ಒಟಿಟಿಯಲ್ಲಿಯೂ ನಡೆಯುತ್ತಿದೆ ದಸರಾ ಧಮಾಕಾ! ಒಂದಲ್ಲ, ಎರಡಲ್ಲ ಸ್ಟ್ರೀಮಿಂಗ್ ಆರಂಭಿಸಿವೆ ಬರೋಬ್ಬರಿ 17 ಕಂಟೆಂಟ್‌ಗಳು
OTT Movies List: ಒಟಿಟಿಯಲ್ಲಿ ಸರಣಿ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ವೀಕ್ಷಕನ ಮುಂದೆ ಬಂದಿದೆ. ಚಿತ್ರಮಂದಿರಗಳಲ್ಲಿ ಸದ್ದು ಮಾಡಿ, ಭರ್ಜರಿ ಕಮಾಯಿ ಮಾಡಿದ್ದ ಸಿನಿಮಗಳು ಒಟಿಟಿಗೆ ಎಂಟ್ರಿಕೊಟ್ಟಿವೆ. ಇವುಗಳ ಜತೆಗೆ ವಿದೇಶಿ ಭಾಷೆಯ ಹಾರರ್ ಥ್ರಿಲ್ಲರ್ ವೆಬ್‌ಸಿರೀಸ್‌ಗಳೂ ಸ್ಟ್ರೀಮಿಂಗ್ ಆರಂಭಿಸಿವೆ.
OTT Releases: ದಸರಾ ಹಬ್ಬದ ನಿಮಿತ್ತ ಚಿತ್ರಮಂದಿರಗಳಿಗೆ ಮಾತ್ರವಲ್ಲ ಈ ವಾರ, 17ಕ್ಕೂ ಹೆಚ್ಚು ಸಿನಿಮಾಗಳು ಮತ್ತು ವೆಬ್ ಸರಣಿಗಳು ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿವೆ. ಆ ಪೈಕಿ ಹಾರರ್ ಕಾಮಿಡಿ, ಹಾರರ್ ಸಿನಿಮಾಗಳು, ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಗಳೂ ಸೇರಿವೆ. ಹಾಗಾದರೆ ಈ ವಾರ ಯಾವೆಲ್ಲ ಒಟಿಟಿಯಲ್ಲಿ ಯಾವೆಲ್ಲ ಸಿನಿಮಾ ಮತ್ತು ವೆಬ್‌ಸರಣಿಗಳು ಸ್ಟ್ರೀಮಿಂಗ್ ಆರಂಭಿಸಿವೆ ಎಂಬುದನ್ನು ಇಲ್ಲಿ ನೋಡೋಣ.
ನೆಟ್‌ಫ್ಲಿಕ್ಸ್
- 5 (ವೆಬ್ ಸರಣಿ)- ಅಕ್ಟೋಬರ್ 9
- ಖೇಲ್ ಖೇಲ್ ಮೇ (ಹಿಂದಿ ಸಿನಿಮಾ) - ಅಕ್ಟೋಬರ್ 9
- ಮಾನ್ಸ್ಟರ್ ಹೈ 2 (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 10
- ಗರ್ಲ್ ಹ್ಯಾಂಟ್ಸ್ ಬಾಯ್ (ಇಂಗ್ಲಿಷ್ ಸಿನಿಮಾ)- ಅಕ್ಟೋಬರ್ 10
- ಔಟರ್ ಬ್ಯಾಂಕ್ಸ್ ಸೀಸನ್ 4 ಭಾಗ 1 (ಇಂಗ್ಲಿಷ್ ವೆಬ್ ಸರಣಿ) - ಅಕ್ಟೋಬರ್ 10
- ಟಾಂಬ್ ರೈಡರ್: ದಿ ಲೆಜೆಂಡ್ ಆಫ್ ಲಾರಾ ಕ್ರಾಫ್ಟ್ (ಅನಿಮೇಟೆಡ್ ವೆಬ್ ಸೀರೀಸ್) - ಅಕ್ಟೋಬರ್ 10
- ದೆಟ್ಸ್ ಕೈಂಡ್ ಆಫ್ ಲವ್ (ಫಿಲಿಪಿನೋ ಸಿನಿಮಾ)- ಅಕ್ಟೋಬರ್ 10
- ತೆಮುರುನ್ (ಹಾರರ್ ಸಿನಿಮಾ) - ಅಕ್ಟೋಬರ್ 10
ಅಮೆಜಾನ್ ಪ್ರೈಮ್ OTT
- ಸಿಟಾಡೆಲ್: ಡಯಾನಾ (ಇಂಗ್ಲಿಷ್ ವೆಬ್ ಸರಣಿ) - ಅಕ್ಟೋಬರ್ 10
- ಸ್ತ್ರೀ 2 (ಹಿಂದಿ ಸಿನಿಮಾ)- ಅಕ್ಟೋಬರ್ 10
- ವಾಕಿಂಗ್ ಡೆಡ್: ಡೆಡ್ ಸಿಟಿ ಸೀಸನ್ 1 (ಇಂಗ್ಲಿಷ್ ವೆಬ್ ಸರಣಿ) - ಅಕ್ಟೋಬರ್ 10
- ಜೋಸನ್ ಅಟಾರ್ನಿ ಎ ಮೋರಾಲಿಟಿ (ತೆಲುಗು ಡಬ್ಡ್ ಕೊರಿಯನ್ ವೆಬ್ ಸೀರೀಸ್) - ಅಕ್ಟೋಬರ್ 10
- ಅಫ್ರೈಡ್ (ಇಂಗ್ಲಿಷ್ ಚಲನಚಿತ್ರ) - ಅಕ್ಟೋಬರ್ 10
- ಅಕ್ಯೂಸ್ಡ್ (ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ) - ಅಕ್ಟೋಬರ್ 10
ಈಟಿವಿ ವಿನ್ ಒಟಿಟಿ
- ತತ್ವ (ತೆಲುಗು ಸಿನಿಮಾ) - ಅಕ್ಟೋಬರ್ 10
- ಪಾಯಲಂ ಪಿಲಗ (ತೆಲುಗು ಸಿನಿಮಾ) - ಅಕ್ಟೋಬರ್ 10
- ಗೊರ್ರೆ ಪುರಾಣಂ (ತೆಲುಗು ಸಿನಿಮಾ) - ಆಹಾ OTT - ಅಕ್ಟೋಬರ್ 10
- ದಿ ಇರ್ರೇಷನಲ್ (ಇಂಗ್ಲಿಷ್ ವೆಬ್ ಸೀರೀಸ್) - ಜಿಯೋ ಸಿನಿಮಾ - ಅಕ್ಟೋಬರ್ 10
- ವೇದ (ಹಿಂದಿ ಸಿನಿಮಾ)- ಜೀ5- ಅಕ್ಟೋಬರ್ 10
ಒಟಿಟಿಯಲ್ಲಿ ದಸರಾ ಧಮಾಕಾ
ಇಂದು (ಅಕ್ಟೋಬರ್ 10) ಒಟಿಟಿಯಲ್ಲಿ 17 ಸಿನಿಮಾಗಳು ಮತ್ತು ವೆಬ್‌ಸರಣಿಗಳು ಸ್ಟ್ರೀಮ್ ಆರಂಭಿಸಿವೆ. ಇವುಗಳಲ್ಲಿ ಹಿಂದಿ ಬ್ಲಾಕ್‌ಬಸ್ಟರ್ ಹಾರರ್ ಕಾಮಿಡಿ ಸ್ತ್ರೀ 2, ಜಾನ್ ಅಬ್ರಹಾಂ ನಟನೆಯ ಆಕ್ಷನ್ ಥ್ರಿಲ್ಲರ್ ವೇದ, ಅಕ್ಷಯ್ ಕುಮಾರ್ ನಟನೆಯ ಖೇಲ್ ಖೇಲ್ ಮೇ ಮತ್ತು ತೆಲುಗು ಚಿತ್ರಗಳಾದ ತತ್ವ, ಪಾಯಲಂ ಪಿಲಗಾ, ಗೊರ್ರೆ ಪುರಾಣಂ ವಿಶೇಷವಾದವು. ಅಲ್ಲದೆ, ಹಾರರ್ ಚಿತ್ರ ತೆಮುರುನ್ ಮತ್ತು ಕ್ರೈಮ್ ಥ್ರಿಲ್ಲರ್ ಸರಣಿ ಅಕ್ಯೂಸ್ಡ್ ಸಹ ವೀಕ್ಷಿಸಬಹುದು.