ಮಗುವಿನಲ್ಲಿ ಬಿಳಿ ಕೂದಲು ಗೋಚರಿಸುತ್ತಿದ್ದರೆ ಕಳವಳ ಪಡದಿರಿ; ಮಕ್ಕಳ ಆಹಾರದಲ್ಲಿ ಇವುಗಳನ್ನು ಸೇರಿಸಿ
ಯೌವನದಲ್ಲೇ ಬಹುತೇಕ ಮಂದಿಗೆ ಬಿಳಿಗೂದಲು ಮೂಡುತ್ತಿದೆ. ಇಂದು ಇದು ವಯಸ್ಕರಲ್ಲಿ ಮಾತ್ರವಲ್ಲ ಮಕ್ಕಳಲ್ಲೂ ಈ ಸಮಸ್ಯೆ ಕಾಡುತ್ತಿದೆ.ಚಿಕ್ಕ ಮಕ್ಕಳಲ್ಲಿ ಬಿಳಿಗೂದಲು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ,ಈ ಅಗತ್ಯ ಪೌಷ್ಠಿಕಾಂಶ ಭರಿತ ಆಹಾರಗಳನ್ನು ಮಕ್ಕಳಿಗೆ ನೀಡಿ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಯುವಕ/ತಿಯರಲ್ಲಿ ಮಾತ್ರವಲ್ಲ ಚಿಕ್ಕ ಮಕ್ಕಳಲ್ಲಿ ಕೂಡ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಬಿಳಿಗೂದಲು 10 ರಿಂದ 12 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಕ್ಕಳಿಗೆ ಸರಿಯಾದ ಆಹಾರವನ್ನು ನೀಡುವುದು ಮುಖ್ಯ. ಇದರಿಂದ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಬಹುದು. ಹಾಗೂ ಬೂದು ಕೂದಲಿನಂತಹ ಸಮಸ್ಯೆಗಳನ್ನು ತೊಡೆದುಹಾಕಬಹುದು. ಮಕ್ಕಳಿಗೆ ಸರಿಯಾದ ಪೌಷ್ಠಿಕಾಂಶ ಸಿಗದ ಕಾರಣ ಅನೇಕ ಬಾರಿ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ಮಕ್ಕಳ ಆಹಾರದಲ್ಲಿ ಇವುಗಳನ್ನು ಸೇರಿಸಿ.
ಅಕಾಲಿಕ ಬಿಳಿಗೂದಲು ತಡೆಯಲು ಮಕ್ಕಳಿಗೆ ಈ ಆಹಾರ ನೀಡಿ
ಬಾದಾಮಿ ಮತ್ತು ಕಡಲೆಕಾಯಿ: ಮಗುವಿನ ಕೂದಲು ಬಿಳಿಯಾಗಿ ಕಾಣುತ್ತಿದ್ದರೆ, ಅವುಗಳನ್ನು ಮರೆಮಾಡುವ ಬದಲು ಸರಿಯಾದ ಪೌಷ್ಠಿಕಾಂಶ ಆಹಾರವನ್ನು ನೀಡಿ. ಕಡಲೆಕಾಯಿ ಮತ್ತು ಬಾದಾಮಿಯನ್ನು ಆಹಾರದಲ್ಲಿ ಮಕ್ಕಳನ್ನು ಸೇರಿಸಿ. ಮಕ್ಕಳಲ್ಲಿ ಬಯೋಟಿನ್ ಕೊರತೆಯಿಂದಾಗಿ, ಕೂದಲು ಬಿಳಿಯಾಗುತ್ತದೆ. ಬಾದಾಮಿ ಮತ್ತು ಕಡಲೆಕಾಯಿಯಂತಹ ಆಹಾರಗಳು ಬಯೋಟಿನ್ ಕೊರತೆಯನ್ನು ಪೂರೈಸುತ್ತವೆ. ಇದರಿಂದಾಗಿ ಬಿಳಿಗೂದಲು ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಸೂರ್ಯಕಾಂತಿ ಬೀಜಗಳು ಮತ್ತು ಗೋಡಂಬಿ: ಮಕ್ಕಳ ಆಹಾರದಲ್ಲಿ ಗೋಡಂಬಿ ಮತ್ತು ಸೂರ್ಯಕಾಂತಿ ಬೀಜಗಳನ್ನು ಸೇರಿಸಿ. ಇವುಗಳಲ್ಲಿ ತಾಮ್ರದ ಅಂಶವಿದ್ದು, ಮಕ್ಕಳ ದೇಹದಲ್ಲಿನ ತಾಮ್ರದ ಕೊರತೆಯನ್ನು ಹೋಗಲಾಡಿಸುತ್ತದೆ ಮತ್ತು ಬೂದು ಕೂದಲು ತಡೆಯುತ್ತದೆ.
ಕಾಬೂಲ್ ಕಡಲೆ: ಮಕ್ಕಳ ದೇಹದಲ್ಲಿ ವಿಟಮಿನ್ ಬಿ 6 ಕೊರತೆಯಿದ್ದರೆ, ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಹೀಗಾಗಿ ಕಾಬೂಲ್ ಕಡಲೆಯನ್ನು ಮಕ್ಕಳಿಗೆ ಸೇವಿಸಲು ಕೊಡುವುದು ಉತ್ತಮ.
ಖರ್ಜೂರ ಮತ್ತು ಒಣದ್ರಾಕ್ಷಿ: ದಾಳಿಂಬೆ, ಬೀಟ್ರೂಟ್ ಜತೆಗೆ ಖರ್ಜೂರ ಮತ್ತು ಒಣ ದ್ರಾಕ್ಷಿಯನ್ನು ಮಗುವಿನ ಆಹಾರದಲ್ಲಿ ಸೇರಿಸಿ. ಇವು ಕಬ್ಬಿಣ ಸಮೃದ್ಧ ಆಹಾರಗಳಾಗಿವೆ. ಮಕ್ಕಳು ಕಬ್ಬಿಣದ ಕೊರತೆಯಿಂದ ಬಳಲುತ್ತಿದ್ದರೆ ಈ ಆಹಾರವನ್ನು ನೀಡಬಹುದು. ದೇಹದಲ್ಲಿನ ಕಬ್ಬಿಣದ ಕೊರತೆಯು ಅಕಾಲಿಕ ಬಿಳಿಗೂದಲು ಉಂಟಾಗಲು ಕಾರಣವಾಗಬಹುದು. ಹೀಗಾಗಿ ಈ ಆಹಾರಗಳನ್ನು ಸೇವಿಸಲು ಕೊಡಿ.
ವಿಟಮಿನ್ ಡಿ ಕೊರತೆ: ಅನೇಕ ಬಾರಿ, ವಿಟಮಿನ್ ಡಿ ಕೊರತೆಯಿರುವ ಮಕ್ಕಳು ಕೂದಲು ಬಿಳಿಯಾಗುವ ಸಮಸ್ಯೆಯನ್ನು ಹೊಂದಲು ಪ್ರಾರಂಭಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಬೆಳಿಗ್ಗೆ ಅರ್ಧ ಗಂಟೆ ಸೂರ್ಯನ ಬೆಳಕಿಗೆ ಮೈಯನ್ನೊಡ್ಡಲು ಬಿಡಿ ನೀಡಿ. ಇದರಿಂದ ಅವರ ದೇಹದಲ್ಲಿ ವಿಟಮಿನ್ ಡಿ ಪೂರೈಕೆಯಾಗುತ್ತದೆ.