ವ್ಹಾವ್, ಡಾನ್ಸ್ ಅಂದ್ರೆ ಇದು: ತಂಗಿ ಮದುವೆಯಲ್ಲಿ ಮೈಮರೆತು ನರ್ತಿಸಿದ ಸಾಯಿ ಪಲ್ಲವಿ, ಅಕ್ಕನನ್ನೇ ಮೀರಿಸುವಂತಿದೆ ತಂಗಿ ನೃತ್ಯ-sai pallavi dance her heart out to kangana ranauts london thumakda at sister poojas sangeet ceremony video viral prs ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ವ್ಹಾವ್, ಡಾನ್ಸ್ ಅಂದ್ರೆ ಇದು: ತಂಗಿ ಮದುವೆಯಲ್ಲಿ ಮೈಮರೆತು ನರ್ತಿಸಿದ ಸಾಯಿ ಪಲ್ಲವಿ, ಅಕ್ಕನನ್ನೇ ಮೀರಿಸುವಂತಿದೆ ತಂಗಿ ನೃತ್ಯ

ವ್ಹಾವ್, ಡಾನ್ಸ್ ಅಂದ್ರೆ ಇದು: ತಂಗಿ ಮದುವೆಯಲ್ಲಿ ಮೈಮರೆತು ನರ್ತಿಸಿದ ಸಾಯಿ ಪಲ್ಲವಿ, ಅಕ್ಕನನ್ನೇ ಮೀರಿಸುವಂತಿದೆ ತಂಗಿ ನೃತ್ಯ

Sai Pallavi Dance: ನಟಿ, ಸಹೋದರಿ ಪೂಜಾ ಕಣ್ಣನ್ ಅವರ ಮದುವೆಯ ಸಂಗೀತ್ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಹೋದರಿ ಮದುವೆಯಲ್ಲಿ ಮೈಮರೆತು ನರ್ತಿಸಿದ ಸಾಯಿ ಪಲ್ಲವಿ, ಅಕ್ಕನನ್ನೇ ಮೀರಿಸುವಂತಿದೆ ತಂಗಿ ನೃತ್ಯ
ಸಹೋದರಿ ಮದುವೆಯಲ್ಲಿ ಮೈಮರೆತು ನರ್ತಿಸಿದ ಸಾಯಿ ಪಲ್ಲವಿ, ಅಕ್ಕನನ್ನೇ ಮೀರಿಸುವಂತಿದೆ ತಂಗಿ ನೃತ್ಯ

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ನಟಿ ಸಾಯಿ ಪಲ್ಲವಿ (Sai Pallavi) ಅವರು ತಮ್ಮ ಸಹೋದರಿ, ನಟಿ ಪೂಜಾ ಕಣ್ಣನ್ ವಿವಾಹದ ಸಂಗೀತ್ ಸೆರೆಮನೆಯಲ್ಲಿ ನೃತ್ಯ ಮಾಡುವ ಮೂಲಕ ಅಭಿಮಾನಿಗಳನ್ನು ಗಮನ ಸೆಳೆದಿದ್ದಾರೆ. ಕಂಗನಾ ರಣಾವತ್ ಕ್ವೀನ್ ಚಿತ್ರದ (Queen) ಲಂಡನ್​ ಥುಮಡ್ಕಾ ಹಿಟ್ ಹಾಡಿಗೆ ಸಹೋದರಿಯೊಂದಿಗೆ ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

2013ರಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಜನಪ್ರಿಯ ಹಾಡಿಗೆ ಸಾಯಿ ಪಲ್ಲವಿ ನೃತ್ಯದ ವೇಳೆ ನೀಲಿ ಮತ್ತು ಬೀಜ್ ಎಥ್ನಿಕ್ ಲುಕ್ ಧರಿಸಿದ್ದರು. ಈ ವರ್ಷದ ಆರಂಭದಲ್ಲೂ ಸಾಯಿ ಪಲ್ಲವಿ ಜಪಾನ್​​ನಲ್ಲಿ ಡ್ಯಾನ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ತನ್ನ ಮುಂದಿನ ಚಿತ್ರ ಏಕ್​ ದಿನ್​​ನ ಶೂಟಿಂಗ್ ಮುಕ್ತಾಯದ ಪಾರ್ಟಿಯಲ್ಲಿ ಆಕೆ ಡ್ಯಾನ್ಸ್ ಮಾಡಿದ್ದರು. ಇದೀಗ ನಟಿಯ ಡ್ಯಾನ್ಸ್ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

ಬಿಳಿ ಸೀರೆಯುಟ್ಟು ಮಿಂಚುತ್ತಿದ್ದ ಸಾಯಿ ಪಲ್ಲವಿ ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ. ಪೂಜಾ ಕಣ್ಣನ್ ಮತ್ತು ವಿನೀತ್ ಜೋಡಿ ಈ ವರ್ಷದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಲಂಡನ್ ತುಮಕ್ಡಾ ಹಾಡಿಗೆ ಸಾಯಿ ಪಲ್ಲವಿ ಜೊತೆಗೆ ತನ್ನ ಸಹೋದರಿ ಹಾಗೂ ವಧು ಪೂಜಾ ಭರ್ಜರಿ ಸ್ಪೆಷ್ಟ್ ಹಾಕುವ ಮೂಲಕ ನೆರೆದಿದ್ದವರನ್ನು ರಂಜಿಸಿದ್ದಾರೆ.

ಸಹೋದರಿಯ ಮದುವೆಯಲ್ಲಿ ಸಾಯಿ ಪಲ್ಲವಿ ಹೇಗೆ ಉತ್ಸುಕರಾಗಿದ್ದರು ಎಂಬುದರ ಕುರಿತು ಬರೆದು ವಿಡಿಯೋಗಳ ಮೂಲಕ ಸೋಷಿಯಲ್ ಮೀಡಿಯಾ ಫ್ಲಾಟ್​​ಫಾರಂಗಳಲ್ಲಿ ಫ್ಯಾನ್ಸ್ ಪೋಸ್ಟ್ ಮಾಡುತ್ತಿದ್ದಾರೆ. ಡ್ಯಾನ್ಸ್ ಮಾಡುವುದು ಎಂದರೆ ಅದೆಷ್ಟು ಪ್ರೀತಿ ಎಂದು ಲವ್ ಎಮೋಜಿಗಳ ಜೊತೆಗೆ ಹಾಕುತ್ತಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ತುಂಬಾ ಕ್ಯೂಟ್ ಇದ್ದಾರೆ ಎಂದೂ ಬರೆದಿದ್ದಾರೆ.

ಬಾಲಿವುಡ್​​​ಗೂ ಸಾಯಿ ಪಲ್ಲವಿ ಎಂಟ್ರಿ

ಸಾಯಿ ಪಲ್ಲವಿ ಅವರು ಕೊನೆಯದಾಗಿ 'ಗಾರ್ಗಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ ನಟಿ ಈಗ ಬಾಲಿವುಡ್​​ಗೂ ಎಂಟ್ರಿಕೊಟ್ಟಿದ್ದಾರೆ. ಜುನೈದ್ ಖಾನ್ ಅವರೊಂದಿಗೆ ಆಕೆ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ವರದಿಯಾಗಿದೆ. ಚಿತ್ರದ ಹೆಸರು ಏಕ್ ದಿನ್ ಎಂದೂ ವರದಿಯಾಗಿದೆ.

ಶಂಕರ್​​ನಾಗ್ ಜೊತೆ ನಟಿಸುವಾಸೆ ಎಂದಿದ್ದ ಸುಂದರಿ

ಇತ್ತೀಚೆಗೆ ಸಾಯಿ ಪಲ್ಲವಿ ಅವರು ಕನ್ನಡದ ಶಂಕರ್​​ನಾಗ್ ಕುರಿತೂ ಮಾತನಾಡಿದ್ರು. ಕನ್ನಡಕ್ಕೆ ಡಬ್ ಆಗಿದ್ದ ಗಾರ್ಗಿ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಶಂಕರ್​​ನಾಗ್​​​ ಅವರನ್ನು ಹಾಡಿ ಹೊಗಳಿದ್ದರು. ಆ್ಯಂಕರ್​​​ ಅನುಶ್ರೀ ಅವರ ಯೂಟ್ಯೂಟ್​​ನಲ್ಲಿ ಸಂದರ್ಶನ ನೀಡಿದ್ದ ಸಾಯಿ ಪಲ್ಲವಿ, ಕರಾಟೆ ಕಿಂಗ್​ರನ್ನು ನೆನಪಿಸಿಕೊಂಡಿದ್ದರು. ಅವರೊಂದಿಗೆ ನಟಿಸಬೇಕಿತ್ತು ಎಂದು ಬಯಕೆ ವ್ಯಕ್ಯಪಡಿಸಿದ್ದರು.

ಈ ವೇಳೆ ಕನ್ನಡದ ಚಿತ್ರರಂಗದಲ್ಲಿ ಯಾರೊಂದಿಗೆ ಕೆಲಸ ಮಾಡಬೇಕು ಎಂಬಾಸೆ ಇದೆ ಎಂದು ನಿರೂಪಕಿ ಅನುಶ್ರೀ ಅವರು ಸಾಯಿ ಪಲ್ಲವಿ ಅವರಿಗೆ ಕೇಳಿದ್ರು. ಅದಕ್ಕೆ ಉತ್ತರ ನೀಡಿದ್ದ ಶಂಕರ್​ನಾಗ್ ಸರ್​ ಬದುಕಿದ್ದರೆ ಅವರೊಂದಿಗೆ ಕೆಲಸ ಮಾಡುತ್ತಿದ್ದೆ ಎಂದು ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು. 2015ರಲ್ಲಿ ಪ್ರೇಮಮ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದ ಸಾಯಿ ಪಲ್ಲವಿ, ಒಟ್ಟು 15 ಚಿತ್ರಗಳಲ್ಲಿ ನಟಿಸಿದ್ದಾರೆ.

ಬಾಲಿವುಡ್​​ನಲ್ಲಿ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ ಒಂದು ರಾಮಾಯಣ ಚಿತ್ರವಾಗಿದ್ದು, ಆಕೆಯೇ ಸೀತೆಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆ ಇದೆ. ಮೂಲತಃ ಮಳೆಯಾಳಂ ನಟಿಯಾದರೂ ಆಕೆ ನಟಿಸಿರುವುದು ಮೂರು ಚಿತ್ರಗಳಲ್ಲಿ ಮಾತ್ರ. ಉಳಿದಂತೆ ತೆಲುವು, ತಮಿಳು ಚಿತ್ರಗಳಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

mysore-dasara_Entry_Point