ಮಲಯಾಳಿ ಚಿತ್ರೋದ್ಯಮದಲ್ಲಿ ನಡೆಯುತ್ತೆ 17 ರೀತಿಯ ಲೈಂಗಿಕ ಕಿರುಕುಳ!; ಹೇಮಾ ಸಮಿತಿ ವರದಿಯಲ್ಲಿರುವುದು ನಿಜ ಎಂದ ಮಿಲನ ನಟಿ ಪಾರ್ವತಿ
ಕನ್ನಡ ಸುದ್ದಿ  /  ಮನರಂಜನೆ  /  ಮಲಯಾಳಿ ಚಿತ್ರೋದ್ಯಮದಲ್ಲಿ ನಡೆಯುತ್ತೆ 17 ರೀತಿಯ ಲೈಂಗಿಕ ಕಿರುಕುಳ!; ಹೇಮಾ ಸಮಿತಿ ವರದಿಯಲ್ಲಿರುವುದು ನಿಜ ಎಂದ ಮಿಲನ ನಟಿ ಪಾರ್ವತಿ

ಮಲಯಾಳಿ ಚಿತ್ರೋದ್ಯಮದಲ್ಲಿ ನಡೆಯುತ್ತೆ 17 ರೀತಿಯ ಲೈಂಗಿಕ ಕಿರುಕುಳ!; ಹೇಮಾ ಸಮಿತಿ ವರದಿಯಲ್ಲಿರುವುದು ನಿಜ ಎಂದ ಮಿಲನ ನಟಿ ಪಾರ್ವತಿ

ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳಾ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಹೇಗೆಲ್ಲ ನಡೆಯುತ್ತೆ ಎಂಬ ಬಗ್ಗೆ ವಿಸ್ತೃತ ತನಿಖಾ ವರದಿಯನ್ನು ಜಸ್ಟಿಸ್‌ ಹೇಮಾ ಸಮಿತಿ, ಕೇರಳ ಸರ್ಕಾರಕ್ಕೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಪಾರ್ವತಿ, ಮಾಫಿಯಾ ಗ್ಯಾಂಗ್ ಮಲಯಾಳಂ ಚಿತ್ರರಂಗವನ್ನು ನಿಯಂತ್ರಿಸುತ್ತಿದೆ

ಮಲಯಾಳಿ ಚಿತ್ರೋದ್ಯಮದಲ್ಲಿ ನಡೆಯುತ್ತೆ 17 ರೀತಿಯ ಲೈಂಗಿಕ ಕಿರುಕುಳ!; ಹೇಮಾ ಸಮಿತಿ ವರದಿಯಲ್ಲಿರುವುದು ನಿಜ ಎಂದ ಮಿಲನ ನಟಿ ಪಾರ್ವತಿ
ಮಲಯಾಳಿ ಚಿತ್ರೋದ್ಯಮದಲ್ಲಿ ನಡೆಯುತ್ತೆ 17 ರೀತಿಯ ಲೈಂಗಿಕ ಕಿರುಕುಳ!; ಹೇಮಾ ಸಮಿತಿ ವರದಿಯಲ್ಲಿರುವುದು ನಿಜ ಎಂದ ಮಿಲನ ನಟಿ ಪಾರ್ವತಿ

Malayalam film industry: ಮಲಯಾಳಂ ಚಿತ್ರೋದ್ಯಮದ ಬುಡವನ್ನೇ ಅಲುಗಾಡಿಸಿದೆ ಜಸ್ಟಿಸ್‌ ಹೇಮಾ ಸಮಿತಿಯ ವರದಿ. ಚಿತ್ರೋದ್ಯಮದಲ್ಲಿ ಮಹಿಳಾ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಹೇಗೆಲ್ಲ ನಡೆಯುತ್ತೆ ಎಂಬ ಬಗ್ಗೆ ವಿಸ್ತೃತ ತನಿಖಾ ವರದಿಯನ್ನು ಕೇರಳ ಸರ್ಕಾರಕ್ಕೆ ನೀಡಿದೆ. ಈ ಬೆನ್ನಲ್ಲೇ, ಸಾಕಷ್ಟು ಸೆಲೆಬ್ರಿಟಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆ ಪೈಕಿ ಮೂಲ ಮಲಯಾಳಿಯಾಗಿರುವ ಬಹುಭಾಷಾ ನಟಿ, ಕನ್ನಡದ ಮಿಲನ ಸಿನಿಮಾ ಖ್ಯಾತಿಯ ಪಾರ್ವತಿ ತಿರುವೊತ್ತು ಸಹ ಪ್ರತಿಕ್ರಿಯೆ ನೀಡಿದ್ದಾರೆ.

ಮಲಯಾಳಂ ಚಿತ್ರೋದ್ಯಮದಲ್ಲಿ ಲೈಂಗಿಕ ದೌರ್ಜನ್ಯ ಸೇರಿದಂತೆ ವಿವಿಧ ಅಪರಾಧಗಳನ್ನು ವಿವರಿಸುವ ಜಸ್ಟೀಸ್ ಹೇಮಾ ಸಮಿತಿಯ ವರದಿಯ ಪರಿಷ್ಕೃತ ಆವೃತ್ತಿ ಆಗಸ್ಟ್ 19ರಂದು ಬಿಡುಗಡೆ ಮಾಡಲಾಗಿದೆ. ಈ ಅಚ್ಚರಿಯ ವರದಿ ಬಹಿರಂಗವಾಗುತ್ತಿದ್ದಂತೆ, ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ) ನ ಸದಸ್ಯೆ, ನಟಿ ಪಾರ್ವತಿ ಪ್ರತಿಕ್ರಿಯೆ ನೀಡಿದ್ದಾರೆ. ಮಲಯಾಳಿ ಚಿತ್ರೋದ್ಯಮದಲ್ಲಿ ಪವರ್‌ಫುಲ್‌ ಲಾಬಿ ಇನ್ನೂ ಜೀವಂತವಾಗಿದೆ ಎಂದಿದ್ದಾರೆ. ಲೈಂಗಿಕ ಕಿರುಕುಳ ನೀಡುವವರ ವಿರುದ್ಧ ಮಹಿಳೆಯರು ದೂರು ನೀಡಲು ಮುಂದಾದರೆ, ಕೇರಳ ಸರ್ಕಾರ ಎಲ್ಲ ಸಹಾಯವನ್ನು ನೀಡುವುದಾಗಿ ಭರವಸೆ ನೀಡಬೇಕು ಎಂದೂ ಹೇಳಿದ್ದಾರೆ.

ದೂರುದಾರರ ಜತೆ ನಿಲ್ಲಲಿದ್ದೇವೆ..

ಈ ವರದಿಯಲ್ಲಿ ಯಾವುದೇ ವ್ಯಕ್ತಿಗಳ ಹೆಸರನ್ನು ಬಹಿರಂಗ ಪಡಿಸಲಾಗಿಲ್ಲ ಎಂಬುದರ ಕುರಿತು ಪ್ರತಿಕ್ರಿಯಿಸಿದ ಪಾರ್ವತಿ, ಹೇಮಾ ಸಮಿತಿಯ ವರದಿಯ ಉದ್ದೇಶವು ಯಾವುದೇ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸುವುದು ಮತ್ತು ಅವಮಾನಗೊಳಿಸುವುದು ಅಲ್ಲ. ಆದರೆ ಉದ್ಯಮದಲ್ಲಿ ಪ್ರತಿಯೊಬ್ಬರನ್ನು ರಕ್ಷಿಸುವ ಕೆಲಸವಾಗಬೇಕಿದೆ ಎಂಬುದನ್ನು ಸೂಚಿಸುತ್ತದೆ. ಆದಾಗ್ಯೂ, ಯಾರಾದರೂ ದೂರು ನೀಡಲು ಮುಂದಾದರೆ, WCC ಅವರ ಜತೆ ನಿಲ್ಲಲಿದೆ. ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ಕಾನೂನು ಕ್ರಮಕ್ಕೂ ಕೈ ಜೋಡಿಸಲಿದ್ದೇವೆ" ಎಂದಿದ್ದಾರೆ ಮಿಲನ ಸಿನಿಮಾ ನಟಿ ಪಾರ್ವತಿ.

ಜಸ್ಟಿಸ್‌ ಹೇಮಾ ಸಮಿತಿ ವರದಿಯಲ್ಲಿ ಏನಿದೆ?

ಮಲಯಾಳಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ನ್ಯಾಯಮೂರ್ತಿ ಹೇಮಾ ಸಮಿತಿ ವಿಚಾರಣೆ ನಡೆಸಿ ಕೇರಳ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಮಲಯಾಳಂ ಚಿತ್ರರಂಗದಲ್ಲಿ 17 ರೀತಿಯ ಲೈಂಗಿಕ ಕಿರುಕುಳಗಳು ನಡೆಯುತ್ತಿವೆ ಎಂದಿರುವ ಸಮಿತಿ, ಈ ವರದಿಯನ್ನು ಕೇರಳ ಸರ್ಕಾರ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಹಾಗಾದರೆ, ಆ ವರದಿಯಲ್ಲಿ ಏನೆಲ್ಲ ಅಂಶಗಳಿವೆ? ಇಲ್ಲಿದೆ ನೋಡಿ ಮಾಹಿತಿ.

  • ಸಹಕರಿಸಲು ಇಚ್ಛಿಸುವವರನ್ನು ಕೋಡ್‌ಗಳಲ್ಲಿ ಕರೆಯಲಾಗುತ್ತದೆ
  • ರಾಜಿ ಮಾಡಿಕೊಳ್ಳುವವರನ್ನು ಅಡ್ಜೆಸ್ಟ್‌ಮೆಂಟ್‌ ಆರ್ಟಿಸ್ಟ್‌ ಎಂದು ಕರೆಯಲಾಗುತ್ತೆ
  • ಅಪರಾಧ ಹಿನ್ನೆಲೆಯುಳ್ಳವರನ್ನು ಚಾಲಕರನ್ನಾಗಿ ನೇಮಿಸಬಾರದು.
  • ರಾಜಿ ಮಾಡಿಕೊಳ್ಳಲು ಒತ್ತಡ, ಅವಕಾಶ ಪಡೆಯಲು ರಾಜಿ ಮಾಡಿಕೊಳ್ಳಬೇಕುವಂತೆ ಒತ್ತಾಯ
  • ಪ್ರಾಣಭಯದಿಂದ ಪೊಲೀಸರ ಬಳಿ ಹೋಗುವಂತಿಲ್ಲ ಎಂದು ಬೆದರಿಕೆ
  • ಚಿತ್ರರಂಗದ ಗಣ್ಯರೇ ಈ ದಂಧೆಯನ್ನು ಅತಿಕ್ರಮಣ ಮಾಡಿದ್ದಾರೆ
  • ಚುಂಬನದ ದೃಶ್ಯಗಳಲ್ಲಿ ನಟಿಸಲು ಒತ್ತಡ, ನಿರಾಕರಿಸಿದರೆ ಬೆದರಿಕೆ
  • ನಗ್ನತೆಯನ್ನೂ ಪ್ರದರ್ಶಿಸಬೇಕು
  • ಮಾಫಿಯಾ ಗ್ಯಾಂಗ್ ಮಲಯಾಳಂ ಚಿತ್ರರಂಗವನ್ನು ನಿಯಂತ್ರಿಸುತ್ತಿದೆ
  • ಸಹಕರಿಸಿದವರಿಗೆ, ಈ ಪ್ರಕ್ರಿಯೆಯ ವಿರೋಧಿಗಳಿಗೆ ಸೈಬರ್ ದಾಳಿ ಬೆದರಿಕೆಗಳು
  • ರಾತ್ರಿ ಬಂದು ಕೊಠಡಿ ಬಡಿದರೆ ತೆರೆಯಬೇಕು.
  • ದೂರು ನೀಡಿದರೆ ಮನೆಯವರಿಗೆ ಬೆದರಿಕೆ
  • ತುಂಡುಡುಗೆ ಧರಿಸುವಂತೆ ಒತ್ತಾಯ

Whats_app_banner