Seetha Rama Serial: ಸಿಹಿ ಹುಟ್ಟಿನ ರಹಸ್ಯ ಬೇಧಿಸಲು ರುದ್ರಪ್ರತಾಪ್‌ಗೆ ಭಾರ್ಗವಿಯಿಂದ ಸುಪಾರಿ! ರಾಮನ ವಿರುದ್ಧ ಹಲ್ಲು ಮಸಿದ ಚಾಂದಿನಿ-kannada television news seetha rama serial august 07th episode highlights rudra prathap makes a pact with bhargavi mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸಿಹಿ ಹುಟ್ಟಿನ ರಹಸ್ಯ ಬೇಧಿಸಲು ರುದ್ರಪ್ರತಾಪ್‌ಗೆ ಭಾರ್ಗವಿಯಿಂದ ಸುಪಾರಿ! ರಾಮನ ವಿರುದ್ಧ ಹಲ್ಲು ಮಸಿದ ಚಾಂದಿನಿ

Seetha Rama Serial: ಸಿಹಿ ಹುಟ್ಟಿನ ರಹಸ್ಯ ಬೇಧಿಸಲು ರುದ್ರಪ್ರತಾಪ್‌ಗೆ ಭಾರ್ಗವಿಯಿಂದ ಸುಪಾರಿ! ರಾಮನ ವಿರುದ್ಧ ಹಲ್ಲು ಮಸಿದ ಚಾಂದಿನಿ

ಹೇಗಾದರೂ ಮಾಡಿ ಸಿಹಿಯನ್ನ ಬೋರ್ಡಿಂಗ್‌ ಸ್ಕೂಲ್‌ಗೆ ಕಳಿಸಬೇಕೆಂಬ ಭಾರ್ಗವಿ ಪ್ಲಾನ್‌ ಫಲಕೊಟ್ಟಂತಿದೆ. ಕಾಣೆಯಾಗಿದ್ದ ಚಾಂದಿನಿ ಮತ್ತೆ ರಾಮನ ವಿರುದ್ಧ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿದ್ದಾಳೆ. ರುದ್ರಪ್ರತಾಪ್‌ಗೂ ಒಳ್ಳೆಯ ಸುಪಾರಿ ಜತೆಗೆ ಆಫರ್‌ ಕೊಟ್ಟಿದ್ದಾಳೆ ಭಾರ್ಗವಿ.

Seetha Rama Serial: ಸಿಹಿ ಹುಟ್ಟಿನ ರಹಸ್ಯ ಬೇಧಿಸಲು ರುದ್ರಪ್ರತಾಪ್‌ಗೆ ಭಾರ್ಗವಿಯಿಂದ ಸುಪಾರಿ! ರಾಮನ ವಿರುದ್ಧ ಹಲ್ಲು ಮಸಿದ ಚಾಂದಿನಿ
Seetha Rama Serial: ಸಿಹಿ ಹುಟ್ಟಿನ ರಹಸ್ಯ ಬೇಧಿಸಲು ರುದ್ರಪ್ರತಾಪ್‌ಗೆ ಭಾರ್ಗವಿಯಿಂದ ಸುಪಾರಿ! ರಾಮನ ವಿರುದ್ಧ ಹಲ್ಲು ಮಸಿದ ಚಾಂದಿನಿ

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಮಾವಯ್ಯ ಸೂರ್ಯಪ್ರಕಾಶನ ಮುಂದೆ ಸಿಹಿಯನ್ನು ಬೋರ್ಡಿಂಗ್‌ ಸ್ಕೂಲ್‌ಗೆ ಕಳಿಸುವ ವಿಚಾರವಾಗಿ ಮಾತನಾಡಿದ್ದಾಳೆ ಭಾರ್ಗವಿ. ಮದುವೆಯಾಗಿ ಇಷ್ಟು ದಿನವಾದರೂ, ಸಿಹಿ ಸಲುವಾಗಿ ಸೀತಾ ರಾಮ ಇಬ್ಬರೂ ಹನಿಮೂನ್‌ಗೆ ಹೋಗಿಲ್ಲ. ಹಾಗಾಗಿ ಸಿಹಿಯನ್ನು ಬೋರ್ಡಿಂಗ್‌ ಸ್ಕೂಲ್‌ಗೆ ಕಳಿಸುವುದೇ ಸೂಕ್ತ ಎಂದಿದ್ದಾಳೆ. ಇತ್ತ ಸಿಹಿ ಜತೆಗೆ ಖುಷಿ ಖುಷಿಯಾಗಿಯೇ ಮಾತನಾಡ್ತಿದ್ದ ರಾಮ, ಅದ್ಯಾಕೋ ಇತ್ತೀಚಿನ ದಿನಗಳಲ್ಲಿ ಸಿಹಿ ಮೇಲೆ ಸಣ್ಣ ಸಣ್ಣ ಕಾರಣಕ್ಕೆ ರೇಗಾಡ್ತಿದ್ದಾನೆ.

ಸಿಹಿ ಮೇಲೆ ರೇಗಾಡಿದ್ದಕ್ಕೆ ರಾಮನ ಜತೆ ಮಾತಿಗಿಳಿದ ಭಾರ್ಗವಿ, ಸಿಹಿಗೆ ಈ ಮನೆಯಲ್ಲಿ ಆಪತ್ತೇ ಇರಬಹುದು. ಆದರೆ, ಅವಳು ಒಂಟಿಯಲ್ಲ. ಇನ್ನೇನು ಸಿಹಿ ಬೋರ್ಡಿಂಗ್‌ ಸ್ಕೂಲ್‌ಗೆ ಹೋದ ತಕ್ಷಣ, ಅನಿಕೇತನನ್ನು ಅದೇ ಸ್ಕೂಲ್‌ಗೆ ಹಾಕ್ತೀನಿ. ಪ್ರಾಕ್ಟಿಕಲ್‌ ಆಗಿ ಯೋಚನೆ ಮಾಡು ಎಂದಿದ್ದಾಳೆ ಭಾರ್ಗವಿ. ಹೀಗಿರುವಾಗಲೇ, ಅಪ್ಪ ನಾನು ಬೋರ್ಡಿಂಗ್‌ ಸ್ಕೂಲ್‌ಗೆ ಹೋಗ್ತಿನಿ ಎಂದಿದ್ದಾಳೆ ಸಿಹಿ. ಸಿಹಿ ಮಾತು ಕೇಳಿ ರಾಮ ಮೌನಕ್ಕೆ ಜಾರಿದ್ದಾನೆ. ಇತ್ತ ಮನೆಯವರ ಈ ನಿರ್ಧಾರ ಸೀತಾಗೆ ಖುಷಿ ತಂದಿಲ್ಲ.

ಚಾಂದಿನಿಯಿಂದಲೂ ಬಂತು ಫೋನ್‌....

ಇತ್ತ ಮತ್ತೊಂದು ಕಡೆ, ಭಾರ್ಗವಿಗೆ ಚಾಂದಿನಿಯಿಂದ ಫೋನ್‌ ಬಂದಿದೆ. ಚಿಕ್ಕಿ, ರಾಮ್‌ ನನ್ನನ್ನು ಕೆಲಸದಿಂದ ತೆಗೆದುಹಾಕಿದ್ದಾನೆ ಎಂದಿದ್ದಾಳೆ. ಚಾಂದಿನಿ ಮಾತಿಗೆ ಸೊಪ್ಪು ಹಾಕದ ಭಾರ್ಗವಿ, ಇಲ್ಲಿ ರಾಮ್‌ ಮತ್ತು ಸೀತಾ ಮದುವೆಯಾಗಿದ್ದಾರೆ. ಅವರಿಬ್ಬರೂ ಬೇರೆ ಲೋಕದಲ್ಲಿದ್ದಾರೆ. ಈಗ ನಿನ್ನಿಂದ ಏನು ಪ್ರಯೋಜನ. ಅದಕ್ಕೆ ಕಿತ್ತು ಬಿಸಾಕಿದ್ದಾನೆ ಎಂದಿದ್ದಾಳೆ. ಭಾರ್ಗವಿ ಮಾತಿಗೆ ಗರಂ ಆದ ಚಾಂದಿನಿ, ಆ ರಾಮ್‌ ಸುಮ್ಮನಿರೋ ಹಾವನ್ನು ಕೆಣಕಿದ್ದಾನೆ. ಈ ಚಾಂದಿನಿಯನ್ನು ಕೆಣಕಿ ಉಳಿದವರಿಲ್ಲ ಎಂದು ಫೋನ್‌ ಇಟ್ಟಿದ್ದಾಳೆ.

ಅಣ್ಣಂದಿರಿಂದ ಪ್ರಾಣ ಬೆದರಿಕೆ

ಇಲ್ಲಿಯವರೆಗೂ ಕಣ್ಮರೆಯಾಗಿದ್ದ ಲಾಯರ್‌ ರುದ್ರಪ್ರತಾಪ್‌ ಇದೀಗ ಅಂಜಲಿ ಕಣ್ಣಿಗೆ ಬಿದ್ದಿದ್ದಾನೆ. ಇಬ್ಬರ ನಡುವೆ ಮಾತುಕತೆ ನಡೆದಿದೆ. ಇಲ್ಲಿಯವರೆಗೂ ಎಲ್ಲಿ ಹೋಗಿದ್ರಿ, ಏನಾಯ್ತು ನಿಮಗೆ ನನ್ನ ಬಳಿ ಹೇಳಿ ಎಂದು ರುದ್ರಪ್ರತಾಪ್‌ ಬಳಿ ಕೇಳಿದ್ದಾಳೆ. ಆಕೆಯ ಒತ್ತಾಯದ ಮಾತಿಗೆ, ನನಗೆ ನಿಮ್ಮ ಅಣ್ಣಂದಿರಿಂದ ಜೀವ ಬೆದರಿಕೆ ಇದೆ ಎಂದಿದ್ದಾನೆ. ಅಷ್ಟೇ ಅಲ್ಲ ನೀವೇ ನನ್ನ ಜೀವಕ್ಕೆ ತೊಂದರೆ ಆಗಿದ್ದೀರಲ್ಲ ಎಂದು ಅಂಜಲಿಗೆ ಹೇಳಿದ್ದಾನೆ. ಬೇಕಿದ್ದರೆ ಹೋಗಿ ಕೇಳಿ ನೋಡಿ ಎಂದಿದ್ದಾನೆ. ಇಲ್ಲ, ನನ್ನ ಅಣ್ಣಂದಿರು ಹಾಗಿಲ್ಲ ಎಂದಿದ್ದಾಳೆ.

ರುದ್ರನಿಗೆ ಹೊಸ ಕೆಲಸ ನೀಡಿದ ಭಾರ್ಗವಿ.

ಭಾರ್ಗವಿಗೆ ಫೋನ್‌ ಮಾಡಿದ ರುದ್ರಪ್ರತಾಪ್‌, ನನಗೆ ಜೀವ ಬೆದರಿಕೆ ಇದೆ. ಹಾಗಾಗಿ ನನಗೆ ರಕ್ಷಣೆ ಬೇಕು. ನನ್ನ ಪಾಡಿಗೆ ನಾನು ಹೇಗೋ ಬದುಕಿದ್ದೆ. ಆ ರಾಮ ನನ್ನ ಜೀವನ ಹಾಳು ಮಾಡಿದ್ದಾನೆ. ಇದೀಗ ನನಗೆ ಅವನಿಂದಲೇ ಜೀವ ಬೆದರಿಕೆ ಇದೆ. ಹಾಗಾಗಿ ನನಗೀಗ ರಕ್ಷಣೆ ಬೇಕು. ಒಂದು ವೇಳೆ ನೀವು ರಕ್ಷಣೆ ಕೊಡಲ್ಲ ಎಂದರೆ, ನಿಮ್ಮ ಗುಟ್ಟುಗಳೆಲ್ಲವನ್ನು ರಟ್ಟು ಮಾಡ್ತಿನಿ ಎಂದು ಭಾರ್ಗವಿಗೇ ಹೆದರಿಸಿದ್ದಾನೆ. ಆಯ್ತು ರಕ್ಷಣೆ ಕೊಡೋಣ ಎಂದಿದ್ದಾಳೆ ಭಾರ್ಗವಿ. ಆದರೆ, ನಾನು ಹೇಳುವ ಕೆಲಸ ಮಾಡಬೇಕು, ಸಿಹಿಯ ಅಪ್ಪನ ಚರಿತ್ರೆ ಗೊತ್ತಾಗಬೇಕು. ಒಂದು ಮಗು ಹುಟ್ಟಿದೆ ಎಂದ ಮೇಲೆ ಅಪ್ಪ ಇರಲೇಬೇಕಲ್ಲವೇ, ಅವನನ್ನು ಹುಡುಕಿ, ಸೀತಾ ಅವನ ಜತೆ ಸೆಟಲ್‌ ಆಗಬೇಕು ಅಷ್ಟೇ. ಅವನನ್ನು ಹುಡುಕಿ ಕೊಟ್ಟರೆ, ನೀನು ಏನೇ ಕೇಳಿದರೂ ಕೊಡ್ತೀನಿ ಎಂದಿದ್ದಾಳೆ. ಅಲ್ಲಿಗೆ ರುದ್ರಪ್ರತಾಪ್‌ ಕೂಡ, ಭಾರ್ಗವಿ ಕೊಟ್ಟ ಕೆಲಸಕ್ಕಿಳಿದಿದ್ದಾನೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)