ಕನ್ನಡ ಸುದ್ದಿ  /  ಮನರಂಜನೆ  /  Babyshower Reels: ಈ ಸಾಧನೆಗೆ ನಾನಲ್ಲ, ನನ್ನ ಪತಿ ದರ್ಶಕ್‌ ಗೌಡ ಕಾರಣ; ಸೀಮಂತ ಸಂಭ್ರಮದಲ್ಲಿ ನಟಿ ಶಿಲ್ಪಾ ರವಿ ರೀಲ್ಸ್‌

Babyshower Reels: ಈ ಸಾಧನೆಗೆ ನಾನಲ್ಲ, ನನ್ನ ಪತಿ ದರ್ಶಕ್‌ ಗೌಡ ಕಾರಣ; ಸೀಮಂತ ಸಂಭ್ರಮದಲ್ಲಿ ನಟಿ ಶಿಲ್ಪಾ ರವಿ ರೀಲ್ಸ್‌

ಕನ್ನಡ ಕಿರುತೆರೆಯ ಸೆಲೆಬ್ರಿಟಿ ದಂಪತಿ ದರ್ಶಕ್‌ ಗೌಡ ಮತ್ತು ನಟಿ ಶಿಲ್ಪಾ ರವಿ ಹೊಸ ರೀಲ್ಸ್‌ ಹಂಚಿಕೊಂಡಿದ್ದಾರೆ. ತಮ್ಮ ಸೀಮಂತ ಸಂಭ್ರಮದ ರೀಲ್ಸ್‌ ಹಂಚಿಕೊಂಡಿದ್ದು, ಶೀಘ್ರದಲ್ಲಿಯೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ದಂಪತಿ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ವಿವಾಹವಾಗಿದ್ದರು.

Babyshower Reels: ಈ ಸಾಧನೆಗೆ ನಾನಲ್ಲ, ನನ್ನ ಪತಿ ದರ್ಶಕ್‌ ಗೌಡ ಕಾರಣ ಎಂದ ನಟಿ ಶಿಲ್ಪಾ ರವಿ
Babyshower Reels: ಈ ಸಾಧನೆಗೆ ನಾನಲ್ಲ, ನನ್ನ ಪತಿ ದರ್ಶಕ್‌ ಗೌಡ ಕಾರಣ ಎಂದ ನಟಿ ಶಿಲ್ಪಾ ರವಿ

ಬೆಂಗಳೂರು: ಕನ್ನಡ ಕಿರುತೆರೆಯ ಸೆಲೆಬ್ರಿಟಿ ದಂಪತಿ ದರ್ಶಕ್‌ ಗೌಡ ಮತ್ತು ನಟಿ ಶಿಲ್ಪಾ ರವಿ ಹೊಸ ರೀಲ್ಸ್‌ ಹಂಚಿಕೊಂಡಿದ್ದಾರೆ. ತಮ್ಮ ಸೀಮಂತ ಸಂಭ್ರಮದ ರೀಲ್ಸ್‌ ಹಂಚಿಕೊಂಡಿದ್ದು, ಶೀಘ್ರದಲ್ಲಿಯೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ದಂಪತಿ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ವಿವಾಹವಾಗಿದ್ದರು.

ಟ್ರೆಂಡಿಂಗ್​ ಸುದ್ದಿ

ರೀಲ್ಸ್‌ ಹಂಚಿಕೊಂಡ ಶಿಲ್ಪಾ ರವಿ

ತಮ್ಮ ಸೀಮಂತ ಸಂಭ್ರಮವನ್ನು ತಮಾಷೆಯ, ಭಾವನಾತ್ಮಕ ರೀಲ್ಸ್‌ ಮೂಲಕ ಜೀವ ಹೂವಾಗಿದೆ ಸೀರಿಯಲ್‌ ನಟಿ ಶಿಲ್ಪಾ ರವಿ ಹಂಚಿಕೊಂಡಿದ್ದಾರೆ. "ಎಲ್ಲರೂ ಈ ಸಾಧನೆಗೆ ನಾನೇ ಕಾರಣ ಎನ್ನುತ್ತಾರೆ. ಆದರೆ, ಇದಕ್ಕೆಲ್ಲ ಕಾರಣ ಇವರು" ಎನ್ನುವ ಆಡಿಯೋ ಇರುವ ರೀಲ್ಸ್‌ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಕೊನೆಗೆ ಈ ದಂಪತಿ ಭಾವನಾತ್ಮಕವಾಗಿ ಹತ್ತಿರವಾಗುವ ದೃಶ್ಯವಿದೆ. ಪುಟ್ಟ ರೀಲ್ಸ್‌ ಮೂಲಕ ಸೀಮಂತ ಸಂಭ್ರಮವನ್ನು ಇವರು ಹಂಚಿಕೊಂಡಿದ್ದಾರೆ. ಇವರಿಗೆ ಅಭಿನಂದನೆಗಳ ಮಹಾಪೂರವೇ ಸೋಷಿಯಲ್‌ ಮೀಡಿಯಾದಲ್ಲಿ ಹರಿದುಬರುತ್ತಿದೆ.

ನಟಿ ಶಿಲ್ಪಾ ರವಿಗೆ ಸೀಮಂತ ಸಂಭ್ರಮ

ಸೀಮಂತ ಕಾರ್ಯಕ್ರಮಕ್ಕೆ ನಟಿ ಶಿಲ್ಪಾ ರವಿ ಪಿಂಕ್‌ ಬಣ್ಣದ ಬಾರ್ಡ್‌ ಇರುವ ತುಸು ಬಿಳಿ ಬಣ್ಣದ ಸೀರೆ ಮತ್ತು ಪಿಕ್‌ ಬಣ್ಣದ ಬ್ಲೌಸ್‌ ಧರಿಸಿದ್ದಾರೆ. ಈ ಬೇಬಿಶವರ್‌ ಕಾರ್ಯಕ್ರಮದಲ್ಲಿ ದರ್ಶಕ್‌ ಪಿಂಕ್‌ ಬಣ್ಣದ ಶರ್ಟ್‌ ಧರಿಸಿದ್ದಾರೆ. ಬಿಳಿ ಬಣ್ಣದ ವೇಸ್ಟಿ ಉಟ್ಟಿದ್ದಾರೆ.

ಶಿಲ್ಪಾ ರವಿ ಪರಿಚಯ

ಕನ್ನಡ ನಟಿ ಶಿಲ್ಪಾ ರವಿ ಜೀವ ಹೂವಾಗಿದೆ ಸೀರಿಯಲ್‌ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಈ ಸೀರಿಯಲ್‌ನಲ್ಲಿ ಮಧು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್‌ ಕುಮಾರ್‌ ನಿರ್ಮಾಣದ ಸೀರಿಯಲ್‌ನಲ್ಲಿ ಇವರು ನಟಿಸುತ್ತಿದ್ದರು. "ಸುಶಿಕ್ಷಿತ ಯುವತಿ ಮಧುಮಿತ ನಗರದಲ್ಲಿ ಓದಿದ ಬಳಿಕ ಹಳ್ಳಿಗೆ ಹಿಂತುರುಗುತ್ತಾಳೆ. ತಮ್ಮ ಕುಟುಂಬಕ್ಕೆ ಆಗಿ ಬರದ ಕುಟುಂಬದ ಹುಡುಗನ ಪ್ರೀತಿಗೆ ಬೀಳುತ್ತಾಳೆ". ಈ ಮಧುಮಿತಳ ಕಥೆಗೆ ಶಿಲ್ಪಾ ರವಿ ಜೀವ ತುಂಬಿದ್ದರು.

ದರ್ಶಕ್‌ ಶಿಲ್ಪಾ ರವಿ ಪ್ರೇಮಕಥೆ

ಪ್ರಶಸ್ತಿ ಸಮಾರಂಭವೊಂದರಲ್ಲಿ ನಟಿ ಶಿಲ್ಪಾ ರವಿ ಮತ್ತು ದರ್ಶಕ್‌ ಪರಸ್ಪರ ಭೇಟಿಯಾಗಿದ್ದರು. ತನ್ನ ಸ್ನೇಹಿತನ ಸಹೋದರಿ ಈ ಶಿಲ್ಪಾ ಎಂದು ದರ್ಶಕ್‌ ತಿಳಿದುಕೊಂಡಿದ್ದಾರೆ. ಬಳಿಕ ಇವರಿಬ್ಬರ ನಡುವೆ ಸ್ನೇಹವಾಗಿ, ಸ್ನೇಹ ಪ್ರೀತಿ ತಿರುಗಿದೆ. ಬೇರೆ ಪ್ರಾಜೆಕ್ಟ್‌ನಲ್ಲಿ ಬಿಝಿಯಾಗಿದ್ದ ದರ್ಶಕ್‌ ಗೌಡರಿಗೆ ಲವ್‌, ಡೇಟಿಂಗ್‌ ಅಂತ ಸುತ್ತಲು ಸಮಯವಿರಲಿಲ್ಲವಂತೆ. ಹೀಗಾಗಿ, ಈಕೆನಗೆ ನೇರವಾಗಿ "ವಿಲ್‌ ಯು ಮ್ಯಾರಿ ಮೀ" ಎಂದು ಕೇಳಿದ್ದಾರೆ. ಖುಷಿಯಿಂದ ಎರಡೂ ಕುಟುಂಬದವರೂ ಇವರ ಮದುವೆಗೆ ಒಪ್ಪಿದ್ದಾರೆ. ಕೊರೊನಾ ಸಮಯದಲ್ಲಿ ಇವರಿಗೆ ವಿವಾಹವಾಗಿತ್ತು.

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಕವಿತಾ ಗೌಡ

ಇದೇ ಸಮಯದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ ನಟಿ ಕವಿತಾ ಗೌಡ ಮತ್ತು ಚಂದನ್‌ ಕುಮಾರ್‌ ಕೂಡ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ತಾವಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇವರಿಬ್ಬರೂ ಕೂಡ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ವಿವಾಹವಾಗಿದ್ದರು. ಧಾರಾವಾಹಿನಟಿ ಕವಿತ ಲಕ್ಷ್ಮೀಬಾರಮ್ಮ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸೀರಿಯಲ್‌ ನಟ ಚಂದನ್‌ ಕುಮಾರ್‌ ಕನ್ನಡ ಮಾತ್ರವಲ್ಲದೆ ತೆಲುಗು ಸೀರಿಯಲ್‌ನಲ್ಲೂ ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ಕವಿತಾ ಮತ್ತು ಚಂದನ್‌ ಕುಮಾರ್‌ ಜತೆಯಾಗಿ ನಟಿಸಿದ್ದರು.

IPL_Entry_Point