ಕನ್ನಡ ಸುದ್ದಿ  /  ಮನರಂಜನೆ  /  Upcoming Movies: ಉತ್ತರಕಾಂಡ ಶೂಟಿಂಗ್‌ ಆರಂಭ; ಇದು ಶಿವರಾಜ್‌ ಕುಮಾರ್‌, ಡಾಲಿ ಧನಂಜಯ್‌ ನಟನೆಯ ಸಿನಿಮಾ

Upcoming Movies: ಉತ್ತರಕಾಂಡ ಶೂಟಿಂಗ್‌ ಆರಂಭ; ಇದು ಶಿವರಾಜ್‌ ಕುಮಾರ್‌, ಡಾಲಿ ಧನಂಜಯ್‌ ನಟನೆಯ ಸಿನಿಮಾ

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಉತ್ತರಕಾಂಡ ಸಿನಿಮಾದ ಶೂಟಿಂಗ್‌ ಆರಂಭವಾಗಿದೆ. ವಿಜಯಪುರದಲ್ಲಿ ಮೊದಲ ಹದಿನೈದು ದಿನದ ಶೆಡ್ಯೂಲ್‌ನಲ್ಲಿ ಶೂಟಿಂಗ್‌ ಆರಂಭಿಸಲಾಗಿದೆ. ಇದು ಶಿವರಾಜ್‌ ಕುಮಾರ್‌ ಮತ್ತು ಡಾಲಿ ಧನಂಜಯ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾವಾಗಿದೆ.

Upcoming Movies: ಉತ್ತರಕಾಂಡ ಶೂಟಿಂಗ್‌ ಆರಂಭ
Upcoming Movies: ಉತ್ತರಕಾಂಡ ಶೂಟಿಂಗ್‌ ಆರಂಭ

ಬೆಂಗಳೂರು: ಬಹುನಿರೀಕ್ಷಿತ ಕನ್ನಡ ಚಿತ್ರ "ಉತ್ತರಕಾಂಡ" ಚಿತ್ರೀಕರಣವನ್ನು ಇಂದು ಆರಂಭಿಸಿದೆ. 15 ದಿನಗಳ ಪ್ರಥಮ ಶೆಡ್ಯೂಲ್‌ ವಿಜಯಪುರದಲ್ಲಿ ಚಿತ್ರೀಕರಣಗೊಳ್ಳಲಿದೆ. ಇಂದು ಕಾಂತಾರ ಸೇರಿದಂತೆ ಹಲವು ಸಿನಿಮಾಗಳು ಶೂಟಿಂಗ್‌ ಆರಂಭಿಸಿವೆ. ಶಿವರಾಜ್‌ ಕುಮಾರ್‌, ಡಾಲಿ ಧನಂಜಯ್‌ ನಟನೆಯ ಉತ್ತರಕಾಂಡ ಸಿನಿಮಾದ ಕುರಿತು ಚಿತ್ರಪ್ರೇಕ್ಷಕರು ಬಹುನಿರೀಕ್ಷೆ ಹೊಂದಿದ್ದು, ಶೂಟಿಂಗ್‌ ಆರಂಭಗೊಂಡಿರುವುದರಿಂದ ಖುಷಿಗೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ಉತ್ತರಕಾಂಡ"ದ ಮುಹೂರ್ತ 2022ರಲ್ಲಿ‌ ಆಗಿದ್ದು, ಚಿತ್ರಕಥೆಯು ಬಯಲುಸೀಮೆಯ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದರಿಂದ,‌ ಹಾಗೂ ಚಿತ್ರವು ಉತ್ತರಕರ್ನಾಟಕದ ಆಡುಭಾಷೆಯನ್ನು ಹೊಂದಿರುವುದರಿಂದ ಚಿತ್ರಕ್ಕೆ ನಿಖರವಾದ ಸಂಶೋಧನೆ ಮತ್ತು ಪ್ಲಾನಿಂಗ್ ಅಗತ್ಯವಿತ್ತು. ಈ ಚಿತ್ರದ ರಿಸರ್ಚ್‌ ಮತ್ತು ಪ್ಲ್ಯಾಣಿಂಗ್‌ ಕಾರಣಗಳಿಂದ ಹಾಗೂ ಇತರೆ ಕಾರಣಗಳಿಂದ ಶೂಟಿಂಗ್‌ ವಿಳಂಬವಾಗಿತ್ತು. ಇದೀಗ ಏಪ್ರಿಲ್‌ 15ರಂದು ಎಲ್ಲಾ ಸಿದ್ಧತೆಗಳೊಂದಿಗೆ ಶೂಟಿಂಗ್‌ ಆರಂಭಿಸಲಾಗಿದೆ.

"ಈ ಸಿನಿಮಾದ ಶೂಟಿಂಗ್‌ ಆರಂಭಿಸಲು ಉತ್ಸಾಹಿಯಾಗಿದ್ದೇನೆ. ಉತ್ತರಕಾಂಡ ಸಿನಿಮಾಕ್ಕೆ ನಿಖರವಾದ ಪ್ಲಾನಿಂಗ್, ತಯಾರಿ ಮತ್ತು ಸಂಶೋಧನೆ ಬೇಕಿತ್ತು. ಹೀಗಾಗಿ, ನಾನು ಮತ್ತು ನಿರ್ಮಾಪಕರು ನಿದ್ದೆಗೆಟ್ಟು ಇದರ ತಯಾರಿ ನಡೆಸಿದ್ದೇವೆ. ಕನ್ನಡದ ಪ್ರಮುಖ ನಟರಾದ ಶಿವರಾಜ್‌ ಕುಮಾರ್‌ ಮತ್ತು ಧನಂಜಯ್ ಪಾತ್ರ ವಹಿಸಿರುವ ಬಹು ದೊಡ್ಡ ತಾರಾಗಣದ ಚಿತ್ರಕಥೆಯನ್ನು ಸಿನಿ ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಮಗಿದೆ. ಈ ನಿರೀಕ್ಷೆಗೆ ಕುಂದು ಕೊರತೆ ಬರದಂತೆ ನಾನು ಮತ್ತು ಕೆ.ಆರ್.ಜಿ ಕೆಲಸ ಮಾಡಲಿದ್ದೇವೆ" ಎಂದು ಚಿತ್ರನಿರ್ದೇಶಕ ರೋಹಿತ್ ಪದಕಿ ಹೇಳಿದ್ದಾರೆ.

"ಉತ್ತರಕಾಂಡ ಸಿನಿಮಾ ನಮ್ಮ ಕೆ.ಆರ್.ಜಿ.ಯ ಹೆಮ್ಮೆ ಎಂದರೆ ತಪ್ಪಾಗದು. ಇದು ಕೇವಲ ನಾವಷ್ಟೇ ಅಲ್ಲದೆ ಇಡೀ ಸ್ಯಾಂಡಲ್‌ವುಡ್‌ ಹೆಮ್ಮೆ ಪಡುವಂತೆ ಚಿತ್ರ ತಯಾರಿಸಲಿದ್ದೇವೆ" ಎಂದು ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದ್ದಾರೆ.

"ಉತ್ತರಕಾಂಡ" ಸಿನಿಮಾದಲ್ಲಿ ಸೆಂಚುರಿಸ್ಟಾರ್‌ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಚಿತ್ರವನ್ನು ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ನಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ನಿರ್ಮಿಸಲಿದ್ದಾರೆ. ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ಚಿತ್ರಕ್ಕೆ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ (ಡಿಸೈನ್)ಮಾಡಲಿದ್ದಾರೆ. ಬಹು ದೊಡ್ಡ ತಾರಾಬಳಗವನ್ನು ಹೊಂದಿರುವ ಈ ಚಿತ್ರ, ತಾರಾಬಳಗವನ್ನು ಈ ವಾರ ಘೋಷಿಸಲಿದೆ.

"ಉತ್ತರಕಾಂಡ" ಸಿನಿಮಾದ ಪ್ರೋಮೋಗೆ ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ‌ ಸಂಪೂರ್ಣ ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂದು ಈಗಾಗಲೇ ಚಿತ್ರತಂಡ ಮಾಹಿತಿ ನೀಡಿದೆ. ಅಮಿತ್ ತ್ರಿವೇದಿ ಅವರು ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ಸಂಗೀತ ಸಂಯೋಜಕ ಹಾಗೂ ಗಾಯಕರಾಗಿದ್ದಾರೆ. ಕೇವಲ ಹಿಂದಿ ಚಿತ್ರಗಳಷ್ಟೇ ಅಲ್ಲದೆ,‌ ತೆಲುಗು, ಮಲಯಾಳಂ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. ಇದೀಗ ಉತ್ತರಕಾಂಡದ ಮೂಲಕ ಕನ್ನಡ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.

IPL_Entry_Point