ಕನ್ನಡ ಸುದ್ದಿ / ಮನರಂಜನೆ /
Bagheera First Half Review: ವ್ಯವಸ್ಥೆ ವಿರುದ್ಧ ಶ್ರೀಮುರಳಿಯ 'ಬಘೀರ' ಮುಖವಾಡ! ಹೇಗಿದೆ ಬಘೀರ ಚಿತ್ರದ ಮೊದಲಾರ್ಧ
Bagheera First Half Review: ಮೊದಲ ಭಾಗದಲ್ಲಿ ಬಘೀರನಾಗಿ ಶ್ರೀ ಮುರಳಿ ರಗಡ್ ಪೊಲೀಸ್ ಅವತಾರದಲ್ಲಿ ಮಿಂಚಿದ್ದಾರೆ. ಆ ಖಾಕಿ ಗತ್ತು, ಕಡಿಮೆ ಮಾತು ಅವರ ಪ್ರಭಾವಳಿಯನ್ನ ಹೆಚ್ಚಿಸಿದೆ. ಪ್ರಕಾಶ್ ರಾಜ್, ಅವಿನಾಶ್, ರಾಣಾ ಪಾತ್ರವೂ ಮೈ ನಡುಗಿಸುತ್ತದೆ. ಇವರೆಲ್ಲರ ಟಾರ್ಗೇಟ್ ಒಬ್ಬನೇ, ಅವನೇ ಬಘೀರ!
ಶ್ರೀಮುರಳಿಯ ಬಘೀರ ಚಿತ್ರದ ಮೊದಲಾರ್ಧ ಹೇಗಿದೆ?
Bagheera First Half Review: ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಬಘೀರ ಸಿನಿಮಾ ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಇದೀಗ ಇದೇ ಸಿನಿಮಾ ಇಂದು (ಅ. 31) ರಾಜ್ಯಾದ್ಯಂತ ತೆರೆಕಂಡಿದೆ. ಪಕ್ಕದ ತೆಲುಗು ನಾಡಿನಲ್ಲೂ ಅಲ್ಲಿನ ತೆಲುಗಿನಲ್ಲಿ ರಿಲೀಸ್ ಆಗಿದೆ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ಕಾರಣಕ್ಕೂ ಈ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ನಿರ್ಮಾಣ ವಿಚಾರದಲ್ಲಿ ಹೆಸರು ಮಾಡಿರುವ ಹೊಂಬಾಳೆ ಫಿಲಂಸ್ ಈ ಚಿತ್ರ ನಿರ್ಮಿಸಿದೆ. ಇದೀಗ ಇದೇ ಸಿನಿಮಾಕ್ಕೆ ಚಿತ್ರಮಂದಿರಗಳಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಹಾಗಾದರೆ, ಈ ಚಿತ್ರದ ಮೊದಲಾರ್ಧ ಹೇಗಿದೆ? ಪ್ಲಸ್ ಏನು, ಮೈನಸ್ ಏನು? ಇಲ್ಲಿದೆ Bagheera First Half Review.
- ಪುಟಾಣಿ ವೇದಾಂತ್‌ಗೆ ಸೂಪರ್ ಹೀರೋ ಆಗೋ ಕನಸು.. ಅದರಂತೆ ಅಮ್ಮನ ಮಾತಂತೆ, ಅಪ್ಪನಂತೆ ಐಪಿಎಸ್ ಪಾಸ್ ಮಾಡಿ ಪೊಲೀಸ್ ಅಧಿಕಾರಿಯಾಗುತ್ತಾನೆ.
- ವ್ಯವಸ್ಥೆ ಬಗ್ಗೆ ತನ್ನದೇ ಆದ ನೀತಿ, ನಿಯಮ ಪಾಲಿಸುವ ವೇದಾಂತ್, ಖಡಕ್ ಪೊಲೀಸ್ ಆಗಿಯೇ ಮಿಂಚುತ್ತಾನೆ. ಭ್ರಷ್ಟರ ನಡುವೆ ಸೆಟೆದು ನಿಲ್ಲುತ್ತಾನೆ. ಆದರೆ, ಅದೇ ವ್ಯವಸ್ಥೆಯ ಅಡಿಯಾಳಾಗುವ ಸ್ಥಿತಿಗೂ ತಲುಪುತ್ತಾನೆ. ಮೇಲಾಧಿಕಾರಿಗಳ ಕೈಗೊಂಬೆಯಾಗುತ್ತಾನೆ.
- ಅದೇ ವ್ಯವಸ್ಥೆ ವಿರುದ್ಧ ತಿರುಗಿ ಬೀಳಲು ಮುಖವಾಡದ ಮೊರೆ ಹೋಗುತ್ತಾನೆ.. ಮಂಗಳೂರಲ್ಲಿ ನಡೆಯುವ ಅಕ್ರಮ ಚಟುವಟಿಕಗಳಿಗೆ ಸಹಸ್ವಪ್ನವಾಗಿ ಬದಲಾಗುತ್ತಾನೆ.
- ಎದುರು ನಿಲ್ಲಬೇಡ, ಸಿಸ್ಟಮ್‌ನಲ್ಲಿ ಒಬ್ಬನಾಗು ಎಂಬ ಅಪ್ಪನ ಮಾತಂತೆ, ಖಾಕಿ ವೇಷದಲ್ಲಿಯೇ, ಬೇರೆ ಮುಖವಾಡ ಹಾಕಿಕೊಳ್ಳುತ್ತಾನೆ.
- ಸ್ಟೇಷನ್ ಮುಂದೆ ಘಟಿಸುವ ಘಟನೆಯೊಂದು ವೇದಾಂತನ ರೋಷಾವೇಷ ಕೆಣಕುತ್ತದೆ. ಅಲ್ಲಿಗೆ ಅದೇ ವೇದಾಂತ ಬಘೀರನ ಅವತಾರ ಎತ್ತುತ್ತಾನೆ. ಮಂಗಳೂರಿನ ಸಣ್ಣ ಸಣ್ಣ ಹುಳುಗಳ ಸರ್ವನಾಶ ಮಾಡುತ್ತಾನೆ.
- ಹೀಗೆ ಸಾಗುವ ಬಘೀರ, ಎರಡನೇ ಭಾಗಕ್ಕೆ ಹೊರಳುತ್ತಾನೆ. ಸಣ್ಣ ಮೀನುಗಳು ಮಾಯವಾಗಿ, ದೊಡ್ಡ ತಿಮಿಂಗಲಗಳ ಎಂಟ್ರಿಯಾಗುತ್ತದೆ. ಭ್ರಷ್ಟಾಚಾರದ ಕಥೆ ಪಕ್ಕಕ್ಕೆ ಸರಿದು, ಆರ್ಗನ್ ಟ್ರೇಡಿಂಗ್ ಮುನ್ನೆಲೆಗೆ ಬರುತ್ತದೆ.
- ಪ್ರಕಾಶ್ ರಾಜ್, ಅವಿನಾಶ್, ರಾಣಾ ಪಾತ್ರವೂ ಮೈ ನಡುಗಿಸುತ್ತದೆ. ಇವರೆಲ್ಲರ ಟಾರ್ಗೇಟ್ ಒಬ್ಬನೇ, ಅವನೇ ಬಘೀರ!
- ಮೊದಲ ಭಾಗದಲ್ಲಿ ಬಘೀರನಾಗಿ ಶ್ರೀಮುರಳಿ ರಗಡ್ ಪೊಲೀಸ್ ಅವತಾರದಲ್ಲಿ ಮಿಂಚಿದ್ದಾರೆ. ಆ ಖಾಕಿ ಗತ್ತು, ಕಡಿಮೆ ಮಾತು ಅವರ ಪ್ರಭಾವಳಿಯನ್ನ ಹೆಚ್ಚಿಸಿದೆ.
- ಮೊದಲಾರ್ಧ ದಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಗಿಟ್ಟಿಸಿಕೊಳ್ಳದ ರುಕ್ಮಿಣಿ ವಸಂತ್ ಅಲ್ಲಲ್ಲಿ ಚೆಂದವಾಗಿ ಕಂಡಿದ್ದಾರೆ.
- ಮೊದಲಾರ್ಧದಲ್ಲಿ ಕೇವಲ ಒಂದೇ ಹಾಡಿದೆ. ಅದು ಕಿವಿಗಿಂಪು. ಆಕ್ಷನ್ ಚಿತ್ರಕ್ಕೆ ಬೇಕಾದ ಹಿನ್ನೆಲೆ ಸಂಗೀತವನ್ನು ಅಜನೀಶ್ ಲೋಕನಾಥ್ ಅಚ್ಚುಕಟ್ಟಾಗಿಯೇ ನೀಡಿದ್ದಾರೆ.
ವಿಭಾಗ
ಕನ್ನಡ ಚಲನಚಿತ್ರ ಸುದ್ದಿ, ಟಿವಿ ಧಾರಾವಾಹಿಗಳು, ಒಟಿಟಿ, ವೆಬ್ ಸಿರೀಸ್, ಸಿನಿಮಾ ವಿಮರ್ಶೆ, ಸ್ಯಾಂಡಲ್ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್, ಕಾಲಿವುಡ್ ಲೋಕದ ತಾಜಾ ವಿದ್ಯಮಾನಗಳಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಮನರಂಜನೆ ವಿಭಾಗ ನೋಡಿ.