GOAT box office collection: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಗೋಟ್‌, ದಳಪತಿ ವಿಜಯ್‌ ಸಿನಿಮಾದ ಕಲೆಕ್ಷನ್‌ ಲೆಕ್ಕ-kollywood news goat box office collection day 1 vijays film performs well opens at 43 crore pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Goat Box Office Collection: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಗೋಟ್‌, ದಳಪತಿ ವಿಜಯ್‌ ಸಿನಿಮಾದ ಕಲೆಕ್ಷನ್‌ ಲೆಕ್ಕ

GOAT box office collection: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಗೋಟ್‌, ದಳಪತಿ ವಿಜಯ್‌ ಸಿನಿಮಾದ ಕಲೆಕ್ಷನ್‌ ಲೆಕ್ಕ

GOAT box office collection day 1: ಗೌರಿ ಗಣೇಶ ಹಬ್ಬದ ಮುನ್ನ ದಿನ ಬಿಡುಗಡೆಯಾದ ದಳಪತಿ ವಿಜಯ್‌ ನಟನೆಯ ಗೋಟ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಮೊದಲ ದಿನವೇ ತನ್ನ ತಿಜೋರಿಗೆ 43 ಕೋಟಿ ರೂಪಾಯಿ ಸೇರಿಸಿಕೊಂಡಿದೆ.

GOAT box office collection: ಗೋಟ್‌ ಸಿನಿಮಾದ ಮೊದಲ ದಿನದ ಬಾಕ್ಸ್‌ ಆಫೀಸ್‌ ಗಳಿಕೆ
GOAT box office collection: ಗೋಟ್‌ ಸಿನಿಮಾದ ಮೊದಲ ದಿನದ ಬಾಕ್ಸ್‌ ಆಫೀಸ್‌ ಗಳಿಕೆ

GOAT box office collection day 1: ದಳಪತಿ ವಿಜಯ್‌ ನಟನೆಯ ಗೋಟ್‌ ಸಿನಿಮಾವು ಮೊದಲ ದಿನವೇ ಉತ್ತಮ ಗಳಿಕೆ ಮಾಡಿದೆ. ಭಾರತದ ಬಾಕ್ಸ್‌ ಆಫೀಸ್‌ನಲ್ಲಿ 40 ಕೋಟಿ ರೂಪಾಯಿ ಗಳಿಸಿದೆ. ಗೌರಿ ಹಬ್ಬದ ಹಿಂದಿನ ದಿನವೇ ಬಿಡುಗಡೆಯಾದ ಈ ಚಿತ್ರವನ್ನು ಬೆಂಗಳೂರು ಸೇರಿದಂತೆ ದೇಶಾದ್ಯಂತ ಜನರು ಕಣ್ತುಂಬಿಕೊಂಡಿದ್ದಾರೆ. ಕಲಪತಿ ಎಸ್‌ ಅಘೋರಂ, ಕಲಪತಿ ಎಸ್‌ ಗಣೇಶ್‌ ಮತ್ತು ಕಲಪತಿ ಎಸ್‌ ಸುರೇಶ್‌ ಅವರ ಎಜಿಎಸ್‌ ಎಂಟರ್‌ಟೇನ್‌ಮೆಂಟ್‌ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ಗೋಟ್‌ ಇಂಡಿಯಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಈ ಸಿನಿಮಾವು ಮೊದಲ ದಿನ 43 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ತಮಿಳಿನಲ್ಲಿ 38.3 ಕೋಟಿ ರೂಪಾಯಿ, ಹಿಂದಿಯಲ್ಲಿ 1.7 ಕೋಟಿ, ತೆಲುಗಿನಲ್ಲಿ 3 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ ಎಂದು ಸಕ್‌ನಿಲ್ಕ್‌.ಕಾಂ ವರದಿ ತಿಳಿಸಿದೆ. ಗುರುವಾರ ತಮಿಳು ಭಾಷೆಯಲ್ಲಿ ಈ ಸಿನಿಮಾದ ಆಕ್ಯುಪೆನ್ಸಿ ಶೇಕಡ 76.23ರಷ್ಟು ಇತ್ತು.

ಗೋಟ್‌ ಸಿನಿಮಾದ ವಿಮರ್ಶೆ

ಈಗಾಗಲೇ ಈ ಸಿನಿಮಾವನ್ನು ಹಿಂದೂಸ್ತಾನ್‌ ಟೈಮ್ಸ್‌ ವಿಮರ್ಶೆ ಮಾಡಿದೆ. "ಗೋಟ್‌ ಸಿನಿಮಾದ ಮೊದಲಾರ್ಥ ತುಂಬಾ ಎಂಗೇಜ್‌ ಆಗಿದ್ದು, ನಿರ್ದೇಶಕರು ಪ್ರೇಕ್ಷಕರನ್ನು ಚೇರ್‌ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಕೌಟುಂಬಿಕ ನಾಟಕವಿದೆ. ಇದರೊಂದಿಗೆ ಸಾಕಷ್ಟು ಸಾಹಸ ದೃಶ್ಯಗಳಿವೆ. ಇಂಟರ್‌ವಲ್‌ ತನಕ ಭರ್ಜರಿ ಮನರಂಜನೆ ನೀಡುತ್ತದೆ. ಇಂಟರ್‌ವಲ್‌ ಬಳಕ ಗಾಂಧಿ ಮತ್ತು ಸಂಜಯ್‌ ನಡುವಿನ ಕಥೆಯನ್ನು ನಿರ್ದೇಶಕರು ವೇಗವಾಗಿ ಮುಗಿಸಲು ಯತ್ನಿಸಿದ್ದಾರೆ. ಈ ಸಿನಿಮಾವು ದಳಪತಿ ವಿಜಯ್‌ ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿದಂತೆ ಇದೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ ನೋಡಿದರೆ ಇದು ಖಾತ್ರಿಯಾಗುತ್ತದೆ. ಹಾಗಂತ, ಈ ಸಿನಿಮಾದಲ್ಲಿ ಲ್ಯಾಗ್ಸ್‌ ಇಲ್ಲ ಎಂದಲ್ಲ. ಆದರೆ, ವಿಜಯ್‌ ಅವರ ಅದ್ಭುತ ಪರ್ಫಾಮೆನ್ಸ್‌ ಈ ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು" ಎಂದು ಹಿಂದೂಸ್ತಾನ್‌ ಟೈಮ್ಸ್‌ ವಿಮರ್ಶೆ ಮಾಡಿದೆ.

ಗೋಟ್‌ ಸಿನಿಮಾದ ಕುರಿತು

ವೆಂಕಟ್ ಪ್ರಭು ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೋಟ್‌ ವೈಜ್ಞಾನಿಕ ಕಾಲ್ಪನಿಕ ಚಿತ್ರವಾಗಿದೆ. ಈ ಸಿನಿಮಾದ ತಾರಾಗಣದಲ್ಲಿ ಪ್ರಶಾಂತ್, ಪ್ರಭುದೇವ, ಸ್ನೇಹಾ, ಅಜ್ಮಲ್ ಅಮೀರ್, ವೈಭವ್, ಲೈಲಾ, ಮೋಹನ್, ಅರವಿಂದ್ ಆಕಾಶ್, ಅಜಯ್ ರಾಜ್, ಮೀನಾಕ್ಷಿ ಚೌಧರಿ, ಸ್ನೇಹಾ, ಯೋಗಿ ಬಾಬು, ಪ್ರೇಮ್ಗಿ ಅಮರೇನ್, ಯುಗೇಂದ್ರನ್ ಮತ್ತು ವಿಟಿವಿ ಗಣೇಶ್ ಮುಂತಾದವರು ನಟಿಸಿದ್ದಾರೆ. ದಳಪತಿ ವಿಜಯ್‌ ಡಬಲ್‌ ಆಕ್ಟಿಂಗ್‌ನಲ್ಲಿ ನಟಿಸಿದ್ದಾರೆ.