ಕನ್ನಡ ಸುದ್ದಿ  /  ಮನರಂಜನೆ  /  ಸತ್ಯ ಖಂಡಿತ ಮೇಲುಗೈ ಸಾಧಿಸುತ್ತದೆ ಎಂದ ಶ್ರೀದೇವಿ ಭೈರಪ್ಪ; ಯುವ ರಾಜ್‌ಕುಮಾರ್‌ ಪರ ವಕೀಲರ ಆರೋಪಗಳಿಗೆ ಪ್ರತಿಕ್ರಿಯೆ

ಸತ್ಯ ಖಂಡಿತ ಮೇಲುಗೈ ಸಾಧಿಸುತ್ತದೆ ಎಂದ ಶ್ರೀದೇವಿ ಭೈರಪ್ಪ; ಯುವ ರಾಜ್‌ಕುಮಾರ್‌ ಪರ ವಕೀಲರ ಆರೋಪಗಳಿಗೆ ಪ್ರತಿಕ್ರಿಯೆ

ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ವಿವಾಹ ವಿಚ್ಛೇದನ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಶ್ರೀದೇವಿ ವಿರುದ್ಧ ಯುವ ಪರ ವಕೀಲರು ಪತ್ರಿಕಾಗೋಷ್ಠಿ ನಡೆಸಿ ಒಂದಿಷ್ಟು ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಶ್ರೀದೇವಿ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸತ್ಯ ಖಂಡಿತ ಮೇಲುಗೈ ಸಾಧಿಸುತ್ತದೆ ಎಂದ ಶ್ರೀದೇವಿ ಭೈರಪ್ಪ
ಸತ್ಯ ಖಂಡಿತ ಮೇಲುಗೈ ಸಾಧಿಸುತ್ತದೆ ಎಂದ ಶ್ರೀದೇವಿ ಭೈರಪ್ಪ

ಬೆಂಗಳೂರು: ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ಭೈರಪ್ಪ ಡಿವೋರ್ಸ್‌ ವಿಚಾರಕ್ಕೆ ಸಂಬಂಧಪಟ್ಟಂತೆ ನಿನ್ನೆಯಿಂದ ಸಾಕಷ್ಟು ವಿದ್ಯಮಾನಗಳು ನಡೆದಿವೆ. ಶ್ರೀದೇವಿಯವರಿಗೆ ಅಕ್ರಮ ಸಂಬಂಧವಿದೆ, ಸಾಕಷ್ಟು ಹಣಕಾಸು ವಂಚನೆ ಮಾಡಿದ್ದಾರೆ ಎಂದು ಯುವ ರಾಜ್‌ಕುಮಾರ್‌ ಪರ ವಕೀಲರರು ಮಾಧ್ಯಮಗಳ ಮುಂದೆ ಹೇಳಿದ್ದರು. ಇದೀಗ ಈ ಕುರಿತಂತೆ ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ಸತ್ಯ ಯಾವತ್ತೂ ಮೇಲುಗೈ ಸಾಧಿಸುತ್ತದೆ" ಎಂಬ ಶೀರ್ಷಿಕೆಯಡಿ ಶ್ರೀದೇವಿ ಭೈರಪ್ಪ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. "ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಬ್ಬಳು ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ" ಎಂದು ಶ್ರೀದೇವಿ ಭೈರಪ್ಪ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

"ಕಳೆದ ಕೆಲವು ತಿಂಗಳಿನಿಂದ ಆದ ಅನೇಕ ನೋವುಗಳ ಹೊರತಾಗಿಯೂ ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು ಮೌನವಾಗಿದ್ದೆ. ಆದರೆ, ನನ್ನ ಸಭ್ಯತೆ ಹಾಗೂ ಮಾನವೀಯತೆಯನ್ನು ಗೌರವಿಸದೆ ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿರುವುದು ದುರದೃಷ್ಟಕರ. ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ" ಎಂದು ಶ್ರೀದೇವಿ ಭೈರಪ್ಪ ಹೇಳಿದ್ದಾರೆ.

ಯುವ ಪರ ವಕೀಲರು ಏನು ಹೇಳಿದ್ದರು?

ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಯುವ ಪರ ವಕೀಲರು ಶ್ರೀದೇವಿ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದರು. "ಶ್ರೀದೇವಿ ಭೈರಪ್ಪ ಅವರು ಯುವ ರಾಜ್‌ಕುಮಾರ್‌ಗೆ ಟಾರ್ಚರ್‌ ನೀಡುತ್ತಿದ್ದರು. ಅಕಾಡೆಮಿಯಿಂದ ವೈಯಕ್ತಿಕ ಖಾತೆಗೆ 3 ಕೋಟಿ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದಾರೆ. ನಿನ್ನನ್ನು ಬೀದಿಗೆ ತರುವೆ ಎಂದು ಯುವನಿಗೆ ಬೆದರಿಸಿದ್ದಾರೆ. ಬಾಯ್‌ಫ್ರೆಂಡ್‌ ಮೂಲಕ ಮಗು ಪಡೆಯುವ ಯೋಚನೆಯಲ್ಲಿ ಶ್ರೀದೇವಿ ಇದ್ದರು. ರಾಧಯ್ಯ ಎಂಬ ಬಾಯ್‌ ಫ್ರೆಂಡ್‌ ಶ್ರೀದೇವಿಗೆ ಇದ್ದಾರೆ" ಎಂದು ಯುವ ಪರ ವಕೀಲರು ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು.

ದಿವಂಗತ ಡಾ. ರಾಜ್‌ಕುಮಾರ್‌ ಅವರ ಮೊಮ್ಮಗ ಮತ್ತು ನಟ ರಾಘವೇಂದ್ರ ರಾಜ್‌ಕುಮಾರ್‌ ಅವರ ಮಗ ಯುವ ರಾಜ್‌ಕುಮಾರ್‌ ಡಿವೋರ್ಸ್‌ ಪ್ರಕ್ರಿಯೆ ಆರಂಭಿಸಿದ ವಿಚಾರ ನಿನ್ನೆ ಬೆಳಕಿಗೆ ಬಂದಿತ್ತು. ಮೇ 26, 2019ರಂದು ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ಭೈರಪ್ಪ ವಿವಾಹವಾಗಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀದೇವಿ- ಯುವ ರಾಜ್‌ಕುಮಾರ್‌ ವಿವಾಹ ಅದ್ಧೂರಿಯಾಗಿ ನಡೆದಿತ್ತು. ಇವರಿಬ್ಬರದ್ದು ಲವ್‌ ಮ್ಯಾರೇಜ್‌ ಆಗಿತ್ತು.

ದೊಡ್ಮನೆ ಕುಟುಂಬದ ಮದುವೆಯಾದ ಕಾರಣ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು ಮದುವೆಗೆ ಹಾಜರಾಗಿದ್ದರು. ವಿನಯ್‌ ರಾಜ್‌ಕುಮಾರ್‌ ನಟನೆಯ ರನ್‌ ಆಂಟನಿ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಶ್ರೀದೇವಿ ಭೈರಪ್ಪ ಕಾಣಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಬಿಡುಗಡೆಯಾದ ಯುವ ಸಿನಿಮಾದ ರಿಲೀಸ್‌ ಕಾರ್ಯಕ್ರಮಗಳಲ್ಲಿ ಇವರು ಕಾಣಿಸಿಕೊಂಡಿರಲಿಲ್ಲ.

ಟಿ20 ವರ್ಲ್ಡ್‌ಕಪ್ 2024