Bhagyalakshmi Serial: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ತಾಂಡವ್‌; ಕೊನೆಗೂ ಶ್ರೇಷ್ಠಾಳನ್ನು ಮನೆಯಿಂದ ಹೊರ ಕಳಿಸಿದ ಕುಸುಮಾ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ತಾಂಡವ್‌; ಕೊನೆಗೂ ಶ್ರೇಷ್ಠಾಳನ್ನು ಮನೆಯಿಂದ ಹೊರ ಕಳಿಸಿದ ಕುಸುಮಾ

Bhagyalakshmi Serial: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ತಾಂಡವ್‌; ಕೊನೆಗೂ ಶ್ರೇಷ್ಠಾಳನ್ನು ಮನೆಯಿಂದ ಹೊರ ಕಳಿಸಿದ ಕುಸುಮಾ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ನವೆಂಬರ್‌ 8 ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. 'ಕೊನೆಗೂ ಕುಸುಮಾ, ಶ್ರೇಷ್ಠಾಳನ್ನು ಮನೆಯಿಂದ ಕಳಿಸಿದರೆ, ಮತ್ತೊಂದೆಡೆ ತಾಂಡವ್‌ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾನೆ'.

ಭಾಗ್ಯಲಕ್ಷ್ಮಿ ಧಾರಾವಾಹಿ ನವೆಂಬರ್‌ 8ರ ಸಂಚಿಕೆ
ಭಾಗ್ಯಲಕ್ಷ್ಮಿ ಧಾರಾವಾಹಿ ನವೆಂಬರ್‌ 8ರ ಸಂಚಿಕೆ (PC: Colors Kannada)

Bhagyalakshmi Kannada Serial: ಹೇಗಾದರೂ ಮಾಡಿ ತಾಂಡವ್‌ ಮನೆಯಲ್ಲೇ ಉಳಿಯಬೇಕೆಂಬ ಶ್ರೇಷ್ಠಾ ಪ್ಲಾನ್‌ ಪದೇ ಪದೇ ಫ್ಲಾಪ್‌ ಆಗುತ್ತಿದೆ. ನನಗೆ ಮನೆಯಲ್ಲಿ ಜಾಗ ಇಲ್ಲ, ನಾನು ಇಷ್ಟಪಟ್ಟ ಹುಡುಗನನ್ನು ಅಪ್ಪ ಅಮ್ಮ ಒಪ್ಪುತ್ತಿಲ್ಲ, ನನಗೆ ಆ ಮನೆಯಲ್ಲಿ ಜಾಗವೂ ಇಲ್ಲ ಎಂದು ಶ್ರೇಷ್ಠಾ, ಸುಳ್ಳು ಹೇಳಿ ಆಸ್ಪತ್ರೆಯಿಂದ ತಾಂಡವ್‌ ಮನೆಗೆ ಬರುತ್ತಾಳೆ. ಮರುದಿನ ಯಾರಿಗೂ ಹೇಳದೆ ಕೇಳದೆ ಭಾಗ್ಯ ಸೀರೆಯುಟ್ಟು ಅಡುಗೆ ಮನೆಯಲ್ಲಿ ಹಾಲು ಉಕ್ಕಿಸುತ್ತಾಳೆ.

ರಘುವನ್ನು ಮನೆಗೆ ಕರೆಸುವ ಭಾಗ್ಯಾ

ಶ್ರೇಷ್ಠಾ, ತಂದೆ ತಾಯಿಗೆ ಅವಮಾನ ಮಾಡಿ ಬಂದಿದ್ದಾಳೆ. ತಂದೆ ಶ್ರೀವರನಿಗೆ ಹೃದಯಾಘಾತ ಆದರೂ ಕೇರ್‌ ಮಾಡಿಲ್ಲ ಎಂದು ನಿಜ ವಿಚಾರ ತಿಳಿದ ಕುಸುಮಾ, ಕೋಪಗೊಂಡು ಶ್ರೇಷ್ಠಾಳನ್ನು ಮನೆಯಿಂದ ಹೊರ ಹಾಕುತ್ತಾಳೆ. ರಾತ್ರಿಯಿಡೀ ಕುಸುಮಾ ಮನೆ ಮುಂದೆ ನಿಲ್ಲುವ ಶ್ರೇಷ್ಠಾ, ತಾಂಡವ್‌ಗೆ ಬ್ಲಾಕ್‌ಮೇಲ್‌ ಮಾಡಿ ಮತ್ತೆ ಮನೆ ಒಳಗೆ ಸೇರಿಕೊಳ್ಳುತ್ತಾಳೆ. ಆದರೆ ಭಾಗ್ಯಾ ಬಹಳ ಚಾಲಾಕಿ. ರಘುವಿಗೆ ಫೋನ್‌ ಮಾಡಿ ಮನೆಗೆ ಬರಲು ಹೇಳುತ್ತಾಳೆ. ತನ್ನನ್ನು ಕರೆದುಕೊಂಡು ಹೋಗಲು ರಘು ಬಂದಿರುವ ವಿಚಾರ ತಿಳಿದು ಶ್ರೇಷ್ಠಾ ಗಾಬರಿ ಆಗುತ್ತಾಳೆ. ಜೊತೆಗೆ ಭಾಗ್ಯಾ ಮೇಲೆ ಸಿಟ್ಟಾಗುತ್ತಾಳೆ. ರಘು ಕರೆದರೂ ಶ್ರೇಷ್ಠಾ, ಆತನೊಂದಿಗೆ ಹೋಗಲು ಒಪ್ಪುವುದಿಲ್ಲ. ಆಗ ರಘು, ಶ್ರೀವರನಿಗೆ ಕಾಲ್‌ ಮಾಡಿ ಸುದ್ದಿ ಮುಟ್ಟಿಸುತ್ತಾನೆ. ನೀನು ಒಪ್ಪಿದ ಹುಡುಗನನ್ನೇ ಮದುವೆ ಆಗು, ಆದರೆ ಅಲ್ಲಿವರೆಗೂ ನಮ್ಮ ಜೊತೆಯಲ್ಲಿರು, ದಯವಿಟ್ಟು ಮನೆಗೆ ವಾಪಸ್‌ ಬಾ ಎಂದು ತಂದೆ ತಾಯಿ ಇಬ್ಬರೂ ಮನವಿ ಮಾಡುತ್ತಾರೆ.

ಕೊನೆಗೂ ತಾಂಡವ್‌ ಮನೆಯಿಂದ ಹೊರ ಹೋಗುವ ಶ್ರೇಷ್ಠಾ

ಶ್ರೀವರ, ಯಶೋಧಾ ಮಾತನಾಡುವುದನ್ನು ಕುಸುಮಾ ಹಾಗೂ ಮನೆಯವರು ಕೇಳಿಸಿಕೊಳ್ಳುತ್ತಾರೆ. ರಾತ್ರಿ ಆಯ್ತು, ಬಸ್‌ ಇಲ್ಲ, ಆಟೋ ಇಲ್ಲ ಎಂದು ನೀನು ನೆಪ ಹೇಳಬೇಡ, ರಘು ಬಳಿ ಕಾರ್‌ ಇದೆ ತಾನೇ, ನೀನು ನಿಮ್ಮ ಮನೆಗೆ ಹೊರಡು. ಇಲ್ಲವಾದರೆ ಹಗಲು ರಾತ್ರಿ ಎನ್ನುವುದನ್ನೂ ನೋಡದೆ ಮನೆಯಿಂದ ಹೊರ ಹಾಕುತ್ತೇನೆ ಎಂದು ಕುಸುಮಾ ಶ್ರೇಷ್ಠಾಗೆ ತಾಕೀತು ಮಾಡುತ್ತಾಳೆ. ಮನೆ ಬಿಟ್ಟು ಹೋಗುವುದು ಇಷ್ಟವಿಲ್ಲದಿದ್ದರೂ ಶ್ರೇಷ್ಠಾಗೆ ಬೇರೆ ದಾರಿ ಇಲ್ಲ. ಒಮ್ಮೆ ತಾಂಡವ್‌ ಬಳಿ ಮಾತನಾಡಿ ಹೋಗುತ್ತೇನೆ ಎನ್ನುತ್ತಾಳೆ. ಆದರೆ ಸುನಂದಾ ಒಪ್ಪುವುದಿಲ್ಲ, ಕುಸುಮಾ ಈ ಮನೆ ಯಜಮಾನಿ ಅವರು ಹೇಳಿದರೆ ಮುಗಿಯಿತು ಎಂದು ಹೇಳುತ್ತಾಳೆ. ಶ್ರೇಷ್ಠಾ ಕೋಪದಿಂದಲೇ ಮನೆ ಬಿಟ್ಟು ಹೊರ ಬರುತ್ತಾಳೆ. ನಿಮ್ಮೆಲ್ಲರಿಗೂ ಪಾಠ ಕಲಿಸುತ್ತೇನೆ ಎಂದು ಮನಸ್ಸಿನಲ್ಲೇ ಶಪಥ ಮಾಡಿಕೊಳ್ಳುತ್ತಾಳೆ.

ಕೆಲಸ ಕಳೆದುಕೊಳ್ಳುವ ಭಯದಲ್ಲಿ ತಾಂಡವ್‌

ಇತ್ತ ತಾಂಡವ್‌ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾನೆ. ಪದೇ ಪದೆ ಕೆಲಸವನ್ನು ಅರ್ಧದಲ್ಲೇ ಬಿಟ್ಟು ಹೋಗುವ ತಾಂಡವ್‌ ವರ್ತನೆ ನೋಡಿ ಆತನ ಬಾಸ್‌ ಸಿಟ್ಟಾಗಿದ್ಧಾರೆ. ತಾಂಡವ್‌ಗೆ ಕರೆ ಮಾಡಿ, ಇನ್ಮುಂದೆ ನೀವು ನಮ್ಮ ಕಂಪನಿಗೆ ಅಗತ್ಯವಿಲ್ಲ ಎನ್ನುತ್ತಾರೆ. ತಪ್ಪಿನ ಅರಿವಾಗುವ ತಾಂಡವ್‌, ಇನ್ಮುಂದೆ ಹೀಗೆಲ್ಲಾ ಆಗುವುದಿಲ್ಲ ಎಂದು ಮನವಿ ಮಾಡುತ್ತಾನೆ. ನಾಳೆ ಆಫೀಸಿಗೆ ಬನ್ನಿ, ನೀವು ಕೆಲಸದಲ್ಲಿ ಮುಂದುವರೆಯಬೇಕೋ ಬೇಡವೋ ನಿರ್ಧರಿಸುತ್ತೇನೆ ಎಂದು ಹೇಳಿ ಫೋನ್‌ ಕಟ್‌ ಮಾಡುತ್ತಾರೆ. ಎಲ್ಲಾ ಶ್ರೇಷ್ಠಾಳಿಂದ ಆಗಿದೆ, ಕೆಲಸ ಹೋದರೆ ಮನೆ ಹೇಗೆ ನಡೆಸುವುದು, ಇಎಂಐ ಕಟ್ಟುವುದು ಹೇಗೆ ಎಂದು ತಾಂಡವ್‌ ಯೋಚಿಸುವಾಗಲೇ ಶ್ರೇಷ್ಠಾ ಕಾಲ್‌ ಮಾಡುತ್ತಾಳೆ.

ಎಂಗೇಜ್‌ಮೆಂಟ್‌ ಡೇಟ್‌ ಫಿಕ್ಸ್‌ ಮಾಡಿಕೊಂಡು ಬರುತ್ತೇನೆ

ನಾನು ಮನೆಯಿಂದ ಹೊರ ಹೋಗುವಾಗಲೂ ನಿನಗೆ ನನ್ನನ್ನು ನೋಡಬೇಕು ಎನಿಸಲಿಲ್ವಾ ಎಂದು ಪ್ರಶ್ನಿಸುತ್ತಾಳೆ. ಆಗ ತಾಂಡವ್‌ ತನ್ನ‌ ಪರಿಸ್ಥಿತಿಯನ್ನು ವಿವರಿಸುತ್ತಾನೆ. ಆದರೆ ಶ್ರೇಷ್ಠಾ ಮಾತ್ರ ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ನನಗೂ ತಲೆ ಕೆಟ್ಟಿದೆ, ನನ್ನ ಪರಿಸ್ಥಿತಿ ಕೂಡಾ ಸರಿ ಇಲ್ಲ, ನಾನು ಮನೆಗೆ ಹೋಗುತ್ತಿದ್ದೇನೆ, ನೀನು ಪ್ರೀತಿಸಿದ ಹುಡುಗನನ್ನೇ ಮದುವೆ ಆಗು ಎಂದು ಅಪ್ಪ ಅಮ್ಮ ಒಪ್ಪಿಗೆ ಕೊಟ್ಟಿದ್ದಾರೆ. ನಿಮ್ಮ ಮನೆಯಲ್ಲೂ ಅದೇ ರೀತಿ ಹೇಳಿದ್ದಾರೆ. ಎಂಗೇಜ್‌ಮೆಂಟ್‌ ಡೇಟ್‌ ಫಿಕ್ಸ್‌ ಮಾಡಿಕೊಂಡು ವಾಪಸ್‌ ಬರುತ್ತೇನೆ, ಒಂದು ವಿಷಯ ನೆನಪಿನಲ್ಲಿಡು, ನಾನು ಮದುವೆ ಆದರೆ ನಿನ್ನನ್ನೇ ಎನ್ನುತ್ತಾಳೆ. ಶ್ರೇಷ್ಠಾ ಮಾತುಗಳನ್ನು ಕೇಳಿ ತಾಂಡವ್‌ ಗಾಬರಿ ಆಗುತ್ತಾನೆ.

ಶ್ರೇಷ್ಠಾ, ತಾಂಡವ್‌ ಮನೆಗೆ ಬರಲು ಬೇರೆ ಯಾವ ಪ್ಲಾನ್‌ ಹುಡುಕುತ್ತಾಳೆ? ತಾಂಡವ್‌ ತಾನೇ ಮಾಡಿದ ತಪ್ಪಿನಿಂದ ಕೆಲಸ ಕಳೆದುಕೊಳ್ಳುತ್ತಾನಾ? ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

Whats_app_banner