Lakshmi Nivasa Serial: ಕೋಟಿ ಕೊಟ್ರೂ ಇಂಥ ಗಂಡ ಬೇಡ ದೇವ್ರೆ! ಸೈಕೋ ಜಯಂತನ ವರ್ತನೆಗೆ ಹೆಂಗಳೆಯರೇ ಶಾಕ್
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೈಕೋ ಜಯಂತನ ಉಪಟಳ ಅತಿಯಾಗುತ್ತಿದೆ. ಅನುಮಾನ, ಅತಿಯಾದ ಪ್ರೀತಿ ಪತ್ನಿ ಜಾಹ್ನವಿಗೂ ಉಸಿರು ಕಟ್ಟಿಸುತ್ತಿದೆ. ಈ ನಡುವೆ ಜಾನು ಸ್ನೇಹಿತ ವಿಶ್ವನ ಮೇಲೂ ಇದೀಗ ಜಯಂತನಿಗೆ ಅನುಮಾನ ಶುರುವಾಗಿದೆ. ಆತನ ಆತ್ಮಸಾಕ್ಷಿಗಳೇ ಕುಕ್ಕಿ ಕುಕ್ಕಿ ತಿನ್ನುತ್ತಿವೆ.
Lakshmi Nivasa Serial: ಸೈಕೋ ಜಯಂತ್‌ನ ಅಸಲಿ ರೂಪದ ದರ್ಶನ ಪತ್ನಿ ಜಾಹ್ನವಿ ಗಮನಕ್ಕೂ ಬಂದಿದೆ. ಜಾನು ಫೋನ್‌ಅನ್ನು ಕದ್ದು ಮುಚ್ಚಿ ನೋಡಿದ ಬಳಿಕ ಗೂಬೆ ವಿಶ್ವನ ವಿಚಾರ ಜಯಂತನನ್ನು ಕೆರಳಿಸಿದೆ. ಅಷ್ಟಕ್ಕೇ ಸುಮ್ಮನಾಗದ ಜಯಂತ್, ಪತ್ನಿಗೆ ಮಂಡಿ ನೆಲಕ್ಕೆ ಕೂರಿಸಿ ಶಿಕ್ಷೆಯನ್ನೂ ನೀಡಿದ್ದಾರೆ. ಪತಿಯ ಈ ವರ್ತನೆ ಪತ್ನಿ ಜಾನುಗಡೆ ಅಸಹನೀಯ ಎನಿಸಿದೆ. ಆಕೆಯ ಮಾತನ್ನು ಒಪ್ಪದ ಜಯಂತ್, ಒಳಗೊಳಗೆ ಇವರಿಬ್ಬರ ನಡುವೆ ಏನೋ ನಡೀತಿದೆ ಎಂದು ಅನುಮಾನ ಪಟ್ಟಿದ್ದಾನೆ.
ಶಿಕ್ಷೆಯ ಬಳಿಕ ಮಗುವನ್ನು ಚಿವುಟಿ, ತೊಟ್ಟಿಲು ತೂಗುವುದು ಎಂಬಂತೆ, ಬೇಸರದಲ್ಲಿ ಮಲಗಿದ್ದವಳ ಮೊಣಕಾಲಿಗೆ ಶಾಖ ನೀಡಿದ್ದಾನೆ. ಗಾಬರಿಯಲ್ಲಿಯೇ ಎಚ್ಚರಗೊಂಡ ಜಾನು, ಬೆದರಿದ್ದಾಳೆ. ಈ ವೇಳೆ ನನ್ನದೂ ತಪ್ಪಾಯ್ತು ಕ್ಷಮಿಸಿ ಎಂದು ಟೀ ನೀಡಿ ಸಮಾಧಾನ ಮಾಡಿದ್ದಾನೆ. ಆಕೆಯನ್ನು ಸ್ನಾನಕ್ಕೂ ಕಳಿಸಿದ್ದಾನೆ. ಈ ವೇಳೆ ಅಲ್ಲೇ ಇದ್ದ ಆಕೆಯ ಫೋನ್ ನೋಡಿದ್ದಾನೆ. ಅದರಲ್ಲಿನ ಗೂಬೆ (ವಿಶ್ವ) ಜತೆಗಿನ ವಾಯ್ಸ್ ಚಾಟ್ ಅವನ ಗಮನಕ್ಕೆ ಬಂದಿದೆ. ತಕ್ಷಣ ಅವೆಲ್ಲವನ್ನು ತನ್ನ ಫೋನ್‌ಗೆ ವರ್ಗಾಯಿಸಿಕೊಂಡಿದ್ದಾನೆ.
ಜಯಂತನ ಮೇಲೆ ಆತ್ಮಸಾಕ್ಷಿಗಳ ಪ್ರಹಾರ
ಇದೆಲ್ಲ ಮುಗಿದ ಬಳಿಕ ಆಫೀಸ್‌ಗೆ ಬಂದಿದ್ದಾನೆ. ಪತ್ನಿಯ ವಿಚಾರವನ್ನೇ ತಲೆಯಲ್ಲಿ ಇರಿಸಿಕೊಂಡು ಬಗೆಬಗೆ ಆಲೋಚನೆ ಮಾಡುತ್ತಿದ್ದಾನೆ. ಆಕೆ ಬೇರೆಯವರನ್ನ ಲವ್ ಮಾಡ್ತಿದ್ದಾಳಾ ಎಂದು ಪ್ರಶ್ನೆ ಮಾಡಿಕೊಂಡಿದ್ದಾನೆ. ಅಷ್ಟರಲ್ಲಿ ತನ್ನದೇ ಆದ ಆತ್ಮಸಾಕ್ಷಿಗಳು ಪ್ರತ್ಯಕ್ಷವಾಗಿ ಆತನನ್ನೇ ಕುಕ್ಕಿ ಕುಕ್ಕಿ ತಿನ್ನಲು ಶುರು ಮಾಡಿವೆ. ನಿನ್ನ ಹೆಂಡತಿಗೂ ಆ ಗೂಬೆಗೂ ಏನೋ ಸಂಬಂಧ? ಆಕೆ ನಿಜವಾಗಿಯೂ ನಿನ್ನನ್ನು ಇಷ್ಟಪಡೋದೆ ಆಗಿದ್ದರೆ, ಈ ವಿಷ್ಯವನ್ನ ನಿನ್ನ ಬಳಿ ಹೇಳಿಕೊಳ್ಳಬೇಕಿತ್ತಲ್ಲವೇ? ಹೇಳಿಕೊಂಡಿಲ್ಲ ಅಂದ್ರೆ, ಅದು ಬರೀ ಫ್ರೆಂಡ್‌ಶಿಪ್ ಆಗಿ ಉಳಿದಿಲ್ಲ ಎಂದು ಪ್ರಶ್ನೆ ಮಾಡುತ್ತಿವೆ.
ಗೂಬೆ ಗೂಬೆ ಎಂದು ಅಣಕ
ಇಂಥವನ್ನೆಲ್ಲ ನಿನ್ನ ಬಳಿ ಹೇಳಿಲ್ಲ ಅಂದರೆ, ಅವರಿಬ್ಬರ ಸಂಬಂಧ ತುಂಬ ಮುಂದುವರಿದಿದೆ ಅಂತಾನೇ ಅರ್ಥ. ಅದ್ಯಾರನ್ನೋ ಗೂಬೆ ಅಂದು ಅಂದು ನಿನ್ನನ್ನು ಗೂಬೆ ಮಾಡಿದ್ದಾಳೆ. ನೀನು ನಿಜವಾದ ಗೂಬೆ. ಈ ವಿಷ್ಯಾ ಜಾನು ಮನೆಯವರಿಗೂ ಗೊತ್ತಿತ್ತು. ಅವರೆಲ್ಲರೂ ಸೇರಿ ನಿನ್ನನ್ನು ಯಾಮಾರಿಸಿದ್ದಾರೆ. ಅವನ್ಯಾರು ಎಂದು ತಿಳಿದುಕೊಳ್ಳದೇ ಹೋದರೆ, ನೀನು ಶಾಶ್ವತವಾಗಿ ಗೂಬೆ ಆಗಿ ಬಿಡ್ತೀಯಾ ಎಂದು ಜಯಂತನ ಮೇಲೆ ಆತ್ಮಸಾಕ್ಷಿಗಳು ಪ್ರಹಾರ ನಡೆಸಿವೆ. ಇದನ್ನು ನಾನೇ ಕ್ಲಿಯರ್ ಮಾಡಿಕೊಳ್ಳಿನಿ ಎಂದ ಜಯಂತ್, ಪತ್ನಿಗೆ ಫೋನ್ ಮಾಡಿದ್ದಾನೆ. ಆದ್ರೆ, ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ. ಅಲ್ಲಿಗೆ ಮತ್ತಷ್ಟು ಅನುಮಾನಗಳು ಶುರುವಾಗಿವೆ.
ಏನ್ ಆಕ್ಟಿಂಗ್ ಗುರೂ..
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಯಂತ್ ಪಾತ್ರಕ್ಕೆ ನೋಡುಗರ ಶಾಪ ಹಾಕುತ್ತಿರಬಹುದು. ಆದರೆ, ನಟನೆ ವಿಚಾರದಲ್ಲಿ ಜಯಂತ್ ಪಾತ್ರ ಎಲ್ಲರ ಗಮನ ಸೆಳೆದಿದೆ. ಸೀರಿಯಲ್‌ನಲ್ಲಿ ಜಯಂತ್ ಆಗಿ ದೀಪಕ್ ಸುಬ್ರಮಣ್ಯ ಕಾಣಿಸಿಕೊಂಡಿದ್ದಾರೆ. ಇವರ ನಟನೆ ನೋಡಿದ ವೀಕ್ಷಕರು, ಅವರಿಗೆ ಬಹುಪರಾಕ್ ಹೇಳುತ್ತಿದ್ದಾರೆ. ಮೆಚ್ಚುಗೆಯ ಸಂದೇಶಗಳನ್ನು ಕಾಮೆಂಟ್ ಸೆಕ್ಷನ್‌ನಲ್ಲಿ ರವಾನಿಸುತ್ತಿದ್ದಾರೆ. ಇನ್ನು ಕೆಲವರು ಇದೇ ಪಾತ್ರಕ್ಕೆ ಹಿಡಿ ಶಾಪವನ್ನೂ ಹಾಕುತ್ತಿದ್ದಾರೆ.
"ಕೋಟಿ ಕೊಟ್ಟರೂ ಇಂಥ ಗಂಡ ಬೇಡ ದೇವ್ರೆ"
"ಅಯ್ಯೋ ದೇವರೇ ಆಗಲ್ಲಪ್ಪಾ ನಮ್ಮ ಕೈಲ್ಲೆ ನೋಡೋದು ಬಿಟ್ಟು ಬಿಡೋನು ಪ್ಲೀಸ್ ಬೇಡಾ ಈ ಸೀರಿಯಲ್"
"ನಟ ಭಯಂಕರ ದೀಪಕ್ ನಿಮಗೆ ನಮ್ಮ ಕಡೆಯಿಂದ ಸೆಲ್ಯೂಟ್. ನಿಮ್ಮ ಈ ನಟನೆಗೆ ಎರಡು ಮಾತಿಲ್ಲ"
"ಜಯಂತ್ ಅವರ ಆತ್ಮಸಾಕ್ಷಿಯು ಅವರನ್ನೇ ಅಪಹಾಸ್ಯ ಮಾಡುವ ದೃಶ್ಯ ತುಂನ ಪ್ರಭಾವಶಾಲಿಯಾಗಿದೆ. ನೀವು ಪ್ರತಿ ಭಾವನೆಗಳು ಮತ್ತು ಅಭಿವ್ಯಕ್ತಿಗಳನ್ನು ಅಷ್ಟೇ ಸಮತೋಲಿತ ಮತ್ತು ಸೂಕ್ಷ್ಮ ರೀತಿಯಲ್ಲಿ ತೆರೆಯ ಮೇಲೆ ಚೆನ್ನಾಗಿ ಒದಗಿಸಿದ್ದೀರಿ. ಒಟ್ಟಾರೆಯಾಗಿ ಸೂಪರ್" ಎಂದು ಕಾಮೆಂಟ್ ಹಾಕುತ್ತಿದ್ದಾರೆ.
ವಿಭಾಗ