ಬಿಗ್‌ ಬಾಸ್‌ ಸೀಸನ್‌ 8ರ ವಿಜೇತ ಮಂಜು ಪಾವಗಡ ಮದುವೆ ಆಗ್ತಿರೋ ಹುಡುಗಿ ಯಾರು, ಅವರ ಹಿನ್ನೆಲೆ ಏನು? PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಿಗ್‌ ಬಾಸ್‌ ಸೀಸನ್‌ 8ರ ವಿಜೇತ ಮಂಜು ಪಾವಗಡ ಮದುವೆ ಆಗ್ತಿರೋ ಹುಡುಗಿ ಯಾರು, ಅವರ ಹಿನ್ನೆಲೆ ಏನು? Photos

ಬಿಗ್‌ ಬಾಸ್‌ ಸೀಸನ್‌ 8ರ ವಿಜೇತ ಮಂಜು ಪಾವಗಡ ಮದುವೆ ಆಗ್ತಿರೋ ಹುಡುಗಿ ಯಾರು, ಅವರ ಹಿನ್ನೆಲೆ ಏನು? PHOTOS

  • ಕನ್ನಡ ಕಿರುತೆರೆಯಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡು, ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡವರು ನಟ ಮಂಜು ಪಾವಗಡ. ಆ ಫೇಮ್‌ನಿಂದಲೇ ಬಿಗ್‌ಬಾಸ್‌ ಕನ್ನಡ ಸೀಸನ್‌ 8ರ ವಿಜೇತರಾಗಿಯೂ ಹೊರಹೊಮ್ಮಿದ್ದರು. ಈಗ ಇದೇ ನಟ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ. ಸದ್ದಿಲ್ಲದೆ ನಿಶ್ಚಿತಾರ್ಥವನ್ನೂ ನೆರವೇರಿಸಿಕೊಂಡಿದ್ದಾರೆ.

ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋ ಮೂಲಕ ನಾಡಿನ ಗಮನ ಸೆಳೆದ ಮಂಜು ಪಾವಗಡ ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಒಂದಷ್ಟು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ.
icon

(1 / 6)

ನಟ ಮಂಜು ಪಾವಗಡ ಸಿನಿಮಾರಂಗದಲ್ಲಿದ್ದರೂ, ಇವರದ್ದು ಅರೇಂಜ್ಡ್‌ ಮದುವೆ. ಮನೆಯಲ್ಲಿ ಅಪ್ಪ ಅಮ್ಮ ನೋಡಿದ ಹುಡುಗಿಯನ್ನೇ ಮಂಜು ವರಿಸುತ್ತಿದ್ದಾರೆ.
icon

(2 / 6)

ಪಾವಗಡದಲ್ಲಿಯೇ ಅದ್ಧೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ನಂದಿನಿ ಅವರಿಗೆ ಉಂಗುರ ಹಾಕಿದ್ದಾರೆ.
icon

(3 / 6)

ಸಿನಿಮಾ, ಕಿರುತೆರೆ ಸೇರಿ ಹಲವು ಕ್ಷೇತ್ರಗಳ ಆಪ್ತರು ಆಗಮಿಸಿ ನವ ಜೋಡಿಗೆ ಹಾರೈಸಿದ್ದಾರೆ. 
icon

(4 / 6)

ಅಂದಹಾಗೆ, ಮಂಜು ಅವರನ್ನು ವರಿಸಲಿರುವ ನಂದಿನಿ, ಪಾವಗಡದ ಪಕ್ಕದೂರಿನವರೇ ಎಂದು ತಿಳಿದುಬಂದಿದೆ. ಸದ್ಯ ಬೆಂಗಳೂರಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.
icon

(5 / 6)

ಹಾಗಾದರೆ ಈ ಜೋಡಿಯ ಮದುವೆ ಯಾವಾಗ? ಸದ್ಯದ ಮಾಹಿತಿ ಪ್ರಕಾರ ನವೆಂಬರ್‌ 13 ಮತ್ತು 14ರಂದು ಈ ಜೋಡಿ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು