ಕನ್ನಡ ಸುದ್ದಿ  /  Entertainment  /  Sandalwood News Tamil Actor Mohan Sharma Gave A Shocking Statement About Ex Wife And Veteran Actress Lakshmi Mnk

‘ನಿನ್ನ ಜತೆ ನಾಯಿಯಂತೆ ಇರುತ್ತೇನೆ ಎಂದಳು, ಆ ರಾತ್ರಿಯೇ ನಾವಿಬ್ಬರೂ ಸತಿಪತಿಗಳಾದೆವು’; ನಟಿ ಲಕ್ಷ್ಮೀ ಬಗ್ಗೆ ಮಾಜಿ ಪತಿಯ ಅಚ್ಚರಿಯ ಹೇಳಿಕೆ

ಹಿರಿಯ ನಟಿ ಲಕ್ಷ್ಮೀ ಬಗ್ಗೆ ಮಾಜಿ ಪತಿ ಮೋಹನ್‌ ಶರ್ಮಾ ಅಚ್ಚರಿಯ ಹೇಳಿಕೆ ವೈರಲ್‌ ಆಗಿದೆ. ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಪ್ರೀತಿ, ಮದುವೆ ಮತ್ತು ವಿಚ್ಛೇದನದ ಬಗ್ಗೆ ಮೋಹನ್‌ ಶರ್ಮಾ ಮಾತನಾಡಿದ್ದಾರೆ.

actor Mohan Sharma gave a shocking statement about ex wife Lakshmi: ‘ನಿನ್ನ ಜತೆ ನಾಯಿಯಂತೆ ಇರುತ್ತೇನೆ ಎಂದಳು, ಆ ರಾತ್ರಿಯೇ ನಾವಿಬ್ಬರೂ ಸತಿಪತಿಗಳಾದೆವು’; ನಟಿ ಲಕ್ಷ್ಮೀ ಬಗ್ಗೆ ಮಾಜಿ ಪತಿಯ ಅಚ್ಚರಿಯ ಹೇಳಿಕೆ
actor Mohan Sharma gave a shocking statement about ex wife Lakshmi: ‘ನಿನ್ನ ಜತೆ ನಾಯಿಯಂತೆ ಇರುತ್ತೇನೆ ಎಂದಳು, ಆ ರಾತ್ರಿಯೇ ನಾವಿಬ್ಬರೂ ಸತಿಪತಿಗಳಾದೆವು’; ನಟಿ ಲಕ್ಷ್ಮೀ ಬಗ್ಗೆ ಮಾಜಿ ಪತಿಯ ಅಚ್ಚರಿಯ ಹೇಳಿಕೆ

Lakshmi: ಭಾರತೀಯ ಸಿನಿಮಾರಂಗದಲ್ಲಿ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡವರು ನಟಿ ಲಕ್ಷ್ಮೀ. ಸೌತ್‌ ಸಿನಿಮಾಗಳ ಜತಗೆ ಬಾಲಿವುಡ್‌ನಲ್ಲೂ ಲಕ್ಷ್ಮೀ ಮಿಂಚಿದ್ದಾರೆ. ಸ್ಟಾರ್‌ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಸ್ಟಾರ್‌ ಹೀರೋಯಿನ್‌ ಪಟ್ಟವನ್ನೂ ಪಡೆದಿದ್ದರು ಈ ನಟಿ. ಸಿನಿಮಾಗಳ ಜತೆಗೆ ಆಗಾಗ ತಮ್ಮ ವೈಯಕ್ತಿಕ ಬದುಕಿನ ವಿಚಾರದಲ್ಲೂ ಲಕ್ಷ್ಮೀ ಸುದ್ದಿಯಲ್ಲಿರುತ್ತಾರೆ. ಈಗ ಇದೇ ಹಿರಿಯ ನಟಿ ಲಕ್ಷ್ಮೀ ಅವರ ಮಾಜಿ ಪತಿ ಮೋಹನ್‌ ಶರ್ಮಾ, ಮಾಜಿ ಪತ್ನಿಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮದುವೆಯಿಂದ ವಿಚ್ಛೇದನದ ವರೆಗಿನ ಒಂದಷ್ಟು ವಿಚಾರಗಳನ್ನು, ಲಕ್ಷ್ಮೀ ಅವರ ಜತೆಗಿನ ಪ್ರೇಮ ಸಂಬಂಧವನ್ನು ನಟ ಹಾಗೂ ಮಾಜಿ ಪತಿ ಮೋಹನ್‌ ಶರ್ಮಾ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ ಲಕ್ಷ್ಮೀ, ಮೋಹನ್‌ ಶರ್ಮಾ ಜತೆಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 1975ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಯ್ತು. ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಎದುರಾಗಿ 1980ರಲ್ಲಿ ಡಿವೋರ್ಸ್‌ ಪಡೆದು ದೂರವಾದರು. ಈ ಜೋಡಿಗೆ ಓರ್ವ ಮಗಳೂ ಇದ್ದಾಳೆ.

ಡಿವೋರ್ಸ್‌ ಬಳಿಕ ನಟ ಹಾಗೂ ನಿರ್ದೇಶಕ ಶಿವಚಂದ್ರನ್ ಅವರನ್ನು ಪ್ರೀತಿಸಿ ಎರಡನೇ ಮದುವೆಯಾದರು ಲಕ್ಷ್ಮೀ. ಈಗ ಲಕ್ಷ್ಮೀ ಬಗ್ಗೆ ಮೊದಲ ಪತಿ ಮೋಹನ್‌ ಶರ್ಮಾ ಒಂದಷ್ಟು ಅಚ್ಚರಿಯ ವಿಚಾರಗಳನ್ನು ಹೇಳಿಕೊಂಡು, ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. 70ರ ದಶಕದಲ್ಲಿ ಮೋಹನ್‌ ಶರ್ಮಾ ಅವರ ಕುಟುಂಬ ಮುಂಬೈನಲ್ಲಿ ನೆಲೆಸಿತ್ತು. ಸಿನಿಮಾ ಶೂಟಿಂಗ್‌ ಸಲುವಾಗಿ ಚೆನ್ನೈಗೆ ಆಗಾಗ ಬಂದು ಹೋಗುತ್ತಿದ್ದರು. ಹೀಗಿರುವಾಗಲೇ ಮುಂಬೈನಲ್ಲಿದ್ದಾಗ, ನಟಿ ಲಕ್ಷ್ಮೀ ಮೋಹನ್‌ ಶರ್ಮಾಗೆ ಕರೆ ಮಾಡಿ, ಜಾಹೀರಾತಿನ ನಿಮಿತ್ತ ಮುಂಬೈನಲ್ಲಿದ್ದೇನೆ, ಭೇಟಿಯಾಗಿ ಎಂದಿದ್ದರು.

ನಾನು ನಿಮ್ಮ ನಾಯಿಯಂತಿರುತ್ತೇನೆ..

"ನೀವು ನನ್ನ ಜತೆಗೆ ಶಾಪಿಂಗ್ ಮಾಡಲು ಬರಬಹುದೇ? ಎಂದು ಲಕ್ಷ್ಮೀ ಮೋಹನ್‌ ಅವರಿಗೆ ಕೇಳಿದರು. ಅವರು ಹೇಳಿದ ಕಡೆಯಲ್ಲ ಕರೆದುಕೊಂಡು ಹೋಗಿ ಶಾಪಿಂಗ್‌ ಮಾಡಿಸಿದೆ. ಆಗ ಅಂಗಡಿಯಲ್ಲಿನ ಸೆಂಟ್‌ವೊಂದನ್ನು ಖರೀದಿಸಲು ಮುಂದಾದೆ. ಅದರ ಬೆಲೆ ಆಗ 500 ರೂಪಾಯಿ ಇತ್ತು. ಬೇಡವೆಂದು ಸುಮ್ಮನಾದೆ. ಅದಾದ ಬಳಿಕ ಕಾರ್‌ನಲ್ಲಿ ನಾನು ನೋಡಿದ್ದ ಸೆಂಟ್‌ ಬಾಟಲ್‌ಅನ್ನು ಉಡುಗೊರೆ ರೂಪದಲ್ಲಿ ನೀಡಿದರು. ನನಗೆ ನೀನೆಂದರೆ ತುಂಬ ಇಷ್ಟ. ನಿಮ್ಮ ಜೀವನದಲ್ಲಿ ನನಗೂ ಅವಕಾಶ ನೀಡಿದರೆ, ನಿಮ್ಮ ನಾಯಿಯಂತೆ ಇರುತ್ತೇನೆ ಎಂದು ಲಕ್ಷ್ಮೀ ಹೇಳಿದರು"

ನಾವಿಬ್ಬರೂ ಮದುವೆಯಾಗೋಣವೇ?

"ಲಕ್ಷ್ಮೀ ಆ ಮಾತುಗಳನ್ನು ಕೇಳಿ, ಅರೇ ಕ್ಷಣ ನಾನ್‌ ಶಾಕ್‌ಗೆ ಒಳಗಾದೆ. ಏನು ಉತ್ತರ ನೀಡಬೇಕೆಂಬುದೇ ನನಗೆ ಗೊತ್ತಾಗಲಿಲ್ಲ. ಅದೇ ಮೊದಲ ಸಲ ಒಬ್ಬ ಹುಡುಗಿ, ನನಗೆ ಪ್ರೇಮ ನಿವೇದನೆ ಮಾಡಿದಳು. ಲಕ್ಷ್ಮೀಯ ಮಾತನ್ನು ನಾನು ಗಂಭೀರವಾಗಿ ತೆಗೆದುಕೊಂಡೆ. ಆವತ್ತು ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ಮರುದಿನ ಕರೆ ಮಾಡಿ ರೂಮಿಗೆ ಬಾ ಎಂದರು. ಅಲ್ಲಿ ಏನು ನಡೆಯಬಹುದು ಎಂದು ನಾನು ಊಹಿಸಿದ್ದೆ. ನೇರವಾಗಿ ಹೊಟೇಲ್‌ಗೆ ಹೋದೆ. ನಾವಿಬ್ಬರೂ ಮದುವೆಯಾಗೋಣವೇ? ಎಂದಳು. ಸದ್ಯ ನನಗೆ ನನ್ನ ವೃತ್ತಿ ಕಡೆ ಗಮನಹರಿಸಬೇಕು. ಮದುವೆ ಬಗ್ಗೆ ಯೋಚನೆ ಇಲ್ಲ ಎಂದು ಮೋಹನ್‌ ಶರ್ಮಾ ಹೇಳಿಕೊಂಡಿದ್ದರು.

ಘಟಿಸಿತು ಮೊದಲ ರಾತ್ರಿ..

ನಾನು ಗೌರವಾನ್ವಿತ ಕುಟುಂಬದಿಂದ ಬಂದವನು. ಮದುವೆ ಆಗದ ಹೊರತು ನಾನು ಏನನ್ನೂ ಮಾಡಲ್ಲ. ಲಕ್ಷ್ಮೀ ಮದುವೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ, ಆಕೆ ಬಳಿಯೇ ಕುಂಕುಮ ಪಡೆದು, ಅವಳ ಹಣೆಗೆ ಹಚ್ಚಿದೆ. ಆ ರಾತ್ರಿಯೇ ನಾವಿಬ್ಬರೂ ಗಂಡ ಹೆಂಡತಿಯಾದೆವು. ಚೆನ್ನೈಗೆ ಬಂದು, ವಕೀಲರ ಮೂಲಕ ಮಾಧ್ಯಮಗಳಿಗೆ ನಮ್ಮ ಮದುವೆ ವಿಚಾರ ತಿಳಿಸಿದೆವು" ಎಂದು ಮೋಹನ್‌ ಶರ್ಮಾ ಇಂಡಿಯಾ ಗ್ಲಿಡ್ಜ್‌ ಯೂಟ್ಯೂಬ್ ಚಾನೆಲ್‌ ಜತೆಗೆ ಮಾತನಾಡಿದ್ದಾರೆ. ಸದ್ಯ ಮೋಹನ್‌ ಶರ್ಮಾ ಅವರ ಈ ಹೇಳಿಕೆ ವೈರಲ್‌ ಆಗುತ್ತಿದೆ.