ಕನ್ನಡ ಸುದ್ದಿ  /  Entertainment  /  Hollywood News Actor Dev Patel Cries After Receiving Standing Ovation At Monkey Man's World Premiere At Sxsw 2024

Monkey Man: ರಣ ರೋಚಕ ‘ಮಂಕಿ ಮ್ಯಾನ್‌’ ಚಿತ್ರಕ್ಕೆ ಸಿಕ್ತು ಬಹುದೊಡ್ಡ ಗೌರವ, ವೇದಿಕೆ ಮೇಲೆಯೇ ಕಣ್ಣೀರಿಟ್ಟ ನಟ ದೇವ್‌ ಪಟೇಲ್‌

ಸ್ಲಮ್‌ಡಾಗ್ ಮಿಲಿಯನೇರ್, ಲಯನ್ ಮತ್ತು ಹೋಟೆಲ್ ಮುಂಬೈ ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ ನಟ ದೇವ್ ಪಟೇಲ್‌. ಈಗ ಇದೇ ನಟ ಮಂಕಿ ಮ್ಯಾನ್‌ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರ ಅಮೆರಿಕಾದ ಸಿನಿಮೋತ್ಸವದಲ್ಲಿ ಪ್ರೀಮಿಯರ್‌ ಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕ ನಿಬ್ಬೆರಗಾಗಿದ್ದಾನೆ.

Monkey Man: ರಣ ರೋಚಕ ‘ಮಂಕಿ ಮ್ಯಾನ್‌’ ಚಿತ್ರಕ್ಕೆ ಸಿಕ್ತು ಬಹುದೊಡ್ಡ ಗೌರವ, ವೇದಿಕೆ ಮೇಲೆಯೇ ಕಣ್ಣೀರಿಟ್ಟ ನಟ ದೇವ್‌ ಪಟೇಲ್‌
Monkey Man: ರಣ ರೋಚಕ ‘ಮಂಕಿ ಮ್ಯಾನ್‌’ ಚಿತ್ರಕ್ಕೆ ಸಿಕ್ತು ಬಹುದೊಡ್ಡ ಗೌರವ, ವೇದಿಕೆ ಮೇಲೆಯೇ ಕಣ್ಣೀರಿಟ್ಟ ನಟ ದೇವ್‌ ಪಟೇಲ್‌

Dev Patel on Monkey Man: ಹಾಲಿವುಡ್‌ನಲ್ಲಿ ಸ್ಲಮ್‌ಡಾಗ್ ಮಿಲಿಯನೇರ್, ಲಯನ್ ಮತ್ತು ಹೋಟೆಲ್ ಮುಂಬೈ ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ ನಟ ದೇವ್ ಪಟೇಲ್‌. ಈಗ ಇದೇ ನಟ ಹೊಸ ಕಥೆಯ ಜತೆಗೆ ವಿಭಿನ್ನ ಸಿನಿಮಾವೊಂದು ಹಿಡಿದು ಬಂದಿದ್ದಾರೆ. ಇನ್ನೇನು ಶೀಘ್ರದಲ್ಲಿ ಮಂಕಿ ಮ್ಯಾನ್‌ ಹೆಸರಿನ ಸಿನಿಮಾ ತೆರೆಗೆ ಬರಲಿದೆ. ಈಗ ಬಿಡುಗಡೆಗೂ ಮುನ್ನವೇ ಈ ಸಿನಿಮಾಕ್ಕೆ ಆರಂಭಿಕ ಗೆಲುವು ಸಿಕ್ಕಿದೆ.

ದೇವ್‌ ಪಟೇಲ್‌ ನಾಯಕನಾಗಿ ನಟಿಸುವುದರ ಜತೆಗೆ ಮಂಕಿ ಮ್ಯಾನ್‌ ಸಿನಿಮಾ ಮೂಲಕ ಮೊದಲ ಬಾರಿ ನಿರ್ದೇಶಕನಾಗಿಯೂ ಬಡ್ತಿ ಪಡೆದಿದ್ದಾರೆ. ಈ ಸಿನಿಮಾಕ್ಕೆ ಸ್ಕ್ರಿಪ್ಟ್‌ ಕೆಲಸದಲ್ಲೂ ದೇವ್‌ ತೊಡಗಿಸಿಕೊಂಡಿದ್ದಾರೆ. ಹೀಗೆ ಒಂದಷ್ಟು ವಿಭಾಗಗಳಲ್ಲಿ ಕೆಲಸ ಮಾಡಿದ ದೇವ್‌ ಕಣ್ಣಲ್ಲೀಗ ನೀರಾಡಿದೆ. ಅಂದರೆ, ಶ್ರಮಕ್ಕೆ ತಕ್ಕ ಗೌರವ ಸಿಕ್ಕಿದೆ. ಅಮೆರಿಕಾದ ಆಸ್ಟಿನ್‌ನಲ್ಲಿ ನಡೆಯುತ್ತಿರುವ SXSW ಸಿನಿಮೋತ್ಸವದಲ್ಲಿ ಮಂಕಿ ಮ್ಯಾನ್‌ ಸಿನಿಮಾ ನೋಡಿದ ಪ್ರೇಕ್ಷಕ, ಎದ್ದು ನಿಂತು ಚಪ್ಪಾಳೆ ತಟ್ಟಿ ಭೇಷ್‌ ಎಂದಿದ್ದಾನೆ.

ದೇವ್ ಪಟೇಲ್ ಭಾವುಕ

ಸಿನಿಮೋತ್ಸವದಲ್ಲಿ ಮಂಕಿ ಮ್ಯಾನ್‌ ಸಿನಿಮಾ ನೋಡಿದ ಅಮೆರಿಕಾದ ಪ್ರೇಕ್ಷಕ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಇಡೀ ಥಿಯೇಟರ್‌ಗೆ ಥಿಯೇಟರ್‌ ಚಪ್ಪಾಳೆ ತಟ್ಟಿದೆ. ದೇವ್‌ ಪಟೇಲ್‌ ಸ್ಕ್ರೀನ್‌ ಮುಂಭಾಗದಲ್ಲಿ ಬರುತ್ತಿದ್ದಂತೆ, ಶಹಬ್ಬಾಶ್‌ಗಿರಿ ನೀಡಿದ್ದಾರೆ. ಜನರ ಪ್ರತಿಕ್ರಿಯೆ ಕಂಡು ವೇದಿಕೆ ಮೇಲೆಯೇ ದೇವ್‌ ಪಟೇಲ್‌ ಭಾವುಕರಾಗಿದ್ದಾರೆ. ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಟ್ರೇಲರ್‌ ನೋಡಿಯೇ ಹೆಚ್ಚಾಗಿತ್ತು ಎದೆಬಡಿತ..

ಮಂಕಿ ಮ್ಯಾನ್‌ ಸಿನಿಮಾದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಟ್ರೇಲರ್‌ನಿಂದಲೇ ನಿರೀಕ್ಷೆಗೆ ಕಿಚ್ಚು ಹಚ್ಚಿದ್ದ ಈ ಸಿನಿಮಾ, ಇದೀಗ SXSW ಸಿನಿಮೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡಿದೆ. ಇನ್ನೇನು ಇದೇ ಏಪ್ರಿಲ್‌ನಲ್ಲಿ ಈ ಆಕ್ಷನ್‌ ಪ್ಯಾಕ್ಡ್‌ ಸಿನಿಮಾ ವಿಶ್ವದಾದ್ಯಂತ ತೆರೆಕಾಣಲಿದೆ. ಬಹುತೇಕ ಭಾರತೀಯ ಕಲಾವಿದರೇ ನಟಿಸಿರುವ ಈ ಚಿತ್ರದಲ್ಲಿ ರಿವೇಂಜ್‌ ಸ್ಟೋರಿಯ ಮೊರೆ ಹೋಗಿದ್ದಾರೆ ದೇವ್‌ ಪಟೇಲ್. ‌ತೆರೆಮೇಲೆ ಅಲ್ಲಲ್ಲಿ ಆಂಜನೇಯನೂ ಕಾಣಿಸುತ್ತಾನೆ. ತಾಯಿಯನ್ನು ಕೊಂದವರನ್ನು ಹುಡುಕಿ ಕೊಲ್ಲುವವನಾಗಿ ಮಂಕಿ ಮ್ಯಾನ್‌ ಕಾಣಿಸಿಕೊಂಡಿದ್ದಾನೆ.

ಫೈಟ್ ಕ್ಲಬ್‌ನಲ್ಲಿ ಕೆಲಸ ಮಾಡುವ ಅನಾಮಧೇಯ ಯುವಕನಾಗಿ ಕಥಾನಾಯಕ ದೇವ್‌ ಕಾಣಿಸಿಕೊಂಡಿದ್ದಾರೆ. ತನ್ನ ತಾಯಿಯ ಸಾವಿಗೆ ಕಾರಣವಾದ ದುಷ್ಟರ ಗುಂಪಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಆತ ಏನೆಲ್ಲ ಮಾಡುತ್ತಾನೆ? ಎಂಬುದೇ ಈ ಸಿನಿಮಾದ ಕಥೆ. ಅಂದಹಾಗೆ ಈ ಸಿನಿಮಾ ಭಾರತದಲ್ಲಿ ಏಪ್ರಿಲ್‌ 19ರಂದು ಇಂಗ್ಲೀಷ್‌ ಜತೆಗೆ ಭಾರತೀಯ ಭಾಷೆಗಳಿಗೂ ಡಬ್‌ ಆಗಿ ತೆರೆಗೆ ಬರಲಿದೆ.

ಸಿನಿಮಾದಲ್ಲಿ ಯಾರೆಲ್ಲ ನಟಿಸಿದ್ದಾರೆ?

ಈ ಸಿನಿಮಾದಲ್ಲಿ ಡಿಸ್ಟ್ರಿಕ್ಟ್‌ 9 ಸಿನಿಮಾ ಖ್ಯಾತಿಯ ಶಾರ್ಲ್ಟೋ ಕಾಪ್ಲಿ, ಮೇಡ್ ಇನ್ ಹೆವನ್ ಖ್ಯಾತಿಯ ಶೋಭಿತಾ ಧೂಲಿಪಾಲ, ಮಿಲಿಯನ್ ಡಾಲರ್ ಆರ್ಮ್ ಸಿನಿಮಾದಲ್ಲಿ ನಟಿಸಿದ್ದ ಪಿಟೋಬಾಶ್, ಹೋಟೆಲ್ ಮುಂಬೈ ಸಿನಿಮಾದಲ್ಲಿ ನಟಿಸಿದ್ದ ವಿಪಿನ್ ಶರ್ಮಾ, ಏಕ್ ಥಾ ಹೀರೋ ಖ್ಯಾತಿಯ ಅಶ್ವಿನಿ ಕಲ್ಸೇಕರ್, ಅದಿತಿ ಕಲ್ಕುಂಟೆ, ಸಿಕಂದರ್ ಇದ್ದಾರೆ. ಖೇರ್ ಮತ್ತು ಮಕರಂದ್ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

IPL_Entry_Point