Bhagyalakshmi Serial: ಹೆಂಡತಿ ಮೇಲಿನ ದ್ವೇಷ ಪ್ರೀತಿಯಾಗಿ ಬದಲಾಯ್ತಾ, ಕೊನೆಗೂ ಒಂದಾಗೇಬಿಟ್ರಾ ಭಾಗ್ಯಾ-ತಾಂಡವ್‌ ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಹೆಂಡತಿ ಮೇಲಿನ ದ್ವೇಷ ಪ್ರೀತಿಯಾಗಿ ಬದಲಾಯ್ತಾ, ಕೊನೆಗೂ ಒಂದಾಗೇಬಿಟ್ರಾ ಭಾಗ್ಯಾ-ತಾಂಡವ್‌ ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಹೆಂಡತಿ ಮೇಲಿನ ದ್ವೇಷ ಪ್ರೀತಿಯಾಗಿ ಬದಲಾಯ್ತಾ, ಕೊನೆಗೂ ಒಂದಾಗೇಬಿಟ್ರಾ ಭಾಗ್ಯಾ-ತಾಂಡವ್‌ ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 449ರ ಎಪಿಸೋಡ್‌. ಮನೆ ಭಾಗವಾದಾಗಿನಿಂದ ಒಂಟಿಯಾಗಿರುವ ತಾಂಡವ್‌ ಮಕ್ಕಳು ಅಪ್ಪ ಅಮ್ಮನನ್ನು ತನ್ನತ್ತ ಸೆಳೆಯಲು ಸರ್ಕಸ್‌ ಮಾಡುತ್ತಿದ್ದಾನೆ. ಯುಗಾದಿ ಹಬ್ಬದ ದಿನ ಭಾಗ್ಯಾ, ಮಕ್ಕಳಿಗೆ ಹೆಡ್‌ ಮಸಾಜ್‌ ಮಾಡುವುದನ್ನು ನೋಡಿ ಹಳೆಯ ದಿನವನ್ನು ನೆನಪಿಸಿಕೊಳ್ಳುತ್ತಾನೆ.

ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ 449ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ 449ರ ಎಪಿಸೋಡ್‌ (PC: Colors Kannada)

Bhagyalakshmi Serial: ಯುಗಾದಿ ಹಬ್ಬದ ದಿನ ಅಡುಗೆ ಮಾಡಲು ಬಾರದ ತಾಂಡವ್‌, ಶ್ರೇಷ್ಠಾ ಸಲಹೆಯಂತೆ ಸೆಲೆಬ್ರಿಟಿ ಶೆಫ್‌ ರೂಪಾಳನ್ನು ಅಡುಗೆ ಮಾಡಲು ಮನೆಗೆ ಕರೆ ತರುತ್ತಾನೆ. ಗಂಟೆಗೆ 50 ಸಾವಿರ ಹಣ ನೀಡಿ ರೂಪಾಳನ್ನು ಕರೆ ತರುವ ತಾಂಡವ್‌, ಮನೆಯವರ ಬಗ್ಗೆ ಸುಳ್ಳು ಹೇಳುತ್ತಾನೆ. ಭಾಗ್ಯಾ ನನ್ನಿಂದ ಎಲ್ಲರನ್ನೂ ಕಿತ್ತುಕೊಂಡಿದ್ಧಾಳೆ. ಮನೆ 2 ಭಾಗ ಆಗಲು ಅವಳೇ ಕಾರಣ, ನೀವು ಹೇಗಾದರೂ ಮಾಡಿ ಎಲ್ಲರನ್ನೂ ಮತ್ತೆ ವಾಪಸ್‌ ದೊರಕಿಸಿಕೊಡಬೇಕು ಎಂದು ಮನವಿ ಮಾಡುತ್ತಾನೆ.

ಆರಂಭದಲ್ಲಿ ತಾಂಡವ್‌ ಹೇಳಿದ್ದನ್ನು ಸಂಪೂರ್ಣವಾಗಿ ನಂಬಿದ್ದ ರೂಪಾಗೆ ನಂತರ ಅನುಮಾನ ಶುರು ಆಗುತ್ತದೆ. ತಾಂಡವ್‌ ವರ್ತನೆಯನ್ನು ಗಮನಿಸಲು ಆರಂಭಿಸುತ್ತಾಳೆ. ಅಡುಗೆ ಮಾಡಲು ಗ್ಯಾಸ್‌ ಸ್ಟೋವ್‌ ದೊರೆಯದ ಭಾಗ್ಯಾ ಹೊರಗೆ ಕಟ್ಟಿಗೆ ಹುಡುಕಿ, ಕಲ್ಲಿನಿಂದ ಒಲೆ ಮಾಡಿ ಅಡುಗೆ ಮಾಡಲು ಆರಂಭಿಸುತ್ತಾಳೆ. ಭಾಗ್ಯಾ ಕಷ್ಟ ನೋಡಿ ರೂಪಾಗೆ ಆಶ್ಚರ್ಯವಾಗುತ್ತದೆ. ಭಾಗ್ಯಾ ಮಾಡಿದ ಅಡುಗೆ ಇನ್ನೇನು ತಯಾರಾಗಬೇಕು ಎನ್ನುವಷ್ಟರಲ್ಲಿ ರೂಪಾ, ಅನ್ನಕ್ಕೆ ಹೆಚ್ಚು ನೀರು ಸುರಿದುಬಿಡುತ್ತಾಳೆ. ಅದನ್ನು ನೋಡಿದ ಭಾಗ್ಯಾಗೆ ಬೇಸರವಾಗುತ್ತದೆ. ಮಕ್ಕಳು ತಿನ್ನುವ ಅನ್ನಕ್ಕೆ ಹೀಗೆ ಮಾಡಿದ್ದು ಯಾರು ಎಂದು ಯೋಚಿಸುವಷ್ಟರಲ್ಲಿ ರೂಪಾ, ಆಕೆಯ ಕಣ್ಣಿಗೆ ಬೀಳುತ್ತಾಳೆ. ಎಲ್ಲಾ ಈ ಹೆಂಗಸದ್ದೇ ಕೆಲಸ ಎಂದುಕೊಂಡು ಭಾಗ್ಯಾ ಸುಮ್ಮನಾಗುತ್ತಾಳೆ.

ಭಾಗ್ಯಾ ಮಾಡುವ ಹೆಡ್‌ ಮಸಾಜ್‌ ನೆನಪಿಸಿಕೊಳ್ಳುವ ತಾಂಡವ್

ಇತ್ತ ಕುಸುಮಾ ಹಾಗೂ ಭಾಗ್ಯಾ ಸೇರಿ ಧರ್ಮರಾಜ್‌, ಪೂಜಾ ಹಾಗೂ ಮಕ್ಕಳಿಗೆ ಎಣ್ಣೆ ಹಚ್ಚುತ್ತಾರೆ. ಇದನ್ನು ತಾಂಡವ್‌ ಕದ್ದು ನೋಡುತ್ತಿರುತ್ತಾನೆ. ಎಲ್ಲವೂ ಸರಿ ಇದ್ದಿದ್ದರೆ ಆ ಜಾಗದಲ್ಲಿ ನಾನೂ ಇರುತ್ತಿದ್ದೆ. ಅಪ್ಪ ಅಮ್ಮನಿಗಂತೂ ನನ್ನ ಬಗ್ಗೆ ಸ್ವಲ್ಪವೂ ಚಿಂತೆ ಇಲ್ಲ ಎಂದುಕೊಳ್ಳುತ್ತಾನೆ. ಅಮ್ಮ ನಿನ್ನ ಕೈಯಲ್ಲಿ ಏನೂ ಜಾದೂ ಇದೆ. ನೀನೇಕೆ ಮಸಾಜ್‌ ಪಾರ್ಲರ್‌ ತೆರೆಯಬಾರದು ಎಂದು ತನ್ವಿ ಭಾಗ್ಯಾಗೆ ಕೇಳುತ್ತಾಳೆ. ಮಗಳ ಮಾತನ್ನು ಕೇಳಿಸಿಕೊಳ್ಳುವ ತಾಂಡವ್, ಭಾಗ್ಯಾ ತನಗೂ ಮಸಾಜ್‌ ಮಾಡುತ್ತಿದ್ದ ದಿನವನ್ನು ನೆನಪಿಸಿಕೊಳ್ಳುತ್ತಾನೆ. ಭಾಗ್ಯಾ ಜೀವನದಲ್ಲಿ ನೀನು ಚೆನ್ನಾಗಿ ಮಾಡುವುದು ಎರಡೇ ಕೆಲಸ. ಅಡುಗೆ ಚೆನ್ನಾಗಿ ಮಾಡುತ್ತೀಯ, ಹೆಡ್‌ ಮಸಾಜ್‌ ಚೆನ್ನಾಗಿ ಮಾಡುತ್ತೀಯ, ನಿನಗೇನಾದರೂ ಹಣದ ಸಮಸ್ಯೆ ಆದರೆ ಕ್ಯಾಟರಿಂಗ್‌ ಬುಸ್ನೆಸ್‌, ಮಸಾಜ್‌ ಬುಸ್ನೆಸ್‌ ಶುರು ಮಾಡಿಬಿಡು ಎಂದು ಹೇಳುವುದನ್ನು ತಾಂಡವ್‌ ನೆನೆಪಿಸಿಕೊಳ್ಳುತ್ತಾನೆ.

ಈ ಭಾಗ್ಯಾ ಕೈಯಲ್ಲಿ ಏನೋ ಜಾದೂ ಇದೆ. ಎಲ್ಲಾ ಸರಿ ಇದ್ದಿದ್ದರೆ ಇಂದು ನಾನೂ ಭಾಗ್ಯಾ ಕೈಯಲ್ಲಿ ಹೆಡ್‌ ಮಸಾಜ್‌ ಮಾಡಿಸಿಕೊಳ್ಳಬಹುದಿತ್ತು ಎಂದು ತಾಂಡವ್‌ ತನ್ನಷ್ಟಕ್ಕೆ ತಾನೇ ಅಂದುಕೊಳ್ಳುತ್ತಾನೆ. ತಾಂಡವ್‌ ದೂರದಿಂದ ಹೀಗೆ ಕದ್ದು ನೋಡುವುದನ್ನು ಗಮನಿಸಿದ ಕುಸುಮಾ, ನಮಗೆ ಯಾರದ್ದೋ ದೃಷ್ಟಿ ಬಿದ್ದಿದೆ. ಮೊದಲು ದೃಷ್ಟಿ ತೆಗೆಯಬೇಕು. ಎಲ್ಲರಿಗಿಂತ ಹೆಚ್ಚಾಗಿ ಭಾಗ್ಯಾ ನೀನು ಮೊದಲು ದೃಷ್ಟಿ ತೆಗೆಸಿಕೋ ಎನ್ನುತ್ತಾಳೆ. ಊಟ ಮುಗಿದ ಕೂಡಲೇ ಭಾಗ್ಯಾ ಹಾಗೂ ತನ್ವಿ ಓದಲು ಕುಳಿತುಕೊಳ್ಳಿ. ಅಡುಗೆ ಮನೆ ಕೆಲಸವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಕುಸುಮಾ ಹೇಳುತ್ತಾಳೆ. ಇದನ್ನು ಕೇಳಿಸಿಕೊಳ್ಳುವ ರೂಪಾ, ಅಮ್ಮ ಮಗಳು ಇಬ್ಬರೂ ಒಟ್ಟಿಗೆ ಪರೀಕ್ಷೆ ಬರೆಯುತ್ತಿದ್ದಾರಾ? ಇದನ್ನು ತಾಂಡವ್‌ ನನಗೆ ಹೇಳಲೇ ಇಲ್ಲ. ಇವನು ನನ್ನಿಂದ ಏನೂ ಮುಚ್ಚಿಡುತ್ತಿದ್ದಾನೆ, ಅದೇನು ತಿಳಿದುಕೊಳ್ಳಲೇಬೇಕು ಎಂದುಕೊಂಡು ತಾಂಡವ್‌ ಬಳಿ ಹೋಗುತ್ತಾಳೆ.‌

ಸತ್ಯ ಏನೆಂದು ತಿಳಿದ ರೂಪಾ

ತಾಂಡವ್‌, ಶ್ರೇಷ್ಠಾ ಜೊತೆ ಫೋನಿನಲ್ಲಿ ಡಿವೋರ್ಸ್‌ ವಿಚಾರವಾಗಿ ಮಾತನಾಡುತ್ತಿದ್ದನ್ನು ರೂಪಾ ಕೇಳಿಸಿಕೊಳ್ಳುತ್ತಾಳೆ. ಡಿವೋರ್ಸ್‌ ನೀನು ಕೊಡುತ್ತಿದ್ದಿಯೋ, ಭಾಗ್ಯಾ ಕೊಡುತ್ತಿದ್ದಾಳೋ? ನೀನು ನನಗೆ ಹೇಳಿದ್ದೇ ಬೇರೆ ಎಂದು ಪ್ರಶ್ನಿಸುತ್ತಾಳೆ. ನಿಮ್ಮನ್ನು ಇಲ್ಲಿಗೆ ಕರೆ ತಂದಿದ್ದು ಅಡುಗೆ ಮಾಡುವುದಕ್ಕೆ ಅಷ್ಟು ಮಾಡಿ ಸಾಕು ಎಂದು ತಾಂಡವ್‌ ಹೇಳುತ್ತಾನೆ. ತಾಂಡವ್‌ ಮಾತಿನಿಂದ ಕೋಪಗೊಳ್ಳುವ ರೂಪಾ ರೂಮ್‌ನಿಂದ ಹೊರ ಬರುವಾಗ ಭಾಗ್ಯಾ ಎದುರಾಗುತ್ತಾಳೆ. ತಾಂಡವ್‌ ಊಟ ಮಾಡಿದ್ರಾ ಎಂದು ವಿಚಾರಿಸುತ್ತಾಳೆ. ವಿಚಾರ ನಾನು ಅಂದುಕೊಂಡಂತೆ ಇಲ್ಲ ಎಂದುಕೊಳ್ಳುವ ರೂಪಾ, ತನ್ವಿ ಹಾಗೂ ತನ್ಮಯ್‌ ಇಬ್ಬರನ್ನೂ ಕರೆದು ಮನೆಯಲ್ಲಿ ಏನು ನಡೆಯುತ್ತಿದೆ ಎಂದು ವಿಚಾರಿಸುತ್ತಾಳೆ. ಮಕ್ಕಳು ಹೇಳಿದ ನಿಜ ತಿಳಿದು ರೂಪಾ ಶಾಕ್‌ ಆಗುತ್ತಾಳೆ.

ತಾಂಡವ್‌ ಅಸಲಿ ಬಣ್ಣ ತಿಳಿದು ರೂಪಾ ಅವನಿಗೆ ಬುದ್ಧಿ ಕಲಿಸುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

Whats_app_banner