ಕನ್ನಡ ಸುದ್ದಿ  /  ಮನರಂಜನೆ  /  Korean Movie: ಒಟಿಟಿಗೆ ಬಂತು ಥ್ರಿಲ್ಲರ್‌ ಹಾರರ್‌ ಕೊರಿಯನ್‌ ಸಿನಿಮಾ; ಬೆನ್ನ ಹುರಿಯಲ್ಲಿ ನಡುಕ ತರಿಸೋ ಭಯಾನಕ ಚಿತ್ರದ ಮಾಹಿತಿ

Korean Movie: ಒಟಿಟಿಗೆ ಬಂತು ಥ್ರಿಲ್ಲರ್‌ ಹಾರರ್‌ ಕೊರಿಯನ್‌ ಸಿನಿಮಾ; ಬೆನ್ನ ಹುರಿಯಲ್ಲಿ ನಡುಕ ತರಿಸೋ ಭಯಾನಕ ಚಿತ್ರದ ಮಾಹಿತಿ

House of the disappeared Movie in OTT: ಕೊರಿಯನ್ ಹಾರರ್ ಸಿನಿಮಾ 'ಹೌಸ್ ಆಫ್ ದಿ ಡಿಸ್ಪಿಯರ್ಡ್' ಒಟಿಟಿಯಲ್ಲಿ ಬಂದಿದೆ. ಇದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಏಳು ವರ್ಷಗಳ ನಂತರ ಭಾರತದಲ್ಲಿ ಒಟಿಟಿಗೆ ಆಗಮಿಸಿದೆ.

Korean Movie: ಒಟಿಟಿಗೆ ಬಂತು ಥ್ರಿಲ್ಲರ್‌ ಹಾರರ್‌ ಕೊರಿಯನ್‌ ಸಿನಿಮಾ
Korean Movie: ಒಟಿಟಿಗೆ ಬಂತು ಥ್ರಿಲ್ಲರ್‌ ಹಾರರ್‌ ಕೊರಿಯನ್‌ ಸಿನಿಮಾ

House of the disappeared Movie in OTT: ಕೊರಿಯನ್ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಪ್ರಪಂಚದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿದೆ. ಈಗಿನ ಯುವ ಜನತೆಯಂತೂ ಕೊರಿಯನ್‌ ಡ್ರಾಮಾಗಳ ಕುರಿತು ವಿಶೇಷ ಪ್ರೀತಿ, ಹುಚ್ಚು ಹೊಂದಿದ್ದಾರೆ. ಅಲ್ಲಿನ ಕಾಲೇಜುಗಳು, ಶ್ರೀಮಂತಿಕೆ, ವಿನೂತನ ಕಥೆಗಳು ಯುವ ಜನತೆಗೆ ಇಷ್ಟವಾಗುತ್ತವೆ. ಅಲ್ಲಿ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಕಾಲೇಜು ಡ್ರಾಮಾಗಳನ್ನು ಹೆಚ್ಚಾಗಿ ಬಿಡುಗಡೆ ಮಾಡಲಾಗುತ್ತದೆ. ಇದೇ ಸಮಯದಲ್ಲಿ ಹಾರರ್‌, ಥ್ರಿಲ್ಲರ್‌ ಸಿನಿಮಾಗಳನ್ನೂ ಕೊರಿಯನ್‌ ಸಿನಿಮಾ ನಿರ್ದೇಶಕರು ಹೊರತರುತ್ತಾರೆ. ಹೌಸ್‌ ಆಫ್‌ ಡಿಸ್‌ ಅಪಿಯರ್ಡ್‌ ಅನ್ನೋದು ಕೊರಿಯದ ಜನಪ್ರಿಯ ಹಾರರ್‌ ಸಿನಿಮಾ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸುಮಾರು ಏಳು ವರ್ಷಗಳು ಕಳೆದಿವೆ. ಇದೀಗ ಭಾರತದಲ್ಲಿ ಒಟಿಟಿಯಲ್ಲಿ ಲಭ್ಯವಿದೆ. ಈ ಕೊರಿಯನ್‌ ಸಿನಿಮಾ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ? ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

ಹೌಸ್‌ ಆಫ್‌ ದಿ ಡಿಸ್ಅಪಿಯರ್ಡ್‌ ಸಿನಿಮಾ

ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಹೌಸ್ ಆಫ್ ದಿ ಡಿಸ್ಪಿಯರ್ಡ್ ಚಲನಚಿತ್ರವು ಈಗ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಕೊರಿಯನ್ ಸಿನಿಮಾವು ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಕನ್ನಡಕ್ಕೆ ಡಬ್‌ ಆಗಿಲ್ಲ.

'ಹೌಸ್ ಆಫ್ ದಿ ಡಿಸ್ಪಿಯರ್ಡ್' ಚಿತ್ರವು 2017 ರಲ್ಲಿ ಕೊರಿಯನ್ ಭಾಷೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಆಗಿ ತೆರೆಕಂಡ ಈ ಸಿನಿಮಾ ಬಹಳ ಜನಪ್ರಿಯವಾಯಿತು. ಥಿಯೇಟ್ರಿಕಲ್ ಬಿಡುಗಡೆಯಾದ ಏಳು ವರ್ಷಗಳ ನಂತರ, ಚಲನಚಿತ್ರವು ಭಾರತದಲ್ಲಿ ಪ್ರೈಮ್ ವಿಡಿಯೋಗೆ ಆಗಮಿಸಿದೆ.

ಟ್ರೆಂಡಿಂಗ್​ ಸುದ್ದಿ

ಹೌಸ್‌ ಆಫ್‌ ದಿ ಡಿಸ್‌ಅಪಿಯರ್ಡ್‌ ಸಿನಿಮಾದ ಕುರಿತು

ಹೌಸ್ ಆಫ್ ದಿ ಡಿಸ್ಪಿಯರ್ಡ್ ಚಿತ್ರವನ್ನು ಲಿಮ್ ಡೀ ವೂಂಗ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯುಂಜಿನ್ ಕಿನ್, ಕೆ-ಪಾಪ್ ತಾರೆ ಓಕೆ ಟೇಕ್ ಇಯಾನ್, ಜಾ ಜೇ ಯೂನ್ ಮತ್ತು ಪಾರ್ಕ್ ಸುಂಗ್ ಹೂನ್ ನಟಿಸಿದ್ದಾರೆ. ರಿದಮಿಕಲ್ ಗ್ರೀನ್ ಮತ್ತು ಜಿಯಾನ್ ಎಂಟರ್‌ಟೈನ್‌ಮೆಂಟ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಕಿಮ್ ವೂ ಗೇನ್ ಸಂಗೀತ ಸಂಯೋಜನೆಯಿದೆ.

ಮಿ ಹೀ (ಯುಂಜಿನ್ ಕಿಮ್) ತನ್ನ ಪತಿ ಮತ್ತು ಮಗನನ್ನು ಕೊಲೆ ಮಾಡಿದ ಆರೋಪದಿಂದ 25 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುತ್ತಾಳೆ. ಜೈಲು ಶಿಕ್ಷೆ ಅನುಭವಿಸಿದ ಬಳಿಕ ಆಕೆ ತನ್ನ ಮನೆಗೆ ಹಿಂತುಗುತ್ತಾಳೆ. ತನ್ನ ಗಂಡ ಮತ್ತು ಮಗನ ಸಾವಿನ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾಳೆ. ಇದರ ಸುತ್ತಲೇ ಈ ಸಿನಿಮಾದ ಕಥೆ ಸಾಗುತ್ತದೆ. ಚಿತ್ರವು ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಆಗಿ ಥ್ರಿಲ್ಲಿಂಗ್ ಅನುಭವ ನೀಡುತ್ತದೆ.

ಮಿರ್ಜಾಪುರ 3 ಸರಣಿ ಯಾವಾಗ?

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಮಿರ್ಜಾಪುರ ವೆಬ್ ಸರಣಿಯ ಮೂರನೇ ಸೀಸನ್ ಆರಂಭವಾಗಲಿದೆ. ಈ ಸೀಸನ್ ಜುಲೈ 5 ರಂದು ಲಭ್ಯವಿರಲಿದೆ. ಪಂಕಜ್ ತ್ರಿಪಾಠಿ, ಅಲಿ ಫಜಲ್, ರಸಿಕಾ ದುಗಲ್, ವಿಜಯ್ ವರ್ಮಾ, ಇಶಾ ತಲ್ವಾರ್, ಶ್ವೇತಾ ತ್ರಿಪಾಠಿ ಶರ್ಮಾ ಈ ಕ್ರೈಮ್ ಆಕ್ಷನ್ ಥ್ರಿಲ್ಲರ್ ಸರಣಿಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮಿರ್ಜಾಪುರ್ ಎರಡು ಋತುಗಳಲ್ಲಿ ದೊಡ್ಡ ಯಶಸ್ಸನ್ನು ಕಂಡಿತು. ಪ್ರೇಕ್ಷಕರು ಮೂರನೇ ಸೀಸನ್‌ಗಾಗಿ ಕಾಯುತ್ತಿದ್ದಾರೆ. ಎರಡನೇ ಸೀಸನ್ ಬಿಡುಗಡೆಯಾದ ನಾಲ್ಕು ವರ್ಷಗಳ ನಂತರ, ಪ್ರೈಮ್ ವಿಡಿಯೋ ಮೂರನೇ ಸೀಸನ್ ಅನ್ನು ತರುತ್ತಿದೆ. ಮಿರ್ಜಾಪುರದ ಮೂರನೇ ಸೀಸನ್ ಜುಲೈ 5 ರಿಂದ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಒಟಿಟಿಯಲ್ಲಿ ಇತ್ತೀಚೆಗೆ ಚೈತ್ರಾ ಜೆ ಆಚಾರ್‌ ನಟನೆಯ ಹ್ಯಾಪಿ ಬರ್ತ್‌ಡೇ ಟು ಮಿ ಎಂಬ ಹಾಸ್ಯ ಸಿನಿಮಾವು ಬಿಡುಗಡೆಯಾಗಿದೆ. ಈ ಕನ್ನಡ ಸಿನಿಮಾವು ಏರ್‌ಟೆಲ್‌ಎಕ್ಸ್‌ಟ್ರೀಮ್‌, ಹಂಗಾಮಾ ಪ್ಲೇ, ವೋಡಾಫೋನ್‌ಟಿವಿ, ವಿಟಿ, ಟಾಟಾಪ್ಲೇ ಬಿಂಗ್‌ ಒಟಿಟಿಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.