ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹ್ಯಾಪಿ ಬರ್ತ್‌ಡೇ ಟು ಮೀ ಒಟಿಟಿಯಲ್ಲಿ ಬಿಡುಗಡೆ; ಚೈತ್ರಾ ಜೆ ಆಚಾರ್‌, ಸಿದ್ದು ಮೂಲಿಮನೆ ಟೀಮ್‌ನ ಬೋಲ್ಡ್‌ ಕಾಮಿಡಿ ಸಿನಿಮಾ ಮನೆಯಲ್ಲೇ ನೋಡಿ

ಹ್ಯಾಪಿ ಬರ್ತ್‌ಡೇ ಟು ಮೀ ಒಟಿಟಿಯಲ್ಲಿ ಬಿಡುಗಡೆ; ಚೈತ್ರಾ ಜೆ ಆಚಾರ್‌, ಸಿದ್ದು ಮೂಲಿಮನೆ ಟೀಮ್‌ನ ಬೋಲ್ಡ್‌ ಕಾಮಿಡಿ ಸಿನಿಮಾ ಮನೆಯಲ್ಲೇ ನೋಡಿ

  • Happy Birthday To Me OTT Release: ಚೈತ್ರಾ ಜೆ ಆಚಾರ್‌, ಸಿದ್ದು ಮೂಲಿಮನಿ ಮತ್ತು ಇತರೆ ಯುವ ಕಲಾವಿದರು ನಟಿಸಿರುವ ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆದ ಘಟನೆಯೊಂದರ ಸುತ್ತ ಈ ನಗೆ ನಾಟಕ ಇರಲಿದೆ. ಈಗಿನ ತಲೆಮಾರಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ರಿಲೀಸ್‌ ಮಾಡಲಾಗಿದೆ.

Happy Birthday To Me OTT Release: ಚೈತ್ರಾ ಜೆ ಆಚಾರ್‌, ಸಿದ್ದು ಮೂಲಿಮನಿ ಮತ್ತು ಇತರೆ ಯುವ ಕಲಾವಿದರು ನಟಿಸಿರುವ ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆದ ಘಟನೆಯೊಂದರ ಸುತ್ತ ಈ ನಗೆ ನಾಟಕ ಇರಲಿದೆ. ಈಗಿನ ತಲೆಮಾರಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಈ  ಸಿನಿಮಾ ರಿಲೀಸ್‌ ಮಾಡಲಾಗಿದೆ. 
icon

(1 / 10)

Happy Birthday To Me OTT Release: ಒಂದಿಷ್ಟು ಹುಡುಗರು ಹುಟ್ಟುಹಬ್ಬದ ದಿನದಂದು ಏನೋ ಮಾಡಲು ಹೋಗಿ ಏನೋ ನಡೆದ ಘಟನೆಯನ್ನಿಟ್ಟುಕೊಂಡು ಹ್ಯಾಪಿ ಬರ್ತ್‌ಡೇ ಟು ಮೀ ಚಿತ್ರ ರಚಿಸಲಾಗಿದೆ. ಈ ಸಿನಿಮಾ ಇಂದು(ಜೂನ್‌ 28)  ಏರ್‌ಟೆಲ್‌ಎಕ್ಸ್‌ಟ್ರೀಮ್‌, ಹಂಗಾಮಾ ಪ್ಲೇ, ವೋಡಾಫೋನ್‌ಟಿವಿ, ವಿಟಿ, ಟಾಟಾಪ್ಲೇ ಬಿಂಗ್‌ ಒಟಿಟಿಗಳಲ್ಲಿ ರಿಲೀಸ್‌ ಆಗಿದೆ.
icon

(2 / 10)

Happy birthday to me kannada movie: ರಾಕೇಶ್‌ ಕದ್ರಿ ನಿರ್ದೇಶನದ ಈ ಚಿತ್ರವನ್ನು ಶೂಲಿನ್‌ ಫಿಲ್ಮಸ್‌ ನಿರ್ಮಿಸಿದೆ. ಸಂಗೀತ ವಿಯ್‌ ಶಂಕರ್‌, ಹಾಡುಗಳ ಸಾಹಿತ್ಯ ವಿನಯ ಶಂಕರ್‌ ಟಿ, ಕಾರ್ತಿಕ್‌ ಗುಬ್ಬಿ ಅವರದ್ದು. 
icon

(3 / 10)

ಹ್ಯಾಪಿ ಬರ್ತ್‌ ಡೇ ಟು ಮಿ ಚಿತ್ರದಲ್ಲಿ ಚೈತ್ರಾ ಆಚಾರ್‌, ಸಿದ್ಧಾರ್ಥ್‌ ಮಾಧ್ಯಮಿಕ, ಸಿದ್ದು ಮೂಲಿಮನಿ, ಗೋಪಲ್‌ ಕೃಷ್ಣ ದೇಶಪಾಂಡೆ, ಅರ್ಚನಾ ಕೊಟ್ಟಿಗೆ, ನಾಟ್ಯ ರಂಗ ಮತ್ತು ಇತರರು ನಟಿಸಿದ್ದಾರೆ. ನಿರ್ದೇಶನ ತಂಡದಲ್ಲಿ ಪ್ರದೀಪ್‌ ಧರ್ಮಸ್ಥಳ ಮತ್ತು ರಾಕೇಶ್‌ ದೇವಾಡಿಗ ಇದ್ದಾರೆ. 
icon

(4 / 10)

ಈ ಸಿನಿಮಾದ ಟ್ರೇಲರ್‌ ನೋಡಿದಾಗ ಇದು ಹುಟ್ಟುಹಬ್ಬದಂದು ನಡೆಯುವ ಕಾಮಿಡಿ ಮತ್ತು ಟ್ರ್ಯಾಜಿಡಿ ಕಥೆಯನ್ನು ಹೊಂದಿರುವ ಸೂಚನೆ ದೊರಕಿದೆ. ಚೈತ್ರಾ ಜೆ ಆಚಾರ್‌ ಸೇರಿದಂತೆ ಇತರರ ನಟನೆ ಈ ಚಿತ್ರದ ಪ್ರಮುಖ ಹೈಲೈಟ್ಸ್‌, ಪ್ರೇಕ್ಷಕರಿಗೆ ಸಾಕಷ್ಟು ಕಾಮಿಡಿ ಗ್ಯಾರಂಟಿ ಅನ್ನೋ ಥರ ಟ್ರೇಲರ್‌ ಇದೆ.
icon

(5 / 10)

ಈಗಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾಮಿಡಿ ಸಿನಿಮಾ ನಿರ್ಮಿಸಲಾಗಿದೆ. ಥಿಯೇಟರ್‌ಗೆ ಜನರು ಬರೋದು ಕಡಿಮೆ, ಈ ಸಿನಿಮಾದ ಟಾರ್ಗೆಟ್‌ ಆಡಿಯನ್ಸ್‌ ವಿಶೇಷವಾಗಿ ಒಟಿಟಿ ಪ್ರೇಕ್ಷಕರು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಚಿತ್ರತಂಡ ಒಟಿಟಿಯಲ್ಲೇ ಈ ಸಿನಿಮಾ ರಿಲೀಸ್‌ ಮಾಡಿದೆ. 
icon

(6 / 10)

ಈ ಸಿನಿಮಾದಲ್ಲಿ ಸಾಕಷ್ಟು ಫನ್‌ ಮತ್ತು ನಗು ಇದೆ. ಇದು ಯುವ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ ಎಂದು  ಚೈತ್ರಾ ಜೆ ಆಚಾರ್‌ ಹೇಳಿದ್ದಾರೆ. 
icon

(7 / 10)

ಈ ಚಿತ್ರದಲ್ಲಿ ಒಂದಿಷ್ಟು ಬೋಲ್ಡ್‌ ನಟನೆಯಿದೆ. ಕೆಲವು ಪದಗಳಿಗೆ ಸೆನ್ಸಾರ್‌ನವರು ಬೀಪ್‌ ಶಬ್ದ ಹಾಕಬಹುದು.  ಇಂತಹ ಕಷ್ಟ ಬೇಡವೆಂದು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆಯಂತೆ.
icon

(8 / 10)

ಮನೆಯಲ್ಲಿಯೇ ಕುಳಿತು ಒಂದೊಳ್ಳೆಯ ಕಾಮಿಡಿ ಸಿನಿಮಾ ನೋಡೋಣ ಎಂದುಕೊಳ್ಳುವವರು ತಪ್ಪದೇ ಈ ಸಿನಿಮಾವನ್ನು ನೋಡಬಹುದು. ಈ ಮೂಲಕ ಕನ್ನಡದ ಯುವ ತಂಡಕ್ಕೆ ಪ್ರೋತ್ಸಾಹ ನೀಡಬಹುದು. ಕನ್ನಡ ಒಟಿಟಿ ಸಿನಿಮಾಗಳು ಹೆಚ್ಚಲು ಈ ಮೂಲಕ ಪ್ರೋತ್ಸಾಹ ನೀಡಬಹುದು. 
icon

(9 / 10)

ಒಟಿಟಿಯಲ್ಲಿ ಬಿಡುಗಡೆಯಾದ ಹೊಸ ಸಿನಿಮಾಗಳು, ಹೊಸ ವೆಬ್‌ ಸರಣಿಗಳು, ಹೊಸ ಶೋಗಳ ಮಾಹಿತಿ, ಸುದ್ದಿಗಳು, ಒಟಿಟಿ ಸಿನಿಮಾಗಳ ವಿಮರ್ಶೆಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡ್ತಾ ಇರಿ. 
icon

(10 / 10)

ಇತರ ಗ್ಯಾಲರಿಗಳು