ಕನ್ನಡ ಸುದ್ದಿ  /  ಮನರಂಜನೆ  /  ಡಿವೋರ್ಸ್‌ಗಾಗಿ ನಿವೇದಿತಾ ಗೌಡ ಕೋಟ್ಯಂತರ ರೂ ಜೀವನಾಂಶ ಪಡೆದಿದ್ದಾರ? ಮಕ್ಕಳು ಮಾಡೋ ವಿಷಯ ವಿಚ್ಛೇದನಕ್ಕೆ ಕಾರಣವ? ಚಂದನ್‌ ಶೆಟ್ಟಿ ಸ್ಪಷ್ಟನೆ

ಡಿವೋರ್ಸ್‌ಗಾಗಿ ನಿವೇದಿತಾ ಗೌಡ ಕೋಟ್ಯಂತರ ರೂ ಜೀವನಾಂಶ ಪಡೆದಿದ್ದಾರ? ಮಕ್ಕಳು ಮಾಡೋ ವಿಷಯ ವಿಚ್ಛೇದನಕ್ಕೆ ಕಾರಣವ? ಚಂದನ್‌ ಶೆಟ್ಟಿ ಸ್ಪಷ್ಟನೆ

Chandan Shetty Niveditha Gowda: ನಿವೇದಿತಾ ಗೌಡ ಮತ್ತು ಚಂದನ್‌ ಶೆಟ್ಟಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೆಲವು ವದಂತಿಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಡಿವೋರ್ಸ್‌ಗಾಗಿ ನಿವೇದಿತಾ ಗೌಡ ಕೋಟ್ಯಂತರ ಜೀವನಾಂಶ ಪಡೆದಿದ್ದಾರ?
ಡಿವೋರ್ಸ್‌ಗಾಗಿ ನಿವೇದಿತಾ ಗೌಡ ಕೋಟ್ಯಂತರ ಜೀವನಾಂಶ ಪಡೆದಿದ್ದಾರ?

ಬೆಂಗಳೂರು: ನಿವೇದಿತಾ ಗೌಡ ಮತ್ತು ಚಂದನ್‌ ಶೆಟ್ಟಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೆಲವು ವದಂತಿಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ. ಚಂದನ್‌ ಶೆಟ್ಟಿ ಕೋಟ್ಯಾಂತರ ರೂಪಾಯಿ ಜೀವನಾಂಶ ನೀಡಿದ್ದಾರ? ನಿವೇದಿತಾ ಗೌಡ ಮತ್ತು ಚಂದನ್‌ ಶೆಟ್ಟಿ ಡಿವೋರ್ಸ್‌ ನೀಡಲು ಮಕ್ಕಳು ಮಾಡೋ ವಿಚಾರ ಕಾರಣವೇ? ನಿವೇದಿತಾ ಗೌಡರಿಗೆ ಅಕ್ರಮ ಸಂಬಂಧ ಇದೆ ಎಂಬ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸಂದರ್ಶನದಲ್ಲಿ ವ್ಯಕ್ತಿಯೊಬ್ಬರು ಇವರಿಬ್ಬರ ಕುರಿತು ಸುಳ್ಳು ಹೇಳಿಕೆ ನೀಡಿರುವ ವಿಚಾರ್‌ ಕುರಿತೂ ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಚಂದನ್‌ ಶೆಟ್ಟಿ ಕೋಟ್ಯಾಂತರ ರೂಪಾಯಿ ಜೀವನಾಂಶ ನೀಡಿದ್ದಾರ?

ಚಂದನ್‌ ಶೆಟ್ಟಿ ಅವರು ನಿವೇದಿತಾ ಗೌಡರಿಗೆ ಕೋಟ್ಯಾಂತರ ರೂಪಾಯಿ ಜೀವನಾಂಶ ನೀಡಿದ್ದಾರೆ ಎಂಬ ವದಂತಿ ಇದೆ. ಇದರ ಕುರಿತು ನಾನು ಸ್ಪಷ್ಟನೆ ನೀಡಬೇಕು. ನಿವೇದಿತಾ ಗೌಡ ಅವರಿಗೆ ನಾನು ಯಾವುದೇ ರೀತಿಯ ಜೀವನಾಂಶ ಕೊಟ್ಟಿಲ್ಲ. ಅವರು ಅದನ್ನು ಕೇಳಿಯೂ ಇಲ್ಲ.

ಮಕ್ಕಳು ಮಾಡೋ ವಿಚಾರ ಕಾರಣವೇ?

ನಾನು ಮಗು ಬಯಸಿದೆ, ನಿವೇದಿತಾ ಅದಕ್ಕೆ ಒಪ್ಪಿಲ್ಲ ಎಂಬ ಒಂದು ವದಂತಿ ಇದೆ. ನಾವಿಬ್ಬರೂ ಪ್ರತ್ಯೇಕ ವ್ಯಕ್ತಿಗಳು. ಇಬ್ಬರೂ ಕರಿಯರ್‌ನಲ್ಲಿ ಸಾಕಷ್ಟು ಸಾಧಿಸಲು ಉದ್ದೇಶಿಸಿದ್ದೇವೆ. ನನಗೂ ಜೀವನದಲ್ಲಿ ಇನ್ನಷ್ಟು ಏನಾದರೂ ಮಾಡಬೇಕು ಎಂಬ ಯೋಚನೆ ಇದೆ. ಹೀಗಾಗಿ ನಮ್ಮ ಡಿವೋರ್ಸ್‌ಗೆ ಇದು ಕೂಡ ಕಾರಣವಲ್ಲ ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ. ನಿವೇದಿತಾ ಗೌಡ ಕೂಡ ಚೆನ್ನಾಗಿ ದುಡೀತಾ ಇದ್ದಾರೆ. ಅವರು ಕೂಡ ಇಂಡಿಪೆಂಡೆಂಟ್‌ ವುಮೆನ್‌. ಜೊತೆಯಲ್ಲಿ ಇರುವಾಗಲೂ ಅಷ್ಟೇ. ಅವರ ಕೆಲಸಗಳನ್ನು ಅವರು ನೋಡಿಕೊಳ್ಳುತ್ತಾ ಇದ್ರು. ಅವರ ಖರ್ಚುಗಳನ್ನು ಅವರೇ ನೋಡಿಕೊಳ್ಳುತ್ತ ಇದ್ರು. ಹೀಗಾಗಿ ಈ ವದಂತಿ ಕೂಡ ಸುಳ್ಳು ಎಂದು ಚಂದನ್‌ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಅಕ್ರಮ ಸಂಬಂಧ ಎಂಬ ಕೆಟ್ಟ ವದಂತಿ

"ನಿವೇದಿತಾ ಗೌಡರಿಗೆ ಡಿವೋರ್ಸ್‌ ನೀಡಲು ಮೂರನೇ ವ್ಯಕ್ತಿಯೊಬ್ಬರು ಕಾರಣ ಎಂದು ಕೆಟ್ಟ ವದಂತಿ ಹರಿಯಬಿಡಲಾಗಿದೆ. ಅದು ತುಂಬಾ ಒಳ್ಳೆಯ ಕುಟುಂಬ. ನಾನು ನಿವೇದಿತಾ ಸಾಕಷ್ಟು ಬಾರಿ ಅವರ ಮನೆಗೆ ಹೋಗುತ್ತ ಇರುತ್ತೇವೆ. ಅವರ ಮನೆಗೆ ಹೋಗುವುದು ನಮಗೆ ನಮ್ಮ ಕುಟುಂಬದ ಹಬ್ಬದ ರೀತಿ. ಅಷ್ಟೊಂದು ಜನರನ್ನು ಸೇರಿಸಿ ಅವರಿಗೆ ಊಟ ಹಾಕುವುದು ಇರಬಹುದು, ಅವರಿಗೆ ಎಂಟರ್‌ಟೇನ್‌ಮೆಂಟ್‌ ನೀಡುವುದು ಸುಲಭವಲ್ಲ. ಆ ವ್ಯಕ್ತಿ ಜತೆ ನಿವೇದಿತಾರ ಹೆಸರು ಸೇರಿಸಿ ಸಂಬಂಧ ಕಲ್ಪಿಸುವ ವಿಕೃತಿ ನಾವು ಕನ್ನಡಿಗರಾಗಿ ಅದನ್ನು ಮಾಡಬಾರದು, ಅದು ಶೋಭೆಯಲ್ಲ" ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

ಇದೇ ವಿಚಾರದ ಕುರಿತು ನಿವೇದಿತಾ ಕೂಡ ಮಾತನಾಡಿದ್ದಾರೆ. "ನನಗೆ ಇಂತಹ ಸುದ್ದಿ ನೋಡಿದಾಗ ಬೇಜಾರಾಯ್ತು. ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್‌. ಅವರು ನಮಗೆ ಹುಟ್ಟುಹಬ್ಬದ ವಿಷ್‌ ಮಾಡ್ತಾರೆ. ನಾವು ಮಾಡ್ತಿವಿ. ಈ ವರ್ಷ ಹೀಗೆ ತಿಳಿದುಕೊಂಡ್ರೋ ಗೊತ್ತಿಲ್ಲ. ಅವರಿಗೂ ಅವರದ್ದೇ ಆದ ಸಂಸಾರ ಇರುತ್ತದೆ. ಮಕ್ಕಳು ಇರುತ್ತಾರೆ. ತುಂಬಾ ಹರ್ಟ್‌ ಆಗುತ್ತದೆ. ಸೋಷಿಯಲ್‌ ಮೀಡಿಯಾದಲ್ಲಿ ಲೈಕ್‌, ಎಂಗೇಜ್‌ಮೆಂಟ್‌ ಸಿಗುತ್ತೆ ಎಂದು ಈ ರೀತಿ ಮಾಡುವುದು ತಪ್ಪು. ನಾನೂ ಅವರಿಗೆ, ಅವರ ವೈಫ್‌ಗೆ ಕಾಲ್‌ ಮಾಡಿ ಹೀಗೆಲ್ಲ ಬರ್ತಾ ಇದೆ, ಏನಿದ್ದರೂ ಕ್ಲಾರಿಫೈ ಮಾಡ್ತಿನಿ ಎಂದಿದ್ದೇನೆ. ಅವರೂ ಕೂಡ ತಲೆಕೆಡಿಸಿಕೊಳ್ಳಬೇಡ ಎಂದ್ರು. ಇಬ್ರೂ ಸೇರಿ ನನಗೆ ತುಂಬಾ ಸಪೋರ್ಟ್‌ ಮಾಡಿದ್ರು" ಎಂದು ನಿವೇದಿತಾ ಗೌಡ ಹೇಳಿದ್ದಾರೆ.

ಸಂದರ್ಶನದಲ್ಲಿ ಸುಳ್ಳು ಹೇಳಿಕೆ ನೀಡಿದ ವ್ಯಕ್ತಿಯ ಕುರಿತು

"ಒಬ್ಬ ವ್ಯಕ್ತಿ ಸಂದರ್ಶನದಲ್ಲಿ ಏನೋ ಹೇಳಿದ್ದಾರೆ. ನನಗೆ ತುಂಬಾ ಕ್ಲೋಸ್‌ ಫ್ರೆಂಡ್‌ ಎಂದು ಕ್ಲೇಮ್‌ ಮಾಡ್ತಾ ಇದ್ದಾರೆ. ಆ ರೀತಿ ಏನೂ ಇಲ್ಲ. ಅವರು ಹೇಳಿದ ಮಾತುಗಳು ನನಗೆ ಶಾಕ್‌ ಆಯ್ತು. ಯಾಕೆ ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಅಂತ ಅನಿಸಿತ್ತು. ಆರು ತಿಂಗಳ ಹಿಂದೆ ನನಗೆ ಹೇಳಿದ್ರಂತೆ, ನಿವೇದಿತಾ ಗೌಡಗೆ ಹೈದರಾಬಾದ್‌ನಲ್ಲಿ ಒಬ್ಬ ಹುಡುಗನ ಜತೆ ಸಂಬಂಧ ಇದೆಯಂತೆ. ಹೀಗೆಲ್ಲ ಹೇಳ್ತಾರೆ. ಅವರು ಸಿನಿಮಾ ಶೂಟಿಂಗ್‌ನಲ್ಲಿ ಸಿಕ್ಕಾಗ ಮಾತನಾಡ್ತಾ ಇದ್ವಿ. ಸಿನಿಮಾ ಬಗ್ಗೆ ಚರ್ಚೆ ಮಾಡ್ತಾ ಇದ್ವಿ. ಈ ರೀತಿಯ ವಿಚಾರ ಯಾವತ್ತೂ ಮಾತನಾಡಿಲ್ಲ. ಈ ರೀತಿ ಸುಳ್ಳು ಹೇಳಿಕೆಗಳನ್ನು ಯಾಕೆ ಕೊಟ್ರೋ ಗೊತ್ತಿಲ್ಲ" ಎಂದು ಚಂದನ್‌ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. "ನನ್ನ ಕುಟುಂಬ, ನಿವೇದಿತಾ ಕುಟುಂಬ ನಮ್ಮ ಡಿವೋರ್ಸ್‌ ವಿಚಾರದಲ್ಲಿ ನಮಗೆ ಸ್ವಾತಂತ್ರ್ಯ ನೀಡಿದ್ದಾರೆ. ನೋಡಿ ನೀವು ಇಬ್ಬರೂ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿರುವವರು. ನೀವೇ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಅಂದಿದ್ದಾರೆ. ಹೀಗಿರುವಾಗ ಈ ವ್ಯಕ್ತಿ ಯಾಕೆ ನಮ್ಮ ಕುಟುಂಬದಲ್ಲಿ ಮೂಗು ತೂರಿಸ್ತಾರೆ ಎಂದು ಗೊತ್ತಾಗುತ್ತಿಲ್ಲ" ಎಂದು ಚಂದನ್‌ ಶೆಟ್ಟಿ ಖೇದ ವ್ಯಕ್ತಪಡಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024