Seetha Rama Serial: ರಾಮನ ಮನಸ್ಸಲ್ಲಿ ಪ್ರೀತಿ ಹುಟ್ಟಿದ್ರೆ, ಜೀವದ ಗೆಳೆಯ ಅಶೋಕ ಕುಣಿದಾಡ್ತಿದ್ದಾನೆ.. ಇದಪ್ಪ ಸ್ನೇಹ ಎಂದ ವೀಕ್ಷಕ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ರಾಮನ ಮನಸ್ಸಲ್ಲಿ ಪ್ರೀತಿ ಹುಟ್ಟಿದ್ರೆ, ಜೀವದ ಗೆಳೆಯ ಅಶೋಕ ಕುಣಿದಾಡ್ತಿದ್ದಾನೆ.. ಇದಪ್ಪ ಸ್ನೇಹ ಎಂದ ವೀಕ್ಷಕ

Seetha Rama Serial: ರಾಮನ ಮನಸ್ಸಲ್ಲಿ ಪ್ರೀತಿ ಹುಟ್ಟಿದ್ರೆ, ಜೀವದ ಗೆಳೆಯ ಅಶೋಕ ಕುಣಿದಾಡ್ತಿದ್ದಾನೆ.. ಇದಪ್ಪ ಸ್ನೇಹ ಎಂದ ವೀಕ್ಷಕ

Seetha Rama Serial October 31 Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ಅಕ್ಟೋಬರ್ 31ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ರಾಮನ ಎದೆಯಲ್ಲಿ ಪ್ರೀತಿ ಚಿಗುರಿಸುವ ಕಸರತ್ತು ಮುಂದುವರಿಸಿದ್ದಾನೆ ಅಶೋಕ. ಆದರೆ, ಸೀತಾಳ ಗಮನವೇ ಬೇರೆಡೆ ಇದೆ.

Seetha Rama Kannada Serial October 31h Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಸೀತಾ ರಾಮ ಧಾರಾವಾಹಿಯ ದೃಶ್ಯ
Seetha Rama Kannada Serial October 31h Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಸೀತಾ ರಾಮ ಧಾರಾವಾಹಿಯ ದೃಶ್ಯ

ಸೀತಾ ರಾಮ ಧಾರಾವಾಹಿ ಅಕ್ಟೋಬರ್ 31ರ ಸಂಚಿಕೆ: ಆಫೀಸ್‌ನಲ್ಲಿ ಸೀತಾಳಿಗೆ ಕೊನೆಗೂ ನೀವು ತುಂಬ ಚೆನ್ನಾಗಿ ಕಾಣ್ತಿದ್ದೀರಿ ಎಂದು ಹೇಳಿದ್ದಾನೆ ರಾಮ. ಸಡಗರ ಸಂಭ್ರಮದಿಂದ ಆಫೀಸ್‌ ಮಂದಿಯೆಲ್ಲ ಸೇರಿ ಹಬ್ಬದಾಚರಣೆ ಮಾಡಿದ್ದಾರೆ. ಹಬ್ಬ ಮುಗಿಸಿ ಎಲ್ಲರೂ ಮನೆಯತ್ತ ನಡೆದಿದ್ದಾರೆ. ಈ ನಡುವೆ ಅಲ್ಲೇ ಇದ್ದ ಸೀತಾಳಿಗೆ, ಮನೆಗೆ ಬಂದು ಏನೂ ಹೇಳದೇ ಹೋದ ವಿಚಾರದ ಬಗ್ಗೆ ರಾಮ್‌ ಕೇಳಿದ್ದಾನೆ. ಆವತ್ತು ಭಾರ್ಗವಿ ಆಡಿದ ಮಾತಿಂದ ಬೇಸರದಲ್ಲಿಯೇ ಹೋದೆ ಎಂಬ ವಿಚಾರವನ್ನು ಹೇಳದೇ, ಸಿಹಿ ಕಾಯುತ್ತಿದ್ದಾಳೆ ಎಂಬ ನೆಪ ನೀಡಿದ್ದಾಳೆ.

ಅಣ್ಣಂಗೆ ಲವ್ವಾಗಿದೆ ಎಂದು ಕಾಲೆಳೆದ ಅಶೋಕ

ಬಾಸ್‌ ಮನೆ ಅನ್ನೋ ಕಾರಣಕ್ಕೆ ತನಗಲ್ಲಿ ಸರಿ ಅನಿಸಲಿಲ್ಲ ಎಂದಿದ್ದಾಳೆ ಸೀತಾ. ಒಂಥರಾ ಕಷ್ಟವಾಯ್ತೂ ಎಂದೂ ಹೇಳಿದ್ದಾಳೆ. ಅದೆಲ್ಲ ಈಗ್ಯಾಕೆ ಬಿಡಿ ಎಂದು ನಾಣಿನ್ನು ಹೊರಡುತ್ತೇನೆ. ಮನೆಯಲ್ಲಿ ಸಿಹಿ ಕಾಯ್ತಿರ್ತಾಳೆ ಎಂದಿದ್ದಾಳೆ. ಸೀತಾ ಆಫೀಸ್‌ನಿಂದ ತೆರಳುತ್ತಿದ್ದಂತೆ, ರಾಮನ ಬಳಿಕ ಆಗಮಿಸಿದ ಅಶೋಕ, ಅಣ್ಣಂಗೆ ಲವ್ವಾಗಿದೆ ಎಂಬ ಹಾಡನ್ನು ಗುನುಗಿದ್ದಾನೆ. ನೀನು ಹೇಳಿದಂತೆ ಏನೂ ನಡೆದಿಲ್ಲ, ಸೀರೆಯಲ್ಲಿ ಚೆನ್ನಾಗಿ ಕಾಣಿಸ್ತಿದ್ದಾರೆ ಅಂತ ಹೇಳು ಅಂದೆ ಹೇಳಿದೀನಿ ಎಂದಿದ್ದಾನೆ ರಾಮ.

ಹೊಸ ಮನೆಗೆ ರಾಮನ ಕುಟುಂಬ ಶಿಫ್ಟ್

ರಾಮ ಪ್ರೀತಿಯಲ್ಲಿ ಬಿದ್ದಿದ್ದಾನೆ. ಅದನ್ನು ನಿನ್ನ ನೋಡಿದರೆ ಗೊತ್ತಾಗುತ್ತಿದೆ ಎಂದು ಅಶೋಕ ಹೇಳುತ್ತಿದ್ದಾನೆ. ಅಂಥದ್ದೇನೂ ಇಲ್ಲ ಮಾರಾಯ ಎಂದರೆ, ಪ್ರೀತಿಯಲ್ಲಿ ಇರುವವರ ಲಕ್ಷಣಗಳೇನು ಎಂಬುದನ್ನು ವಿವರಿಸುತ್ತಿದ್ದಾನೆ. ಇದೇ ವೇಳೆ ಹೊಸ ಮನೆಗೆ ಹೋಗುವ ವಿಚಾರವೂ ಬಂದಿದೆ. ಕಾರ್‌ನಲ್ಲಿ ಹೋಗುವಾಗಲೂ ಪ್ರೀತಿ ವಿಚಾರದಲ್ಲಿ ರಾಮನ ತಲೆತಿಂದಿದ್ದಾನೆ ಅಶೋಕ.

ಸುಲೋಚನಾಗೆ ಅಜ್ಜಿಯಿಂದ ಪರೋಕ್ಷ ಟಾಂಗ್‌

ಮುಂದುವರಿದು ಇತ್ತ ಸೀತಾಳ ಮನೆಗೆ ಅತ್ತಿಗೆ ಸುಲೋಚನಾ ಆಗಮಿಸಿದ್ದಾಳೆ. ಸೀತಾಳ ಹೊಸ ಸೀರೆ, ಕೊರಳಲ್ಲಿ ಕಾಸಿನ ಸರ ನೋಡಿ, ಏನೇ ಮದುಮಗಳ ರೀತಿ ತಯಾರಾಗಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದಾಳೆ. ಅಷ್ಟೊತ್ತಿಗೆ ಅಜ್ಜಿ ಆಗಮಿಸಿ, ಸುಲೋಚನಾಗೆ ಪರೋಕ್ಷವಾಗಿಯೇ ಕ್ಲಾಸ್‌ ತೆಗೆದುಕೊಂಡಿದ್ದಾಳೆ. ಹೆಣ್ಣಿಗೆ ಅಲಂಕಾರ ಚೆಂದ ಎಂದು ಪಾಠ ಮಾಡಿದ್ದಾಳೆ. ‌

ಲಾಯರ್-‌ ಸೀತಾ ಮದುವೆ ಬಗ್ಗೆ ಬಂತು ಮಾತು

ಇಷ್ಟಕ್ಕೆ ಮುಗಿದಿಲ್ಲ, ಸಿಹಿ ಎದುರಿಗೆ ಸೀತಾಳ ಮದುವೆ ವಿಚಾರ ಮಾತನಾಡಬಾರದು ಎಂಬ ಕಾರಣಕ್ಕೆ, ಮನೆಗೆ ಬಂದಿ ಅರಿಶಿಣ ಕುಂಕುಮ ತೆಗೆದುಕೊಂಡು ಹೋಗು ಎಂದಿದ್ದಾಳೆ. ಲಾಯರ್‌ ಹೇಗೆ, ಮನುಷ್ಯ ಒಳ್ಳೆಯವನಾ ಎಂದೆಲ್ಲ ಸುಲೋಚನಾ ಬಳಿ ವಿಚಾರಿಸಿದ್ದಾಳೆ ಶಾಂತಮ್ಮಜ್ಜಿ. ಸಿಕ್ಕಿದ್ದೆ ಚಾನ್ಸ್‌ ಅಂತ ಲಾಯರ್‌ ಬಗ್ಗೆ ಪುಂಕಾನುಪುಂಕವಾಗಿ ಒಳ್ಳೆಯ ಮಾತುಗಳನ್ನಾಡಿದ್ದಾಳೆ ಸುಲೋಚನಾ. ಅಜ್ಜಿ ಮಾಡಿದ್ದ ಚಿತ್ರಾನ್ನ ತಿಂದು, ತನ್ನ ಗಂಡನಿಗೂ ಪಾರ್ಸೆಲ್‌ ಸಹ ಕೊಂಡೊಯ್ದಿದ್ದಾಳೆ.

ಒಳಿತು ಬಯಸುವ ಜೀವಗಳು

ಇತ್ತ ಏನಾದ್ರೂ ಆಗಲಿ, ಸೀತಾಳಿಗೆ ಒಳ್ಳೆಯದಾಗಲಿ ಎಂದು ಹಿರಿ ಜೀವಗಳು ಬಯಸುತ್ತಿದ್ದರೆ, ಸೀತಾಳ ಮನದಲ್ಲಿ ಮದುವೆ ಅಸಾಧ್ಯ ಎಂಬ ನಿಲುವಿದೆ. ಮತ್ತೊಂದು ಕಡೆ ಅಶೋಕ, ತನ್ನ ಸ್ನೇಹಿತ ರಾಮನ ಎದೆಯಲ್ಲಿ ಪ್ರೀತಿ ಚಿಗುರಿಸುತ್ತಿದ್ದಾನೆ. ಯಾವ ಪ್ರೀತಿನೂ ಇಲ್ಲ ಎಂದು ಅಶೋಕನಿಗೆ ಹೇಳುತ್ತಿದ್ದಾನೆ ರಾಮ. ಈ ನಡುವೆ ಹೊಸ ಮನೆಗೂ ರಾಮ್‌ ಕುಟುಂಬ ಬಲಗಾಲಿಡುವುದಕ್ಕೂ ಸಜ್ಜಾಗಿದೆ.

ಈ ಸಂಚಿಕೆಯಲ್ಲಿ ರಾಮ ಮತ್ತು ಅಶೋಕನ ಸ್ನೇಹ ಹೇಗಿದೆ ಎಂಬುದು ಮತ್ತೆ ಸಾಬೀತಾಗಿದೆ. ತನ್ನ ಪ್ರಾಣ ಸ್ನೇಹಿತ ಮೊದಲಿನಂತಾಗಬೇಕೆಂದು ಅಶೋಕ ಕ್ಷಣ ಕ್ಷಣಕ್ಕೂ ಅವನ ಜತೆ ನಿಂತಿದ್ದಾನೆ. ಸ್ನೇಹ ಅಂದ್ರೆ ಹೀಗಿರಬೇಕು, ಸ್ನೇಹಿತ ಅಂದ್ರೆ ಹೀಗಿರಬೇಕು ಎಂಬುದು ವೀಕ್ಷಕರ ಅಭಿಪ್ರಾಯ.

Whats_app_banner