ಕನ್ನಡ ಸುದ್ದಿ  /  Entertainment  /  Tollywood News Samantha Ruth Prabhu Drops New Pics In Bikini As She Vacations In Malaysia Pcp

Samantha: ಬಿಕಿನಿಯಲ್ಲಿ ಸಮಂತಾ ರುತ್‌ ಪ್ರಭು; ಮಲೇಷ್ಯಾ ಪ್ರವಾಸದ ಉಲ್ಲಾಸಮಯ ಕ್ಷಣಗಳ ವಿವರ ನೀಡಿದ್ರು ಖುಷಿ ನಟಿ

Samantha Ruth Prabhu: ಬಾಲಿವುಡ್‌ ನಟಿ ಸಮಂತಾ ರುತ್‌ ಪ್ರಭು ಮಲೇಷ್ಯಾ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿನ ಸುಂದರ ಪರಿಸರದಲ್ಲಿ ಧ್ಯಾನಸ್ಥರಾಗಿರುವ ಫೋಟೋದ ಜತೆ ಪುಟ್ಟ ಈಜುಕೊಳದಲ್ಲಿ ಬಿಕಿನಿಯಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸಮಂತಾ ಋತು ಪ್ರಭು
ಸಮಂತಾ ಋತು ಪ್ರಭು

ಬಾಲಿವುಡ್‌ ನಟಿ ಸಮಂತಾ ಋತು ಪ್ರಭು ಮಲೇಷ್ಯಾದ ಲಂಕಾವಿಯಲ್ಲಿದ್ದಾರೆ. ತನ್ನ ಮಲೇಷ್ಯಾ ಪ್ರವಾಸದ ಸಂದರ್ಭದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಬಿಕಿನಿ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬಿಕಿನಿ ಫೋಟೋ ಮಾತ್ರವಲ್ಲದೆ ಧ್ಯಾನ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಲೇಷ್ಯಾದ ನಿಸರ್ಗದ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಮಂತಾ ರುತ್‌ ಪ್ರಭು ಫೋಟೋಗಳು

"ಅತ್ಯಧಿಕ ಪ್ರೀತಿಯಿಂದ" ಎಂಬ ಅಡಿಬರಹದ ಜತೆ ಸಮಂತಾ ರುತ್‌ ಪ್ರಭು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಲೇಷ್ಯಾದ ಲಂಕಾವಿ ಎಂಬ ಸ್ಥಳದಲ್ಲಿ ಅವರು ಉಳಿದುಕೊಂಡಿದ್ದರು. ಅಲ್ಲಿನ ಹಲವು ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ಮೊದಲ ಫೋಟೋದಲ್ಲಿ ಕಂದು ಬಣ್ಣದ ಬಿಕಿನಿ ಧರಿಸಿದ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಣ್ಣ ಈಜುಕೊಳದಲ್ಲಿ ಈಜುವ ಸಂದರ್ಭದಲ್ಲಿ ತೆಗೆದ ಫೋಟೋ. ಮೊದಲ ಫೋಟೋ ಕ್ಲೋಸ್‌ಅಪ್‌ ಶೂಟ್‌ನಲ್ಲಿದ್ದರೆ, ಎರಡನೇ ಫೋಟೋದಲ್ಲಿ ಈಜುಕೊಳ ಪೂರ್ತಿಯಾಗಿ ಕಾಣಿಸುತ್ತದೆ. ಮತ್ತೊಂದು ಫೋಟೋದಲ್ಲಿ ಅಲ್ಲಿನ ನಿವಾಸದಲ್ಲಿ ಸಮಂತ ಋತು ಪ್ರಭು ಧ್ಯಾನ ಮಾಡುತ್ತಿರುವುದನ್ನು ಗಮನಿಸಬಹುದು. ಅಲ್ಲಿನ ಹಸಿರು ವಾತಾವರಣ ಮತ್ತು ಮರದ ಮನೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಖುಷಿ ಸಿನಿಮಾದ ನಟಿ ಸಮಂತಾ ತನ್ನ ತೂಕ ಮತ್ತು ಮೆಟಾಬಾಲಿಕ್‌ ವಯಸ್ಸಿನ ಮಾಹಿತಿ ಹಂಚಿಕೊಂಡಿದ್ದರು. ಆಕೆಯ ಒಂದು ಫೋಟೋದಲ್ಲಿ ತಾನು 50.1 ಕೆಜಿ ತೂಕ ಇರುವ ಮಾಹಿತಿ ನೀಡಿದ್ದರು. ಇದೇ ಸಮಯದಲ್ಲಿ ತಾನು 36 ವಯಸ್ಸಿನಲ್ಲಿ ಮೆಟಾಬಾಲಿಕ್‌ 23 ವಯಸ್ಸು ಹೊಂದಿದ್ದೇನೆ ಎಂದಿದ್ದರು.

ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಸಮಂತಾ ತನ್ನ ಪ್ರಾಜೆಕ್ಟ್‌ನಿಂದ ಬ್ರೇಕ್‌ ತೆಗೆದುಕೊಂಡಿದ್ದರು. ತನ್ನ ಆಟೋಇಮ್ಯುನ್‌ ಆರೋಗ್ಯ ಸ್ಥಿತಿಯಾದ ಮಯೋಸಿಟಿಸ್‌ಗೆ ಚಿಕಿತ್ಸೆ ಪಡೆಯುವ ಸಲುವಾಗಿ ಮತ್ತು ವಿಶ್ರಾಂತಿ ಪಡೆಯುವ ಸಲುವಾಗಿ ಕರಿಯರ್‌ನಿಂದ ಬ್ರೇಕ್‌ ತೆಗೆದುಕೊಂಡಿದ್ದರು. ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದ ಅವರು ಜಗತ್ತಿನ ವಿವಿಧೆಡೆ ಸುತ್ತುತ್ತ ಇದೀಗ ಮಲೇಷ್ಯಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಸಮಂತಾ ಅವರು ವಿಜಯ್‌ ದೇವರಕೊಂಡ ನಟನೆಯ ತೆಲುಗು ಸಿನಿಮಾ ಖುಷಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಮಹಾನತಿ ಸಿನಿಮಾದ ಬಳಿಕ ಇವರಿಬ್ಬರು ಜತೆಯಾಗಿ ನಟಿಸಿದ ಸಿನಿಮಾ ಇದಾಗಿದೆ. ಸೆಪ್ಟೆಂಬರ್‌ 1, 2023ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಇದೇ ಸಮಯದಲ್ಲಿ ಇವರು ಸಿಟಾಡೆಲ್‌ ಎಂಬ ವೆಬ್‌ ಸರಣಿಯಲ್ಲೂ ಕಾಣಿಸಿಕೊಂಡಿದ್ದರು.