ಹೆಂಡತಿ ಭಾಗ್ಯಾಗೆ ತುಂಡುಡುಗೆ ಕೊಂಡು ತಂದ ತಾಂಡವ್, ಮಗ ಬದಲಾಗಿಬಿಟ್ಟ ಎಂದು ನಂಬಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 30ರ ಎಪಿಸೋಡ್‌ನಲ್ಲಿ ಭಾಗ್ಯಾ ಡ್ಯಾನ್ಸ್‌ಗೆ ಖುಷಿಯಾಗಿ ತಾಂಡವ್ ಎಲ್ಲರಿಗೂ ಪಾರ್ಟಿ ಅರೇಂಜ್ ಮಾಡುತ್ತಾನೆ. ಹೆಂಡತಿಗೆ ತುಂಡುಡುಗೆ ತರುತ್ತಾನೆ. ಮಗ ಬದಲಾಗಿಬಿಟ್ಟ ಎಂದು ಕುಸುಮಾ ಖುಷಿ ಪಟ್ಟರೆ, ಭಾಗ್ಯಾಗೆ ಇನ್ನೂ ಅನುಮಾನ ಕಾಡುತ್ತಿದೆ.
Bhagyalakshmi Kannada Serial: ಭಾಗ್ಯಾ ಡ್ಯಾನ್ಸ್ ನೋಡಿ ಡ್ಯಾನ್ಸ್ ಟೀಚರ್ ಆಕೆಗೆ ಕ್ಷಮೆ ಕೇಳಿದ ನಂತರ ತಾಂಡವ್ ಕೂಡಾ ಬದಲಾದಂತೆ ನಾಟಕವಾಡುತ್ತಾನೆ. ಭಾಗ್ಯಾಗೆ ಅವಮಾನ ಆಗೋದನ್ನು ನೋಡಬೇಕು ಎಂದು ಕಾಯುತ್ತಿದ್ದ ತಾಂಡವ್, ಶ್ರೇಷ್ಠಾಗೆ ಆಕೆಯನ್ನು ಹೊಗಳಿದ್ದು ಸಹಿಸಿಕೊಳ್ಳಲು ಆಗುತ್ತಿಲ್ಲ. ಮನಸಿನಲ್ಲಿ ಏನೋ ಉದ್ದೇಶ ಇಟ್ಟುಕೊಂಡು ತಾಂಡವ್, ತಾನು ಬದಲಾದಂತೆ ನಟಿಸುತ್ತಾನೆ.
ತಾಂಡವ್ ಹೊಸ ವರಸೆ ಕಂಡು ಶಾಕ್ ಆದ ಭಾಗ್ಯಾ
ಭಾಗ್ಯಾ ಡ್ಯಾನ್ಸ್ ತುಂಬಾ ಚೆನ್ನಾಗಿತ್ತು, ಇದಕ್ಕಾಗಿ ನಾನು ನಾನು ನಾಳೆ ಮನೆಯಲ್ಲಿ ಒಂದು ಪಾರ್ಟಿ ಆಯೋಜಿಸುತ್ತೇನೆ ಎನ್ನುತ್ತಾನೆ. ಇದನ್ನು ಕೇಳಿ ಕುಸುಮಾಗೆ ಆಶ್ಚರ್ಯವಾಗುತ್ತದೆ. ಸೊಸೆಯ ಡ್ಯಾನ್ಸ್ ನೋಡಿ ಮಗ ಬದಲಾಗಿದ್ದಾನೆ, ಹೆಂಡತಿಯನ್ನು ಪ್ರೀತಿಸಲು ಶುರು ಮಾಡಿದ್ದಾನೆ ಎಂದುಕೊಳ್ಳುತ್ತಾಳೆ. ಆದರೆ ಭಾಗ್ಯಾ ಮಾತ್ರ ಗಂಡ ಬದಲಾಗಿದ್ಧಾನೆ ಎಂದರೆ ಅಷ್ಟು ಸುಲಭವಾಗಿ ನಂಬಲು ಸಾಧ್ಯವಾಗುವುದಿಲ್ಲ. ನಾಳೆ ಎಲ್ಲರೂ ರೆಡಿ ಇರಿ, ಭಾಗ್ಯಾ ನೀನು ಬೇಗ ಕೆಲಸದಿಂದ ಬಾ ಎನ್ನುತ್ತಾನೆ. ಮರುದಿನ ಭಾಗ್ಯಾ ಕಾರ್ ಡ್ರೈವಿಂಗ್ ಮುಗಿಸಿ ಮನೆಗೆ ಬರುತ್ತಾಳೆ. ಹೇಗೆ ನಡೆಯುತ್ತಿದೆ ಡ್ರೈವಿಂಗ್ ಕ್ಲಾಸ್, ಭಾಗ್ಯಾ ಪರ್ಫೆಕ್ಟ್ ಆಗಲು ಇನ್ನೂ ಎಷ್ಟು ದಿನಗಳು ಬೇಕು ಅಂತ ಅಪ್ಪನನ್ನು ಕೇಳುತ್ತಾನೆ. ನನ್ನ ಸೊಸೆ ಬಹಳ ಬುದ್ದಿವಂತೆ ಎಲ್ಲವನ್ನೂ ಬೇಗ ಕಲಿಯುತ್ತಾಳೆ ಎಂದು ಧರ್ಮರಾಜ್ ಹೇಳುತ್ತಾನೆ.
ಬಾಸ್, ಸಹೋದ್ಯೋಗಿಗಳನ್ನು ಪಾರ್ಟಿಗೆ ಇನ್ವೈಟ್ ಮಾಡಿದ ತಾಂಡವ್
ತಾಂಡವ್, ತನ್ನ ಬಗ್ಗೆ ವಿಚಾರಿಸುತ್ತಿರುವುದಕ್ಕೆ ಭಾಗ್ಯಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳುತ್ತಾಳೆ. ಇವರು ಖಂಡಿತ ಬದಲಾಗಿಲ್ಲ. ಏನೂ ಸಂಚು ಮಾಡುತ್ತಿದ್ದಾರೆ ಎಂದುಕೊಳ್ಳುತ್ತಾಳೆ. ಆದರೆ ಕುಸುಮಾ, ಮಗ ಬದಲಾದ ಎಂಬ ಖುಷಿಯಲ್ಲಿದ್ದಾಳೆ. ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ತಾಂಡವ್ ಸಹೋದ್ಯೋಗಿಗಳಿಗೆ ಪಾರ್ಟಿಗೆ ಆಹ್ವಾನಿಸುತ್ತಾನೆ. ಪತ್ನಿಯನ್ನು ಕರೆದುಕೊಂಡು ಮನೆಗೆ ಬರುವಂತೆ ಬಾಸ್‌ಗೂ ತಿಳಿಸುತ್ತಾನೆ. ಇವನ ಉತ್ಸಾಹ ನೋಡಿ ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ಇವತ್ತು ನನ್ನನ್ನು ಡಿನ್ನರ್‌ಗೆ ಕರೆದೊಯ್ಯುತ್ತೇನೆ ಎಂದು ಹೇಳಿದ್ದೆ, ಅದು ಬಿಟ್ಟು ಈ ಪಾರ್ಟಿ ಅವಶ್ಯಕತೆ ಇತ್ತಾ ಎನ್ನುತ್ತಾಳೆ. ಖಂಡಿತ ಅವಶ್ಯಕತೆ ಇತ್ತು ಶ್ರೇಷ್ಠಾ. ನಾನು ಏನು ಮಾಡಲು ಹೊರಟಿದ್ದೇನೆ ಕಾದು ನೋಡು ಎನ್ನುತ್ತಾನೆ. ಮನೆಯನ್ನು ಡೆಕೊರೇಷನ್ ಮಾಡಲು ಇವೆಂಟ್ ಮ್ಯಾನೇಜ್‌ಮೆಂಟ್ ಸಿಬ್ಬಂದಿಯನ್ನು ಮನೆಗೆ ಕಳಿಸುತ್ತಾನೆ.
ಭಾಗ್ಯಾ ಸ್ನೇಹಿತೆ ಹಿತಾಗೆ ಪಾರ್ಟಿಗೆ ಆಹ್ವಾನ
ಇತ್ತ ಭಾಗ್ಯಾ ಹೋಟೆಲ್‌ನಲ್ಲೂ ಇದೇ ವಿಚಾರದ ಬಗ್ಗೆ ಯೋಚಿಸುತ್ತಾಳೆ. ಪೂಜಾಳಿಂದ ವಿಚಾರ ತಿಳಿದ ಹಿತಾ, ಭಾಗ್ಯಾ ಜೊತೆ ಖುಷಿ ಹಂಚಿಕೊಳ್ಳುತ್ತಾಳೆ. ಅಷ್ಟರಲ್ಲಿ ತಾಂಡವ್ ಕಾಲ್ ಮಾಡುತ್ತಾನೆ. ಸಂಜೆ ಮರೆಯಬೇಡ, ಬೇಗ ಬಾ ನಿನ್ನ ಫ್ರೆಂಡ್‌ಗೆ ಫೋನ್ ಕೊಡು ಎನ್ನುತ್ತಾನೆ. ಹಿತಾ ಜೊತೆ ಆತ್ಮೀಯವಾಗಿ ಮಾತನಾಡಿಸಿ, ಸಂಜೆ ನೀವೂ ಪಾರ್ಟಿಗೆ ಬರಬೇಕು ಎನ್ನುತ್ತಾನೆ. ತಾಂಡವ್ ಮಾತು ಕೇಳಿ ಹಿತಾಗೆ ಆಶ್ಚರ್ಯವಾಗುತ್ತದೆ. ಇಷ್ಟು ಬೇಗ ಬದಲಾಗಿಬಿಟ್ರಾ ಎನ್ನುತ್ತಾಳೆ. ಭಾಗ್ಯಾಗೆ ಕೂಡಾ ಅದೇ ಅನುಮಾನ ಕಾಡುತ್ತದೆ.
ಭಾಗ್ಯಾಗೆ ತಾಂಡವ್ ತಂದಿದ್ದ ತುಂಡುಡುಗೆ ನೋಡಿ ಗಾಬರಿಯಾದ ಕುಸುಮಾ
ಸಂಜೆ ಮನೆಗೆ ಬರುವ ತಾಂಡವ್ ಎಲ್ಲರಿಗೂ ಹೊಸ ಬಟ್ಟೆ ತರುತ್ತಾನೆ. ಅದನ್ನೂ ನೋಡಿ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಸುಂದ್ರಿಗೂ ಹೊಸ ಬಟ್ಟೆ ತರುತ್ತಾನೆ. ಬಟ್ಟೆ ನೋಡಿ ಎಲ್ಲರಿಗೆ ಖುಷಿಯಾದರೂ, ಕುಸುಮಾ ಹೊರತುಪಡಿಸಿ ಉಳಿದವರಿಗೆ ತಾಂಡವ್ ವರ್ತನೆ ವಿಚಿತ್ರ ಎನಿಸುತ್ತದೆ. ಭಾಗ್ಯಾಗೆ ಹೊಸ ಬಟ್ಟೆ ತಂದಿಲ್ವಾ ಎಂದು ಕುಸುಮಾ ಕೇಳುತ್ತಾಳೆ. ನಿಮ್ಮೆಲ್ಲರಿಗೂ ತಂದು ಅವಳಿಗೆ ತರದೆ ಇರ್ತೀನ ಎಂದು ತಾಂಡವ್, ಹೆಂಡತಿಗಾಗಿ ತಂದಿದ್ದ ಬಟ್ಟೆಯನ್ನು ಹೊರ ತೆಗೆಯುತ್ತಾನೆ. ಅದನ್ನು ನೋಡಿ ಎಲ್ಲರೂ ಶಾಕ್ ಆಗುತ್ತಾರೆ. ಸೀರೆ, ಕುರ್ತಾ ಬದಲಿಗೆ ತಾಂಡವ್ ಹೆಂಡತಿಗೆ ತುಂಡುಡುಗೆ ತಂದಿರುತ್ತಾನೆ.
ಭಾಗ್ಯಾಗೆ ತಾಂಡವ್ ತಂದ ಬಟ್ಟೆಯನ್ನು ಹಾಕಿಸಲು ಕುಸುಮಾ ಒಪ್ಪುತ್ತಾಳಾ? ತಾಂಡವ್ ಪಿತೂರಿ ಎಲ್ಲರಿಗೂ ಅರ್ಥವಾಗುತ್ತಾ? ಮುಂದಿ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ