ಸಿನಿಮಾ ನೋಡಿದ ಯಾರು ಬೇಕಾದ್ರೂ ಬಘೀರನಾಗಬಹುದು, ಇದು ಸೂಪರ್‌ಹೀರೊ ಜಾನರ್ ಸಿನಿಮಾ; ಬಘೀರ ನಿರ್ದೇಶಕ ಡಾ ಸೂರಿ
ಕನ್ನಡ ಸುದ್ದಿ  /  ಮನರಂಜನೆ  /  ಸಿನಿಮಾ ನೋಡಿದ ಯಾರು ಬೇಕಾದ್ರೂ ಬಘೀರನಾಗಬಹುದು, ಇದು ಸೂಪರ್‌ಹೀರೊ ಜಾನರ್ ಸಿನಿಮಾ; ಬಘೀರ ನಿರ್ದೇಶಕ ಡಾ ಸೂರಿ

ಸಿನಿಮಾ ನೋಡಿದ ಯಾರು ಬೇಕಾದ್ರೂ ಬಘೀರನಾಗಬಹುದು, ಇದು ಸೂಪರ್‌ಹೀರೊ ಜಾನರ್ ಸಿನಿಮಾ; ಬಘೀರ ನಿರ್ದೇಶಕ ಡಾ ಸೂರಿ

ಬಘೀರ ಸಿನಿಮಾ ಮೂಲಕ ಮತ್ತೆ ಪ್ರಶಾಂತ್‌ ನೀಲ್‌ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಒಂದಾಗಿದ್ದಾರೆ. ಪ್ರಶಾಂತ್ ನೀಲ್ ಈ ಸಿನಿಮಾಕ್ಕೆ ಚಿತ್ರಕಥೆ ಬರೆದಿದ್ದು, ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ಇಂದು (ಅಕ್ಟೋಬರ್ 31) ಸಿನಿಮಾ ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಬಗ್ಗೆ ನಿರ್ದೇಶಕ ಡಾ ಸೂರಿ ಅವರ ಮಾತುಗಳ ಹೀಗಿವೆ.

ಬಘೀರ ನಿರ್ದೇಶಕ ಡಾ ಸೂರಿ ಸಂದರ್ಶನ
ಬಘೀರ ನಿರ್ದೇಶಕ ಡಾ ಸೂರಿ ಸಂದರ್ಶನ

ಶ್ರೀಮುರಳಿ ಅಭಿನಯದ ಬಘೀರಾ ಸಿನಿಮಾ ಬಿಡುಗಡೆಯಾಗಿದೆ. ದಶಕದ ಬಳಿಕ ಪ್ರಶಾಂತ್ ನೀಲ್ ಹಾಗೂ ಮುರಳಿ ಒಂದಾಗಿದ್ದಾರೆ. ಕನ್ನಡದ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಕಳೆದ ಮೂರು ವರ್ಷಗಳಿಂದ ಈ ಸಿನಿಮಾ ನಿರ್ಮಾಣ ಹಂತದಲ್ಲಿದ್ದು, ಭಾರಿ ಸದ್ದು ಮಾಡಿತ್ತು. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಬಘೀರ ಸಿನಿಮಾವು ಟೀಸರ್‌, ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿತ್ತು. ಡಾ ಸೂರಿ ನಿರ್ದೇಶನ ಈ ಸಿನಿಮಾಗಿದ್ದು, ಇಂದು (ಅಕ್ಟೋಬರ್ 31) ಬಿಡುಗಡೆಯಾಗಿದೆ.  ಈ ಹೊತ್ತಿನಲ್ಲಿ ನಿರ್ದೇಶಕ ಡಾ ಸೂರಿ ಸಿನಿಮಾದ ಬಗ್ಗೆ ಮಾತನಾಡಿದ್ದು ಇದು ಸೂಪರ್ ಹೀರೊ ಜಾನರ್ ಸಿನಿಮಾ,  ಸಿನಿಮಾ ನೋಡಿದ ಯಾರು ಬೇಕಾದರೂ ಬಘೀರ ಆಗಬಹುದು ಎಂದಿದ್ದಾರೆ. 

ಡಾ ಸೂರಿ ಬಘೀರ ಸಿನಿಮಾದ ಬಗ್ಗೆ ಒಟಿಟಿ ಪ್ಲೇಗೆ ನೀಡಿದ ಸಂದರ್ಶನದಲ್ಲಿ ಈ ಸಿನಿಮಾದ ಟ್ರೇಲರ್ ನೋಡಿದ ಪ್ರೇಕ್ಷಕರು ಹಾಲಿವುಡ್‌ ಸೂಪರ್‌ ಹೀರೊ ಸಿನಿಮಾಗಳ ಜೊತೆ ಇದನ್ನು ಹೋಲಿಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಬಘೀರ, ಟ್ರೈಲರ್‌ನಲ್ಲಿ ನೋಡಿದಂತೆ ಇದು ಹಾಲಿವುಡ್ ಸೂಪರ್‌ ಹೀರೊ ಸಿನಿಮಾಗಳ ಪ್ರಕಾರವನ್ನು ಅನುಸರಿಸುತ್ತದೆ. ಡಾ ಸೂರಿ ತಮ್ಮ ಚಿತ್ರವು ಬ್ಯಾಟ್‌ಮ್ಯಾನ್ ಚಲನಚಿತ್ರದಂತೆ ಪ್ರಸ್ತುತಪಡಿಸಿದ್ದಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರು ನಮ್ಮ ಪ್ರಯತ್ನವನ್ನು ಖಂಡಿತ ಶ್ಲಾಘಿಸುತ್ತಾರೆ ಎಂದು ಡಾ ಸೂರಿ ಆತ್ಮವಿಶ್ವಾಸದಿಂದ ಹೇಳುತ್ತಾರೆ.

ಜನರ ನಿರೀಕ್ಷೆ ಹಾಲಿವುಡ್‌ ಮಟ್ಟಿಗಿದ್ದರೆ ಕ್ರಿಶ್ ಸಿನಿಮಾ ಗೆಲ್ತಾ ಇರ್ಲಿಲ್ಲ 

‘ಇಲ್ಲಿನ ಪ್ರೇಕ್ಷಕರು ಹಾಲಿವುಡ್ ಎಸ್ಕ್ಯೂನಂತೆ ನಿರೀಕ್ಷೆಗಳನ್ನು ಹೊಂದಿದ್ದರೆ ಕ್ರಿಶ್‌ ಸಿನಿಮಾ ಆ ಮಟ್ಟಿಗೆ ಯಶಸ್ಸು ಕಾಣಲು ಸಾಧ್ಯವಿರಲಿಲ್ಲ. ಜನರು ಕ್ರಿಶ್‌ಗಿಂತ ಉತ್ತಮವಾದ ಹಾಲಿವುಡ್ ಚಲನಚಿತ್ರಗಳನ್ನು ನೋಡಿದ್ದಾರೆ ಮತ್ತು ಅವರು ಅದನ್ನು ಇಷ್ಟಪಟ್ಟಿದ್ದಾರೆ. ಬಘೀರ ಸಿನಿಮಾವನ್ನು ನಾವು ಹಾಲಿವುಡ್ ಚಿತ್ರದಂತೆ ವಿಷ್ಯುವಲಿ ತೋರಿಸಲು ಪ್ರಯತ್ನ ಪಟ್ಟಿದ್ದೇವೆ. ಆದರೆ ಖಂಡಿತ ಇದನ್ನು ಯಾರೂ ಹಾಲಿವುಡ್ ಸಿನಿಮಾಗಳನ್ನು ಕಾಪಿ ಮಾಡಿದ್ದಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿ ಬಗೀರ ಆಗಿ ಹೇಗೆ ಬದಲಾಗುತ್ತಾನೆ. ಈ ಚಿತ್ರವನ್ನು ನೋಡಿದ ಪ್ರೇಕ್ಷಕರಲ್ಲಿ ಯಾರು ಬೇಕಾದರೂ ಬಘೀರಾ ಆಗಬಹುದು‘ ಎಂದು ಡಾ ಸೂರಿ ಹೇಳುತ್ತಾರೆ.

ಮಿನ್ನಲ್ ಮುರುಳಿ ಬಗ್ಗೆ ಡಾ ಸೂರಿ ಮೆಚ್ಚುಗೆ 

ಆದರೆ ಮಿನ್ನಲ್ ಮುರುಳಿಯಂತಹ ಸಿನಿಮಾವು ಸೂಪರ್ ಹೀರೊ ಸಿನಿಮಾಗಳಿಗೆ ಫ್ಯಾನಿ ಸೂಟ್‌, ಗ್ಯಾಜೆಟ್‌ಗಳ ಅಗತ್ಯವಿಲ್ಲ ಎಂಬುದನ್ನು ಸಾಬೀತು ಮಾಡಿದೆ. ಆದರೆ ಬಘೀರ ಹಾಲಿವುಡ್ ಸೂಪರ್ ಹೀರೊ ಸಿನಿಮಾದ ಟೆಂಪ್ಲೇಟ್ ಅನ್ನು ಹೋಲುತ್ತದೆ. ಮಿನ್ನಲ್ ಮುರಳಿ ಮನಸ್ಸಿಗೆ ಮುದ ನೀಡುವ ಚಿತ್ರ. ಇಬ್ಬರಿಗೆ ಸಂಭವಿಸುವ ಒಂದು ವಿದ್ಯಮಾನವು ಒಬ್ಬನನ್ನು ಹೇಗೆ ನಾಯಕನನ್ನಾಗಿ ಮಾಡುತ್ತದೆ ಮತ್ತು ಇನ್ನೊಬ್ಬನನ್ನು ಖಳನಾಯಕನನ್ನಾಗಿ ಮಾಡುತ್ತದೆ. ಇದು ಕಥೆಯನ್ನು ಹೇಳುವ ಅದ್ಭುತ ವಿಧಾನವಾಗಿದೆ, ನನಗೂ ಆ ಸಿನಿಮಾ ತುಂಬಾ ಇಷ್ಟವಾಗಿತ್ತು. ಮಿನ್ನಲ್ ಮುರಳಿ ಅಸಾಧಾರಣವಾಗಿ ನಿರ್ಮಿಸಿದ ಚಿತ್ರ. ಮತ್ತೊಂದೆಡೆ, ಬಘೀರ ಯಾವುದೇ ಮಹಾಶಕ್ತಿಯನ್ನು ಹೊಂದಿಲ್ಲ ಮತ್ತು ಸಮಾಜವನ್ನು ರಕ್ಷಿಸಲು ದುಷ್ಟರ ವಿರುದ್ಧ ಹೋರಾಡುವ ಬಘೀರನನ್ನು ನೀವು ಸಿನಿಮಾದಲ್ಲಿ ನೋಡಬಹುದು‘ ಎಂದು ಡಾ ಸೂರಿ ಹೇಳುತ್ತಾರೆ.

ತಮ್ಮ ಚಲನಚಿತ್ರದ ಹೋಲಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸುವ ಅವರು ಪ್ರೇಕ್ಷಕರು ಯಾವುದೇ ಪೂರ್ವಭಾವಿ ಕಲ್ಪನೆಗಳಿಲ್ಲದೆ ಚಲನಚಿತ್ರವನ್ನು ವೀಕ್ಷಿಸಬೇಕೆಂದು ಮನವಿ ಮಾಡಿದ್ದಾರೆ. 

 

Whats_app_banner