ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಆಯ್ಕೆ; ಸಾರಾ ಗೋವಿಂದು ಬಣಕ್ಕೆ ಒಲಿದ ಜಯ
ಕನ್ನಡ ಸುದ್ದಿ  /  ಮನರಂಜನೆ  /  ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಆಯ್ಕೆ; ಸಾರಾ ಗೋವಿಂದು ಬಣಕ್ಕೆ ಒಲಿದ ಜಯ

ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಆಯ್ಕೆ; ಸಾರಾ ಗೋವಿಂದು ಬಣಕ್ಕೆ ಒಲಿದ ಜಯ

KFCC Election Result: ಈ ಸಲದ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಪ್ರದರ್ಶಕರ ವಲಯ ಮೀಸಲಾಗಿತ್ತು. ಅದರಂತೆ, ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳಿಂದ ಚಲನಚಿತ್ರ ವಾಣಿಜ್ಯ ಮಂಡಳಿಯ ವಿವಿಧ ಸ್ಥಾನಗಳಿಗೆ ಒಟ್ಟು 104 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆ ಪೈಕಿ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಆಯ್ಕೆ
ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಆಯ್ಕೆ

KFCC: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ವೈಭವಿ ಚಿತ್ರಮಂದಿರದ ಮಾಲೀಕ ಎಂ ನರಸಿಂಹಲು ಜಯ ಸಾಧಿಸಿ, ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ, ನಿರ್ಮಾಪಕರ ವಲಯದಿಂದ ಸಫೈರ್ ವೆಂಕಟೇಶ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ ಇದೇ ಮೊದಲ ಸಲ ಈ ಚುನಾವಣೆಯು ಇವಿಎಂನಲ್ಲಿ ಮತ ಚಲಾವಣೆ ಮಾಡುವ ಮೂಲಕ ನಡೆದಿದೆ.

ಈ ಸಲದ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಪ್ರದರ್ಶಕರ ವಲಯ ಮೀಸಲಾಗಿತ್ತು. ಅದರಂತೆ, ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳಿಂದ ಚಲನಚಿತ್ರ ವಾಣಿಜ್ಯ ಮಂಡಳಿಯ ವಿವಿಧ ಸ್ಥಾನಗಳಿಗೆ ಒಟ್ಟು 104 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆ ಪೈಕಿ ತುರುಸಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ನರಸಿಂಹಲು ಮತ್ತು ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಆರ್‌ ಸುಂದರ್‌ ರಾಜ್‌ ನಡುವಿನ ಸ್ಪರ್ಧೆಯಲ್ಲಿ ನರಸಿಂಹಲು ವಿಜೇತರಾದರು.

ಪ್ರಸಕ್ತ ವರ್ಷದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯನ್ನು ಶನಿವಾರ ನಡೆಸಲಾಗಿತ್ತು. ಬೆಂಗಳೂರಿನ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆದ ಮತದಾನ ಸಾರಾ ಗೋವಿಂದು ಮತ್ತು ಬಾಮಾ ಹರೀಶ್‌ ಬಣಗಳಿಗೆ ಪ್ರತಿಷ್ಠೆ ಕಣವಾಗಿತ್ತು. ಅದರಂತೆ ನಡೆದ ಚುನಾವಣೆಯಲ್ಲಿ ಸಾರಾ ಗೋವಿಂದು ಬಣ ಗೆಲುವಿನ ನಗೆ ಬೀರಿದೆ.

ಯಾರಿಗೆ ಯಾವ ಸ್ಥಾನ?

ನೂತನ ಅಧ್ಯಕ್ಷರಾಗಿ- ನರಸಿಂಹಲು. ಎಂ ಆಯ್ಕೆಯಾದರೆ, ನೂತನ ಉಪಾಧ್ಯಕ್ಷರಾಗಿ ಸಫೈರ್ ವೆಂಕಟೇಶ್ ನೇಮಕಗೊಂಡಿದ್ದಾರೆ. ನಿರ್ಮಾಪಕ ಕ್ಷೇತ್ರದ ಕಾರ್ಯದರ್ಶಿ ಸ್ಥಾನಕ್ಕೆ ಪ್ರವೀಣ್ ಕುಮಾರ್ ಆಯ್ಕೆಯಾಗಿದ್ದಾರೆ. ಹೆಚ್.ಸಿ ಶ್ರೀನಿವಾಸ್ ವಿತರಕ ವಲಯದ ಉಪಾಧ್ಯಕ್ಷರಾಗಿದ್ದಾರೆ. ವಿತರಕ ವಲಯ ಗೌರವ ಕಾರ್ಯದರ್ಶಿಯಾಗಿ ಕೆಸಿಎನ್ ಕುಮಾರ್ ಆಯ್ಕೆಯಾದರೆ, ಪ್ರದರ್ಶಕ ವಲಯ ಉಪಾಧ್ಯಕ್ಷ ಸ್ಥಾನವನ್ನು ರಂಗಪ್ಪ ಪಡೆದುಕೊಂಡಿದ್ದಾರೆ. ಪ್ರದರ್ಶಕ ವಲಯ ಕಾರ್ಯದರ್ಶಿ ಸ್ಥಾನಕ್ಕೆ ಕುಶಾಲ್.ಎಲ್ ಮತ್ತು ಖಜಾಂಚಿಯಾಗಿ ಚಿಂಗಾರಿ ಮಹದೇವ್ ಆಯ್ಕೆಯಾಗಿದ್ದಾರೆ.

Whats_app_banner