Bheema OTT Release: ದುನಿಯಾ ವಿಜಯ್‌ ನಟನೆಯ ಕನ್ನಡ ಸಿನಿಮಾ ಭೀಮ ಒಟಿಟಿ ಬಿಡುಗಡೆ ವಿವರ, ಡ್ರಗ್ಸ್‌ ಮಾಫಿಯಾದ ವಿರುದ್ಧ ಸಮರ-ott movies bheema ott release dunia vijay directional lead role movie watch online soon drugs mafia film pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bheema Ott Release: ದುನಿಯಾ ವಿಜಯ್‌ ನಟನೆಯ ಕನ್ನಡ ಸಿನಿಮಾ ಭೀಮ ಒಟಿಟಿ ಬಿಡುಗಡೆ ವಿವರ, ಡ್ರಗ್ಸ್‌ ಮಾಫಿಯಾದ ವಿರುದ್ಧ ಸಮರ

Bheema OTT Release: ದುನಿಯಾ ವಿಜಯ್‌ ನಟನೆಯ ಕನ್ನಡ ಸಿನಿಮಾ ಭೀಮ ಒಟಿಟಿ ಬಿಡುಗಡೆ ವಿವರ, ಡ್ರಗ್ಸ್‌ ಮಾಫಿಯಾದ ವಿರುದ್ಧ ಸಮರ

Bheema OTT Release: ದುನಿಯಾ ವಿಜಯ್‌ ನಟನೆಯ ಭೀಮ ಕನ್ನಡ ಸಿನಿಮಾ ಒಟಿಟಿಯಲ್ಲಿ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಆಗಸ್ಟ್‌ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್‌ ಆದ ಈ ಚಿತ್ರವು ಡ್ರಗ್ಸ್‌ ಮಾಫಿಯಾದ ವಿರುದ್ಧ ಸಮರ ಸಾರಿತ್ತು.

Bheema OTT Release: ದುನಿಯಾ ವಿಜಯ್‌ ನಟನೆಯ ಕನ್ನಡ ಸಿನಿಮಾ ಭೀಮ ಒಟಿಟಿ ಬಿಡುಗಡೆ ವಿವರ
Bheema OTT Release: ದುನಿಯಾ ವಿಜಯ್‌ ನಟನೆಯ ಕನ್ನಡ ಸಿನಿಮಾ ಭೀಮ ಒಟಿಟಿ ಬಿಡುಗಡೆ ವಿವರ

Bheema OTT Release: ದುನಿಯಾ ವಿಜಯ್‌ ನಟನೆಯ ಭೀಮ ಕನ್ನಡ ಸಿನಿಮಾ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಈ ಚಿತ್ರ ಅತ್ಯುತ್ತಮವಾಗಿ ಗಳಿಕೆ ಮಾಡಿದೆ. ಚಿತ್ರಮಂದಿರಗಳಲ್ಲಿ ಜನದಟ್ಟಣೆ ಕಡಿಮೆಯಾಗಿದ್ದ ಸಮಯದಲ್ಲಿ ಭೀಮ ಬಿಡುಗಡೆಯಾಗಿತ್ತು. ಈ ಚಿತ್ರದ ಬಳಿಕ ಥಿಯೇಟರ್‌ಗೆ ಜನಪ್ರವಾಹವೇ ಹರಿದು ಬಂತು. ದುನಿಯಾ ವಿಜಯ್‌ ನಟನೆಯ ಈ ಚಿತ್ರವು ಡ್ರಗ್ಸ್‌ ಮಾಫಿಯಾದ ಮೇಲೆ ಬೆಳಕು ಚೆಲ್ಲಿತ್ತು. ಈ ಸಿನಿಮಾ ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆ ಒಟಿಟಿ ಸಿನಿಮಾ ವೀಕ್ಷಕರನ್ನು ಕಾಡುತ್ತಿದೆ.

ಭೀಮ ಸಿನಿಮಾವು ದುನಿಯಾ ವಿಜಯ್‌ ನಟನೆ ಮತ್ತು ನಿರ್ದೇಶನದ ಸಿನಿಮಾ. ತನ್ನದೇ ಸಿನಿಮಾಕ್ಕೆ ನಿರ್ದೇಶನ ನೀಡಿದ ವಿಜಯ್‌ ಕುಮಾರ್‌ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಹೊಸ ಭರವಸೆ ಹುಟ್ಟಿಸಿದ್ದರು. ಇದಾದ ಬಳಿಕ ಕೃಷ್ಣಂ ಪ್ರಣಯ ಸಖಿ ಮುಂತಾದ ಚಿತ್ರಗಳು ಸ್ಯಾಂಡಲ್‌ವುಡ್‌ಗೆ ಚೈತನ್ಯ ನೀಡಿವೆ. ಭೀಮ ಸಿನಿಮಾವನ್ನು ಕೃಷ್ಣ ಸಾರ್ಥಕ್‌, ಜಗದೀಶ್‌ ಗೌಡ ನಿರ್ಮಾಣ ಮಾಡಿದ್ದಾರೆ.

ಭೀಮ ಸಿನಿಮಾದ ಮೂಲಕ ಅಶ್ವಿನಿ, ಬ್ಲ್ಯಾಕ್‌ ಡ್ರಾಗನ್‌ ಮಂಜು ಮತ್ತು ಗಿಲಿಗಿಲಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಈಗ ಚಿತ್ರಮಂದಿರಗಳಲ್ಲಿ ಭೀಮ ಅಬ್ಬರ ಮುಗಿದಿದೆ. ಈ ಚಿತ್ರ ಒಟಿಟಿಗೆ ಯಾವಾಗ ಬರಲಿದೆ ಎಂದು ಸಾಕಷ್ಟು ಜನರು ಕಾಯುತ್ತಿದ್ದಾರೆ. ಈ ಕುರಿತು ಅಧಿಕೃತವಾಗಿ ಯಾವುದೇ ಅಪ್‌ಡೇಟ್‌ ದೊರಕದೆ ಇದ್ದರೂ ಸೆಪ್ಟೆಂಬರ್‌ ಅಂತ್ಯದಲ್ಲಿ ಅಥವಾ ಅಕ್ಟೊಬರ್‌ ಆರಂಭದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಭೀಮ ಸಿನಿಮಾವು ಬೆಂಗಳೂರಿನ ಸ್ಲಂ ಹುಡುಗರ ಡ್ರಗ್ಸ್‌ ಅಭ್ಯಾಸದ ಮೇಲೆ ಪ್ರಮುಖವಾಗಿ ಗಮನಹರಿಸಿತ್ತು. ಡ್ರಗ್ಸ್‌ ಎನ್ನುವುದು ಉಳ್ಳವರ, ಶ್ರೀಮಂತರ, ಕಾಲೇಜು ಹುಡುಗರ ಮೋಜು ಮಸ್ತಿಗೆ ಮಾತ್ರ ಬಳಸಲಾಗುತ್ತದೆ ಎಂದು ಜನಜನಿತವಾಗಿರುವ ಸಂದರ್ಭದಲ್ಲಿ ವಿಜಯ್‌ ಇದರ ಇನ್ನೊಂದು ಮುಖ ತೋರಿಸಿದ್ದರು. ಬಡ ಹುಡುಗರು ಹೇಗೆ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ? ಹೇಗೆ ಸೈಲೆಂಟ್‌ ಆಗಿ ಡ್ರಗ್ಸ್‌ ಜಾಲ ಬೆಳೆಯುತ್ತದೆ? ಡ್ರಗ್ಸ್‌ ಯಾವೆಲ್ಲ ರೂಪದಲ್ಲಿ ಲಭ್ಯವಿರುತ್ತದೆ? ಡ್ರಗ್ಸ್‌ನಿಂದ ಸಮಾಜದ ಮೇಲೆ ಯಾವೆಲ್ಲ ಪರಿಣಾಮ ಬೀರುತ್ತದೆ? ಮಕ್ಕಳು ಮಾದಕ ವ್ಯಸನಿಗಳಾಗದಂತೆ ನೋಡಿಕೊಳ್ಳಲು ಹೆತ್ತವರ ಪಾತ್ರವೇನು ಇತ್ಯಾದಿ ಅಂಶಗಳ ಮೇಲೆ ಸಾಕಷ್ಟು ಸ್ಟಡಿ ಮಾಡಿ ಈ ಚಿತ್ರವನ್ನು ದುನಿಯಾ ವಿಜಯ್‌ ಕಟ್ಟಿಕಟ್ಟಿದ್ದರು.

ಸಾಮಾನ್ಯವಾಗಿ ಸಿನಿಮಾವೊಂದು ಬಿಡುಗಡೆಯಾಗಿ ಒಂದು ತಿಂಗಳ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗುವುದು ಸಾಮಾನ್ಯ. ಆದರೆ, ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗುವುದು ಹೆಚ್ಚು ಸದ್ದಾಗುವುದೇ ಇಲ್ಲ. ಚಿತ್ರತಂಡವೂ ಒಟಿಟಿ ಬಿಡುಗಡೆ ಕುರಿತು ಭರ್ಜರಿ ಪ್ರಚಾರವನ್ನೂ ನಡೆಸುತ್ತಿಲ್ಲ. ಒಟಿಟಿಯಲ್ಲಿ ಸಿನಿಮಾಗಳನ್ನು ಕೆದಕುವ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಕನ್ನಡ ಸಿನಿಮಾಗಳು ಕಣ್ಣಿಗೆ ಕಾಣಿಸುವುದೇ ಹೆಚ್ಚು. ಆದರೆ, ಇತರೆ ಭಾಷೆಗಳ ಸಿನಿಮಾಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಸಂದರ್ಭದಲ್ಲಿ ಸಾಕಷ್ಟು ಪ್ರಚಾರ ನಡೆಸಲಾಗುತ್ತದೆ.

ಭೀಮ ಸಿನಿಮಾ ಒಟಿಟಿಗೆ ಯಾವಾಗ ಬರಲಿದೆ ಎಂದು ಅಧಿಕೃತವಾಗಿ ಮಾಹಿತಿ ಲಭ್ಯವಿಲ್ಲ. ಆದರೆ, ಸೆಪ್ಟೆಂಬರ್‌ ತಿಂಗಳಲ್ಲಿಯೇ ಆನ್‌ಲೈನ್‌ಗೆ ಲಗ್ಗೆ ಇಡಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ದುನಿಯಾ ವಿಜಯ್‌ ನಟನೆಯ ಸಲಗ ಸಿನಿಮಾ ಸನ್‌ನೆಕ್ಸ್ಟ್‌ನಲ್ಲಿ ಪ್ರಸಾರವಾಗುತ್ತಿದೆ. ಹೀಗಾಗಿ, ಭೀಮ ಸಿನಿಮಾ ಕೂಡ ಇದೇ ಒಟಿಟಿಯಲ್ಲಿ ಪ್ರಸಾರವಾಗುವ ನಿರೀಕ್ಷೆಯಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋ, ಝೀ5, ಜಿಯೊಸಿನಿಮಾದಲ್ಲೂ ಈ ಚಿತ್ರ ಪ್ರಸಾರವಾದರೆ ಅಚ್ಚರಿಯಿಲ್ಲ.