ನನ್ನ ಮನೆಗಾಗಿ ಜೀವ ತೇಯ್ದ ಸೊಸೆ ಜೀವನವನ್ನು ಸರಿ ಮಾಡೇ ಮಾಡ್ತೀನಿ, ಪಣ ತೊಟ್ಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಗುರುವಾರದ ಎಪಿಸೋಡ್‌ನಲ್ಲಿ ಅತ್ತೆಯ ಉತ್ತರಕ್ಕೆ ಸಮಧಾನವಾಗದ ಭಾಗ್ಯಾ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಹುಟ್ಟುತ್ತವೆ. ತಾಂಡವ್‌ಗೆ ಕರೆ ಮಾಡುವ ಶ್ರೇಷ್ಠಾ ಉಳಿದಿರುವ ಅಲ್ಪ ಸ್ವಲ್ಪ ಮರ್ಯಾದೆಯನ್ನೂ ಕಳೆಯುವುದಾಗಿ ಹೇಳುತ್ತಾಳೆ.
Bhagyalakshmi Serial: ಮದುವೆ ನಿಲ್ಲಿಸಿ ಮನೆಗೆ ಬಂದ ಅತ್ತೆ ಕುಸುಮಾ, ಪೂಜಾ, ತಾಂಡವ್‌ನನ್ನು ಭಾಗ್ಯಾ ಬಾಗಿಲಲ್ಲೇ ನಿಲ್ಲಿಸಿ ಪ್ರಶ್ನೆಗಳನ್ನು ಕೇಳುತ್ತಾಳೆ. ಮದುವೆ ಮನೆಗೆ ಹೋಗಿ ಬಂದಾಗಿನಿಂದ ಭಾಗ್ಯಾ ತಲೆಯಲ್ಲಿ ನೂರಾರು ಪ್ರಶ್ನೆಗಳು ಸುಳಿದಾಡುತ್ತಿವೆ. ಆದರೆ ತಾಂಡವ್ ಭಾಗ್ಯಾ ಪ್ರಶ್ನೆಗಳಿಗೆ ಉತ್ತರಿಸಿದ ನಿನ್ನ ಅತ್ತೆಯನ್ನೇ ಕೇಳು ಎಂದು ಅಲ್ಲಿಂದ ಹೋಗುತ್ತಾನೆ.
ಭಾಗ್ಯಾ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ನೀಡಿದ ಕುಸುಮಾ
ಹುಡುಗನ ಕಡೆಯವರು ಮದುವೆ ನಿಲ್ಲಿಸಿದ್ದು ಎಂದು ಅಲ್ಲಿ ಯಾರೋ ಹೇಳಿದ್ರು, ಮದುವೆ ನಿಲ್ಲಿಸಿದ್ದು ನಿನ್ನ ಅತ್ತೆ ಹಾಗೂ ಪೂಜಾ ಅಂತ ಶ್ರೇಷ್ಠಾ ಹೇಳಿದಳು ಹಾಗಾದರೆ ಮದು ಮಗ ಯಾರು ದಯವಿಟ್ಟು ಉತ್ತರ ಹೇಳಿ ಎಂದು ಭಾಗ್ಯಾ ಕುಸುಮಾ ಮುಂದೆ ಅರಚುತ್ತಾಳೆ. ಸೊಸೆಗೆ ಅನುಮಾನ ಶುರುವಾಗಿದೆ ಎಂದು ಗೊತ್ತಿದ್ದರೂ ಕುಸುಮಾ, ಸತ್ಯವನ್ನು ಒಪ್ಪಿಕೊಳ್ಳುವಂತಿಲ್ಲ. ನಾವು ಮದುವೆ ನಿಲ್ಲಿಸಬೇಕು ಅಂತ ಮೊದಲೇ ನಿರ್ಧರಿಸಿದ್ದೆವು ತಾನೇ, ಅದರಂತೆ ಮದುವೆ ನಿಲ್ಲಿಸಿದ್ದೇವೆ. ನಾನು ಇರುವರೆಗೂ ಯಾವುದೇ ಹುಡುಗಿಯ ಜೀವನ ಹಾಳು ಮಾಡಲು ಬಿಡುವುದಿಲ್ಲ. ನೀನು ನಿಲ್ಲಿಸಬೇಕಿದ್ದ ಮದುವೆಯನ್ನು ನಾನು ನಿಲ್ಲಿಸಿದ್ದೇನೆ. ನಾವು ಹೋಗುವ ಮುನ್ನ ಹುಡುಗನ ಕಡೆಯವರು ಅಲ್ಲಿಗೆ ಬಂದಿದ್ದರು. ಅದೇ ಸಮಯಕ್ಕೆ ನಾನು ಹೋಗಿ ಶ್ರೇಷ್ಠಾಗೆ ತರಾಟೆಗೆ ತೆಗೆದುಕೊಂಡೆ ಅದಕ್ಕೆ ಅವಳು ಹಾಗೆ ಹೇಳಿದ್ದಾಳೆ. ಮದುವೆ ನಿಂತಿದೆ ಅಷ್ಟಕ್ಕೆ ಖುಷಿ ಪಡು, ನನಗೆ ಬಹಳ ಸುಸ್ತಾಗುತ್ತಿದೆ ಎಂದು ಕುಸುಮಾ ರೂಮ್‌ಗೆ ಹೋಗುತ್ತಾಳೆ.
ಉಳಿದಿರುವ ಅಲ್ಪ ಸ್ವಲ್ಪ ಮರ್ಯಾದೆಯನ್ನೂ ಕಳೆಯುತ್ತೇನೆ
ಇತ್ತ ಸುಂದ್ರಿ ಮತ್ತೆ ಸೂಟ್‌ಕೇಸ್ ಹಿಡಿದು ಶ್ರೇಷ್ಠಾ ಮನೆಗೆ ಬರುತ್ತಾಳೆ. ಆದರೆ ಶ್ರೇಷ್ಠಾ ಅವಳನ್ನು ಮನೆಯಿಂದ ಹೊರ ಹಾಕುತ್ತಾಳೆ. ಇಲ್ಲಿ ಇರಲು ಅವಕಾಶ ಮಾಡಿಕೊಡು ಎಂದು ಕೇಳಿದರೂ ಶ್ರೇಷ್ಠಾ ಸುಂದ್ರಿಯನ್ನು ಲಗ್ಗೇಜ್ ಸಹಿತ ಹೊರ ದಬ್ಬುತ್ತಾಳೆ. ನಂತರ ತಾಂಡವ್‌ಗೆ ಕಾಲ್ ಮಾಡುತ್ತಾಳೆ. ಅಷ್ಟೆಲ್ಲಾ ಆದ್ರೂ ಹೇಗಿದ್ದೀಯ ಅಂತ ಒಂದು ಮಾತು ಕೇಳಿಲ್ಲ ಎಂದು ತಾಂಡವ್ ಮೇಲೆ ಅಧಿಕಾರ ಚಲಾಯಿಸುತ್ತಾಳೆ. ಇಷ್ಟೆಲ್ಲಾ ಆದ ನಂತರವೂ ನಾನೇ ಫೋನ್ ಮಾಡಿ ನಿನ್ನ ವಿಚಾರಿಸಿಕೊಳ್ಳಬೇಕು ಅಂತ ಏಕೆ ಕೇಳುತ್ತಿದ್ದೀಯ? ಇದೆಲ್ಲಾ ನಿನ್ನಿಂದಲೇ ಆಗಿದ್ದು, ಎಲ್ಲಾ ಗಲಾಟೆ ಮುಗಿದ ನಂತರ ಮದುವೆ ಆಗೋಣ ಎಂದುಕೊಂಡಿದ್ದೆ ಆದರೆ ಹಟ ಮಾಡಿ ಮದುವೆ ಅರೇಂಜ್ ಮಾಡಿದೆ. ನೋಡು ಈಗ ಏನಾಯ್ತು? ನನ್ನ ಅಮ್ಮನಿಗೆ ನನ್ನ ಮೇಲೆ ಇದ್ದ ನಂಬಿಕೆಯೂ ಹಾಳಾಯ್ತು ಎಂದು ತಾಂಡವ್ ಕೋಪಗೊಳ್ಳುತ್ತಾನೆ. ಇಲ್ಲ ನಿನ್ನ ಮರ್ಯಾದೆ ಪೂರ್ತಿ ಹೋಗಿಲ್ಲ ಇನ್ನೂ ಸ್ವಲ್ಪ ಮರ್ಯಾದೆ ಇದೆ ಅದನ್ನೂ ಕಳೆಯುತ್ತೇನೆ ಎಂದು ಶ್ರೇಷ್ಠಾ ಹೇಳುತ್ತಾಳೆ.
ಸೊಸೆಯ ಜೀವನ ಸರಿ ಮಾಡೇ ತೀರುತ್ತೇನೆ
ಇತ್ತ ಕುಸುಮಾ ರೂಮ್‌ನಲ್ಲಿ ಒಬ್ಬಳೇ ಕುಳಿತು ಯೋಚನೆ ಮಾಡುವಾಗ ಧರ್ಮರಾಜ್ ಬಂದು ವಿಚಾರಿಸುತ್ತಾನೆ. ಏನಿಲ್ಲ ಶ್ರೇಷ್ಠಾ ಮದುವೆ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದೆ. ಶ್ರೇಷ್ಠಾ ಕೂಡಾ ಮದುವೆ ಆಗಿರುವ ಹುಡುಗನನ್ನು ಮದುವೆ ಆಗಲು ಹೊರಟು ಇನ್ನೊಂದು ಹೆಣ್ಣಿನ ಜೀವನ ಹಾಳು ಮಾಡುತ್ತಿದ್ದಾಳೆ. ಅದನ್ನು ನೆನಪಿಸಿಕೊಂಡರೆ ಭಾಗ್ಯಾ ನೆನಪಾಗುತ್ತಾಳೆ ಅದೇ ನನಗೆ ಬೇಜಾರು ಎನ್ನುತ್ತಾಳೆ. ಕುಸುಮಾಗೆ ಧರ್ಮರಾಜ್ ಸಮಾಧಾನ ಹೇಳುತ್ತಾರೆ. ನಂತರ ಪೂಜಾ ಬಳಿ ಮಾತನಾಡುವ ಕುಸುಮಾ, ಭಾಗ್ಯಾಗೆ ಈ ವಿಚಾರ ಯಾವುದೇ ಕಾರಣಕ್ಕೂ ಗೊತ್ತಾಗಬಾರದು. ನನ್ನ ಮನೆಗಾಗಿ ಜೀವ ತೇಯ್ದ ಅವಳ ಜೀವನವನ್ನು ನಾನು ಸರಿ ಮಾಡೇ ತೀರುತ್ತೇನೆ ಎಂದು ಪೂಜಾ ಬಳಿ ಹೇಳಿಕೊಂಡು ಕಣ್ಣೀರಿಡುತ್ತಾಳೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ