ನೀನು ಮೆಚ್ಚುವಂತೆ ಭಾಗ್ಯಾಳನ್ನು ಬದಲಿಸುತ್ತೇನೆ, ಒಂದು ತಿಂಗಳು ಸಮಯ ಕೊಡು, ತಾಂಡವ್‌ ಬಳಿ ಕುಸುಮಾ ಮನವಿ; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 25th september episode kusuma requested tandav rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನೀನು ಮೆಚ್ಚುವಂತೆ ಭಾಗ್ಯಾಳನ್ನು ಬದಲಿಸುತ್ತೇನೆ, ಒಂದು ತಿಂಗಳು ಸಮಯ ಕೊಡು, ತಾಂಡವ್‌ ಬಳಿ ಕುಸುಮಾ ಮನವಿ; ಭಾಗ್ಯಲಕ್ಷ್ಮೀ ಧಾರಾವಾಹಿ

ನೀನು ಮೆಚ್ಚುವಂತೆ ಭಾಗ್ಯಾಳನ್ನು ಬದಲಿಸುತ್ತೇನೆ, ಒಂದು ತಿಂಗಳು ಸಮಯ ಕೊಡು, ತಾಂಡವ್‌ ಬಳಿ ಕುಸುಮಾ ಮನವಿ; ಭಾಗ್ಯಲಕ್ಷ್ಮೀ ಧಾರಾವಾಹಿ

ಮದುವೆ ಮನೆಯಿಂದ ಮನೆಗೆ ವಾಪಸ್‌ ಬರುವ ದಾರಿಯಲ್ಲಿ ಕುಸುಮಾ ಹಾಗೂ ತಾಂಡವ್‌ ನಡುವೆ ಒಪ್ಪಂದ ನಡೆಯುತ್ತದೆ. ಭಾಗ್ಯಾಳನ್ನು ನೀನು ಮೆಚ್ಚುವಂತೆ ಬದಲಿಸುತ್ತೇನೆ ಎಂದು ಕುಸುಮಾ ಹೇಳುತ್ತಾಳೆ. ಅಮ್ಮನ ಮಾತಿಗೆ ಒಪ್ಪುವ ತಾಂಡವ್‌, ನೀನು ಹೇಳಿದಂತೆ ಬದಲಿಸದಿದ್ದರೆ ನಾನು ಇಷ್ಟಪಟ್ಟ ಹುಡುಗಿಯನ್ನು ಮದುವೆ ಆಗಿ ಮನೆಯಿಂದ ಹೊರ ಹೋಗುತ್ತೇನೆ ಎಂದು ಕಂಡಿಷನ್‌ ಮಾಡುತ್ತಾನೆ.

ನೀನು ಮೆಚ್ಚುವಂತೆ ಭಾಗ್ಯಾಳನ್ನು ಬದಲಿಸುತ್ತೇನೆ, ಒಂದು ತಿಂಗಳು ಸಮಯ ಕೊಡು, ತಾಂಡವ್‌ ಬಳಿ ಕುಸುಮಾ ಮನವಿ; ಭಾಗ್ಯಲಕ್ಷ್ಮೀ ಧಾರಾವಾಹಿ
ನೀನು ಮೆಚ್ಚುವಂತೆ ಭಾಗ್ಯಾಳನ್ನು ಬದಲಿಸುತ್ತೇನೆ, ಒಂದು ತಿಂಗಳು ಸಮಯ ಕೊಡು, ತಾಂಡವ್‌ ಬಳಿ ಕುಸುಮಾ ಮನವಿ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಶ್ರೇಷ್ಠಾ ಜೊತೆ ಮದುವೆ ಆಗುವುದನ್ನು ನಿಲ್ಲಿಸುವ ಕುಸುಮಾ ಮಗನನ್ನು ಎಳೆದು ತರುತ್ತಾಳೆ. ಮದುವೆ ಮನೆಯಿಂದ ಸುಮ್ಮನೆ ಹೊರಡುವ ತಾಂಡವ್‌, ರಸ್ತೆಯಲ್ಲಿ ಮತ್ತೆ ವರಸೆ ಬದಲಿಸುತ್ತಾನೆ. ನೀನು ಏನು ಮಾಡಿದರೂ ಭಾಗ್ಯಾ ನನಗೆ ಇಷ್ಟವಿಲ್ಲ ಎನ್ನುತ್ತಾನೆ. ಆಗ ಅಮ್ಮ ಮಗನ ನಡುವೆ ಒಂದು ಒಪ್ಪಂದ ನಡೆಯುತ್ತದೆ.

ಎಲ್ಲದಕ್ಕೂ ನೀನೇ ಕಾರಣ ಎಂದು ಅಮ್ಮನನ್ನು ಆರೋಪಿಸಿದ ತಾಂಡವ್

ನಾನು ಶ್ರೇಷ್ಠಾಳನ್ನು ಲವ್‌ ಮಾಡಲು, ಅವಳನ್ನು ಮದುವೆ ಆಗುವಂತೆ ಮಾಡಲು ನೀನೇ ಕಾರಣ, ನಿನ್ನ ಸಂಸ್ಕಾರ, ನಾನು ಹೇಳಿದಂತೆ ನಡೆಯಬೇಕು ಅನ್ನೋ ನಿನ್ನ ದರ್ಪವೇ ಕಾರಣ ಎಂದು ತಾಂಡವ್‌, ತನ್ನ ತಪ್ಪಿಗೆ ಅಮ್ಮನನ್ನು ಹೊಣೆ ಮಾಡುತ್ತಾನೆ. ನಿನ್ನನ್ನು ಸಂಸ್ಕಾರವಂತನನ್ನಾಗಿ ಬೆಳೆಸಿದ್ದು ತಪ್ಪಾ? ನೀನು ಹೆಂಡತಿಗೆ ಮೋಸ ಮಾಡು ಅಂತ ಹೇಳಿದ್ದು ನಾನಾ? ಬೇರೆ ಮದುವೆ ಆಗು ಅಂತ ಹೇಳಿದ್ದು ನಾನಾ? ಭಾಗ್ಯಾಳಂತ ಹೆಂಡತಿ ಸಿಗಬೇಕಾರೆ ಪುಣ್ಯ ಮಾಡಿರಬೇಕು ಎಂದು ಕುಸುಮಾ ತಾಂಡವ್‌ಗೆ ಹೇಳುತ್ತಾಳೆ.ಎಂದು ಕುಸುಮಾ ಮಗನನ್ನು ಪ್ರಶ್ನಿಸುತ್ತಾಳೆ. ಇದಕ್ಕೆ ಉತ್ತರಿಸುವ ತಾಂಡವ್.‌ ನನಗೆ ಈ ಮಾತು ಕೇಳಿ ಕೇಳಿ ಸಾಕಾಯ್ತು, ದಯವಿಟ್ಟು ನಿಲ್ಲಿಸು ನೀನು ಎಷ್ಟು ಹೇಳಿದರೂ ನನಗೆ ಭಾಗ್ಯಾ ಮೇಲೆ ನನಗೆ ಮನಸ್ಸಾಗುವುದಿಲ್ಲ ಎನ್ನುತ್ತಾನೆ.‌

ಭಾಗ್ಯಾಳನ್ನು ನಿನ್ನಿಷ್ಟದಂತೆ ಬದಲಿಸುತ್ತೇನೆ

ಭಾಗ್ಯಾ, ನಾನು ಇಷ್ಟಪಟ್ಟ ಹುಡುಗಿ ಅಲ್ಲ, ನನ್ನ ಹುಡುಗಿ ಯಾವ ರೀತಿ ಇರಬೇಕು ಎಂದುಕೊಂಡಿದ್ದೇನೋ ಆ ರೀತಿ ಇಲ್ಲ. ಅವಳಿಗೆ ಸರಿಯಾಗಿ ಫ್ಯಾಷನ್‌ ಸೆನ್ಸ್‌ ಇಲ್ಲ, ಹಳ್ಳಿ ಗುಗ್ಗು ಅವಳಿಂದ ನನ್ನ ಜೀವನ ಹಾಳಾಯ್ತು ಎನ್ನುತ್ತಾನೆ. ಮಗನ ಮಾತಿಗೆ ಬೇಸರವಾದರೂ ಸರಿ, ನನಗೆ ಒಂದು ತಿಂಗಳು ಸಮಯ ಕೊಡು , ಭಾಗ್ಯಾಳನ್ನು ನೀನು ಮೆಚ್ಚುವಂತೆ ತಯಾರು ಮಾಡುತ್ತೇನೆ. ಇವಳೇ ನನ್ನ ಹೆಂಡತಿ ಎಂದು ನೀನು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡುತ್ತೇನೆ ಎನ್ನುತ್ತಾಳೆ. ಇದನ್ನು ಕೇಳಿ ತಾಂಡವ್‌ ವ್ಯಂಗ್ಯವಾಗಿ ನಗುತ್ತಾನೆ. ಸಾಧ್ಯವೇ ಇಲ್ಲ, ಭಾಗ್ಯಾ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎನ್ನುತ್ತಾನೆ. ಈ ಕುಸುಮಾ ಒಮ್ಮೆ ಮಾತು ನೀಡಿದರೆ ಮುಗಿಯಿತು ಅದನ್ನು ಸಾಧಿಸುತ್ತಾಳೆ ಎಂದು ಕುಸುಮಾ ಹೇಳುತ್ತಾಳೆ.

ಮದುವೆ ಗಂಡು ಯಾರು ಎಂದು ಅತ್ತೆಯನ್ನು ಪ್ರಶ್ನಿಸಿದ ಭಾಗ್ಯಾ

ಈ ಮಾತಿಗೆ ತಾಂಡವ್‌ ಒಪ್ಪುತ್ತಾನೆ. ಸರಿ ನೀನು ಹೇಳಿದಂತೆ ನಾನು ಒಂದು ತಿಂಗಳು ಕಾಯುತ್ತೇನೆ. ಆದರೆ ಅಷ್ಟರಲ್ಲಿ ನಿನ್ನ ಮುದ್ದಿನ ಸೊಸೆ ಬದಲಾಗದಿದ್ದರೆ ನಾನು ಇಷ್ಟ ಪಟ್ಟ ಶ್ರೇಷ್ಠಾಳನ್ನು ಮದುವೆ ಆಗಿ ಮನೆಯಿಂದ ಹೋಗುತ್ತೇನೆ ಎನ್ನುತ್ತಾನೆ. ಈ ಮಾತಿಗೆ ನನಗೆ ಒಪ್ಪಿಗೆ ಇದೆ, ಆದರೆ ಒಂದು ತಿಂಗಳವರೆಗೆ ನೀನು ನಾನು ಹೇಳಿದಂತೆ ಕೇಳಬೇಕು. ಭಾಗ್ಯಾಗೆ ಯಾವುದೇ ಕಾರಣಕ್ಕೂ ಈ ವಿಚಾರ ತಿಳಿಯಬಾರದು ಎಂದು ಕುಸುಮಾ ಕಂಡಿಷನ್‌ ಮಾಡುತ್ತಾಳೆ. ಎಲ್ಲರೂ ಮನೆಗೆ ಬರುತ್ತಾರೆ. ಭಾಗ್ಯಾ ಅನುಮಾನದಿಂದ ಎಲ್ಲರನ್ನೂ ಪ್ರಶ್ನಿಸುತ್ತಾಳೆ. ನನ್ನಿಂದ ತಪ್ಪಿಸಿಕೊಂಡು ಹೋಗಿ ಮದುವೆ ನಿಲ್ಲಿಸುವ ಅವಶ್ಯಕತೆ ಏನಿತ್ತು? ಹಾಗಾದರೆ ಹುಡುಗ ಯಾರು ಎಂದು ಪ್ರಶ್ನಿಸುತ್ತಾಳೆ. ತಾಂಡವ್‌ನನ್ನೂ ಭಾಗ್ಯ ಪ್ರಶ್ನಿಸುತ್ತಾಳೆ. ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತಾ ಕೂರಲು ನನಗೆ ಸಮಯವಿಲ್ಲ. ನಿನ್ನ ಮುದ್ದಿನ ಸೊಸೆ ಏನೋ ಕೇಳುತ್ತಿದ್ದಾಳೆ. ಅವಳಿಗೆ ಉತ್ತರಿಸು ಎಂದು ತಾಂಡವ್‌ ಅಮ್ಮನಿಗೆ ಹೇಳಿ ಅಲ್ಲಿಂದ ಹೊರಡುತ್ತಾನೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

 

mysore-dasara_Entry_Point