ಬಿಡುಗಡೆಗೆ ಮುನ್ನವೇ ಹಾಡುಗಳಿಂದ ಹಿಟ್ ಆಗಿತ್ತು ಈ ಸಿನಿಮಾ; ಕೃಷ್ಣಂ ಪ್ರಣಯ ಸಖಿ ಚಿತ್ರದ ಕೇಳಲೇಬೇಕೆನಿಸುವ ಎಂಟು ಗೀತೆಗಳಿವು
ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಟಿಟಿಗೆ ಯಾವಾಗ ಬರುತ್ತದೆ ಎಂದು ಎಲ್ಲರೂ ಕಾದಿದ್ದರು. ಆದರೆ ಈಗ ಆ ಕಾತರಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ ಅಕ್ಟೋಬರ್ 11ರಿಂದ OTT ಸ್ಟ್ರೀಮಿಂಗ್ ಆರಂಭವಾಗುತ್ತದೆ ಎಂಬ ನಿರೀಕ್ಷೆ ಹೊಂದಿತ್ತು.
ಕೃಷ್ಣಂ ಪ್ರಣಯ ಸಖಿ ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಜನಮನ್ನಣೆ ಗಳಿಸಿತ್ತು. ಇದರಲ್ಲಿನ ಹಾಡುಗಳನ್ನು ಜನರು ತುಂಬಾ ಇಷ್ಟಪಟ್ಟಿದ್ದರು. ಕೆಲವೊಂದು ಚಿತ್ರಗಳು ಸದಾಕಾಲ ನೆನಪಿನಲ್ಲಿ ಉಳಿಯಲು ಹಾಡುಗಳು ಸಹ ಕಾರಣವಾಗುತ್ತದೆ. ಹಾಡುಗಳು ಹಿಟ್ ಆದರೆ ಸಿನಿಮಾ ನೋಡಲು ಬಯಸುವವರ ಸಂಖ್ಯೆಯೂ ಹೆಚ್ಚೇ ಇರುತ್ತದೆ. ಅದೇ ರೀತಿ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಬಹುತೇಕ ಎಲ್ಲಾ ಹಾಡುಗಳು ಹಿಟ್ ಆಗಿವೆ. ಜನರು ತುಂಬಾ ಇಷ್ಟಪಟ್ಟು ಪದೇ ಪದೇ ಹಾಡುಗಳನ್ನು ಕೇಳುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ‘ದ್ವಾಪರ ದಾಟುತಾ’ ಹಾಡಿಗಂತೂ ಅದರದೇ ಆಗ ಒಂದು ದೊಡ್ಡ ಅಭಿಮಾನಿಗಳ ಪಟ್ಟಿಯೇ ಬೆಳೆದುಬಿಟ್ಟಿದೆ.
ಈ ಸಿನಿಮಾದಲ್ಲಿ ಒಟ್ಟು ಎಷ್ಟು ಹಾಡುಗಳಿದ್ದವು?
ಕೃಷ್ಣಂ ಪ್ರಣಯ ಸಖಿ ಎಂಟು ಹಾಡುಗಳನ್ನು ಹೊಂದಿದೆ.
1) ನೋಡುತಾ, ನೋಡುತಾ ನಾನಂತು ಅಂಗಾತ ಬಿದ್ದೋದೆ ನೋಡೆ ಚಿನ್ನಮ್ಮ -ಕೈಲಾಶ್ ಖೇರ್ ಮತ್ತು ಇಂದು ನಾಗರಾಜ್ ಈ ಹಾಡನ್ನು ಹಾಡಿದ್ದಾರೆ.
2) ದ್ವಾಪರ ದಾಟುತ ನನ್ನನೇ ನೋಡಲು - ಜಸ್ಕರನ್ ಸಿಂಗ್ ಈ ಹಾಡನ್ನು ಹಾಡಿದ್ದಾರೆ.
3) ಹೇ ಗಗನಾ ಮಳೆಯಾ ಹರಿಸಿ - ಸೋನು ನಿಗಮ್ ಮತ್ತು ಚಿನ್ಮಯಿ ಶ್ರೀಪಾದ ಈ ಹಾಡನ್ನು ಹಾಡಿದ್ಧಾರೆ.
4) ಪ್ರೀತಿ ಖಯಾಲಿ (ನನ್ನ ಮದುವೆ ಫಿಕ್ಸ್ ಆಗಿದೆ) - ಚಂದನ್ ಶೆಟ್ಟಿ ಹಾಡಿರುವ ಹಾಡು ಇದಾಗಿದೆ.
5) ನಿನ್ನ ಹೆಗಲು, ನನಗಾಗೇ ಇರಲು - ಕೆ.ಎಸ್. ಚಿತ್ರಾ ಹಾಡಿರುವ ಹಾಡು
6) ಕಾಡದೇ ಹೇಗಿರಲಿ- ಪೃಥ್ವಿ ಭಟ್ ಅವರು ಹಾಡಿದ ಹಾಡು
7) ಶ್ರೀ ಕೃಷ್ಣಂ ಜಗತ್ ಕಾರಣಂ -ರಕ್ಷಿತಾ ಸುರೇಶ್ ಅವರು ಹಾಡಿದ ಹಾಡು
8)ಕಾಡದೇ ಹೇಗಿರಲಿ ಡುಯೆಟ್ ಸಾಂಗ್: ಪೃಥ್ವಿ ಭಟ್ ಮತ್ತು ಗೌತಮ್ ನಾಯರ್ ಹಾಡಿರುವ ಹಾಡು
ಈ ಎಲ್ಲಾ ಹಾಡುಗಳು ಜನರ ಮನ ತಣಿಸಿದೆ. ದ್ವಾಪರ ದಾಟುತ ಹಾಡು ಎಷ್ಟೋ ಜನರ ರಿಂಗ್ ಟೋನ್ ಕೂಡ ಆಗಿದೆ.
ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸೂಪರ್ ಹಿಟ್ ಪಟ್ಟ ಪಡೆದುಕೊಂಡಿದೆ. ಇತ್ತೀಚಿನ ಕೆಲ ದಿನಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ, ಕೃಷ್ಣ ಪ್ರಣಯ ಸಖಿ ಸಿನಿಮಾ ಒಳ್ಳೆಯ ಕಲೆಕ್ಷನ್ ಜತೆಗೆ ಜನಮೆಚ್ಚುಗೆಯನ್ನೂ ಪಡೆದು ಇದೀಗ ಓಟಿಟಿಯಲ್ಲೂ ನಿಮ್ಮ ವೀಕ್ಷಣೆಗೆ ಲಭ್ಯವಿದೆ. ವೀಕೆಂಡ್ ಬಂತು ಮನೆಯಲ್ಲೇ ಕುಳಿತು ಯಾವುದಾದರೂ ಸಿನಿಮಾ ನೋಡೋಣ ಎಂದು ನೀವು ಅಂದುಕೊಂಡಿದ್ದರೆ ಖಂಡಿತ ನೀವು ಈ ಚಿತ್ರವನ್ನು ನೋಡಬಹುದು. ಆದರೆ ಇನ್ನು ಸ್ವಲ್ಪ ದಿನ ಕಾಯಬೇಕು.
ದೊಡ್ಡ ಹಿಟ್‌ನ ನಿರೀಕ್ಷೆಯಲ್ಲಿದ್ದ ನಟ ಗಣೇಶ್ ಅವರಿಗೆ ಈ ಚಿತ್ರ ಮತ್ತಷ್ಟು ಹೆಸರು ತಂದುಕೊಟ್ಟಿದೆ. ಯಾವ ಒಟಿಟಿ, ಯಾವಾಗಿನಿಂದ? ನಾವು ಈ ಸಿನಿಮಾ ನೋಡಬಹುದು ಎಂಬ ಪ್ರಶ್ನೆ ನಿಮಗೆ ಈಗಲೂ ಇದ್ದರೆ ಅಕ್ಟೋಬರ್ 11ರಿಂದ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆ ನಿರೀಕ್ಷೆ ಇತ್ತು. ನೀವೂ ಮನೆಯಲ್ಲೇ ಕೂತು ಕೃಷ್ಣಂ ಪ್ರಣಯ ಸಖಿ ನೋಡಿ ಆನಂದಿಸಲು ಇನ್ನೂ ಕಾಯಬೇಕಿದೆ.