ಯುಐ ಸಿನಿಮಾ ಕುದುರೆಗೆ ಹುಲ್ಲು ಹಾಕುವ ಕೆಲಸ ಕೊಡಬಹುದಿತ್ತು; ಜೀ ಕುಟುಂಬ ಅವಾರ್ಡ್ಸ್‌ ವೇದಿಕೆಯಲ್ಲಿಉಪೇಂದ್ರ, ಕುರಿ ಪ್ರತಾಪ್‌ ಫನ್ನಿ ಮಾತುಕತೆ
ಕನ್ನಡ ಸುದ್ದಿ  /  ಮನರಂಜನೆ  /  ಯುಐ ಸಿನಿಮಾ ಕುದುರೆಗೆ ಹುಲ್ಲು ಹಾಕುವ ಕೆಲಸ ಕೊಡಬಹುದಿತ್ತು; ಜೀ ಕುಟುಂಬ ಅವಾರ್ಡ್ಸ್‌ ವೇದಿಕೆಯಲ್ಲಿಉಪೇಂದ್ರ, ಕುರಿ ಪ್ರತಾಪ್‌ ಫನ್ನಿ ಮಾತುಕತೆ

ಯುಐ ಸಿನಿಮಾ ಕುದುರೆಗೆ ಹುಲ್ಲು ಹಾಕುವ ಕೆಲಸ ಕೊಡಬಹುದಿತ್ತು; ಜೀ ಕುಟುಂಬ ಅವಾರ್ಡ್ಸ್‌ ವೇದಿಕೆಯಲ್ಲಿಉಪೇಂದ್ರ, ಕುರಿ ಪ್ರತಾಪ್‌ ಫನ್ನಿ ಮಾತುಕತೆ

Zee Kutumaba awards 2024: ಮೂರು ದಿನಗಳ ಜೀ ಕುಟುಂಬ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ವಾಹಿನಿ ಕಾರ್ಯಕ್ರಮದ ತುಣುಕುಗಳನ್ನು ಪ್ರೋಮೋ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಅದರಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಕುರಿ ಪ್ರತಾಪ್‌ ಫನ್ನಿ ಮಾತುಕತೆ ಗಮನ ಸೆಳೆದಿದೆ.

 Zee Kutumaba awards 2024: ಜೀ ಕುಟುಂಬ ಅವಾರ್ಡ್ಸ್‌ ವೇದಿಕೆಯಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಕುರಿ ಪ್ರತಾಪ್‌ ಫನ್ನಿ ಮಾತುಕತೆ
Zee Kutumaba awards 2024: ಜೀ ಕುಟುಂಬ ಅವಾರ್ಡ್ಸ್‌ ವೇದಿಕೆಯಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಕುರಿ ಪ್ರತಾಪ್‌ ಫನ್ನಿ ಮಾತುಕತೆ (PC: Zee Kannada )

Zee Kutumaba awards 2024: ಜೀ ಕುಟುಂಬ ಅವಾರ್ಡ್ಸ್‌ 2024 ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಅಕ್ಟೋಬರ್‌ 25, 26 ಹಾಗೂ 27 ಒಟ್ಟು ಮೂರು ದಿನಗಳ ಕಾಲ ಜೀ ವಾಹಿನಿಯಲ್ಲಿ ಸಂಜೆ 6.30 ರಿಂದ 9.30 ವರೆಗೆ ಕಾರ್ಯಕ್ರಮ ಪ್ರಸಾರವಾಗಿತ್ತು. ವಿವಿಧ ಧಾರಾವಾಹಿಗಳ ತಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿವೆ. ವಾಹಿನಿಯು ಪ್ರಶಸ್ತಿ ಪಡೆದವರ ಫೋಟೋಗಳನ್ನು ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಮಕ್ಕಳೊಂದಿಗೆ ಉಪೇಂದ್ರ ಸಿಗ್ನೇಚರ್‌ ಸ್ಟೆಪ್ಸ್

ರಿಯಲ್‌ ಸ್ಟಾರ್‌ ಉಪೇಂದ್ರ, ಶ್ರೀಮುರಳಿ, ವಿರಾಟ್‌, ಸಂಗೀತ ನಿರ್ದೇಶಕ ಗುರುಕಿರಣ್‌, ಪ್ರೇಮ, ತರುಣ್‌ ಸುಧೀರ್‌, ಸೋನಾನ್‌ ಮೊಂತೆರೊ ಸೇರಿದಂತೆ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಡ್ರಾಮಾ ಜ್ಯೂನಿಯರ್ಸ್‌ ಮಕ್ಕಳು ಉಪೇಂದ್ರ ಅವರ ವಿವಿಧ ಸಿನಿಮಾಗಳ ಕಾಸ್ಟ್ಯೂಮ್‌ ತೊಟ್ಟು ನೆರೆದಿದ್ದವರನ್ನು ರಂಜಿಸಿದರು. ನಂತರ ಉಪೇಂದ್ರ, ಜ್ಯೂನಿಯರ್‌ ಉಪೇಂದ್ರಗಳ ಜೊತೆ ಬರಿ ಹೋಳು ಬರಿ ಹೋಳು ಹಾಡಿಗೆ ಹೆಜ್ಜೆ ಹಾಕಿದರು. ವೇದಿಕೆ ಮೇಲೆ ಸಿಗ್ನೇಚರ್‌ ಸ್ಟೆಪ್ಸ್‌ ಎಲ್ಲರ ಗಮನ ಸೆಳೆಯಿತು.

ಉಪೇಂದ್ರ, ಕುರಿ ಪ್ರತಾಪ್‌ ಫನ್ನಿ ಮಾತುಕತೆ

ನಂತರ ಕುರಿಪ್ರತಾಪ್‌ ಹಾಗೂ ಉಪೇಂದ್ರ ಸಂಭಾಷಣೆ ನೋಡುಗರನ್ನು ನಗೆಕಡಲಲ್ಲಿ ತೇಲಿಸಿತು. ಉಪೇಂದ್ರ ಅವರನ್ನು ವೇದಿಕೆ ಮಧ್ಯಭಾಗಕ್ಕೆ ನಿಲ್ಲಿಸಿ ಬನ್ನಿ ಎಂದು ಅನುಶ್ರೀ, ಪ್ರತಾಪ್‌ಗೆ ಹೇಳುತ್ತಾರೆ. ಉಪೇಂದ್ರ ಬಳಿ ಬರುವ ಕುರಿ ಪ್ರತಾಪ್‌ ನೋಡಿ ಸರ್‌, ಮೈಕ್‌ ತೆಗೆದುಕೊಡೋದು, ಸೈಡಲ್ಲಿ ನಿಂತಿರೋರನ್ನು ವೇದಿಕೆ ಮಧ್ಯಭಾಗಕ್ಕೆ ತಂದು ನಿಲ್ಲಿಸೋದಕ್ಕೆ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಪೇಮೆಂಟ್‌ ಮಾತ್ರ ಅಷ್ಟೇ ಸರ್‌, ಎನ್ನುತ್ತಾರೆ. ಆಗ ಉಪೇಂದ್ರ ನಿಮಗೆ ಪೇಮೆಂಟ್‌ ಬೇರೆ ಬೇಕಾ ಎಂದು ಕೇಳುತ್ತಾರೆ. ಹೌದು ಸರ್‌ ನೀವು ಹೇಳಿದ್ರೆ ಆಗುತ್ತಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸುವ ಉಪೇಂದ್ರ ನೀವು ಇಲ್ಲಿ ಇರದೆ ಹೊರಗೆ ಹೋದರೆ ಒಳ್ಳೆ ಪೇಮೆಂಟ್‌ ಖಂಡಿತ ದೊರೆಯುತ್ತೆ ಎನ್ನುತ್ತಾರೆ.

ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಡಿ ಎಂದ ಕುರಿ ಪ್ರತಾಪ್

ಸರ್‌ ಏನು ಹೀಗೆ ಹೇಳಿಬಿಟ್ರಿ, ನಿಮ್ಮ ಯುಐ ಸಿನಿಮಾಗೆ ನನ್ನನ್ನು ಕರೆಸಿ ಪೇಮೆಂಟ್‌ ಕೊಡಬಹುದಿತ್ತು. ಕೊನೆ ಪಕ್ಷ ಕುದುರೆ ಕಟ್ಟಿಹಾಕುವುದು, ಕುದುರೆಗೆ ಹುಲ್ಲು ಹಾಕುವುದು ಮಾಡ್ತಿದ್ದೆ ಎಂದು ಪ್ರತಾಪ್‌ ಹೇಳಿದಾಗ, ನೀವು ಇಲ್ಲಿ ಇಷ್ಟು ಬ್ಯುಸಿ ಇದ್ದೀರ, ನಿಮ್ಮ ಡೇಟ್ಸ್‌ ನಮಗೆಲ್ಲಿ ಸಿಗುತ್ತೆ ಎಂದು ಕೇಳುತ್ತಾರೆ. ನೀವು ಇದೇ ರೀತಿ ಅಂದುಕೊಂಡೇ ನನ್ನನ್ನು ಎಷ್ಟೋ ಸಿನಿಮಾಗಳಲ್ಲಿ ಕೈ ಬಿಟ್ರಿ ಸರ್‌ ಎಂದು ಪ್ರತಾಪ್‌ ಹೇಳಿದಾಗ ಉಪೇಂದ್ರ ರಕ್ತ ಕಣ್ಣಿರು ಸಿನಿಮಾ ಡೈಲಾಗ್‌ ಹೇಳುತ್ತಾರೆ. ಸರ್‌ ನನ್ನನ್ನು ಡೈರೆಕ್ಟ್‌ ಆಗೇ ಬೈಯ್ಯಬಹುದಿತ್ತು, ಹೀಗೆ ಸುತ್ತಿ ಬಳಸಿ ಬೈಯ್ಯಬೇಡಿ ಎಂದು ಕುರಿ ಹೇಳುತ್ತಾರೆ.

ಉಪೇಂದ್ರ ಹಾಗೂ ಕುರಿ ಪ್ರತಾಪ್‌ ಇಬ್ಬರ ಫನ್ನಿ ಡೈಲಾಗ್‌ ನೀವೂ ನೋಡಿ

Whats_app_banner