ಕನ್ನಡ ಸೀರಿಯಲ್‌ ಟಿಆರ್‌ಪಿಯಲ್ಲಿ ‘ಲಕ್ಷ್ಮೀ’ಯರದ್ದೇ ಮೇಲುಗೈ; ಟಾಪ್‌ 10ರಲ್ಲಿ ಸ್ಥಾನ ಪಡೆದ ಧಾರಾವಾಹಿಗಳಿವು-television news bhagyalakshmi lakshmi baramma to ramachari colors kannada serials at top 5 kannada serial trp mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡ ಸೀರಿಯಲ್‌ ಟಿಆರ್‌ಪಿಯಲ್ಲಿ ‘ಲಕ್ಷ್ಮೀ’ಯರದ್ದೇ ಮೇಲುಗೈ; ಟಾಪ್‌ 10ರಲ್ಲಿ ಸ್ಥಾನ ಪಡೆದ ಧಾರಾವಾಹಿಗಳಿವು

ಕನ್ನಡ ಸೀರಿಯಲ್‌ ಟಿಆರ್‌ಪಿಯಲ್ಲಿ ‘ಲಕ್ಷ್ಮೀ’ಯರದ್ದೇ ಮೇಲುಗೈ; ಟಾಪ್‌ 10ರಲ್ಲಿ ಸ್ಥಾನ ಪಡೆದ ಧಾರಾವಾಹಿಗಳಿವು

Kannada Serial TRP: ಕನ್ನಡ ಕಿರುತೆರೆಯಲ್ಲಿ ಈ ವಾರ ಕಲರ್ಸ್‌ ಕನ್ನಡದ ಧಾರಾವಾಹಿಗಳಿಗೆ ಬಂಪರ್‌ ಹೊಡೆದಿದೆ. ಅಂದರೆ, ಟಾಪ್‌ ಐದರಲ್ಲಿ ಕಲರ್ಸ್‌ನ ಮೂರು ಸೀರಿಯಲ್‌ಗಳು ಸ್ಥಾನ ಪಡೆದಿವೆ. ಜತೆಗೆ ಈ ವಾರದ ಟಾಪ್‌ 10 ಧಾರಾವಾಹಿಗಳಾವವು ಎಂಬ ಮಾಹಿತಿಯೂ ಇಲ್ಲಿದೆ.

ಕನ್ನಡ ಸೀರಿಯಲ್‌ ಟಿಆರ್‌ಪಿ
ಕನ್ನಡ ಸೀರಿಯಲ್‌ ಟಿಆರ್‌ಪಿ (Photos: Zee5\ JioCinema)

Kannada Serial TRP: ಕನ್ನಡ ಕಿರುತೆರೆಯಲ್ಲಿ ಈಗ ಹೊಸ ಗಾಳಿ ಬೀಸಿದೆ. ಇಲ್ಲಿವರೆಗೂ ಟಾಪ್‌ ಐದರಲ್ಲಿ ಬಹುತೇಕ ಜೀ ಕನ್ನಡದ ಸೀರಿಯಲ್‌ಗಳೇ ಕಾಣಿಸುತ್ತಿದ್ದವು. ಆದರೆ, ಇದೀಗ ಆ ಸ್ಥಿತಿ ಇಲ್ಲ. ಕಲರ್ಸ್‌ ಕನ್ನಡದ ಮೂರು ಸೀರಿಯಲ್‌ಗಳು ಟಾಪ್‌ 5ರಲ್ಲಿ ಕಾಣಿಸಿಕೊಂಡಿವೆ. ಈ ಮೂಲಕ ಬಿಗ್‌ ಬಾಸ್‌ ಸೀಸನ್‌ 11 ಶುರುವಿಗೂ ಮುನ್ನ ವೀಕ್ಷಕರಿಂದ ಭರಪೂರ ವೀಕ್ಷಣೆ ಪಡೆದುಕೊಂಡಿದೆ. ಹಾಗಾದರೆ 38ನೇ ವಾರ ಯಾವೆಲ್ಲ ಸೀರಿಯಲ್‌ಗಳು ಟಾಪ್‌ ಹತ್ತರಲ್ಲಿವೆ.

ಲಕ್ಷ್ಮೀಯರದ್ದೇ ಮೇಲುಗೈ!

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಟಿಆರ್‌ಪಿಯಲ್ಲಿ ಆರಂಭದಿಂದಲೂ ಮೊದಲ ಸ್ಥಾನದಲ್ಲಿಯೇ ಇತ್ತು. ಸಮಯ ಬದಲಾವಣೆಯಿಂದ ಮೊದಲ ಸ್ಥಾನ ಲಕ್ಷ್ಮೀ ನಿವಾಸ ಸೀರಿಯಲ್‌ ಪಾಲಾಗಿದೆ. ಈಗ ಲಕ್ಷ್ಮೀ ನಿವಾಸ ಸೀರಿಯಲ್‌ ಈ ವಾರವೂ ಮೊದಲ ಸ್ಥಾನದಲ್ಲಿದೆ. 8.2 ಟಿಆರ್‌ಪಿ ಪಡೆದು ಅಗ್ರಸ್ಥಾನದಲ್ಲಿದೆ. ಹಲವು ಪದರಗಳಾಗಿ ತೆರೆದುಕೊಳ್ಳುವ ಈ ಸೀರಿಯಲ್‌ ಕಿರುತೆರೆ ವೀಕ್ಷಕರ ಮನಗೆದ್ದಿದೆ. ಅದರಂತೆ, ಅದಾದ ಬಳಿಕ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ 7.8 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿ ಗಟ್ಟಿಯಾಗಿ ನಿಂತಿದೆ.

ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್‌ ಈಗ ಮತ್ತೆ ಸುದ್ದಿಯಲ್ಲಿದೆ. ಅಂದರೆ, ಟಿಆರ್‌ಪಿ ವಿಚಾರದಲ್ಲಿ ಈ ಸಿನಿಮಾ ದೊಡ್ಡ ಮೈಲಿಗಲ್ಲು ತಲುಪಿದೆ. ಕಲರ್ಸ್‌ ಕನ್ನಡದ ನಂಬರ್‌ 1 ಸೀರಿಯಲ್‌ ಆಗಿ ಮುಂದುವರಿದಿದೆ. ಈ ಧಾರಾವಾಹಿ ಈ ವಾರ ದಾಖಲೆಯ 7.7 ಟಿಆರ್‌ಪಿ ಪಡೆದು ಮುಂದಡಿ ಇರಿಸಿದೆ. ಅದೇ ರೀತಿ, ಕಲರ್ಸ್‌ ಕನ್ನಡದ ಇನ್ನೊಂದು ಸೀರಿಯಲ್‌ ಲಕ್ಷ್ಮೀ ಬಾರಮ್ಮ ಸಹ ಟಿಆರ್‌ಪಿಯಲ್ಲಿ ಮೋಡಿ ಮಾಡಿದೆ. 7.6 ಟಿಆರ್‌ಪಿ ಪಡೆಯುವ ಮೂಲಕ ಟಾಪ್‌ ಐದರಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಟಾಪ್‌ ಐದರಲ್ಲಿ ಕಲರ್ಸ್‌ನ 3 ಸೀರಿಯಲ್ಸ್‌

ಲಕ್ಷ್ಮೀ ಬಾರಮ್ಮ ಧಾರಾವಾಹಿ ಜತೆಗೆ ಜೀ ಕನ್ನಡದ ಅಮೃತಧಾರೆ ಧಾರಾವಾಹಿ ಕೂಡ ಈ ವಾರದ ಟಿಆರ್‌ಪಿಯಲ್ಲಿ ಸರಿಸಮ ಸ್ಥಾನವನ್ನು ಹಂಚಿಕೊಂಡಿವೆ. ಈ ಧಾರಾವಾಹಿ ಸಹ 7.6 ಟಿಆರ್‌ಪಿ ಪಡೆದುಕೊಂಡು, ಟಾಪ್‌ ಐದರಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದರ ಜತೆಗೆ ಕಲರ್ಸ್‌ ಕನ್ನಡದ ಮತ್ತೊಂದು ಸೀರಿಯಲ್‌ ರಾಮಾಚಾರಿ ಸಹ ಒಳ್ಳೆ ನಂಬರ್‌ ಪಡೆದುಕೊಂಡಿದೆ. 7.3 ಟಿಆರ್‌ಪಿ ಪಡೆದುಕೊಂಡ ರಾಮಾಚಾರಿ ಐದನೇ ಸ್ಥಾನದಲ್ಲಿದೆ. ಈ ಮೂಲಕ ಇದೇ ಮೊದಲ ಬಾರಿ ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ ಮತ್ತು ರಾಮಾಚಾರಿ ಟಾಪ್‌ 5ರಲ್ಲಿ ಕಾಣಿಸಿಕೊಂಡಿವೆ.

ಆರನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು

ಇನ್ನು ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್‌, ಸಹ ಈ ವಾರ ಒಳ್ಳೆಯ ಟಿಆರ್‌ಪಿ ನಂಬರ್‌ ಪಡೆದುಕೊಂಡಿದೆ. ಈ ಧಾರಾವಾಹಿ ಈ ವಾರ 7 ಟಿಆರ್‌ ಪಡೆದುಕೊಂಡು, ಆರನೇ ಸ್ಥಾನದಲ್ಲಿದೆ. ಇತ್ತೀಚೆಗಷ್ಟೇ ಶುರುವಾದ ಅಣ್ಣಯ್ಯ ಸೀರಿಯಲ್‌ ಸಹ 7 ನಂಬರ್‌ ಪಡೆದು, ಪುಟ್ಟಕ್ಕನ ಜತೆಗೆ ಸಮ ಸ್ಥಾನ ಹಂಚಿಕೊಂಡಿದೆ. ಈ ಮೂಲಕ ಮತ್ತೆ ಹಳೇ ಲಯದತ್ತ ಮುಖ ಮಾಡಿದ್ದಾಳೆ ಪುಟ್ಟಕ್ಕ.

ಸೀತಾ ರಾಮ ಸೀರಿಯಲ್‌ ಸಹ ಕೊಂಚ ಇಳಿಮುಖದತ್ತ ಸಾಗಿದೆ. ಈ ಸೀರಿಯಲ್‌ ಈ ವಾರ 6.8 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ. ಸಿಹಿ ಹುಟ್ಟಿನ ರಹಸ್ಯ ಜತೆಗೆ ಈ ಸೀರಿಯಲ್‌ ಸಾಗುತ್ತಿದೆ. ಇನ್ನೊಂದು ಕಡೆ, ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಈ ವಾರ 6.7 ಟಿಆರ್‌ಪಿ ಪಡೆದುಕೊಂಡು ಎಂಟನೇ ಸ್ಥಾನದಲ್ಲಿದೆ. ಕರಿಮಣಿ 5.6 ಟಿಆರ್‌ಪಿ ಪಡೆದು ಒಂಭತ್ತನೇ ಸ್ಥಾನದಲ್ಲಿದ್ದರೆ, ಶ್ರೀಗೌರಿ 5.3 ಟಿಆರ್‌ಪಿ ಪಡೆದು 10ರಲ್ಲಿದೆ.

mysore-dasara_Entry_Point