Rashmika Mandanna: ರಶ್ಮಿಕಾ ಬ್ಯೂಟಿಗೆ ಬೌಲ್ಡ್‌ ಆದ್ರಂತೆ ಯುವ ಕ್ರಿಕೆಟಿಗ.. ಆಕೆ ನನ್ನ ಕ್ರಷ್‌ ಎಂದ ಶುಭ್ಮನ್‌ ಗಿಲ್‌!
ಕನ್ನಡ ಸುದ್ದಿ  /  ಮನರಂಜನೆ  /  Rashmika Mandanna: ರಶ್ಮಿಕಾ ಬ್ಯೂಟಿಗೆ ಬೌಲ್ಡ್‌ ಆದ್ರಂತೆ ಯುವ ಕ್ರಿಕೆಟಿಗ.. ಆಕೆ ನನ್ನ ಕ್ರಷ್‌ ಎಂದ ಶುಭ್ಮನ್‌ ಗಿಲ್‌!

Rashmika Mandanna: ರಶ್ಮಿಕಾ ಬ್ಯೂಟಿಗೆ ಬೌಲ್ಡ್‌ ಆದ್ರಂತೆ ಯುವ ಕ್ರಿಕೆಟಿಗ.. ಆಕೆ ನನ್ನ ಕ್ರಷ್‌ ಎಂದ ಶುಭ್ಮನ್‌ ಗಿಲ್‌!

ಕ್ರಿಕೆಟಿಗರ ಹಾಗೂ ಸಿನಿಮಾ ತಾರೆಯರ ಪ್ರೀತಿ ಪ್ರೇಮ ಪ್ರಣಯ ಇಂದು ನಿನ್ನೆಯದಲ್ಲ. ಸಾಕಷ್ಟು ಜೋಡಿಗಳು ಪ್ರೀತಿಸಿ ಮದುವೆ ಆಗಿದ್ದಾರೆ. ಈ ನಡುವೆ ಶುಭ್ಮನ್‌ ಗಿಲ್‌, ರಶ್ಮಿಕಾ ನನ್ನ ಕ್ರಷ್‌ ಎಂದು ಹೇಳಿ ಆಶ್ಚರ್ಯ ಮೂಡಿಸಿದ್ದಾರೆ.

ಶುಭ್ಮನ್‌ ಗಿಲ್‌, ರಶ್ಮಿಕಾ ಮಂದಣ್ಣ
ಶುಭ್ಮನ್‌ ಗಿಲ್‌, ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಈಗ ಫುಲ್‌ ಬ್ಯುಸಿ. ಹಾಗೇ ಎಲ್ಲಿ ನೋಡಿದ್ರೂ ಆಕೆಯದ್ದೇ ಸುದ್ದಿ. ಮುಂಬೈ ಏರ್‌ಪೋರ್ಟ್‌ನಲ್ಲಿ ರಶ್ಮಿಕಾ ಕಾಣಿಸಿಕೊಂಡರೆ ಪಾಪರಾಜಿಗಳು ಆಕೆಯ ಫೋಟೋ, ವಿಡಿಯೋ ಸೆರೆಹಿಡಿಯಲು ಕಾಯುತ್ತಿರುತ್ತಾರೆ. ಹಾಗೇ ಅಭಿಮಾನಿಗಳು ಕೂಡಾ ಆಕೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾಯುತ್ತಿರುತ್ತಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಜೀ ಸಿನಿ ಅವಾರ್ಡ್‌ ಕಾರ್ಯಕ್ರಮದಲ್ಲಿ ರಶ್ಮಿಕಾ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.

ಈ ನಡುವೆ ರಶ್ಮಿಕಾ ವಿಚಾರವಾಗಿ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ. ನ್ಯಾಷನಲ್‌ ಕ್ರಷ್‌, ಹೆಸರೇ ಸೂಚಿಸುವಂತೆ ರಶ್ಮಿಕಾ ಎಂದರೆ ಜನ ಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳಿಗೆ ಕೂಡಾ ಬಹಳ ಇಷ್ಟ. ಕಳೆದ ವರ್ಷ ಟಾಲಿವುಡ್‌ ನಟ ಬಾಲಕೃಷ್ಣ, ತಮ್ಮ ಅನ್‌ಸ್ಟಾಪಬಲ್‌ ಶೋನಲ್ಲಿ ರಶ್ಮಿಕಾ ಎಂದರೆ ಬಹಳ ಇಷ್ಟ ಎಂದು ಹೇಳಿಕೊಂಡಿದ್ದರು. ಇದೀಗ ಭಾರತೀಯ ಕ್ರಿಕೆಟ್‌ ತಂಡದ ಯುವ ಕ್ರಿಕೆಟಿಗ ಶುಭ್ಮನ್‌ ಗಿಲ್‌ ಕೂಡಾ ರಶ್ಮಿಕಾಗೆ ಬೌಲ್ಡ್‌ ಆಗಿದ್ದಾರಂತೆ. ಕಳೆದ ಕೆಲವು ದಿನಗಳಿಂದ ಈ ಸುದ್ದಿ ಹರಿದಾಡುತ್ತಿದೆ.

ಕ್ರಿಕೆಟಿಗರ ಹಾಗೂ ಸಿನಿಮಾ ತಾರೆಯರ ಪ್ರೀತಿ ಪ್ರೇಮ ಪ್ರಣಯ ಇಂದು ನಿನ್ನೆಯದಲ್ಲ. ಸಾಕಷ್ಟು ಜೋಡಿಗಳು ಪ್ರೀತಿಸಿ ಮದುವೆ ಆಗಿದ್ದಾರೆ. ಈ ನಡುವೆ ಶುಭ್ಮನ್‌ ಗಿಲ್‌, ರಶ್ಮಿಕಾ ನನ್ನ ಕ್ರಷ್‌ ಎಂದು ಹೇಳಿ ಆಶ್ಚರ್ಯ ಮೂಡಿಸಿದ್ದಾರೆ. ಶುಭ್ಮನ್‌ ಗಿಲ್‌ ಹೆಸರು ಬಹಳ ದಿನಗಳಿಂದ ಸಚಿನ್‌ ತೆಂಡುಲ್ಕರ್‌ ಪುತ್ರಿ ಸಾರಾ ತೆಂಡುಲ್ಕರ್‌ ಜೊತೆ ಕೇಳಿ ಬರುತ್ತಿದೆ. ಇಬ್ಬರೂ ಶೀಘ್ರದಲ್ಲೇ ಮದುವೆ ಕೂಡಾ ಆಗಲಿದ್ದಾರೆ ಎಂಬ ಮಾತು ಹರಿದಾಡುತ್ತಲೇ ಇದೆ. ಇದರ ನಡುವೆ ಶುಭ್ಮನ್‌ ಗಿಲ್‌, ಮಾಧ್ಯಮಗಳ ಎದುರು ರಶ್ಮಿಕಾ ಮೇಲೆ ನನಗೆ ಕ್ರಷ್‌ ಆಗಿದೆ ಎಂದು ಹೇಳಿದ್ದಾರೆ. ಈ ಸುದ್ದಿ ವೈರಲ್‌ ಆಗುತ್ತಿದೆ. ಆದರೆ ರಶ್ಮಿಕಾ ಈ ವಿಚಾರವಾಗಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಕಾದು ನೋಡಬೇಕು. ಹಾಗೇ ಇದು ಕೇವಲ ಕ್ರಷ್‌ ಮಾತ್ರಾನಾ ಅಥವಾ ರಶ್ಮಿಕಾಗೆ ಮದುವೆ ಪ್ರಪೋಸ್‌ ಕೂಡಾ ಮಾಡಿದ್ದಾರೋ ಏನೋ ಮುಂದಿನ ದಿನಗಳಲ್ಲಿ ತಿಳಿಯಲಿದೆ.

ರಶ್ಮಿಕಾ ಕುರಿತಾದ ಮತ್ತಷ್ಟು ಸುದ್ದಿಗಳು ಇಲ್ಲಿವೆ

ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಾಗಲಿ ಎಂದು ತಮಗೆ ತಾವೇ ಹಾರೈಸಿಕೊಂಡ ರಶ್ಮಿಕಾ!

ರಶ್ಮಿಕಾ ಈಗ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆಕೆ ಚಿತ್ರರಂಗಕ್ಕೆ ಬಂದು 6 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ರಶ್ಮಿಕಾ ಬಹಳ ಆಸ್ತಿ ಸಂಪಾದನೆ ಮಾಡಿದ್ದಾರೆ. ಐದು ಪ್ರತ್ಯೇಕ ಸಿಟಿಗಳಲ್ಲಿ ಅವರು ಐಷಾರಾಮಿ ಫ್ಲಾಟ್‌ಗಳನ್ನು ಖರೀದಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ರಶ್ಮಿಕಾ ಕುರಿತಾದ ಸುದ್ದಿ ಹರಿದಾಡುತ್ತಿದೆ. ಏನದು ಸುದ್ದಿ, ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

ಜೀ ಸಿನಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ ಸೆಲೆಬ್ರಿಟಿಗಳು.. ರಶ್ಮಿಕಾ ಮಂದಣ್ಣ ಟೂ ಹಾಟ್‌ ಎಂದ ನೆಟಿಜನ್ಸ್‌!

ಇತ್ತೀಚೆಗೆ ನಡೆದ ಜೀ ಸಿನಿ ಅವಾರ್ಡ್‌ ಕಾರ್ಯಕ್ರಮದಲ್ಲಿ ರಶ್ಮಿಕಾ ಬ್ಲಾಕ್‌ ಶಾರ್ಟ್‌ ಔಟ್‌ಫಿಟ್‌ನಲ್ಲಿ ಬಹಳ ಹಾಟ್‌ ಆಗಿ ಕಾಣಿಸುತ್ತಿದ್ದರು. ಈ ಫೋಟೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕೆಲವರು ರಶ್ಮಿಕಾ ಲುಕ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಅವರ ತುಂಡುಡುಗೆ ನೋಡಿ ಶಾಕ್‌ ಆಗಿದ್ದಾರೆ. ರಶ್ಮಿಕಾ ಫೋಟೋಗಳನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ.

Whats_app_banner