Darshan: ಕೈಮೇಲೆ ‘777’ ಟ್ಯಾಟೂ ಹಾಕಿಸಿದ ಪವಿತ್ರಾ ಗೌಡ; ಹಚ್ಚೆಯ ಒಳಾರ್ಥಕ್ಕೂ, ದರ್ಶನ್‌ಗೂ ಇದೆ ಈ ಗಾಢ ನಂಟು! VIDEO-sandalwood news pavitra gowda got challenging star darshans year of birth tattooed on her hand fans react mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Darshan: ಕೈಮೇಲೆ ‘777’ ಟ್ಯಾಟೂ ಹಾಕಿಸಿದ ಪವಿತ್ರಾ ಗೌಡ; ಹಚ್ಚೆಯ ಒಳಾರ್ಥಕ್ಕೂ, ದರ್ಶನ್‌ಗೂ ಇದೆ ಈ ಗಾಢ ನಂಟು! Video

Darshan: ಕೈಮೇಲೆ ‘777’ ಟ್ಯಾಟೂ ಹಾಕಿಸಿದ ಪವಿತ್ರಾ ಗೌಡ; ಹಚ್ಚೆಯ ಒಳಾರ್ಥಕ್ಕೂ, ದರ್ಶನ್‌ಗೂ ಇದೆ ಈ ಗಾಢ ನಂಟು! VIDEO

ನಟ ದರ್ಶನ್‌ ವಿಚಾರವಾಗಿ ನಟಿ ಪವಿತ್ರಾ ಗೌಡ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಇದೇ ಪವಿತ್ರಾ ಕೈಮೇಲೆ 777 ಎಂಬ ಸಂಖ್ಯೆಯನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಹೀಗೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಂತೆ, ಇದರ ಹಿಂದಿನ ಅಸಲಿಯತ್ತೂ ಸಹ ಬಹಿರಂಗವಾಗಿದೆ.

Darshan: ಕೈಮೇಲೆ ‘777’ ಟ್ಯಾಟೂ ಹಾಕಿಸಿದ ಪವಿತ್ರಾ ಗೌಡ; ಹಚ್ಚೆಯ ಒಳಾರ್ಥಕ್ಕೂ, ದರ್ಶನ್‌ಗೂ ಇದೆ ಈ ಗಾಢ ನಂಟು! VIDEO
Darshan: ಕೈಮೇಲೆ ‘777’ ಟ್ಯಾಟೂ ಹಾಕಿಸಿದ ಪವಿತ್ರಾ ಗೌಡ; ಹಚ್ಚೆಯ ಒಳಾರ್ಥಕ್ಕೂ, ದರ್ಶನ್‌ಗೂ ಇದೆ ಈ ಗಾಢ ನಂಟು! VIDEO

Darshan: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸದ್ಯ ಕಾಟೇರ ಸಿನಿಮಾ ಯಶಸ್ಸಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಅದೇ ಖುಷಿಯಲ್ಲಿ ಭರ್ಜರಿಯಾಗಿ ಬರ್ತ್‌ಡೇ ಸಹ ಆಚರಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಬೆಳ್ಳಿ ಪರ್ವವನ್ನೂ ಆಚರಿಸಿಕೊಂಡಿದ್ದಾರೆ. ಜತೆಗೆ ಗ್ಯಾಪ್‌ನಲ್ಲಿಯೇ ಡೆವಿಲ್‌ ಸಿನಿಮಾದಲ್ಲಿ ತಮ್ಮ ಖದರ್‌ ಹೇಗಿರಲಿದೆ ಎಂಬ ಸುಳಿವನ್ನೂ ಶೀರ್ಷಿಕೆ ಟೀಸರ್‌ ಮೂಲಕ ಹೊರಗೆಡವಿದ್ದಾರೆ. ಇದೆಲ್ಲದರ ನಡುವೆ ಪವಿತ್ರಾ ಗೌಡ ವಿಚಾರವಾಗಿಯೂ ನಟ ದರ್ಶನ್‌ ಸಾಕಷ್ಟು ಸುದ್ದಿಯಲ್ಲಿದ್ದರು. ಈಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ ಪವಿತ್ರಾ ಗೌಡ, ಅದೂ ಟ್ಯಾಟೂ ವಿಚಾರವಾಗಿ.

ಇತ್ತೀಚೆಗಷ್ಟೇ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಮತ್ತು ದರ್ಶನ್‌ ನಡುವಿನ ಸಂಬಂಧಕ್ಕೆ ದಶಕ ತುಂಬಿತ್ತು. ಈ ಕ್ಷಣವನ್ನೇ ದರ್ಶನ್‌ ಜತೆಗಿನ ಹತ್ತಾರು ಫೋಟೋಗಳನ್ನು ವಿಶೇಷ ಪೋಸ್ಟ್‌ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಹೀಗೆ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಂತೆ, ಅದು ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಗಮನಕ್ಕೂ ಬಂದಿತ್ತು. ವಿಜಯಲಕ್ಷ್ಮೀ ಸಹ ನೇರವಾಗಿಯೇ ಪವಿತ್ರಾ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡು, ಕಾನೂನಿನ ಮೊರೆ ಹೋಗುವ ಎಚ್ಚರಿಕೆ ನೀಡಿದ್ದರು. ನನಗೂ ಕಾನೂನು ಗೊತ್ತು ಎಂದು ಪವಿತ್ರಾ, ವಿಜಯಲಕ್ಷ್ಮೀಗೆ ಟಾಂಗ್‌ ಕೊಟ್ಟಿದ್ದರು. ಈ ಇಬ್ಬರ ಜಗಳ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು.

ಇವತ್ತು ಇವಳು, ನಾಳೆ ಅವಳು..

ಹೀಗೆ ಈ ಇಬ್ಬರ ಜಗಳದ ಬಗ್ಗೆ ನಟ ದರ್ಶನ್‌ ಸಹ ನೇರವಾಗಿಯೇ ತಮ್ಮ ಬೆಳ್ಳಿ ಪರ್ವ ಕಾರ್ಯಕ್ರಮದ ವೇದಿಕೆ ಮೇಲೆ ಮಾತನಾಡಿದ್ದರು. ‘ಚಿತ್ರರಂಗ, ರಾಜಕೀಯ, ಬಿಜಿನೆಸ್‌ ಯಾವುದೇ ಆಗಿರಲಿ ಶ್ರಮ ಹಾಕಲೇಬೇಕು. ನನಗೆ ನನ್ನ ಕೆಲಸ, ನನ್ನ ನಿರ್ಮಾಪಕರಷ್ಟೇ ಇಂಪಾರ್ಟೆಂಟ್‌. ಕೆಲಸದ ವಿಚಾರದಲ್ಲಿ ಫ್ಯಾಮಿಲಿ, ಎಲ್ಲವನ್ನೂ ಬದಿಗಿಟ್ಟು ಇದಕ್ಕೆ ನಿಲ್ತಿನಿ. ನನಗೆ ಸಿನಿಮಾ, ಆ ಸಿನಿಮಾನ ಪ್ರೀತಿಸುವ ನನ್ನ ಸೆಲೆಬ್ರಿಟಿಗಳಷ್ಟೇ ನನಗೆ ಮುಖ್ಯ. ಬೇರೆ ಯಾವುದರ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ತಾಳೆ ನಾಳೆ ಅವಳಿರ್ತಾಳೆ. ನಾನ್ಯಾಕೆ ತಲೆ ಕೆಡಿಸಿಕೊಂಡು, ಕೂತ್ಕೊಳ್ಳಲಿ ಹೋಗ್ರಯ್ಯ. ನನಗೆ ನನ್ನ ಸಿನಿಮಾ. ನನ್ನ ಮೇಲೆ ದುಡ್ಡು ಹಾಕಿದ ನಿರ್ಮಾಪಕರು, ನಿರ್ದೇಶಕರು ಅವರಿಗಷ್ಟೇ ನಾನು ಸೀಮಿತ" ಎಂದಿದ್ದರು ದರ್ಶನ್.‌

ಮತ್ತೆ ಮುನ್ನೆಲೆಗೆ ಬಂದ ಪವಿತ್ರಾ ಗೌಡ..

ಸೋಷಿಯಲ್‌ ಮೀಡಿಯಾದಲ್ಲಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ಅವರ ಪ್ರಹಸನ ಮುಗಿದು ತುಂಬ ದಿನಗಳಾದವು. ಈಗ ಮತ್ತೆ ಇದೇ ಪವಿತ್ರಾ ಗೌಡ ಪರೋಕ್ಷವಾಗಿ ದರ್ಶನ್‌ ಅವರನ್ನು ನೆನಪಿಸಿಕೊಂಡಿದ್ದಾರೆ. ಅದೂ ಶಾಶ್ವತವಾಗಿ! ಅಂದರೆ, ಕೈ ಮೇಲೆ 777 ಎಂಬ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ದರ್ಶನ್‌ ಅವರನ್ನು ಕೈ ಮೇಲೆ ಮೂಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ 777 ಸಂಖ್ಯೆಗೂ ದರ್ಶನ್‌ಗೂ ಎಲ್ಲಿಂದ ಎಲ್ಲಿಯ ಸಂಬಂಧ? ಹೀಗೆ ಪ್ರಶ್ನೆ ಮೂಡಿದರೆ, ಇದಕ್ಕೆ ಉತ್ತರವೂ ಸಿಕ್ಕಿದೆ.

ಏನಿದು 777 ಒಳಮರ್ಮ?

ನಟ ದರ್ಶನ್‌ ಅವರ ಜನ್ಮ ಇಸವಿ 1977. ಇತ್ತ ಪವಿತ್ರಾ ಗೌಡ ಅವರ ಮಗಳ ಬರ್ತ್‌ಡೇ ದಿನ 7. ಈ ಎರಡನ್ನೂ ಸೇರಿಸಿಕೊಂಡು, ತಮ್ಮ ಬಲಗೈ ಮುಂಭಾಗದ ಮಣಿಕಟ್ಟಿನಲ್ಲಿ 777 ಎಂದು ಬರೆದುಕೊಂಡಿದ್ದಾರೆ. ವಿಶೇಷ ಏನೆಂದರೆ, ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ನೀತು ವನಜಾಕ್ಷಿ ಪವಿತ್ರಾ ಗೌಡ ಅವರಿಗೆ ಟ್ಯಾಟೂ ಡಿಸೈನ್‌ ಮಾಡಿದ್ದಾರೆ. ಅವರ ಸ್ಟುಡಿಯೋಕ್ಕೆ ತೆರಳಿದ ಪವಿತ್ರಾ, ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದ್ದಂತೆ, ಅಭಿಮಾನಿಗಳು ಬಗೆಬಗೆ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

mysore-dasara_Entry_Point