ಇಳಿದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 21ರ ಎಪಿಸೋಡ್‌ನಲ್ಲಿ ಸೊಸೆ ಹಾಗೂ ಮಗ ಒಂದಾಗಬೇಕೆಂದು ಕುಸುಮಾ ಜೊತೆ ಧರ್ಮರಾಜ್ ಕೂಡಾ ಪ್ರಯತ್ನಿಸುತ್ತಿದ್ದಾರೆ. ಭಾಗ್ಯಾ ಯಾವುದಕ್ಕೂ ಕಡಿಮೆ ಇಲ್ಲ ಎಂದು ತೋರಿಸಲು ಕಾರ್ ಡ್ರೈವಿಂಗ್ ಕಲಿಸಲು ಮುಂದಾಗುತ್ತಾರೆ.
Bhagyalakshmi Kannada Serial: ಭಾಗ್ಯಾ ಜೀವನ ಸರಿಮಾಡಲು ಕುಸುಮಾ, ಪೂಜಾ, ಸುಂದ್ರಿ ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗ ಧರ್ಮರಾಜ್‌ಗೆ ಕೂಡಾ ವಿಷಯ ಗೊತ್ತಾಗಿದೆ. ಮನೆಯಲ್ಲಿ ಭಾಗ್ಯಾ, ಮಕ್ಕಳು ಹೊರತುಪಡಿಸಿ ತಾಂಡವ್, ಎರಡನೇ ಮದುವೆಗೆ ಪ್ರಯತ್ನಿಸುತ್ತಿರುವುದು ಎಲ್ಲರಿಗೂ ಗೊತ್ತಾಗಿದೆ. 1 ತಿಂಗಳಲ್ಲಿ ಹೇಗಾದರೂ ಮಾಡಿ ತಾಂಡವ್ ಮನಸ್ಸಿನಲ್ಲಿ ಭಾಗ್ಯಾ ಬಗ್ಗೆ ಪ್ರೀತಿ ಉಂಟಾಗುವಂತೆ ಮಾಡಲು ಎಲ್ಲರೂ ಹೊಸ ಐಡಿಯಾ ಮಾಡುತ್ತಲೇ ಇದ್ದಾರೆ.
ಕಾರ್ ಡ್ರೈವಿಂಗ್ ಕಲಿಯಲು ಹೊರಟ ಭಾಗ್ಯಾ
ಕುಸುಮಾ ಭಾಗ್ಯಾಳನ್ನು ಚೆನ್ನಾಗಿ ತಯಾರಿ ಮಾಡಿ ಇನ್ಮುಂದೆ ನೀನು ಹೀಗೆ ಇರಬೇಕು ಎಂದು ಕಂಡಿಷನ್ ಮಾಡುತ್ತಾಳೆ. ಭಾಗ್ಯಾ ಹೊಸ ಲುಕ್ ನೋಡಿ ಮಕ್ಕಳು ಖುಷಿಯಾಗುತ್ತಾರೆ, ಇನ್ಮುಂದೆ ಹೀಗೇ ಇರಿ ಎಂದು ಬೇಡಿಕೆ ಇಡುತ್ತಾರೆ, ಹೆಂಡತಿಯನ್ನು ನೋಡಿ ತಾಂಡವ್ ಖುಷಿ ಅದರೂ, ಏನೂ ಆಗಲಿಲ್ಲ ಎನ್ನುವಂತೆ ನಾಟಕವಾಡುತ್ತಾನೆ. ಗೂಬೆಯನ್ನು ಏನು ಮಾಡಿದರೂ ಬದಲಿಸಲು ಆಗುವುದಿಲ್ಲ, ಅಡುಗೆ ಮಾಡಲು ಇಷ್ಟೆಲ್ಲಾ ಮೇಕಪ್ ಬೇಕಿತ್ತಾ ಎಂದು ಹೀಯಾಳಿಸುತ್ತಾನೆ. ಇದರಿಂದ ಬೇಸರಗೊಂಡ ಭಾಗ್ಯಾ ನಾನು ಇದ್ದಂತೆ ಇರುತ್ತೇನೆ, ಹೀಗೆಲ್ಲಾ ಡ್ರೆಸ್ ಮಾಡಿಕೊಳ್ಳುವುದಿಲ್ಲ ಎಂದು ಅತ್ತೆ ಮುಂದೆ ಬೇಸರ ವ್ಯಕ್ತಪಡಿಸುತ್ತಾಳೆ. ತಾಂಡವ್, ಭಾಗ್ಯಾ ಕಡೆ ವಾಲುತ್ತಿದ್ದಾನೆ ಎಂದು ಖುಷಿಯಾಗಿದ್ದ ಕುಸುಮಾಗೆ ಮಗನ ಮಾತು ಕೇಳಿ ಬೇಸರವಾಗುತ್ತದೆ.
ಮರುದಿನ ಭಾಗ್ಯಾ ಕೆಲಸ ಮುಗಿಸಿ ಬಂದು ಅಡುಗೆ ಮಾಡುವಾಗ ಧರ್ಮರಾಜ್, ಸೊಸೆ ಬಳಿ ಬಂದು ಸ್ವಲ್ಪ ಕೆಲಸ ಇದೆ ಹೊರಗೆ ಹೋಗಿ ಬರೋಣ ಬಾ ಎಂದು ಕರೆಯುತ್ತಾನೆ. ಅಡುಗೆ ಮಾಡಿ ಬರುತ್ತೇನೆ ಎಂದು ಭಾಗ್ಯಾ ಹೇಳುತ್ತಾಳೆ. ಈಗ ಪೂಜಾ, ಸುಂದ್ರಿ ಅಡುಗೆ ಮಾಡುತ್ತಾರೆ, ನೀನು ಹೋಗಿ ಮಾವ ಏನು ಹೇಳುತ್ತಾರೆ ಕೇಳು ಎಂದು ಕುಸುಮಾ ಹೇಳಿದಾಗ ಭಾಗ್ಯಾ, ಸುಂದ್ರಿ, ಪೂಜಾ ಮೂವರೂ ಶಾಕ್ ಆಗುತ್ತಾರೆ. ಅಡುಗೆ ಮಾಡಲು ಬರದೆ ಪೂಜಾ, ಸುಂದ್ರಿ ತಡಬಡಾಯಿಸುತ್ತಾರೆ. ಇನ್ಮುಂದೆ ನೀವು ಅಡುಗೆ ಕಲಿಯಬೇಕು ಎಂದು ಕುಸುಮಾ ತಾಕೀತು ಮಾಡುತ್ತಾಳೆ.
ಭಾಗ್ಯಾ ಜೊತೆ ಡ್ಯಾನ್ಸ್ ಮಾಡಲು ತಾಂಡವ್ ಒಪ್ಪಿಗೆ
ಇನ್ಮುಂದೆ ನೀನು ಕಾರ್ ಡ್ರೈವಿಂಗ್ ಕಲಯಬೇಕು ಎಂದು ಕುಸುಮಾ ಹಾಗೂ ಧರ್ಮರಾಜ್ ಹೇಳಿದಾಗ ನನಗೆ ಇದೆಲ್ಲಾ ಬೇಡ ಎನ್ನುತ್ತಾಳೆ. ನಾವು ಹೇಳಿದಂತೆ ಕೇಳಬೇಕು ಎಂದು ಇಬ್ಬರೂ ಹೇಳಿದಾಗ ಭಾಗ್ಯಾ ಸರಿ ಎನ್ನುತ್ತಾಳೆ. ಭಾಗ್ಯಾಗೆ ಕಾರ್ ಕಲಿಸಲು ಮುಂದಾದಾಗ, ನನ್ನ ಕಾರ್ ಏಕೆ ತೆಗೆದುಕೊಂಡು ಹೋಗುತ್ತಿದ್ದೀರಿ? ಅವಳು ಏನೇ ಮಾಡಿದರೂ ಕಾರ್ ಡ್ರೈವಿಂಗ್ ಕಲಿಯುವುದಿಲ್ಲ ಎಂದು ತಾಂಡವ್ ಮತ್ತೆ ಹೆಂಡತಿಯನ್ನು ಹೀಯಾಳಿಸುತ್ತಾನೆ. ಭಾಗ್ಯಾ ಕಾರು ಕಲಿಯುತ್ತಾಳೆ ಅಂತ ನಿನಗೆ ಭಯಾನಾ ಎಂದು ಧರ್ಮರಾಜ್ ಕೇಳುತ್ತಾರೆ. ನನಗೆ ಏಕೆ ಭಯ ಎಂದು ತಾಂಡವ್ ಹೇಳುತ್ತಾನೆ. ಹಾಗಾದರೆ ನೀನು ಸುಮ್ಮನಿರು ಎಂದು ಧರ್ಮರಾಜ್, ಮಗನ ಬಾಯಿ ಮುಚ್ಚಿಸುತ್ತಾರೆ.
ಮತ್ತೊಂದೆಡೆ ಕುಸುಮಾ ಹಾಗೂ ಸುಂದ್ರಿ ಮದುವೆ ಬಗ್ಗೆ ಕುಸುಮಾ ಬಳಿ ಮಾತನಾಡುವುದನ್ನು ಕಂಡು ತಾಂಡವ್ ಕೊಂಕು ಮಾತನಾಡುತ್ತಾನೆ. ನನ್ನ ಅಕ್ಕ ಈ ಮನೆಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾಳೆ. ಅವಳು ಮದುವೆಗೂ ಮುನ್ನ ಸಾಕಷ್ಟು ಸಾಧನೆ ಮಾಡಿದ್ದಾಳೆ. ಒಂದು ವೇಳೆ ಅವಳಿಗೆ ಅವಕಾಶ ಇದ್ದಿದ್ದರೆ ಇನ್ನಷ್ಟು ಸಾಧನೆ ಮಾಡುತ್ತಿದ್ದಳು, ಅವಳಿಗೆ ಭರತನಾಟ್ಯ ಎಂದರೆ ಬಹಳ ಇಷ್ಟ ಎನ್ನುತ್ತಾಳೆ. ಅದೇನು ದೊಡ್ಡ ಸಾಧನೆ, ಅದನ್ನು ಯಾರು ಬೇಕಾದರೂ ಮಾಡಬಹುದು ಎಂದು ತಾಂಡವ್ ಹೇಳುತ್ತಾನೆ. ಹಾಗಾದರೂ ನೀನು ಡ್ಯಾನ್ಸ್ ಮಾಡು, ನಾಳೆಯಿಂದ ಭಾಗ್ಯಾ, ನೀನು ಇಬ್ಬರೂ ಡ್ಯಾನ್ಸ್ ಕ್ಲಾಸ್‌ಗೆ ಸೇರಿ, ಯಾರು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ ನೋಡೇ ಬಿಡೋಣ ಎಂದು ಸವಾಲು ಹಾಕುತ್ತಾಳೆ. ತಾಂಡವ್ ಕೂಡಾ ಈ ಸವಾಲಿಗೆ ಒಪ್ಪುತ್ತಾನೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ