OTT Releases: ಪೋಚರ್‌, ಅವತಾರ್‌ ಏರ್‌ಬೆಂಡರ್‌, ಮಲೈಕೊಟೈ ವಾಲಿಬನ್‌; ಒಟಿಟಿ ತುಂಬಾ ಹೊಸ ಶೋ, ಸಿನಿಮಾಗಳ ಹಬ್ಬ-ott news poacher avatar the last airbender malaikottai vaaliban ott releases to watch this weekend pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ott Releases: ಪೋಚರ್‌, ಅವತಾರ್‌ ಏರ್‌ಬೆಂಡರ್‌, ಮಲೈಕೊಟೈ ವಾಲಿಬನ್‌; ಒಟಿಟಿ ತುಂಬಾ ಹೊಸ ಶೋ, ಸಿನಿಮಾಗಳ ಹಬ್ಬ

OTT Releases: ಪೋಚರ್‌, ಅವತಾರ್‌ ಏರ್‌ಬೆಂಡರ್‌, ಮಲೈಕೊಟೈ ವಾಲಿಬನ್‌; ಒಟಿಟಿ ತುಂಬಾ ಹೊಸ ಶೋ, ಸಿನಿಮಾಗಳ ಹಬ್ಬ

OTT releases to watch this weekend: ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ನೋಡಲು ಹೊಸ ಸಿನಿಮಾಗಳು, ವೆಬ್‌ ಸರಣಿಗಳು ಸಾಕಷ್ಟಿವೆ. ಆಲಿಯಾ ಭಟ್‌ರ ಪೋಚರ್‌ ವೆಬ್‌ಸರಣಿ, ಅವತಾರ್:‌ ದಿ ಲಾಸ್ಟ್‌ ಏರ್‌ಬೆಂಡರ್‌ ಸೇರಿದಂತೆ ಒಟ್ಟು ಎಂಟು ಹೊಸ ಶೋಗಳು ಮತ್ತು ಸಿನಿಮಾಗಳು ಇವೆ.

OTT Releases: ಪೋಚರ್‌, ಅವತಾರ್‌ ಏರ್‌ಬೆಂಡರ್‌, ಮಲೈಕೊಟೈ ವಾಲಿಬನ್‌; ಒಟಿಟಿ ತುಂಬಾ ಹೊಸ ಶೋ, ಸಿನಿಮಾಗಳ ಹಬ್ಬ
OTT Releases: ಪೋಚರ್‌, ಅವತಾರ್‌ ಏರ್‌ಬೆಂಡರ್‌, ಮಲೈಕೊಟೈ ವಾಲಿಬನ್‌; ಒಟಿಟಿ ತುಂಬಾ ಹೊಸ ಶೋ, ಸಿನಿಮಾಗಳ ಹಬ್ಬ

OTT releases to watch this weekend: ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ಏನಾದರೂ ಹೊಸ ಶೋ ಅಥವಾ ಸಿನಿಮಾ ನೋಡೋಣ ಎಂದು ಸಾಕಷ್ಟು ಜನರು ಅಂದುಕೊಂಡಿರಬಹುದು. ನೆಟ್‌ಫ್ಲಿಕ್ಸ್‌, ಪ್ರೈಮ್‌ ವಿಡಿಯೋ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮತ್ತು ಇತರೆ ಒಟಿಟಿಗಳಲ್ಲಿ ಯಾವುದಾದರೂ ಹೊಸ ಸರಣಿ, ಸಿನಿಮಾ ಬಿಡುಗಡೆಯಾಗಿರುವುದೇ ಎಂಬ ಕುತೂಹಲ ಹೆಚ್ಚಿನ ಜನರಲ್ಲಿ ಇರುತ್ತದೆ. ಈ ವೀಕೆಂಡ್‌ ವಾಚ್‌ಲಿಸ್ಟ್‌ಗೆ ಸೇರಿಸಬಹುದಾದ ಹಲವು ಹೊಸ ಶೋ, ಸಿನಿಮಾಗಳು ಇವೆ. ಬನ್ನಿ ನೆಟ್‌ಫ್ಲಿಕ್ಸ್‌ನಲ್ಲಿ ಬಹುನಿರೀಕ್ಷಿತ ಆಕ್ಷನ್‌ ಸರಣಿ ಅವತಾರ್‌: ದಿ ಲಾಸ್ಟ್‌ ಏರ್‌ಬೆಂಡರ್‌ನಿಂದ ಪೋಚಾರ್‌ವರೆಗೆ ವಿವಿಧ ಆಯ್ಕೆಗಳು ಇವೆ. ಪ್ರಾಣಿಗಳ ಬೇಟೆ ವಿಷಯದ ಕಥೆಗಳನ್ನು ಹೊಂದಿರುವ ಪೋಚಾರ್‌ ಈಗಾಗಲೇ ವೀಕ್ಷಕರ ಕುತೂಹಲ ಕೆರಳಿಸಿದೆ.

ಪೋಚಾರ್‌

ರಿಚಿ ಮೆಹ್ತಾ ಅವರ ಈ ವೆಬ್‌ ಸರಣಿಯಲ್ಲಿ ನಿಮಿಷಾ ಸಜಯನ್, ರೋಷನ್ ಮ್ಯಾಥ್ಯೂ, ದಿಬ್ಯೇಂದು ಭಟ್ಟಾಚಾರ್ಯ, ಅಂಕಿತ್ ಮಾಧವ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ. ಭಾರತೀಯ ಅರಣ್ಯ ಸೇವಾ ಅಧಿಕಾರಿಗಳು, ಎನ್‌ಜಿಒ ಕಾರ್ಯಕರ್ತರು, ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಒಳಗೊಂಡ ವೆಬ್‌ ಸರಣಿಯಿದು. ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಆನೆದಂತಕ್ಕಾಗಿ ಆನೆಗಳನ್ನು ಬೇಟೆಯಾಡುವ ಖದೀಮರ ಜಾಡು ಹಿಡಿದು ಈ ವೆಬ್‌ ಸರಣಿ ಸಾಗುತ್ತದೆ.

ಎಲ್ಲಿ ನೋಡಬಹುದು: ಅಮೆಜಾನ್‌ ಪ್ರೈಮ್‌ ವಿಡಿಯೋ

ಮಲೈಕೊಟ್ಟೈ ವಾಲಿಬನ್

ಮೋಹನ್‌ಲಾಲ್‌ರ ಮಲಯಾಳಂ ಚಲನಚಿತ್ರ, ಮಲೈಕೊಟ್ಟೈ ವಾಲಿಬನ್ ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮಲೈಕೊಟ್ಟೈ ವಾಲಿಬನ್ ಎಂಬ ಸಾಹಸಿಯ ಕಥೆಯನ್ನು ಹೊಂದಿದೆ. ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ಈ ಚಿತ್ರದಲ್ಲಿ ರಂಗಪಟ್ಟಿನಂ ರಂಗರಾಣಿಯಾಗಿ ಸೋನಾಲಿ ಕುಲಕರ್ಣಿ, ಅಯ್ಯನಾರ್ ಆಗಿ ಹರೀಶ್ ಪೆರಾಡಿ ಮತ್ತು ಚಮಥಕನ್ ಪಾತ್ರದಲ್ಲಿ ಡ್ಯಾನಿಶ್ ಸೇಟ್ ಕಾಣಿಸಿಕೊಂಡಿದ್ದಾರೆ.

ಎಲ್ಲಿ ನೋಡಬಹುದು?: ಡಿಸ್ನಿ+ ಹಾಟ್‌ಸ್ಟಾರ್

ಸಾ ಎಕ್ಸ್

ಈ ಸಿನಿಮಾ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. . ಜನಪ್ರಿಯ ಭಯಾನಕ ಚಲನಚಿತ್ರ ಫ್ರ್ಯಾಂಚೈಸ್ ಸಾನ 10 ನೇ ಕಂತು ಇದಾಗಿದೆ. ಕೆವಿನ್ ಗ್ರೆಟರ್ಟ್ ನಿರ್ದೇಶನದ ಈ ಸಿನಿಮಾದಲ್ಲಿ ಟೋಬಿನ್ ಬೆಲ್, ಶಾವ್ನೀ ಸ್ಮಿತ್, ಸಿನೋವ್ ಮ್ಯಾಕೋಡಿ ಲುಂಡ್, ಸ್ಟೀವನ್ ಬ್ರಾಂಡ್ ಮುಂತಾದವರು ಇದ್ದಾರೆ. ಹಾರರ್‌ ಸಿನಿಮಾ ಇಷ್ಟಪಡುವವರು ಮಾತ್ರ ಇದನ್ನು ನೋಡಿ.

ಎಲ್ಲಿ ನೋಡಬಹುದು: ಲಯನ್ಸ್‌ಗೇಟ್ ಪ್ಲೇ

ಅವತಾರ್‌: ದಿ ಲಾಸ್ಟ್ ಏರ್‌ಬೆಂಡರ್

ನೆಟ್‌ಫ್ಲಿಕ್ಸ್‌ನಲ್ಲಿ ಅವತಾರ್: ದಿ ಲಾಸ್ಟ್ ಏರ್‌ಬೆಂಡರ್ ಎಂಬ ಹೊಸ ಲೈವ್-ಆಕ್ಷನ್ ಸರಣಿಯು ಗಮನ ಸೆಳೆಯುತ್ತಿದೆ. ನೀವು ಮೂಲ ಸರಣಿಯನ್ನು ವೀಕ್ಷಿಸಿದ್ದರೆ ಇದು ಹೆಚ್ಚು ಇಷ್ಟವಾಗಬಹುದು.

ಎಲ್ಲಿ ನೋಡಬಹುದು?: ನೆಟ್‌ಫ್ಲಿಕ್ಸ್‌

ಅಪಾರ್ಟ್‌ಮೆಂಟ್‌ 404

ಬ್ಲ್ಯಾಕ್‌ಪಿಂಕ್‌ನ ಜೆನ್ನಿ ನಟಿಸಿರುವ ಅಪಾರ್ಟ್‌ಮೆಂಟ್ 404 ಕೂಡ ರೋಚಕ ಸಿನಿಮಾ. ಇದರಲ್ಲಿ ಯೂ ಜೇ-ಸುಕ್, ಯಾಂಗ್ ಸೆ-ಚಾನ್, ಚಾ ಟೇ-ಹ್ಯುನ್, ಲೀ ಜಂಗ್-ಹಾ ಮತ್ತು ಓಹ್ ನಾ-ರಾ ಮುಂತಾದವರಿದ್ದಾರೆ. ಅಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಅನುಭವವಾಗುವ ನಿಗೂಢ ಅನುಭವಗಳನ್ನು ಪತ್ತೆಹಚ್ಚಲು ಆರು ಜನರು ಪ್ರಯತ್ನಿಸುವ ಕಥೆಯನ್ನು ಹೊಂದಿದೆ.

ಎಲ್ಲಿ ನೋಡಬಹುದು?: ಅಮೆಜಾನ್‌ ಪ್ರೈಮ್‌

ಫಾರ್ಮುಲಾ 1: ಡ್ರೈವ್‌ ಟು ಸರ್ವೈವ್‌

ಫಾರ್ಮುಲಾ 1 ಪ್ರಿಯರು ಮಿಸ್‌ ಮಾಡದೆ ನೋಡಬಹುದು. ಫಾರ್ಮುಲಾ 1: ಡ್ರೈವ್ ಟು ಸರ್ವೈವ್‌ನಲ್ಲಿ ನೈಜ ಕಥೆ ಇದ್ದು, ಪ್ರೇಕ್ಷಕರಿಗೆ ವಿನೂತನ ಅನುಭವ ನೀಡುತ್ತದೆ.

ಎಲ್ಲಿ ನೋಡಬಹುದು?: ನೆಟ್‌ಫ್ಲಿಕ್ಸ್‌

ಸ್ಟಾರ್ ವಾರ್ಸ್: ದಿ ಬ್ಯಾಡ್ ಬ್ಯಾಚ್ ಸೀಸನ್ 3

ಮೂರನೇ ಮತ್ತು ಅಂತಿಮ ಸೀಸನ್ ಮೂರು ಹೊಚ್ಚಹೊಸ ಸಂಚಿಕೆಗಳ ಜತೆ ಆರಂಭವಾಗುತ್ತದೆ.

ಎಲ್ಲಿ ನೋಡಬಹುದು: ಡಿಸ್ನಿ+ ಹಾಟ್‌ಸ್ಟಾರ್

ಮೀ ಕಲ್ಪಾ

ನೆಟ್‌ಫ್ಲಿಕ್ಸ್ ಒರಿಜಿನಲ್‌ ಸಿನಿಮಾ ಇದಾಗಿದೆ. ಡಿಫೆನ್ಸ್ ಅಟಾರ್ನಿ ಮೀ ಹಾರ್ಪರ್ ಕಥೆಯನ್ನು ಹೊಂದಿದೆ. ತನ್ನ ಗೆಳತಿಯನ್ನು ಕೊಂದ ಪ್ರಸಿದ್ಧ ಕಲಾವಿದ ಝೈರ್ ಮಲ್ಲೋಯ್ ಅವರ ಪ್ರಕರಣವನ್ನು ತನಿಖೆ ಮಾಡುತ್ತಾರೆ.

ಎಲ್ಲಿ ನೋಡಬಹುದು?: ನೆಟ್‌ಫ್ಲಿಕ್ಸ್‌

mysore-dasara_Entry_Point