Khushbu Sundar: ಬಾಲ್ಯದಲ್ಲಿ ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಅನುಭವಿಸಿದ್ದೆ.. ಶಾಕಿಂಗ್ ಸತ್ಯ ಬಿಚ್ಚಿಟ್ಟ ಖುಷ್ಬೂ!
''ನನ್ನ ಬಾಲ್ಯ ಸುಂದರವಾಗಿರಲಿಲ್ಲ. ತಂದೆಯಿಂದಲೇ ನಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ. ನನ್ನ ತಾಯಿಯ ವೈವಾಹಿಕ ಜೀವನ ಬಹಳ ಕೆಟ್ಟದಾಗಿತ್ತು. ನಮ್ಮದು ಮುಸ್ಲಿಂ ಕುಟುಂಬ, ಹಿರಿಯರು ಅನಕ್ಷರಸ್ಥರಾಗಿದ್ದರು. ತಂದೆ ಎನಿಸಿಕೊಂಡಾತ ನನಗೆ ಹಾಗೂ ತಾಯಿಗೆ ನೀಡುತ್ತಿದ್ದ ದೌರ್ಜನ್ಯವನ್ನು ಬಹಳ ಸಹಿಸಿಕೊಂಡು ಬಂದೆ''
80ರ ದಶಕದಲ್ಲಿ ಎಲ್ಲಾ ಭಾಷೆಯ ಚಿತ್ರರಂಗದಲ್ಲಿ ನಾಯಕಿಯಾಗಿ ಮೆರೆದಿದ್ದ ಖುಷ್ಬೂ ಸುಂದರ್, ಈಗ ಪೋಷಕ ಪಾತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಜೊತೆಗೆ ಬಿಜೆಪಿ ಪಕ್ಷದಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಕೂಡಾ ನೇಮಕಗೊಂಡಿದ್ದಾರೆ.
ಸದಾ ಸಮಾಜದಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಪರ ದನಿಯೆತ್ತುವ ಬಹುಭಾಷಾ ನಟಿ ಖುಷ್ಬೂ ಸುಂದರ್ ಈಗ ತಾವು ಬಾಲ್ಯದಲ್ಲಿ ಅನುಭವಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ. 4 ವರ್ಷಗಳ ಹಿಂದೆ ಚಿತ್ರರಂಗದಲ್ಲಿ ಮಿ ಟು ಪ್ರಕರಣ ಭಾರೀ ಸದ್ದು ಮಾಡಿತ್ತು. ಸೆಲೆಬ್ರಿಟಿಗಳು , ತೆರೆ ಹಿಂದೆ ಕೆಲವ ಮಾಡುವ ಅನೇಕರು ತಾವು ಅನುಭವಿಸಿದ ನೋವನ್ನು ಹೇಳಿಕೊಂಡಿದ್ದರು. ಕೆಲವರು ಇಂದಿಗೂ ಅವಕಾಶ ಸಿಕ್ಕಾಗಲೆಲ್ಲಾ ತಾವು ಈ ಹಿಂದೆ ಅನುಭವಿಸದ ಕಷ್ಟವನ್ನು ಧೈರ್ಯ ಮಾಡಿ ರಿವೀಲ್ ಮಾಡಿದ್ದರು. ಖುಷ್ಬೂ ಸುಂದರ್ ಕೂಡಾ ತಾವು 8 ವರ್ಷದವರಿರುವಾಗ ಪಟ್ಟ ಕಷ್ಟವನ್ನು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಂದಹಾಗೆ ಖುಷ್ಬೂ ಸುಂದರ್, ಈ ರೀತಿ ಕಿರುಕುಳಕ್ಕೆ ಒಳಗಾಗಿದ್ದು ಬೇರೆ ಯಾರಿಂದಲೋ ಅಲ್ಲ, ತನ್ನ ಸ್ವಂತ ತಂದೆಯಿಂದ. 2 ವರ್ಷಗಳ ಹಿಂದೆ 'ವಿ ದಿ ವಿಮನ್' ಎಂಬ ಕಾರ್ಯಕ್ರಮಕ್ಕೆ ಖ್ಯಾತ ಪತ್ರಕರ್ತೆ ಬರ್ಕಾ ದತ್ ಅವರೊಂದಿಗಿನ ಮಾಧ್ಯಮ ಸಂವಾದದಲ್ಲಿ ಖುಷ್ಪೂ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಈ ಸಂವಾದದಲ್ಲಿ ಬಾಲಿವುಡ್ ನಟಿ ಊರ್ಮಿಳಾ ಮಾಂತೊಡ್ಕರ್, ನಟಿ ನುಸ್ರತ್ ಜಹಾನ್ ಕೂಡಾ ಇದ್ದರು. ತಮ್ಮ ಬಾಲ್ಯದ ಬಗ್ಗೆ ಮಾತನಾಡಿದ ಖುಷ್ಬೂ, ''ನನ್ನ ಬಾಲ್ಯ ಸುಂದರವಾಗಿರಲಿಲ್ಲ. ತಂದೆಯಿಂದಲೇ ನಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ. ನನ್ನ ತಾಯಿಯ ವೈವಾಹಿಕ ಜೀವನ ಬಹಳ ಕೆಟ್ಟದಾಗಿತ್ತು. ನಮ್ಮದು ಮುಸ್ಲಿಂ ಕುಟುಂಬ, ಹಿರಿಯರು ಅನಕ್ಷರಸ್ಥರಾಗಿದ್ದರು. ತಂದೆ ಎನಿಸಿಕೊಂಡಾತ ನನಗೆ ಹಾಗೂ ತಾಯಿಗೆ ನೀಡುತ್ತಿದ್ದ ದೌರ್ಜನ್ಯವನ್ನು ಬಹಳ ಸಹಿಸಿಕೊಂಡು ಬಂದೆ''
''ಆದರೆ 15 ವರ್ಷ ತುಂಬಿದಾಗ ತಂದೆಯ ದೌರ್ಜನ್ಯದ ಬಗ್ಗೆ ವಿರೋಧಿಸುವ ಧೈರ್ಯ ಮಾಡಿದೆ. ನನ್ನ ತಾಯಿಗೆ ನಾನು ಹೇಳುತ್ತಿರುವುದು ನಿಜ ಎಂದು ನಂತರ ಅರಿವಾಯ್ತು. ಆತನನ್ನು ತಂದೆ ಎಂದು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. 16 ವರ್ಷವಾಗುತ್ತಿದ್ದಂತೆ ಆತನೊಂದಿಗೆ ಸಂಪರ್ಕ ಕಡಿದುಕೊಂಡೆ. ಆತನನ್ನು ನೋಡಿ ಸುಮಾರು 36 ವರ್ಷಗಳಾಗಿವೆ. ನನ್ನ ಕುಟುಂಬದ ಇತರ ಸದಸ್ಯರು, ಆ ವ್ಯಕ್ತಿ ಜೊತೆ ಸಂಪರ್ಕದಲ್ಲಿದ್ದರು. ಆದರೆ ನಾನು ಆ ಸಂಬಂಧದಿಂದ ಹೊರ ಬಂದು ಬಹಳ ವರ್ಷಗಳಾಯ್ತು'' ಎಂದು ಖುಷ್ಬೂ ಸುಂದರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಮಹಿಳೆಯರ ದೌರ್ಜನ್ಯದ ವಿರುದ್ಧ ನಿಂತಿರುವ ಬರ್ಕಾ ದತ್, ಖುಷ್ಬೂ ಸುಂದರ್ ಹಾಗೂ ಇನ್ನಿತರಿಗೆ ಎಲ್ಲರೂ ಧನ್ಯವಾದ ಹೇಳುತ್ತಿದ್ದಾರೆ. ಯಾರಿಗೇ ಆಗಲೀ ಇಂತಹ ದೌರ್ಜಯ ಆದಾಗ ಹೆದರದೆ ಅನ್ಯಾಯವನ್ನು ವಿರೋಧಿಸಬೇಕು ಎಂದು ನೆಟಿಜನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಮತ್ತಷ್ಟು ಮನರಂಜನೆ ಸುದ್ದಿಗಳು
'ಮಫ್ತಿ' ಪ್ರೀಕ್ವೆಲ್ ಆಗಿ ಬರ್ತಿದೆ 'ಭೈರತಿ ರಣಗಲ್'.. ಪೋಸ್ಟರ್ ರಿಲೀಸ್ ಮಾಡಿದ ಚಿತ್ರತಂಡ
ಈಗ ಭೈರತಿ ರಣಗಲ್ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಸಿನಿಪ್ರಿಯರು ಥ್ರಿಲ್ ಆಗಿದ್ದಾರೆ. ಮಾರ್ಚ್ 5 ರಂದು ಪೋಸ್ಟರ್ ರಿಲೀಸ್ ಆಗಿದ್ದು ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಅನೌನ್ಸ್ ಆಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ. ಪೂರ್ತಿ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
ರಶ್ಮಿಕಾ ಬ್ಯೂಟಿಗೆ ಬೌಲ್ಡ್ ಆದ್ರಂತೆ ಯುವ ಕ್ರಿಕೆಟಿಗ.. ಆಕೆ ನನ್ನ ಕ್ರಷ್ ಎಂದ ಶುಭ್ಮನ್ ಗಿಲ್!
ಈ ನಡುವೆ ರಶ್ಮಿಕಾ ವಿಚಾರವಾಗಿ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ. ನ್ಯಾಷನಲ್ ಕ್ರಷ್, ಹೆಸರೇ ಸೂಚಿಸುವಂತೆ ರಶ್ಮಿಕಾ ಎಂದರೆ ಜನ ಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳಿಗೆ ಕೂಡಾ ಬಹಳ ಇಷ್ಟ. ಕಳೆದ ವರ್ಷ ಟಾಲಿವುಡ್ ನಟ ಬಾಲಕೃಷ್ಣ, ತಮ್ಮ ಅನ್‌ಸ್ಟಾಪಬಲ್ ಶೋನಲ್ಲಿ ರಶ್ಮಿಕಾ ಎಂದರೆ ಬಹಳ ಇಷ್ಟ ಎಂದು ಹೇಳಿಕೊಂಡಿದ್ದರು. ಇದೀಗ ಭಾರತೀಯ ಕ್ರಿಕೆಟ್ ತಂಡದ ಯುವ ಕ್ರಿಕೆಟಿಗ ಶುಭ್ಮನ್ ಗಿಲ್ ಕೂಡಾ ರಶ್ಮಿಕಾಗೆ ಬೌಲ್ಡ್ ಆಗಿದ್ದಾರಂತೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ವಿಭಾಗ