Jailer Web Series: ಓಟಿಟಿಗೆ ಬಂತು ನೋಡಿ ಸೂಪರ್​ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್ ಅನ್‌ಲಾಕ್ಡ್’ ವೆಬ್ ಸೀರೀಸ್-rajinikanth jailer unlocked web series streaming now on sun nxt ott nelson anirudh kollywood ott prs ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Jailer Web Series: ಓಟಿಟಿಗೆ ಬಂತು ನೋಡಿ ಸೂಪರ್​ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್ ಅನ್‌ಲಾಕ್ಡ್’ ವೆಬ್ ಸೀರೀಸ್

Jailer Web Series: ಓಟಿಟಿಗೆ ಬಂತು ನೋಡಿ ಸೂಪರ್​ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್ ಅನ್‌ಲಾಕ್ಡ್’ ವೆಬ್ ಸೀರೀಸ್

Jailer Web Series: ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದ ಮೇಲೆ ಸಾಕ್ಷ್ಯಚಿತ್ರ ವೆಬ್ ಸಿರೀಸ್ ಬಂದಿದೆ. ಜೈಲರ್ ಅನ್‌ಲಾಕ್ಡ್ ಹೆಸರಿನೊಂದಿಗೆ ಬಿಡುಗಡೆಯಾದ ಈ ವೆಬ್​ಸಿರೀಸ್​ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.

ಸೂಪರ್​ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್ ಅನ್‌ಲಾಕ್ಡ್’ ವೆಬ್ ಸೀರೀಸ್
ಸೂಪರ್​ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್ ಅನ್‌ಲಾಕ್ಡ್’ ವೆಬ್ ಸೀರೀಸ್

ಸೂಪರ್​​ ಸ್ಟಾರ್​ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದ ಮೇಲೆ ವೆಬ್​ ಸೀರೀಸ್​ ಬಂದಿದೆ. ಆಗಸ್ಟ್​ 16ರ ಶುಕ್ರವಾರ ಸನ್​ನೆಕ್ಸ್ಟ್ ಒಟಿಟಿ ವೇದಿಕೆಯಲ್ಲಿ ಜೈಲರ್ ಅನ್‌ಲಾಕ್ಡ್ ಎಂಬ ಸಾಕ್ಷ್ಯಚಿತ್ರ ಬಿಡುಗಡೆ ಆಗಿದೆ. ಈ ಸೀರೀಸ್​​​ ಒಟ್ಟು 3 ಸಂಚಿಕೆಗಳೊಂದಿಗೆ 91 ನಿಮಿಷಗಳ ರನ್​ಟೈಮ್​​ನೊಂದಿಗೆ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಾಕ್ಷ್ಯಚಿತ್ರ ಸೀರೀಸ್​​ನ ಪೋಸ್ಟರ್ ಅನ್ನು ಸನ್​ನೆಕ್ಸ್ಟ್​ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಈ ಪೋಸ್ಟರ್‌ನಲ್ಲಿ ರಜನಿಕಾಂತ್ ಜೊತೆಗೆ ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ಕಾಣಿಸಿಕೊಂಡಿದ್ದಾರೆ.

ಈ ಡಾಕ್ಯುಮೆಂಟರಿ ಸೀರೀಸ್​​ನಲ್ಲಿ ಜೈಲರ್​ ಚಿತ್ರದ ಪ್ರಮುಖ ಅಂಶಗಳು, ಬಾಕ್ಸಾಫೀಸ್ ದಾಖಲೆಗಳ ಜೊತೆಗೆ ಟೆಕ್ಸಿಷಿಯನ್ಸ್ ಸಂದರ್ಶಗಳಿವೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್, ಸಂಗೀತ ನಿರ್ದೇಶಕ ಅನಿರುದ್ದ್ ಮತ್ತು ಚಿತ್ರಕ್ಕೆ ಕೆಲಸ ಮಾಡಿದವರು ತಮ್ಮ ಅನುಭವಗಳನ್ನು ಈ ವೇಳೆ ಹಂಚಿಕೊಂಡಿದ್ದಾರೆ. ರಜನಿಕಾಂತ್ ಅವರೊಂದಿಗೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದ್ದು ಹೇಗೆ? ನಿರ್ದೇಶಕ ನೆಲ್ಸನ್ ಅವರು ರಜನಿ ಇಮೇಜ್ ಮತ್ತು ಕ್ರೇಜ್‌ಗೆ ತಕ್ಕಂತೆ ಕಥೆ ಬರೆಯಲು ಎದುರಿಸಿದ ಸವಾಲುಗಳ ಬಗ್ಗೆ ಈ ಸಾಕ್ಷ್ಯಚಿತ್ರದಲ್ಲಿ ವಿವರಿಸಿದ್ದಾರೆ.

ಅಲ್ಲದೆ, ಮಲಯಾಳಂ ಸೂಪರ್​​ಸ್ಟಾರ್ ಮೋಹನ್ ಲಾಲ್ ಮತ್ತು ಕನ್ನಡದ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಅವರನ್ನು ಅತಿಥಿ ಪಾತ್ರಕ್ಕೆ ಒಪ್ಪಿಸಿದ್ದೇಗೆ? ಆದರೆ ಇವರಿಗೂ ಮುನ್ನ ಅತಿಥಿ ಪಾತ್ರಗಳಿಗೆ ಪರಿಗಣಿಸಲಾದ ಇತರ ಕೆಲವು ಸ್ಟಾರ್ ಹೀರೋಗಳ ಹೆಸರನ್ನೂ ನೆಲ್ಸನ್ ಬಹಿರಂಗಪಡಿಸಿದ್ದಾರೆ. ಈ ಸಿರೀಸ್​ನಲ್ಲಿ ಸಂದರ್ಶನಗಳು ಮಾತ್ರವಲ್ಲದೆ ಜೈಲರ್ ಚಿತ್ರದ ಮೇಕಿಂಗ್ ದೃಶ್ಯಗಳನ್ನು ತೋರಿಸಲಾಗಿದೆ. ಆಕ್ಷನ್ ಸೀಕ್ವೆನ್ಸ್‌ ಹೇಗೆ ಚಿತ್ರೀಕರಿಸಲಾಗಿದೆ? ತೆರೆಮರೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಸಿರೀಸ್​ನಲ್ಲಿ ವಿವರವಾಗಿ ತೋರಿಸಲಾಗಿದೆ.

ಜೈಲರ್ 650 ಕೋಟಿ ಕಲೆಕ್ಷನ್

ಜೈಲರ್ ಸಿನಿಮಾ ಬಿಡುಗಡೆಗೊಂಡು ಒಂದು ವರ್ಷ ಕಳೆದಿದೆ. ಆಗಸ್ಟ್ 10, 2023ರಲ್ಲಿ ಸಿನಿಮಾ ಬಿಡುಗಡೆಗೊಂಡಿತ್ತು. ಬಾಕ್ಸಾಫೀಸ್​​​ನಲ್ಲಿ ಧೂಳೆಬ್ಬಿಸಿದ್ದ ಜೈಲರ್​, 650 ಕೋಟಿಗೂ ಹೆಚ್ಚು ಕೊಳ್ಳೆ ಹೊಡೆದಿತ್ತು. 2023ರಲ್ಲಿ ಕಾಲಿವುಡ್​​ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತೆಲುಗಿಗೆ ಡಬ್ ಆದ ಈ ಸಿನಿಮಾ 85 ಕೋಟಿ ಕಲೆಕ್ಷನ್ ಮಾಡಿತ್ತು. ರಜನಿ ಜೊತೆಗೆ ಮಿರ್ನಾ ಮೆನನ್, ವಸಂತ್ ರವಿ, ತಮನ್ನಾ ಭಾಟಿಯಾ, ವಿನಾಯಕನ್, ಯೋಗಿ ಬಾಬು, ರಮ್ಯ ಕೃಷ್ಣ, ಜಾಕಿ ಶ್ರಾಫ್, ಸುನಿಲ್ ಸೇರಿದಂತೆ ಪ್ರಮುಖರು ಚಿತ್ರದಲ್ಲಿದ್ದಾರೆ.

ಜೈಲರ್​ ಸೀಕ್ವೆಲ್

ಜೈಲರ್ ಚಿತ್ರದಲ್ಲಿ ರಜನಿಕಾಂತ್ ನಟನೆ ಮತ್ತು ಅವರ ಹೀರೋಯಿಸಂ ಅಭಿಮಾನಿಗಳನ್ನು ಆಕರ್ಷಿಸಿತು. ಇದೀಗ ಜೈಲರ್ ಸೀಕ್ವೆಲ್ ಬರುತ್ತಿದೆ. ಜೈಲರ್ ಪಾರ್ಟ್ 2 ಚಿತ್ರವು ಈ ವರ್ಷ ಸೆಟ್ಟೇರಲಿದೆ ಎಂದು ವರದಿಯಾಗಿದೆ. ಸದ್ಯ ರಜನಿಕಾಂತ್ ಜೈ ಭೀಮ್ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶನದಲ್ಲಿ ವೆಟ್ಟೈಯಾನ್ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ವೆಟ್ಟೈಯನ್ ನಂತರ ರಜನಿಕಾಂತ್ ಅವರು ಲೋಕೇಶ್ ಕನಕರಾಜ್ ಜೊತೆ ಸಿನಿಮಾ ಮಾಡಲಿದ್ದಾರೆ.