Lakshmi Baramma: ಇದ್ದಕ್ಕಿದ್ದಂತೆ ನಾಪತ್ತೆಯಾದ ಲಕ್ಷ್ಮೀ; ವೈಷ್ಣವ್‌ಗೆ ಹೆಚ್ಚಾಯ್ತು ಭಯ, ಕಾವೇರಿ ಮಾತು ಕೇಳಿ ಮೋಸ ಹೋಗ್ತಾರಾ ಮನೆಮಂದಿ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma: ಇದ್ದಕ್ಕಿದ್ದಂತೆ ನಾಪತ್ತೆಯಾದ ಲಕ್ಷ್ಮೀ; ವೈಷ್ಣವ್‌ಗೆ ಹೆಚ್ಚಾಯ್ತು ಭಯ, ಕಾವೇರಿ ಮಾತು ಕೇಳಿ ಮೋಸ ಹೋಗ್ತಾರಾ ಮನೆಮಂದಿ

Lakshmi Baramma: ಇದ್ದಕ್ಕಿದ್ದಂತೆ ನಾಪತ್ತೆಯಾದ ಲಕ್ಷ್ಮೀ; ವೈಷ್ಣವ್‌ಗೆ ಹೆಚ್ಚಾಯ್ತು ಭಯ, ಕಾವೇರಿ ಮಾತು ಕೇಳಿ ಮೋಸ ಹೋಗ್ತಾರಾ ಮನೆಮಂದಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಲಕ್ಷ್ಮೀ ನಾಪತ್ತೆಯಾಗಿದ್ದಾಳೆ. ವೈಷ್ಣವ್‌ ಹೆದರಿ ಕೂತಾಗಿನಿಂದಲೂ ಒಂದಲ್ಲಾ ಒಂದು ಅವಾಂತರ ಆಗುತ್ತಲೇ ಇದೆ. ಆದರೆ ಸುಪ್ರಿತಾ ಈಗ ಎಚ್ಚೆತ್ತುಕೊಂಡಿದ್ದಾಳೆ.

ಇದ್ದಕ್ಕಿದ್ದಂತೆ ನಾಪತ್ತೆಯಾದ ಲಕ್ಷ್ಮೀ
ಇದ್ದಕ್ಕಿದ್ದಂತೆ ನಾಪತ್ತೆಯಾದ ಲಕ್ಷ್ಮೀ (ಕಲರ್ಸ್‌ ಕನ್ನಡ)

ಲಕ್ಷ್ಮೀಗೆ ಕೊಲೆ ಬೆದರಿಕೆ ಕರೆ ಬರ್ತಾ ಇರೋದನ್ನು ಅವಳು ಮನೆಯಲ್ಲಿ ಎಲ್ಲರ ಎದುರು ಹೇಳುತ್ತಾಳೆ. ಆಗಿನಿಂದ ಮನೆಯಲ್ಲಿ ಎಲ್ಲರಿಗೂ ಭಯ ಶುರುವಾಗಿದೆ. ಆದರೆ ಕಾವೇರಿ ಮಾತ್ರ ಇಲ್ಲ ಹಾಗೆಲ್ಲ ಏನೇನೋ ಆಗೋಕೆ ಸಾಧ್ಯಾನೇ ಇಲ್ಲ ಎಂದು ಹೇಳುತ್ತಿದ್ದಾಳೆ. ಯಾಕೆಂದರೆ ಅವಳು ಅಂದುಕೊಂಡದ್ದನ್ನು ಮಾಡಬೇಕು ಎಂದಾದರೆ ಲಕ್ಷ್ಮೀ ಹೇಳಿದ್ದೆಲ್ಲ ಸುಳ್ಳು ಎಂದು ಸಾಬೀತು ಮಾಡಬೇಕು. ಅದಕ್ಕಾಗಿ ಅವಳು ಪ್ರಯತ್ನಪಡುತ್ತಿದ್ದಾಳೆ. ಹೀಗಿರುವಾಗ ವೈಷ್ಣವ್‌ಗೂ ತಾನು ಯಾರನ್ನು ನಂಬಬೇಕು? ಯಾರನ್ನು ಬಿಡಬೇಕು? ಎಂದೇ ತೋಚುತ್ತಿಲ್ಲ. ಅವನು ಗೊಂದಲದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಾ ಇದ್ದಾನೆ.

ಸುಪ್ರಿತಾಗೆ ಎಲ್ಲ ಗೊತ್ತಿದೆ

ಇನ್ನು ಸುಪ್ರಿತಾಗೆ ಎಲ್ಲ ಅರ್ಥ ಆಗಿದೆ. ಇದು ಕಾವೇರಿಯದೇ ಐಡಿಯಾ ಎಂದು ಅವಳಿಗೆ ಗೊತ್ತಾಗಿದೆ. ಕಾವೇರಿ ಏನು ಬೇಕಾದ್ರೂ ಮಾಡ್ತಾಳೆ. ತನ್ನ ತಾಯಿಯನ್ನು ಕೊಂದದ್ದೂ ಅವಳೇ ಅನ್ನೋದು ಸುಪ್ರಿತಾಗೆ ಗೊತ್ತಿತ್ತು. ಅದನ್ನು ಎಲ್ಲರ ಮುಂದೆ ಹೇಳಲು ಅವಳಿಗೆ ಇಷ್ಟ ಇರಲಿಲ್ಲ. ಆದರೂ ಮತ್ತೆ ಹೇಳಬೇಕಾಗಿ ಬಂತು. ತನ್ನ ಅಣ್ಣ ಹತ್ತಿರ ಅವಳು ಹೇಳುತ್ತಾಳೆ. "ಈಗ ನಾನು ಲಕ್ಷ್ಮೀನಾ ಹೊರಗಡೆ ಎಲ್ಲೂ ಕಳಿಸೋದಿಲ್ಲ. ಅವಳು ಈಗ ಮನೆಯಲ್ಲೇ ಸೇಫಾಗಿ ಇರ್ಬೇಕು. ಇಲ್ಲ ಅಂದ್ರೆ ಇನ್ನೊಂದು ದಿನ ಅಮ್ಮನನ್ನು ಕಳ್ಕೊಂಡಾಗ ಅತ್ಯಲ್ಲ ಆ ರೀತಿ ಅಳಬೇಕಾಗುತ್ತದೆ" ಎಂದಳು.

ವೈಷ್ಣವ್ ಆಲೋಚನೆ

ಇನ್ನು ವೈಷ್ಣವ್‌ ಇದ್ಯಾವುದು ಅರ್ಥ ಆಗದೆ ಅಲ್ಲಿಂದ ಹೋಗುತ್ತಾನೆ. ಮನೆಯಲ್ಲಿ ದಿನವೂ ಒಂದಲ್ಲ ಒಂದು ರೀತಿಯ ಗಲಾಟೆ ನೋಡಿ ಅವನು ಬೇಸತ್ತು ಹೋಗಿದ್ದಾನೆ. "ಇನ್ನು ಮುಂದೆ ನಾನು ಲಕ್ಷ್ಮೀನಾ ಚನಾಗಿ ನೋಡಿಕೊಂಡ್ರೆ ಅಷ್ಟೇ ಸಾಕಾಗಿದೆ ನನಗೆ" ಎಂದುಕೊಳ್ಳುತ್ತಾನೆ.

ಇದ್ದಕ್ಕಿದ್ದಂತೆ ಲಕ್ಷ್ಮೀ ಮಾಯ

ಅವನು ಆಲೋಚನೆ ಮಾಡುತ್ತ ತನ್ನ ರೂಮ್‌ ಹತ್ತಿರ ಹೋಗುತ್ತಾನೆ. ಹಾಗೇ ಒಳಗಡೆ ಹೋಗಿ ನೋಡಿದಾಗ ಅಲ್ಲಿ ಲಕ್ಷ್ಮೀ ಕಾಣಿಸೋದಿಲ್ಲ. ಒಂದೆರಡು ಬಾರಿ ಅವಳ ಹೆಸರನ್ನು ಹಿಡಿದು ಹೋಗುತ್ತಾನೆ. ಆದರೆ ಯಾವ ಉತ್ತರವೂ ಬರೋದಿಲ್ಲ. ಅವನಿಗೆ ಭಯವಾಗಲು ಶುರುವಾಗುತ್ತದೆ. ಏನು ಮಾಡಬೇಕು ಎಂದು ತಿಳಿಯೋದಿಲ್ಲ. “ಮನೆಯಲ್ಲಿ ಈ ರೀತಿ ಗಲಾಟೆ ನಡಿತಾ ಇದೆ. ಇಂತಹ ಸಂದರ್ಭದಲ್ಲಿ ಇವರು ಮಾಯ ಆಗಿದ್ದಾರೆ. ನಾನಾದ್ರೂ ಏನ್ ಮಾಡ್ಲಿ ಈಗ?” ಅಂತ ಆಲೋಚನೆ ಮಾಡುತ್ತಾ ಹೊರಗಡೆ ಹೋಗಿ ವಿಷಯ ತಿಳಿಸಿದ್ದಾರೆ.

ಎಲ್ಲರೂ ಕಂಗಾಲಾಗಿದ್ದಾರೆ
ಇನ್ನು ಲಕ್ಷ್ಮೀ ಕಾಣಿಸುತ್ತಿಲ್ಲ ಎಂದ ತಕ್ಷಣ ಎಲ್ಲರೂ ಗಾಬರಿಯಾಗಿದ್ದಾರೆ. ಆದರೆ ಯಾರಿಗೂ ಅವಳು ಎಲ್ಲಿ ಹೋಗಿದ್ದಾಳೆ ಎಂದು ತಿಳಿಯುವುದಿಲ್ಲ. ಇತ್ತ ಅವಳನ್ನು ಒಂದು ಮೂಟೆಯಲ್ಲಿ ಕಟ್ಟಿ ಕೆಳಗಡೆ ಇಳಿಸುತ್ತಾ ಇರುತ್ತಾರೆ. ರೌಡಿಗಳು ಅವಳನ್ನು ಹೊತ್ತೊಯ್ದಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎಡರು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್‌ನ ಕಥೆಗಳೂ ಕುತೂಹಲಕಾರಿಯಾಗಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner