Ramachari Serial: ಕೋದಂಡನ ಮುಂದೆ ಸಿಂಪತಿ ಗಿಟ್ಟಿಸಿಕೊಳ್ಳಲು ರುಕ್ಕು ಪ್ರಯತ್ನ; ಜಾನಕಿಗೆ ಸಮಾಧಾನ ಮಾಡಿದ ಚಾರು
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಈಗ ಮತ್ತೆ ವೈಶಾಖಾಳನ್ನು ಮನೆಗೆ ತರಲು ನಾನೂ ಪ್ರಯತ್ನ ಮಾಡುತ್ತೇನೆ ಎಂದು ಹೇಳುತ್ತಿದ್ದಾಳೆ. ಇತ್ತ ರುಕ್ಕು ನಾಟಕ ಹೆಚ್ಚಾಗಿದೆ. ಜಾನಕಿ ಕೂಡ ಮಗನ ಬಗ್ಗೆ ಯೋಚನೆ ಮಾಡುತ್ತಿದ್ದಾಳೆ.
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ಜಾನಕಿ ಇಬ್ಬರೂ ಈಗ ವೈಶಾಖಾ ಬಗ್ಗೆ ಮಾತಾಡುತ್ತಿದ್ದಾರೆ. ಇದಕ್ಕೆ ಕಾರಣ ಏನೆಂದರೆ ವೈಶಾಖಾ ಇಲ್ಲ ಎಂಬ ನೋವಲ್ಲಿ ಮನೆ ಮಗ ಕೋದಂಡ ಇದ್ದಾನೆ ಎನ್ನುವುದು. ಅವನಿಗೆ ತುಂಬಾ ಬೇಸರ ಆಗಿ ಅವನು ಕುಡಿತದ ಚಟ ಹಿಡಿಸಿಕೊಂಡಿದ್ದಾನೆ. ದಿನವೂ ಅವಳ ನೆನಪಿನಲ್ಲಿ ಕುಡಿಯುತ್ತಾನೆ. ಇದರಿಂದ ಸಮಸ್ಯೆ ಆಗುತ್ತಿದೆ. ಮನೆಯಲ್ಲಿ ಎಲ್ಲರಿಗೂ ಬೇಸರ ಆಗಿದೆ. ನನ್ನ ಮಕ್ಕಳು ಎಂದಿಗೂ ಈ ರೀತಿ ಮಾಡುವುದಿಲ್ಲ. ನಾನು ನನ್ನ ಮಕ್ಕಳನ್ನು ಹೀಗೆ ಬೆಳೆಸಿಲ್ಲ ಎಂದು ಅಂದುಕೊಂಡಿದ್ದ ನಾರಾಯಣಾಚಾರ್ಯರಿಗೆ ಈ ವರ್ತನೆಯಿಂದ ಇನ್ನಷ್ಟು ನೋವಾಗಿದೆ.
ಹೀಗಿರುವಾಗ ಚಾರು ಹೇಗಾದರೂ ಮಾಡಿ ಅಕ್ಕನನ್ನು ಬಿಡಿಸಿಕೊಂಡು ಬರೋಣ ಎನ್ನುವ ರೀತಿಯಲ್ಲಿ ತನ್ನ ಅತ್ತೆಗೆ ಸಮಾಧಾನ ಮಾಡುತ್ತಿದ್ದಾಳೆ. ಅವಳು ತಿಳಿಯದೇ ತಪ್ಪು ಮಾಡಿರಬಹುದು ಬಿಡು ಎಂದು ಅಂದುಕೊಳ್ಳುತ್ತಾ ಸಮಾಧಾನ ತಂದುಕೊಳ್ಳುತ್ತಿದ್ದಾಳೆ. ಮನೆಯವರ ಒಳಿತಿಗಾಗಿ ಅವಳು ಏನನ್ನು ಬೇಕಾದರೂ ಮಾಡುತ್ತಾಳೆ. ಇನ್ನು ರುಕ್ಕು ಮಾತ್ರ ಇನ್ನಷ್ಟು ಮನೆಯನ್ನು ಹಾಳು ಮಾಡಲು ನೋಡುತ್ತಿದ್ದಾಳೆ.
ಕೋದಂಡನ ಮುಂದೆ ರುಕ್ಕು ಸಿಂಪತಿ ನಾಟಕ
ಕೋದಂಡ ಮನೆಯೊಳಗಡೆ ಬರುತ್ತಿದ್ದಾನಾ? ಇಲ್ಲವಾ? ಎಂದು ನೋಡಿಕೊಂಡು ಅವಳು ಒಂದು ಉಪಾಯ ಮಾಡುತ್ತಾಳೆ. ದೇವರ ಮುಂದೆ ನಿಂತುಕೊಂಡು ಕೈ ಮೇಲೆ ಕರ್ಪೂರ ಹೊತ್ತಿಸಿಕೊಂಡು ನಾನೇ ತಪ್ಪು ಮಾಡಿದ್ದು, ನನ್ನಿಂದಲೇ ಇಷ್ಟೆಲ್ಲ ಆಯ್ತು ಎಂದು ಹೇಳುತ್ತಾಳೆ. ಅದನ್ನು ನೋಡಿ ಕೋದಂಡ ಓಡಿ ಬರುತ್ತಾನೆ. "ಯಾಕಮ್ಮ ಈ ರೀತಿ ಮಾಡ್ತಾ ಇದ್ದೀಯ ಎಂದು ಪ್ರಶ್ನೆ ಮಾಡುತ್ತಾನೆ. ಅವನು ಪ್ರಶ್ನೆ ಮಾಡಲಿ ಎಂದೇ ಅವಳು ಆ ರೀತಿ ಮಾಡಿರುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಮುಗಿಸಿ ಬಿಡಿ ರಾಮಾಚಾರಿ ಫ್ಯಾನ್ ಆಗಿದೆ, ಇನ್ಮೇಲೆ ನೋಡಲ್ಲ . ರುಕ್ಕು ಕೆಟ್ಟ ಹುಡುಗಿ ಅಯ್ಯೋ ತಲೆ ಕೆಟ್ಟ ಹೋಯ್ತು ಎಂದು ಬಾಲು ಕಾಮೆಂಟ್ ಮಾಡಿದ್ದಾರೆ. ಧಾರಾವಾಹಿ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ. ಜೈಲಿನಿಂದ ವೈಶಾಖಾ ಮರಳುವ ಲಕ್ಷಣ ಇದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ