Guruprasad gets Bail: ಚೆಕ್‌ ಬೌನ್ಸ್‌ ಪ್ರಕರಣ..ಅರೆಸ್ಟ್‌ ಆದ ಕೆಲವೇ ಗಂಟೆಗಳಲ್ಲಿ ನಿರ್ದೇಶಕ ಗುರುಪ್ರಸಾದ್‌ಗೆ ಜಾಮೀನು
ಕನ್ನಡ ಸುದ್ದಿ  /  ಮನರಂಜನೆ  /  Guruprasad Gets Bail: ಚೆಕ್‌ ಬೌನ್ಸ್‌ ಪ್ರಕರಣ..ಅರೆಸ್ಟ್‌ ಆದ ಕೆಲವೇ ಗಂಟೆಗಳಲ್ಲಿ ನಿರ್ದೇಶಕ ಗುರುಪ್ರಸಾದ್‌ಗೆ ಜಾಮೀನು

Guruprasad gets Bail: ಚೆಕ್‌ ಬೌನ್ಸ್‌ ಪ್ರಕರಣ..ಅರೆಸ್ಟ್‌ ಆದ ಕೆಲವೇ ಗಂಟೆಗಳಲ್ಲಿ ನಿರ್ದೇಶಕ ಗುರುಪ್ರಸಾದ್‌ಗೆ ಜಾಮೀನು

ಮನೆ ಹರಾಜಿಗೆ ಬಂದಿದೆ ಎಂದು ಗುರುಪ್ರಸಾದ್‌ 2015ರಲ್ಲಿ 30 ಲಕ್ಷ ರೂಪಾಯಿ ಸಾಲ ಪಡೆದಿದ್ದರಂತೆ. ಆದರೆ ಕೊಟ್ಟ ಸಾಲವನ್ನು ಹಿಂದಿರುಗಿ ಕೇಳಿದಾಗಲೆಲ್ಲಾ ಗುರುಪ್ರಸಾದ್‌, ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು ಎಂದು ಶ್ರೀನಿವಾಸ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಿರ್ದೇಶಕನ ವರ್ತನೆಯಿಂದ ಬೇಸತ್ತ ಶ್ರೀನಿವಾಸ್‌, ಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಿರ್ದೇಶಕ ಗುರುಪ್ರಸಾದ್
ನಿರ್ದೇಶಕ ಗುರುಪ್ರಸಾದ್ ( PC: Director Guruprasad Facebook)

ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಗಿರಿನಗರ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ 'ಮಠ' ಸಿನಿಮಾ ಖ್ಯಾತಿಯ ಗುರುಪ್ರಸಾದ್‌, ಅರೆಸ್ಟ್‌ ಆದ ಕೆಲವೇ ಗಂಟೆಗಳಲ್ಲಿ ಜಾಮೀನು ಪಡೆದು ಹೊರ ಬಂದಿದ್ದಾರೆ. ವ್ಯಕ್ತಿಯೊಬ್ಬರ ಬಳಿ ಗುರುಪ್ರಸಾದ್‌ ಸಾಲ ಪಡೆದಿದ್ದು ಅದಕ್ಕೆ ಪ್ರತಿಯಾಗಿ ಚೆಕ್‌ ನೀಡಿದ್ದರು. ಆದರೆ ಅದು ಬೌನ್ಸ್‌ ಆಗಿದ್ದರಿಂದ ಪೊಲೀಸರು ನಿರ್ದೇಶಕನನ್ನು ಬಂಧಿಸಿದ್ದರು.

2015-16 ರಲ್ಲಿ ನಿರ್ದೇಶಕ ಗುರುಪ್ರಸಾದ್‌ ಶ್ರೀನಿವಾಸ್‌ ಎಂಬುವರ ಬಳಿ 30 ಲಕ್ಷ ರೂಪಾಯಿ ಸಾಲ ಪಡೆದಿದ್ದರಂತೆ. ಆದರೆ ಬಹಳ ವರ್ಷಗಳಾದರೂ ಅವರು ಸಾಲವನ್ನು ಹಿಂದಿರುಗಿಸಿರಲಿಲ್ಲ ಎಂದು ಶ್ರೀನಿವಾಸ್‌ ಆರೋಪಿಸಿದ್ದರು. ನಿರ್ದೇಶಕ ಗುರುಪ್ರಸಾದ್‌, ಸಾಲ ಪಡೆಯುವಾಗ ಶ್ರೀನಿವಾಸ್‌ ಅವರಿಗೆ ಮೂರು ಚೆಕ್‌ಗಳನ್ನು ನೀಡಿದ್ದಾರೆ. ಆದರೆ ಚೆಕ್‌ ಬೌನ್ಸ್‌ ಆದ ಕಾರಣ ಶ್ರೀನಿವಾಸ್‌ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ಗಿರಿ ನಗರ ಪೊಲೀಸರು ಗುರುಪ್ರಸಾದ್‌ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆದರೆ ಅರೆಸ್ಟ್‌ ಆದ ಕೆಲವೇ ಗಂಟೆಗಳಲ್ಲಿ ನಿರ್ದೇಶಕ ಗುರುಪ್ರಸಾದ್‌ಗೆ ಜಾಮೀನು ದೊರೆತಿದೆ. 21ನೇ ಎಸಿಎಂಎಂ ನ್ಯಾಯಾಲಯ ಗುರುಪ್ರಸಾದ್‌ಗೆ ಜಾಮೀನು ಮಂಜೂರು ಮಾಡಿದೆ.

ತಮ್ಮ ಮನೆ ಹರಾಜಿಗೆ ಬಂದಿದೆ ಎಂದು ಗುರುಪ್ರಸಾದ್‌ 2015ರಲ್ಲಿ 30 ಲಕ್ಷ ರೂಪಾಯಿ ಸಾಲ ಪಡೆದಿದ್ದರಂತೆ. ಆದರೆ ಕೊಟ್ಟ ಸಾಲವನ್ನು ಹಿಂದಿರುಗಿ ಕೇಳಿದಾಗಲೆಲ್ಲಾ ಗುರುಪ್ರಸಾದ್‌, ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು ಎಂದು ಶ್ರೀನಿವಾಸ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಿರ್ದೇಶಕನ ವರ್ತನೆಯಿಂದ ಬೇಸತ್ತ ಶ್ರೀನಿವಾಸ್‌, ಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಗುರುಪ್ರಸಾದ್‌ಗೆ ನೋಟೀಸ್‌ ನೀಡಿದ್ದರೂ ಆತ ವಿಚಾರಣೆಗೆ ಹಾಜರಾಗಿರಲಿಲ್ಲ. ಆದ್ದರಿಂದ ನಿರ್ದೇಶಕನ ವಿರುದ್ಧ ಕೋರ್ಟ್‌, ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಫೆಬ್ರವರಿ 7ಕ್ಕೆ ಮುಂದೂಡಿದೆ.

ಗುರುಪ್ರಸಾದ್‌ ಅವರ ಪೂರ್ತಿ ಹೆಸರು ಗುರುಪ್ರಸಾದ್‌ ರಾಮಚಂದ್ರ ಶರ್ಮ. 2006 ರಲ್ಲಿ 'ಮಠ' ಚಿತ್ರದ ಮೂಲಕ ಈತ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾದರು. ಆ ಚಿತ್ರದಲ್ಲಿ ಅವರೂ ಪಾತ್ರ ಮಾಡಿದ್ದರು. 'ಮಠ' ಚಿತ್ರದಲ್ಲಿ ಜಗ್ಗೇಶ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ಅವರು ಮತ್ತೆ ಜಗ್ಗೇಶ್‌ ಜೊತೆ 'ಎದ್ದೇಳು ಮಂಜುನಾಥ', ಧನಂಜಯ್‌ ಹಾಗೂ ರಂಗಾಯಣ ರಘು ಜೊತೆ 'ಡೈರೆಕ್ಟರ್ಸ್‌ ಸ್ಪೆಷಲ್‌', ಧನಂಜಯ್‌ ಹಾಗೂ ಸಂಗೀತಾ ಭಟ್‌ ಜೊತೆ 'ಎರಡನೇ ಸಲ' ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸದ್ಯಕ್ಕೆ ಗುರುಪ್ರಸಾದ್‌ ನಿರ್ದೇಶನದ 'ಅದೆಮಾ', 'ರಂಗನಾಯಕ' ಚಿತ್ರೀಕರಣದ ಹಂತದಲ್ಲಿದೆ. ಮೈಲಾರಿ, ಹುಡುಗರು, ವಿಶಲ್‌, ಜಿಗರ್ಥಂಡ, ಖುಷ್ಕ, ಬಡವ ರಾಸ್ಕಲ್‌, ಬಾಡಿಗಾರ್ಡ್‌ ಸಿನಿಮಾಗಳಲ್ಲಿ ಗುರುಪ್ರಸಾದ್‌ ನಟಿಸಿದ್ದಾರೆ. ಕಿರುತೆರೆಯ ಥಕ ಧಿಮಿ ಥಾ ಡ್ಯಾನ್ಸಿಂಗ್‌ ಸ್ಟಾರ್‌, ಪುಟಾಣಿ ಪಂಟ್ರು 2, ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌, ಭರ್ಜರಿ ಕಾಮಿಡಿ ಕಾರ್ಯಕ್ರಮಗಳಲ್ಲಿ ಜಡ್ಜ್‌ ಆಗಿ, ಬಿಗ್‌ ಬಾಸ್‌ ಕನ್ನಡ ಸೀಸನ್‌ 2ರಲ್ಲಿ ವೈಲ್ಡ್‌ ಕಾರ್ಡ್‌ ಕಂಟಸ್ಟಂಟ್‌ ಆಗಿಯೂ ಗುರುಪ್ರಸಾದ್‌ ಭಾಗವಹಿಸಿದ್ದಾರೆ.

Whats_app_banner