ಕನ್ನಡ ಸುದ್ದಿ  /  ಮನರಂಜನೆ  /  ಜೋಗ್ 101: ಚಿನ್ನಾರಿಮುತ್ತ ವಿಜಯ್‌ ರಾಘವೇಂದ್ರ ನಟನೆಯ ಹೊಸ ಸಿನಿಮಾದ ಹಾಡು ಬಿಡುಗಡೆ; ರಘು ದೀಕ್ಷಿತ್ ಧ್ವನಿಗೆ ಕಿವಿಯಾಗಿ

ಜೋಗ್ 101: ಚಿನ್ನಾರಿಮುತ್ತ ವಿಜಯ್‌ ರಾಘವೇಂದ್ರ ನಟನೆಯ ಹೊಸ ಸಿನಿಮಾದ ಹಾಡು ಬಿಡುಗಡೆ; ರಘು ದೀಕ್ಷಿತ್ ಧ್ವನಿಗೆ ಕಿವಿಯಾಗಿ

ಚಿನ್ನಾರಿಮುತ್ತಾ ವಿಜಯ್‌ ರಾಘವೇಂದ್ರ ನಟನೆಯ, ವಿಜಯ್ ಕನ್ನಡಿಗ ನಿರ್ದೇಶನದ, "ಜೋಗ್ 101" ಚಿತ್ರದ ಮೊದಲನೆಯ ಹಾಡು "ಮುಂಜಾನೆ ಮಂಜನ್ನು" ಹಾಡಿನ ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ಹಾಡು ರಘುದೀಕ್ಷಿತ್‌ ಮಧುರ ಕಂಠದಲ್ಲಿ ಮೂಡಿ ಬಂದಿದೆ.

ಜೋಗ್ 101: ಚಿನ್ನಾರಿಮುತ್ತ ವಿಜಯ್‌ ರಾಘವೇಂದ್ರ ಹೊಸ ಸಿನಿಮಾದ ಹಾಡು ಬಿಡುಗಡೆ
ಜೋಗ್ 101: ಚಿನ್ನಾರಿಮುತ್ತ ವಿಜಯ್‌ ರಾಘವೇಂದ್ರ ಹೊಸ ಸಿನಿಮಾದ ಹಾಡು ಬಿಡುಗಡೆ

ಬೆಂಗಳೂರು: ವಿಜಯ್‌ ರಾಘವೇಂದ್ರ ನಟನೆಯ, ವಿಜಯ್ ಕನ್ನಡಿಗ ನಿರ್ದೇಶನದ, "ಜೋಗ್ 101" ಚಿತ್ರದ ಮೊದಲನೆಯ ಹಾಡು "ಮುಂಜಾನೆ ಮಂಜನ್ನು" ಹಾಡಿನ ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಲಾಗಿದೆ. ಮುಂಜಾನೆ ಮಂಜನ್ನು ಹೊತ್ತು... ಚೆಲ್ಲೈತೆ ಬೆಳಕಿನ ಮುತ್ತು,ಭೂಮಿಲಿ ಬೇರು ಇಟ್ಟವ್ನೆ, ಬಾನಿನಿಂದ ನೀರು ಬಿಟ್ಟವ್ನೆ, ಎಲ್ಲೆಲ್ಲೂ ಜೀವ ಇಟ್ಟವ್ನೆ, ಲೋಕನಾ ಮುಂದೆ ನಡೆಸವ್ನೆ ಹೀಗೆ ಈ ಹಾಡು ಸಾಗುತ್ತದೆ. ನಿರ್ಮಾಪಕ & ಕ್ರಿಯೇಟಿವ್ ಡೈರೆಕ್ಟರ್ ರಾಘುರವರ ಸೆವೆನ್ ಸ್ಟಾರ್ ಪಿಕ್ಚರ್ಸ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಸಿನಿಮಾ ಇದಾಗಿದೆ.

ಟ್ರೆಂಡಿಂಗ್​ ಸುದ್ದಿ

ಅವಿನಾಶ್ ಆರ್ ಬಾಸೂತ್ಕರ್ ಅವರ ಸಂಗೀತ ನಿರ್ದೇಶನವಿರುವ ಈ ಹಾಡಿಗೆ ಡಾ.ವಿ.ನಾಗೇಂದ್ರಪ್ರಸಾದ್ ರವರ ಸಾಹಿತ್ಯವಿದ್ದು, ಭಾರತದ ಸುಪ್ರಸಿದ್ಧ ಗಾಯಕ ರಘುದೀಕ್ಷಿತ್ ಹಾಡಿದ್ದಾರೆ ಹಾಗು ಈ ಹಾಡಿನ ಇಂಗ್ಲೀಷ್ ಭಾಷಾಂತರವನ್ನು ಸುಮನ್ ಜಾದೂಗಾರ್ ಮಾಡಿದ್ದಾರೆ.

ಸುನೀತ್ ಹಲಗೇರಿ ಛಾಯಾಗ್ರಹಣ, ಮೋಹನ್ ರಂಗಕಹಳೆ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಕಲೈ ಮಾಸ್ಟರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶೇಖರ್ ನಟಿಸಿದ್ದಾರೆ. ಗೋವಿಂದೇ ಗೌಡ, ಕಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ "ಜೋಗ್ 101" ಚಿತ್ರದ ತಾರಾಬಳಗದಲ್ಲಿದ್ದಾರೆ.

ರಘುದೀಕ್ಷಿತ್‌ ಹಾಡಿರುವ ಮುಂಜಾನೆ ಮಂಜನ್ನು ಹಾಡು ಇಲ್ಲಿದೆ

ಈ ಹಾಡಿನ ಸಾಹಿತ್ಯದ ಕುರಿತು ಮತ್ತು ರಘು ದೀಕ್ಷಿತ ಮಧುರ ಕಂಠದ ಕುರಿತು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. "ತುಂಬಾ ಸುಂದರವಾಗಿದೆ ಹಾಡು. ಏನೋ ಹೊಸತನದಿಂದ ಕೂಡಿದೆ. ಸಂಗೀತ ಪ್ರೇಮಿಗಳಿಗೆ ಇಷ್ಟವಾಗುವಂತೆ ಇದೆ ಹಾಡು" "ಹಾಡಿನ ಸಾಹಿತ್ಯ ಮತ್ತು ರಘು ದೀಕ್ಷಿತರ ಧ್ವನಿ ಕೇಳಲು ಅದ್ಭುತವಾಗಿದೆ" "ತುಂಬಾ ಒಳ್ಳೆಯ ಹಾಡು" ಎಂದೆಲ್ಲ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಗೌರಿ ಚಿತ್ರತಂಡದಿಂದ ಹೊಸ ಅಪ್‌ಡೇಟ್‌

 ಪ್ರೇಮಿಗಳ ದಿನಕ್ಕೆ ಭಾವನೆಗಳ ಸಂಗಮದ ಫೋಟೋ ಶೂಟ್ ಬಿಡುಗಡೆ ಮಾಡಲಾಗಿದೆ.
ಪ್ರೇಮಿಗಳ ದಿನಕ್ಕೆ ಭಾವನೆಗಳ ಸಂಗಮದ ಫೋಟೋ ಶೂಟ್ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಹು ನಿರೀಕ್ಷಿತ `ಗೌರಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಖ್ಯಾತ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ; ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್ಜಿತ್ ಲಂಕೇಶ್ ನಾಯಕ ನಟನಾಗಿದ್ದು; ಸಾನ್ಯಾ ಅಯ್ಯರ್ ನಾಯಕಿಯಾಗಿದ್ದಾರೆ. ಬಹುದೊಡ್ಡ ತಾರಾಗಣವಿರುವ `ಗೌರಿ’ ಚಿತ್ರದ ಅಪರೂಪದ; ವಿಭಿನ್ನ; ವಿಶಿಷ್ಠ ಶೈಲಿಯ ಫೋಟೋ ಶೂಟ್ ಬುಕ್ ಮೈ ಕ್ಯಾಪ್ಚರ್ ನಲ್ಲಿ ಯಶಸ್ವಿಯಾಗಿ ನಡೆದಿದೆ. ಖ್ಯಾತ ಛಾಯಾಗ್ರಾಹಕ ಕೆನಡಾದ ರೋಹಿತ್ ಅವರ ಕ್ಯಾಮೆರಾ ಕೈಚಳಕ, ದೀಪಿಕಾ ಪಡುಕೋಟೆ ಸೇರಿದಂತೆ ಅನೇಕ ಖ್ಯಾತ ಸೆಲಬ್ರೆಟಿಗಳ ಮೇಕಪ್ ಆರ್ಟಿಸ್ಟ್ ಗೌರಿ ಕಪೂರ್ ಅವರ ಮೇಕಪ್ ಮೋಡಿ ಮಾಡಿದೆ. ಪ್ರೇಮಿಗಳ ದಿನಕ್ಕೆ ಭಾವನೆಗಳ ಸಂಗಮದ ಫೋಟೋ ಶೂಟ್ ಬಿಡುಗಡೆ ಮಾಡಲಾಗಿದೆ.

IPL_Entry_Point