ಕನ್ನಡ ಸುದ್ದಿ  /  ಮನರಂಜನೆ  /  Actress Rambha: ವಿದೇಶದಲ್ಲಿದ್ರೂ ಅಪ್ಪಟ ಭಾರತೀಯ ನಾರಿ; ಮಗಳಿಗೆ ಸಾಂಪ್ರದಾಯಿಕ ಡ್ರೆಸ್‌ ತೊಡಿಸಿ ಫೋಟೋ ಹಂಚಿಕೊಂಡ ಭಾವ ಬಾಮೈದ ನಟಿ ರಂಭಾ

Actress Rambha: ವಿದೇಶದಲ್ಲಿದ್ರೂ ಅಪ್ಪಟ ಭಾರತೀಯ ನಾರಿ; ಮಗಳಿಗೆ ಸಾಂಪ್ರದಾಯಿಕ ಡ್ರೆಸ್‌ ತೊಡಿಸಿ ಫೋಟೋ ಹಂಚಿಕೊಂಡ ಭಾವ ಬಾಮೈದ ನಟಿ ರಂಭಾ

2010ರಲ್ಲಿ ಉದ್ಯಮಿ ಇಂದ್ರಕುಮಾರ್‌ ಎಂಬುವರನ್ನು ಮದುವೆ ಆದ ನಂತರ ರಂಭಾ, ಕೆನಡಾದ ಒಂಟಾರಿಯೋ ರಾಜಧಾನಿ ಟೊರೊಂಟೊಗೆ ಹೋಗಿ ಸೆಟಲ್‌ ಆಗಿದ್ದಾರೆ. ರಂಭಾಗೆ ಲಾವಣ್ಯ ಹಾಗೂ ಸಾಶಾ ಎಂಬ ಇಬ್ಬರು ಹೆಣ್ಣು ಮಕ್ಕಳು, ಶಿವನ್‌ ಎಂಬ ಒಬ್ಬ ಗಂಡು ಮಗ ಇದ್ದಾರೆ.

ಬಹುಭಾಷಾ ನಟಿ ರಂಭಾ
ಬಹುಭಾಷಾ ನಟಿ ರಂಭಾ (PC: Rambha Social media)

ರಂಭಾ, 90ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ಚೆಲುವೆ. ದಕ್ಷಿಣ ಮಾತ್ರವಲ್ಲದೆ ಕೆಲವೊಂದು ಬಾಲಿವುಡ್‌ ಸಿನಿಮಾಗಳಲ್ಲಿ ಕೂಡಾ ರಂಭಾ ನಟಿಸಿದ್ದಾರೆ. ಸದ್ಯಕ್ಕೆ ರಂಭಾ ಮೂರು ಮಕ್ಕಳ ತಾಯಿ. ಪತಿ ಹಾಗೂ ಮಕ್ಕಳೊಂದಿಗೆ ರಂಭಾ ಕೆನಡಾದಲ್ಲಿ ನೆಲೆಸಿದ್ದಾರೆ. ಶಾಲೆ ಕಾರ್ಯಕ್ರಮವೊಂದರಲ್ಲಿ ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಮಿಂಚಿದ ಮಗಳ ಫೋಟೋವನ್ನು ರಂಭಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕೆಲವು ದಿನಗಳ ಹಿಂದೆ ರಂಭಾ ಕೆನಡಾದಲ್ಲಿ ಅಪಘಾತಕ್ಕೆ ಒಳಗಾಗಿ ಸುದ್ದಿಯಾಗಿದ್ದರು. ಮಕ್ಕಳನ್ನು ಕಾರಿನಲ್ಲಿ ಶಾಲೆಯಿಂದ ಮನೆಗೆ ಕರೆ ತರುವಾಗ ಈ ಅಪಘಾತ ಸಂಭವಿಸಿತ್ತು. ಈ ವಿಚಾರವನ್ನು ಸ್ವತ: ರಂಭಾ ತಮ್ಮ ಸೋಷಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ''ಮಕ್ಕಳನ್ನು ಶಾಲೆಯಿಂದ ಕರೆ ತರುವಾಗ ನಮ್ಮ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ನಾನು, ಮಕ್ಕಳು ಹಾಗೂ ನಮ್ಮೊಂದಿಗೆ ಇದ್ದ ದಾದಿ, ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದೇವೆ. ನನ್ನ ಪುಟ್ಟ ಮಗಳು ಸಾಶಾ ಇನ್ನೂ ಆಸ್ಪತ್ರೆಯಲ್ಲಿದ್ದಾಳೆ. ಕೆಟ್ಟ ದಿನಗಳು, ಕೆಟ್ಟ ಸಮಯ, ದಯವಿಟ್ಟು ನಮಗಾಗಿ ಪ್ರಾರ್ಥಿಸಿ, ನಿಮ್ಮ ಪ್ರಾರ್ಥನೆ ನಮಗೆ ಬಹಳ ಮುಖ್ಯ'' ಎಂದು ರಂಭಾ ಬರೆದುಕೊಂಡಿದ್ದರು.

2010ರಲ್ಲಿ ಉದ್ಯಮಿ ಇಂದ್ರಕುಮಾರ್‌ ಎಂಬುವರನ್ನು ಮದುವೆ ಆದ ನಂತರ ರಂಭಾ, ಕೆನಡಾದ ಒಂಟಾರಿಯೋ ರಾಜಧಾನಿ ಟೊರೊಂಟೊಗೆ ಹೋಗಿ ಸೆಟಲ್‌ ಆಗಿದ್ದಾರೆ. ರಂಭಾಗೆ ಲಾವಣ್ಯ ಹಾಗೂ ಸಾಶಾ ಎಂಬ ಇಬ್ಬರು ಹೆಣ್ಣು ಮಕ್ಕಳು, ಶಿವನ್‌ ಎಂಬ ಒಬ್ಬ ಗಂಡು ಮಗ ಇದ್ದಾರೆ. ಆಗ್ಗಾಗ್ಗೆ ತಮ್ಮ ಕುಟುಂಬದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ರಂಭಾ ಈಗ ಮಗಳು ಭಾರತೀಯ ಸಾಂಪ್ರದಾಯಿಕ ಡ್ರೆಸ್‌ ತೊಟ್ಟು ಸ್ಕೂಲ್‌ನಲ್ಲಿ ಹಾಡು ಹೇಳುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಲಾವಣ್ಯ, ಹಾಡಿಗಾಗಿ ಬಹುಮಾನ ಕೂಡಾ ಗೆದ್ದಿದ್ದಾಳೆ. ಈ ಫೋಟೋ ನೋಡಿದ ಕೂಡಲೇ ಇದು ರಂಭಾ ಬಾಲ್ಯದ ಫೋಟೋದಂದೆ ಕಾಣುತ್ತಿದೆ ಎಂದು ಹಲವರು ಕಾಮೆಂಟ್‌ ಮಾಡುತ್ತಿದ್ದಾರೆ. ಕಾಲಿವುಡ್‌ ಹಿರಿಯ ನಟಿ ರಾಧಿಕಾ ಕೂಡಾ ರಂಭಾ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ರಂಭಾ ಬಹಳ ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದರೂ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಕಲಿಸುವುದನ್ನು ಮಾತ್ರ ಮರೆತಿಲ್ಲ. ಈ ವಿಚಾರವಾಗಿ ನೆಟಿಜನ್ಸ್‌ ರಂಭಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೂ ಮುನ್ನ ಅನೇಕ ಬಾರಿ ರಂಭಾ ಮಕ್ಕಳು ಟ್ರೆಡಿಷನಲ್‌ ಡ್ರೆಸ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಂಭಾ ಮೂಲತ: ಆಂಧ್ರಪ್ರದೇಶದ ವಿಜಯವಾಡಕ್ಕೆ ಸೇರಿದವರು. ಅವರ ಮೊದಲ ಹೆಸರು ವಿಜಯಲಕ್ಷ್ಮಿ. ಸ್ಕೂಲ್‌ ಕಾರ್ಯಕ್ರಮವೊಂದರಲ್ಲಿ ರಂಭಾ ನಟನೆ ನೋಡಿದ ನಿರ್ದೇಶಕ ಹರಿಹರನ್‌ ಆಕೆಗೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದರು. 'ಸರ್‌ಗಮ್‌' ಎಂಬ ಮಲಯಾಳಂ ಸಿನಿಮಾ ಮೂಲಕ ಈ ಚೆಲುವೆ ಚಿತ್ರರಂಗಕ್ಕೆ ಬಂದರು. ನಂತರ ಆಕೆಯ ಹೆಸರನ್ನು ರಂಭಾ ಎಂದು ಬದಲಿಸಲಾಯ್ತು. ರಂಭಾ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮಾತ್ರವಲ್ಲದೆ, ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ರಂಭಾ ಮೊದಲು ನಟಿಸಿದ ಕನ್ನಡ ಸಿನಿಮಾ ಸರ್ವರ್‌ ಸೋಮಣ್ಣ. ಈ ಸಿನಿಮಾ 1993ರಲ್ಲಿ ತೆರೆ ಕಂಡಿತ್ತು. ನಂತರ ಕೆಂಪಯ್ಯ ಐಪಿಎಸ್‌, ಓ ಪ್ರೇಮವೇ, ಪಾಂಚಾಲಿ, ಭಾವ ಬಾಮೈದ, ಸಾಹುಕಾರ, ಪಾಂಡುರಂಗ ವಿಠಲ, ಗಂಡುಗಲಿ ಕುಮಾರರಾಮ, ಅನಾಥರು ಸಿನಿಮಾದಲ್ಲಿ ನಟಿಸಿದ್ದಾರೆ.

 

 

IPL_Entry_Point