Seetha Rama Serial: ಸಿಹಿ ಜನ್ಮರಹಸ್ಯ ಬಯಲು ಮಾಡ್ತಾಳಾ ಡಾ. ಅನಂತಲಕ್ಷ್ಮೀ, ಆ ವೈದ್ಯೆಯ ಹೆಸರು ಕೇಳ್ತಿದ್ದಂತೆ ಬೆಚ್ಚಿಬಿದ್ದಿದ್ದೇಕೆ ಸೀತಾ?-kannada television news seetha rama serial august 16th episode highlights seetha raama serial latest update mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸಿಹಿ ಜನ್ಮರಹಸ್ಯ ಬಯಲು ಮಾಡ್ತಾಳಾ ಡಾ. ಅನಂತಲಕ್ಷ್ಮೀ, ಆ ವೈದ್ಯೆಯ ಹೆಸರು ಕೇಳ್ತಿದ್ದಂತೆ ಬೆಚ್ಚಿಬಿದ್ದಿದ್ದೇಕೆ ಸೀತಾ?

Seetha Rama Serial: ಸಿಹಿ ಜನ್ಮರಹಸ್ಯ ಬಯಲು ಮಾಡ್ತಾಳಾ ಡಾ. ಅನಂತಲಕ್ಷ್ಮೀ, ಆ ವೈದ್ಯೆಯ ಹೆಸರು ಕೇಳ್ತಿದ್ದಂತೆ ಬೆಚ್ಚಿಬಿದ್ದಿದ್ದೇಕೆ ಸೀತಾ?

Seetha Rama Serial August 16th Episode: ಸೀತಾ ರಾಮ ಧಾರಾವಾಹಿಯಲ್ಲಿ ಇದೀಗ ಸಿಹಿಯ ಜನ್ಮ ರಹಸ್ಯ ಬಯಲಾಗುವ ಸೂಚನೆ ಸಿಕ್ಕಿದೆ. ವಿಶ್ವ ಉರುಳಿಸಿದ ದಾಳಕ್ಕೆ ಸೀತಾ ಅಕ್ಷರಶಃ ನಲುಗಿದ್ದಾಳೆ. ಹಾಗಾದರೆ, ಅನಂತಲಕ್ಷ್ಮೀಗೂ ಸೀತಾಗೂ ಏನು ನಂಟು?

ಸೀತಾ ರಾಮ ಧಾರಾವಾಹಿಯಲ್ಲಿ ಇದೀಗ ಸಿಹಿಯ ಜನ್ಮ ರಹಸ್ಯ ಬಯಲಾಗುವ ಸೂಚನೆ ಸಿಕ್ಕಿದೆ. ವಿಶ್ವ ಉರುಳಿಸಿದ ದಾಳಕ್ಕೆ ಸೀತಾ ಅಕ್ಷರಶಃ ನಲುಗಿದ್ದಾಳೆ. ಹಾಗಾದರೆ, ಅನಂತಲಕ್ಷ್ಮೀಗೂ ಸೀತಾಗೂ ಏನು ನಂಟು?
ಸೀತಾ ರಾಮ ಧಾರಾವಾಹಿಯಲ್ಲಿ ಇದೀಗ ಸಿಹಿಯ ಜನ್ಮ ರಹಸ್ಯ ಬಯಲಾಗುವ ಸೂಚನೆ ಸಿಕ್ಕಿದೆ. ವಿಶ್ವ ಉರುಳಿಸಿದ ದಾಳಕ್ಕೆ ಸೀತಾ ಅಕ್ಷರಶಃ ನಲುಗಿದ್ದಾಳೆ. ಹಾಗಾದರೆ, ಅನಂತಲಕ್ಷ್ಮೀಗೂ ಸೀತಾಗೂ ಏನು ನಂಟು? (Instagram\Zee Kannada)

Seetha Rama Serial update: ಸಾಧನಾ ತನ್ನ ಬರ್ತ್‌ಡೇಗೆ ಮಾಡರ್ನ್‌ ಡ್ರೆಸ್‌ನಲ್ಲಿ ಎದುರಾಗುತ್ತಿದ್ದಂತೆ, ಕೋಪಗೊಂಡಂತೆ ವರ್ತಿಸಿದ ಮಾವಯ್ಯ ಸೂರ್ಯಪ್ರಕಾಶ್‌, ಬಳಿಕ ಖುಷಿಯಲ್ಲಿಯೇ ಸಾಧನಾಳಿಗೆ ವಿಶ್‌ ಮಾಡಿದ್ದಾನೆ. ಅದಾದ ಮೇಲೆ, ಜೀನ್ಸ್‌ ಧರಿಸಬೇಕು ಎಂಬ ಆಸೆಯನ್ನು ಸೀತಾಳ ಮೂಲಕ ನೆರವೇರಿಸಿಕೊಂಡಿದ್ದಾಳೆ. ಬಳಿಕ ಇದೆಲ್ಲದಕ್ಕೂ ಕಾರಣಳಾದ ಸೀತಾಳಿಗೆ ಖುಷಿಯಲ್ಲಿಯೇ ಅಪ್ಪುಗೆ ನೀಡಿ ಥ್ಯಾಂಕ್ಸ್‌ ಹೇಳಿದ್ದಾಳೆ ಸಾಧನಾ.

ಮತ್ತೊಂದು ಕಡೆ ಸಿಹಿ ಬೋರ್ಡಿಂಗ್‌ ಸ್ಕೂಲ್‌ಗೆ ಹೋಗುವ ತಯಾರಿಯಲ್ಲಿದ್ದಾಳೆ. ಈ ವಿಚಾರವಾಗಿ ದೇಸಾಯಿ ಮನೆಯಲ್ಲಿ ಚರ್ಚೆ ನಡೆಯುತ್ತಲೇ ಇದೆ. ಮತ್ತೊಂದು ಕಡೆ, ಇದೇ ಸಿಹಿ ವಿಚಾರ ಶಾಂತಮ್ಮಜ್ಜಿಯ ಕಡೆಯಿಂದ ಸೀತಾಳ ಅತ್ತಿಗೆ ಸುಲೋಚನಾ ಮತ್ತು ಸುದೇಶ್‌ ಕಿವಿಗೂ ಬಿದ್ದಿದೆ. ಮೊದಲು ಸಿಹಿಯನ್ನು ಮನೆಯಿಂದ ಆಚೆ ಕಳಿಸ್ತಾರೆ. ಅದಾದ ಮೇಲೆ ಸೀತಾಳನ್ನು ಆಚೆ ಹಾಕ್ತಾರೆ ಅಂತ ಮಾತನಾಡಿಕೊಂಡಿದ್ದಾರೆ.

ಮನೆಯಲ್ಲಿ ಶುಕ್ರವಾರದ ವರಮಹಾಲಕ್ಷ್ಮೀ ಪೂಜೆ ನಡೆದಿದೆ. ಮೊದಲೆಲ್ಲ ಸಾಧನಾ ಮಾಡುತ್ತಿದ್ದ ಪೂಜೆ, ಇದೀಗ ಸೀತಾಳ ಪಾಲಿಗೆ ಬಂದಿದೆ. ಇದರಿಂದ ಸಾಧನಾ ಕೊಂಚ ಸಪ್ಪಗಾಗಿದ್ದಾಳೆ. ಸಿಹಿಯ ಬೋರ್ಡಿಂಗ್‌ ಸ್ಕೂಲ್‌ಗೆ ಸೇರಿಸುವ ವಿಚಾರ ಅಶೋಕನಿಗೂ ಗೊತ್ತಾಗಿ, ರಾಮನನ್ನು ಕರೆದು ಈ ಬಗ್ಗೆ ಮಾತನಾಡಿದ್ದಾನೆ. ಆದರೆ, ರಾಮ ಅಶೋಕನ ಮೇಲೆಯೇ ಗರಂ ಆಗಿದ್ದಾನೆ.

ವಿಶ್ವನ ಪ್ಲಾನ್‌ ಏನು?

ಇತ್ತ ಕಿಚನ್‌ನಲ್ಲಿ ಸೀತಾ -ಪ್ರಿಯಾ ಮಾತನಾಡುತ್ತ ನಿಂತಿದ್ದಾರೆ. ಸ್ತ್ರೀರೋಗ ತಜ್ಞೆ ಬಳಿ ಹೋಗಬೇಕು ಎಂದು ಸೀತಾಗೆ ಹೇಳಿದ್ದಾಳೆ. ಈ ವೇಳೆ ಅಲ್ಲೇ ಇದ್ದ ವಿಶ್ವಜಿತ್‌, ನಮಗೆ ಗೊತ್ತಿರುವವರೇ ಒಬ್ರು ಡಾಕ್ಟರ್‌ ಇದ್ದಾರೆ. ಅವರ ಬಳಿಯೇ ಟ್ರಿಟ್‌ಮೆಂಟ್‌ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದ್ದಾನೆ. ಭಾರ್ಗವಿ ರೆಫರೆನ್ಸ್‌ ಎಂದು ಹೇಳಿ ಚೆನ್ನಾಗಿ ಟ್ರೀಟ್‌ ಮಾಡ್ತಾರೆ ಎಂದಿದ್ದಾನೆ. ಸೀತಾ ಸಹ ಹಾಗೇ ಮಾಡು ಪ್ರಿಯಾ ಎಂದಿದ್ದಾಳೆ. ಆಗ ಆ ಡಾಕ್ಟರ್‌ ಹೆಸರು ಡಾ ಅನಂತ ಲಕ್ಷ್ಮೀ ಎಂದು ಹೇಳಿದ್ದಾನೆ ವಿಶ್ವ.

ಅನಂತಲಕ್ಷ್ಮೀ ಹೆಸರು ಕೇಳಿ ಶಾಕ್‌ ಆದ ಸೀತಾ

ವಿಶ್ವ ಅನಂತಲಕ್ಷ್ಮೀ ಎನ್ನುತ್ತಿದ್ದಂತೆ, ಸೇಬು ಹಣ್ಣನ್ನು ಕತ್ತರಿಸುತ್ತಿದ್ದ ಸೀತಾ, ತನ್ನ ಕೈ ಕೂಯ್ದುಕೊಂಡಿದ್ದಾಳೆ. ಇತ್ತ ವಿಶ್ವನಿಗೆ ಇಲ್ಲಿ ಏನೋ ವಿಷಯ ಇದೇ ಅನ್ನೋ ಅನುಮಾನ ಬಂದಿದೆ. ಒಳಗೊಳಗೆ, ಸೀತಾಳ ಪತಿಯನ್ನು ಪತ್ತೆ ಮಾಡುವ ಪ್ಲಾನ್‌ ಆತನ ತಲೆಯಲ್ಲಿ ಓಡಾಡಿದೆ. ಇತ್ತ ಸೀತಾಳ ಮುಖದಲ್ಲಿ ಗಾಬರಿ ಹೆಚ್ಚಾಗಿದೆ. ಹಾಗಾದರೆ, ಡಾ. ಅನಂತಲಕ್ಷ್ಮೀ ಅವರಿಂದ ಸಿಹಿಯ ಜನ್ಮ ರಹಸ್ಯ ಬಯಲಾಗುತ್ತಾ?

ಸಿಹಿಯ ಜನ್ಮ ರಹಸ್ಯ ಬಯಲಾಗುವ ಮುನ್ಸೂಚನೆ ಇರಬಹುದಾ? ವಿಶ್ವ ಉರುಳಿಸಿದ ದಾಳಕ್ಕೆ ಸೀತಾ ಅಕ್ಷರಶಃ ನಲುಗಿದ್ದಾಳೆ. ಹಾಗಾದರೆ, ಅನಂತಲಕ್ಷ್ಮೀಗೂ ಸೀತಾಗೂ ಏನು ನಂಟು? ಇದೆಲ್ಲದಕ್ಕೂ ಸೀತಾ ರಾಮ ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)