OTT Crime Thriller: ಇದು ಸೂಕ್ಷ್ಮ ಮನಸ್ಸಿನವರಿಗೆ ಮಾತ್ರ! ಒಟಿಟಿಯಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿದೆ ಈ ಕ್ರೈಂ ಥ್ರಿಲ್ಲರ್ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Ott Crime Thriller: ಇದು ಸೂಕ್ಷ್ಮ ಮನಸ್ಸಿನವರಿಗೆ ಮಾತ್ರ! ಒಟಿಟಿಯಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿದೆ ಈ ಕ್ರೈಂ ಥ್ರಿಲ್ಲರ್ ಸಿನಿಮಾ

OTT Crime Thriller: ಇದು ಸೂಕ್ಷ್ಮ ಮನಸ್ಸಿನವರಿಗೆ ಮಾತ್ರ! ಒಟಿಟಿಯಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿದೆ ಈ ಕ್ರೈಂ ಥ್ರಿಲ್ಲರ್ ಸಿನಿಮಾ

Sector 36 OTT: ಒಟಿಟಿ ಅಂಗಳದಲ್ಲಿ ಸದ್ದು ಮಾಡುತ್ತಿದೆ ಬಾಲಿವುಡ್‌ನ ಸೆಕ್ಟರ್‌ 36 ಸಿನಿಮಾ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಡಿಜಿಟಲ್‌ ವೇದಿಕೆಯಲ್ಲಿಯೂ ಕಮಾಲ್‌ ಮಾಡುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿರುವ ಈ ಸಿನಿಮಾ, ಸದ್ಯ ಟಾಪ್‌ ಟ್ರೆಂಡಿಂಗ್‌ನಲ್ಲಿದೆ.

ಒಟಿಟಿಯಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿದೆ ಸೆಕ್ಟರ್‌ 36 ಸಿನಿಮಾ
ಒಟಿಟಿಯಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿದೆ ಸೆಕ್ಟರ್‌ 36 ಸಿನಿಮಾ

OTT Crime Thriller: ಇತ್ತೀಚೆಗಷ್ಟೇ ಒಟಿಟಿ ಅಂಗಳಕ್ಕೆ ಬಂದಿಳಿದಿದ್ದ ಹಿಂದಿ ಸಿನಿಮಾವೊಂದು ಇದೀಗ ಟಾಪ್‌ ಟ್ರೆಂಡಿಂಗ್‌ನಲ್ಲಿದೆ. ಅದಕ್ಕೆ ಕಾರಣ ಸಿನಿಮಾದ ಗಟ್ಟಿ ಕಥೆ ಮತ್ತು ಮೇಕಿಂಗ್.‌ ಕ್ರೈಂ ಥ್ರಿಲ್ಲರ್‌ ಎಳೆಯ ಸೆಕ್ಟರ್‌ 36 ಸಿನಿಮಾವನ್ನು ಎಲ್ಲರೂ ನೋಡುವಂಥದ್ದಲ್ಲ. ಸೂಕ್ಷ್ಮ ಮನಸ್ಸಿನವರಿಗೆ ಈ ಸಿನಿಮಾ ಕೊಂಚ ಭಯ ತರಿಸಬಹುದು. ಆದರೆ, ಕ್ರೈಂ ಥ್ರಿಲ್ಲರ್‌ ಪ್ರಿಯರಿಗೆ ಈ ಸಿನಿಮಾ ಒಳ್ಳೆಯ ಟ್ರೀಟ್‌. ಬಾಲಿವುಡ್‌ ನಟ ವಿಕ್ರಾಂತ್ ಮಾಸ್ಸಿ ಈ ಹಿಂದೆ 12th ಫೇಲ್‌ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೀಗ ಸೆಕ್ಟರ್ 36 ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ.

ಸೂಕ್ಷ್ಮ ಮನಸ್ಸಿನವರಿಗೆ ಮಾತ್ರ!

ಸೆಕ್ಟರ್ 36 ಒಂದು ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದೆ. 2006 ರಲ್ಲಿ, ನಿಥಾರಿ ಕಿಲ್ಲಿಂಗ್ ಶೀರ್ಷಿಕೆಯಡಿಯಲ್ಲಿ ನೋಯ್ಡಾದಲ್ಲಿ ನಡೆದ ಕೊಲೆಗಳ ಸರಣಿಯನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಯಿತು. ಇದನ್ನು ಆದಿತ್ಯ ನಿಂಬಾಳ್ಕರ್ ನಿರ್ದೇಶಿಸಿದ್ದಾರೆ. ಈ ಸಿನಿಮಾ ನೋಡಿದ ಒಟಿಟಿ ಪ್ರೇಕ್ಷಕರು ಬೆಚ್ಚಿ ಬಿದ್ದಿದ್ದಾರೆ. ಅಷ್ಟೊಂದು ರೋಚಕ ದೃಶ್ಯಗಳು ನೋಡುಗರನ್ನು ಭಯಬೀತಗೊಳಿಸಿವೆ. ಆದರೆ, ಸೂಕ್ಷ್ಮ ಸಂವೇದನೆಯುಳ್ಳವರಿಗೆ ಈ ಸಿನಿಮಾ ಅಷ್ಟಾಗಿ ಹಿಡಿಸದು.

18 ವರ್ಷಗಳ ಹಿಂದೆ ದೆಹಲಿಯ ಗಡಿ ಪ್ರದೇಶವಾದ ನೋಯ್ಡಾದಲ್ಲಿ ನಡೆಯುವ ಈ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸೆ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ, ಮನುಷ್ಯನ ಮಾಂಸವನ್ನೇ ತಿನ್ನುವಷ್ಟು ಕ್ರೂರ ಮನಸ್ಥಿತಿಯ ಪಾತ್ರ ನಿಭಾಯಿಸಿದ್ದಾರೆ. ಮಾನವ ಮಾಂಸದ ರುಚಿಯನ್ನು ಅರಿತ ಪ್ರೇಮ್ ಸಿಂಗ್ (ವಿಕ್ರಾಂತ್) ಸ್ಲಂ ಪ್ರದೇಶದ ಪುಟ್ಟ ಮಕ್ಕಳನ್ನು ಅಪಹರಿಸಿ ತಿನ್ನುತ್ತಾನೆ. ಇದಕ್ಕೆ ಕಾರಣ ಏನು? ಎಂಬಿತ್ಯಾದಿ ವಿವರ ಬೇಕೆಂದರೆ, ಚಿತ್ರವನ್ನೇ ನೋಡಬೇಕು. ಅಂದಹಾಗೆ ಈ ಸಿನಿಮಾ ಸೆಪ್ಟೆಂಬರ್ 13 ರಿಂದ ನೆಟ್‌ಫ್ಲಿಕ್ಸ್ ಡಿಜಿಟಲ್ ಸ್ಟ್ರೀಮ್ ಆಗುತ್ತಿದೆ.

ಒಟಿಟಿಯಲ್ಲಿ ಟಾಪ್‌ ಟ್ರೆಂಡಿಂಗ್

ಒಟಿಟಿಯಲ್ಲಿ ಬಿಡುಗಡೆಯಾದ ಮೊದಲ ದಿನದಿಂದಲೂ ಟ್ರೆಂಡಿಂಗ್‌ನಲ್ಲಿರುವ ಸೆಕ್ಟರ್ 36 ಸಿನಿಮಾ, ಇನ್ನೂ ಅದೇ ಓಟವನ್ನು ಮುಂದುವರಿಸಿದೆ. ವಿಜಯ್ ಅಭಿನಯದ ಗೋಟ್ ಮತ್ತು ನಾನಿಯ ಸರಿಪೋದಾ ಶನಿವಾರಂ ಸಿನಿಮಾಗಳು ಒಟಿಟಿ ರಿಲೀಸ್ ಆಗಿದ್ದರೂ ಅವುಗಳಿಗೂ ಪೈಪೋಟಿ ನೀಡುತ್ತಿದೆ ಈ ಸಿನಿಮಾ. ಸದ್ಯ ಒಟಿಟಿ ಟ್ರೆಂಡಿಂಗ್‌ನಲ್ಲಿ ಸೆಕ್ಟರ್ 36 ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. ಈ ಸಿನಿಮಾ ಬರೋಬ್ಬರಿ ಹತ್ತು ಭಾಷೆಗಳಲ್ಲಿ ಸ್ಟ್ರೀಮ್‌ ಆಗುತ್ತಿದೆ.

10 ಭಾಷೆಗಳಲ್ಲಿ ಸ್ಟ್ರೀಮಿಂಗ್

ಸೆಕ್ಟರ್ 36 ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಹಿಂದಿ ಜೊತೆಗೆ ತೆಲುಗು, ತಮಿಳು, ಕನ್ನಡ, ಇಂಗ್ಲಿಷ್, ಬ್ರೆಜಿಲಿಯನ್ ಪೋರ್ಚುಗೀಸ್, ಯುರೋಪಿಯನ್ ಸ್ಪ್ಯಾನಿಷ್, ಇಂಡೋನೇಷಿಯನ್, ಪೋಲಿಷ್, ಸ್ಪ್ಯಾನಿಷ್, ಥಾಯ್ ಭಾಷೆಗಳಲ್ಲಿ ಲಭ್ಯವಿದೆ. ಇದನ್ನು ಇನ್ನೂ ನೋಡದವರಿಗೆ, ಅಂತಹ ಕ್ರೈಮ್ ಥ್ರಿಲ್ಲರ್‌ಗಳನ್ನು ಇಷ್ಟಪಡುವವರಿಗೆ ಸೆಕ್ಟರ್ 36 ಅತ್ಯುತ್ತಮ ಆಯ್ಕೆಯಾಗಿದೆ. ಈ ಚಿತ್ರವನ್ನು ಮ್ಯಾಡೋಕ್ ಫಿಲ್ಮ್ ಮತ್ತು ಝೀ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿದ್ದಾರೆ.

ಸೆಕ್ಟರ್ 36 ಚಿತ್ರದ ಅವಧಿ

ಸರಿಸುಮಾರು 124 ನಿಮಿಷಗಳ ಅವಧಿಯ ಸೆಕ್ಟರ್ 36 ಚಿತ್ರದಲ್ಲಿ ದೀಪಕ್ ಡೊಬ್ರಿಯಾಲ್, ಆಕಾಶ್ ಖುರಾನಾ, ದರ್ಶನ್ ಜರಿವಾಲಾ, ಇಹಾನಾ ಕೌರ್, ಬಹರುಲ್ ಇಸ್ಲಾಂ, ಇಪ್ಸಿತಾ ಚಕ್ರವರ್ತಿ, ತನುಶ್ರೀ ದಾಸ್, ಸುಬೀರ್, ಕುಚೋ ಅಹ್ಮದ್ ಇತರ ಪಾತ್ರಗಳಲ್ಲಿ ನಟಿಸಿದ್ದಾರೆ.

Whats_app_banner