‘ಒಬ್ಬ ನಟ ಮಗಳೆಂದು ಕರೆದು ಅತ್ಯಾಚಾರ ಎಸಗಿದ, ಇನ್ನೊಬ್ಬ ನಟ ಸೆಕ್ಸ್‌ ಇಷ್ಟಾನಾ ಎಂದ’; ಚಿತ್ರರಂಗದ ಕರಾಳತೆ ಬಿಚ್ಚಿಟ್ಟ ನಟಿ ರೇವತಿ ಸಂಪತ್-mollywood news actress revathy sampath accuses amma gen secretary siddique and riyaz khan of sexual abuse mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಒಬ್ಬ ನಟ ಮಗಳೆಂದು ಕರೆದು ಅತ್ಯಾಚಾರ ಎಸಗಿದ, ಇನ್ನೊಬ್ಬ ನಟ ಸೆಕ್ಸ್‌ ಇಷ್ಟಾನಾ ಎಂದ’; ಚಿತ್ರರಂಗದ ಕರಾಳತೆ ಬಿಚ್ಚಿಟ್ಟ ನಟಿ ರೇವತಿ ಸಂಪತ್

‘ಒಬ್ಬ ನಟ ಮಗಳೆಂದು ಕರೆದು ಅತ್ಯಾಚಾರ ಎಸಗಿದ, ಇನ್ನೊಬ್ಬ ನಟ ಸೆಕ್ಸ್‌ ಇಷ್ಟಾನಾ ಎಂದ’; ಚಿತ್ರರಂಗದ ಕರಾಳತೆ ಬಿಚ್ಚಿಟ್ಟ ನಟಿ ರೇವತಿ ಸಂಪತ್

ನಟಿ ರೇವತಿ ಸಂಪತ್, ಮಾಲಿವುಡ್‌ನ ಹಿರಿಯ ನಟ ಸಿದ್ದಿಕಿ ಮತ್ತು ಬಹುಭಾಷಾ ನಟ ರಿಯಾಜ್ ಖಾನ್ ವಿರುದ್ಧ ‌ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದಾರೆ. ನಟಿಯ ಹೇಳಿಕೆಯಿಂದ ಮಲಯಾಳಂ ಇಂಡಸ್ಟ್ರಿಯಲ್ಲೀಗ ಇದೇ ಚರ್ಚೆಯ ವಿಷಯವಾಗಿದೆ.

ನಟಿ ರೇವತಿ ಸಂಪತ್, ಮಾಲಿವುಡ್‌ನ ಹಿರಿಯ ನಟ ಸಿದ್ದಿಕಿ ಮತ್ತು ಬಹುಭಾಷಾ ನಟ ರಿಯಾಜ್ ಖಾನ್ ವಿರುದ್ಧ ‌ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದಾರೆ.
ನಟಿ ರೇವತಿ ಸಂಪತ್, ಮಾಲಿವುಡ್‌ನ ಹಿರಿಯ ನಟ ಸಿದ್ದಿಕಿ ಮತ್ತು ಬಹುಭಾಷಾ ನಟ ರಿಯಾಜ್ ಖಾನ್ ವಿರುದ್ಧ ‌ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದಾರೆ.

Mollywood news: ಜಸ್ಟಿಸ್‌ ಹೇಮಾ ಸಮಿತಿ ಸಿದ್ಧಪಡಿಸಿರುವ ವರದಿ ಮಲಯಾಳಂ ಚಿತ್ರರಂಗದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಉದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಸ್ಟಿಂಗ್ ಕೌಚ್‌ನಿಂದ ಹಿಡಿದು ತಾರತಮ್ಯದವರೆಗೆ ಮಹಿಳೆಯರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಮಾ ಸಮಿತಿ ಹೇಳಿದೆ. ಈ ಹಿನ್ನೆಲೆಯಲ್ಲಿ ಮಲಯಾಳಂ ನಟಿ ರೇವತಿ ಸಂಪತ್, ಮಾಲಿವುಡ್‌ನ ಹಿರಿಯ ನಟ ಸಿದ್ದಿಕಿ ಮತ್ತು ಬಹುಭಾಷಾ ನಟ ರಿಯಾಜ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಟಿಯ ಹೇಳಿಕೆಯಿಂದ ಮಲಯಾಳಂ ಇಂಡಸ್ಟ್ರಿಯಲ್ಲೀಗ ಇದೇ ಚರ್ಚೆಯ ವಿಷಯವಾಗಿದೆ.

ನಟಿ ರೇವತಿ ಸಂಪತ್ ಮಾಡಿರುವ ಆರೋಪ ಇದೀಗ ಮಲಯಾಳಿ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ. ಪ್ರಸ್ತುತ AMMA ( ಮಲಯಾಳಂ ಚಲನಚಿತ್ರ ಕಲಾವಿದರ ಸಂಘಕ್ಕೆ) ಪ್ರಧಾನ ಕಾರ್ಯದರ್ಶಿಯಾಗಿರುವ ಸಿದ್ದಿಕಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂಡಸ್ಟ್ರಿಯಲ್ಲಿ ಎಲ್ಲರಿಗೂ ನ್ಯಾಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದ ಸಿದ್ದಿಕಿ ಕೆಲವೇ ಗಂಟೆಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಮೋಹನ್ ಲಾಲ್ ಅವರಿಗೆ ಪತ್ರದ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ನಟ ಸಿದ್ಧಿಕಿ ವಿರುದ್ಧ ನಟಿ ರೇವತಿ ಸಂಪತ್‌ 2019ರಲ್ಲಿಯೇ ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದರು. ಆದರೆ, ಆವತ್ತು ಈ ಪ್ರಕರಣ ಹೆಚ್ಚು ಕಾವು ಪಡೆದಿರಲಿಲ್ಲ. ಇದೀಗ ಹೇಮಾ ಸಮಿತಿಯ ವರದಿ ಸಿದ್ಧವಾದ ನಂತರ ಇದೀಗ ಮತ್ತೊಮ್ಮೆ ಸಿದ್ದಿಕಿ ವಿರುದ್ಧ ಕಾಮೆಂಟ್ಸ್‌ ಮಾಡಿದ್ದಾರೆ ರೇವತಿ. ಅಷ್ಟಕ್ಕೂ 2016ರಲ್ಲಿ ಹೊಟೇಲ್‌ನಲ್ಲಿ ನಡೆದಿದ್ದೇನು? ಇಲ್ಲಿದೆ ನೋಡಿ ರೇವತಿ ಹೇಳಿಕೆ.

ಸೋಷಿಯಲ್‌ ಮೀಡಿಯಾ ಮೂಲಕ ಸಂಪರ್ಕ

"2016ರಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಸಿದ್ದಿಕಿ ನನ್ನನ್ನು ಸಂಪರ್ಕಿಸಿದ್ದರು. ನಟನೆಯಲ್ಲಿ ನನ್ನ ಆಸಕ್ತಿಯನ್ನು ಗಮನಿಸಿದ ಸಿದ್ದಿಕಿ, ನನಗೆ ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡುವ ನೆಪದಲ್ಲಿ ಸಲುಗೆ ಬೆಳೆಸಿದ್ದರು. ಸಿದ್ದಿಕಿ ಅಭಿನಯದ ಸುಖಮೈರಿಕಟ್ಟೆ ಚಿತ್ರದ ಪ್ರೀಮಿಯರ್ ಶೋಗೂ ನನ್ನನ್ನು ಆಹ್ವಾನಿಸಿದ್ದರು. ಕಾರ್ಯಕ್ರಮದ ನಂತರ ಅವರು ನನ್ನನ್ನು ತಿರುವನಂತಪುರದ ಹೋಟೆಲ್ ಮಸ್ಕಟ್‌ಗೆ ಕರೆದುಕೊಂಡು ಹೋಗಿ, ಹೋಟೆಲ್ ಕೋಣೆಯಲ್ಲಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸಿದ್ದಾನೆ,

ಮಗಳೆಂದು ಕರೆದು ಅತ್ಯಾಚಾರ..

"ತನ್ನ ಮಗನ ಚಿತ್ರದ ಆಫರ್ ಬಗ್ಗೆ ಮಾತನಾಡಲು ಸಿದ್ದಿಕಿ ತನ್ನನ್ನು ಸಂಪರ್ಕಿಸಿದ್ದ. ನನ್ನನ್ನು ಮಗಳೆಂದು ಕರೆದಿದ್ದರಿಂದ ನಾನು ಯಾವುದೇ ಅನುಮಾನ ಪಡದೆ ಅವರ ಜತೆಗಿದ್ದೆ. ಆದರೆ ಹೊಟೇಲ್‌ ರೂಮಿಗೆ ಕರೆದೊಯ್ದು ಮಾಡಬಾರದ ಕೆಲಸ ಮಾಡಿದ. ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ. ಅಂದಿನ ಆ ಭೀಕರ ಘಟನೆಯಿಂದ ನಾನು ಇನ್ನೂ ಚೇತರಿಸಿಕೊಂಡಿಲ್ಲ. ನಟ ಸಿದ್ದಿಕಿಯನ್ನು ತುಂಬಾ ನೀಚ ವ್ಯಕ್ತಿ. ನನ್ನ ಕೆಲವು ಸ್ನೇಹಿತೆಯರಿಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ರೇವತಿ ಸಂಪತ್‌ ಆರೋಪಿಸಿದ್ದಾರೆ.

ಸೆಕ್ಸ್‌ ಇಷ್ಟಾನಾ ಎಂದಿದ್ದ ರಿಯಾಜ್‌ ಖಾನ್‌

ಕನ್ನಡದಲ್ಲಿ ವೀರ ಕನ್ನಡಿಗ, ನಮ್ಮ ಬಸವ, ಮೋಹಿನಿ, ಬೊಂಬಾಟ್‌ ಕಾರ್‌, ಶೀಲಾ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ನಟ ರಿಯಾಜ್‌ ಖಾನ್‌ ವಿರುದ್ಧವೂ ನಟಿ ರೇವತಿ ಸಂಪತ್‌ ಗಂಭೀರ ಆರೋಪ ಮಾಡಿದ್ದಾರೆ. ಫೋಟೋಗ್ರಾಫರ್‌ ಒಬ್ಬರಿಂದ ನನ್ನ ನಂಬರ್‌ ಪಡೆದ ರಿಯಾಜ್‌ ಖಾನ್‌, ಫೋನ್‌ ಕಾಲ್‌ನಲ್ಲಿಯೇ ಸೆಕ್ಸ್‌ ಇಷ್ಟಾನಾ? ಎಂದು ಕೇಳಿದ್ದಾನೆ" ಎಂದು ರೇವತಿ ಮಾಧ್ಯಮಗಳ ಮುಂದೆ ಬಂದು ತಮಗಾದ ಕರಾಳ ಅನುಭವಗಳನ್ನು ತೆರೆದಿಟ್ಟಿದ್ದಾರೆ.