ಕನ್ನಡ ಸುದ್ದಿ  /  Entertainment  /  Sandalwood News Actor Challenging Star Darshan Left A Car Worth Crores And Went On A Bullock Cart With Son Mnk

Darshan: ಕೋಟಿ ಬೆಲೆಯ ಕಾರ್‌ ಬದಿಗಿಟ್ಟು, ಜೋಡೆತ್ತಿನ ಬಂಡಿ ಏರಿ ಮಗನ ಜತೆಗೆ ಕೆರೆದಂಡೆಯಲ್ಲೇ ತಣ್ಣನೆಯ ರಾತ್ರಿ ಕಳೆದ ದರ್ಶನ್‌! VIDEO

ನಟ ದರ್ಶನ್‌ ಆಗಾಗ ತಮ್ಮ ಸರಳತೆಯ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಮುನ್ನೆಲೆಗೆ ಬರುತ್ತಿರುತ್ತಾರೆ. ಈಗ ಬಿರು ಬೇಸಿಗೆಯಲ್ಲಿ ಎತ್ತಿಬಂಡಿ ಏರಿ ಫಾರ್ಮ್‌ಹೌಸ್‌ ಬಳಿಯ ಕೆರೆದಂಡೆಯಲ್ಲಿ ಒಂದಿಡೀ ರಾತ್ರಿಯನ್ನು ಕಳೆದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Darshan: ಕೋಟಿ ಬೆಲೆಯ ಕಾರ್‌ ಬದಿಗಿಟ್ಟು, ಜೋಡೆತ್ತಿನ ಬಂಡಿ ಏರಿ ಮಗನ ಜತೆಗೆ ಕೆರೆದಂಡೆಯಲ್ಲೇ ತಣ್ಣನೆಯ ರಾತ್ರಿ ಕಳೆದ ದರ್ಶನ್‌!
Darshan: ಕೋಟಿ ಬೆಲೆಯ ಕಾರ್‌ ಬದಿಗಿಟ್ಟು, ಜೋಡೆತ್ತಿನ ಬಂಡಿ ಏರಿ ಮಗನ ಜತೆಗೆ ಕೆರೆದಂಡೆಯಲ್ಲೇ ತಣ್ಣನೆಯ ರಾತ್ರಿ ಕಳೆದ ದರ್ಶನ್‌!

Actor Darshan: ಸ್ಯಾಂಡಲ್‌ವುಡ್‌ ನಟ ದರ್ಶನ್‌ ಬರೀ ಸಿನಿಮಾಗಳಿಂದ ಮಾತ್ರವಲ್ಲ ಅದೆಲ್ಲದಕ್ಕಿಂತ ಹೆಚ್ಚಾಗಿ, ತಮ್ಮ ಸರಳತೆಯ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಆಗಾಗ ಸುದ್ದಿಯ ಮುನ್ನೆಲೆಗೂ ಬರುತ್ತಿರುತ್ತಾರೆ. ಅಭಿಮಾನಿ ವಲಯದಿಂದಲೂ ಸರಳತೆಯ ಸರದಾರ ಎಂದೂ ಕರೆಸಿಕೊಳ್ಳುತ್ತಿರುತ್ತಾರೆ. ಹೋದಲ್ಲಿ ಬಂದಲ್ಲಿ ದರ್ಶನ್‌ ಎಷ್ಟು ಸಿಂಪಲ್‌ ಎಂಬುದಕ್ಕೆ ಸೋಷಿಯಲ್‌ ಮೀಡಿಯಾದಲ್ಲೂ ಸಾಕಷ್ಟು ವಿಡಿಯೋ ಉದಾಹರಣೆಗಳಿವೆ. ಈಗ ಅದಕ್ಕೆ ಕನ್ನಡಿ ಹಿಡಿದಂತೆ, ಮತ್ತೊಂದು ಹೊಸ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ಕಾಟೇರ ಸಿನಿಮಾ ದರ್ಶನ್‌ ಸಿನಿಮಾ ಕೆರಿಯರ್‌ನಲ್ಲಿಯೇ ದೊಡ್ಡ ಹಿಟ್‌ ಪಡೆದ ಸಿನಿಮಾ. ಬಾಕ್ಸ್‌ ಆಫೀಸ್‌ನಲ್ಲಿ ನೂರಾರು ಕೋಟಿ ಕಮಾಯಿ ಮಾಡಿ, ಕನ್ನಡ ಸಿನಿಮಾದ ತಾಕತ್ತನ್ನು ಪರಭಾಷಿಕರಿಗೂ ತೋರಿಸಿತ್ತು. ಆ ಸಿನಿಮಾದ ಯಶಸ್ಸಿನ ಬಳಿಕ ನಟ ದರ್ಶನ್‌ ಸದ್ಯ ಡೆವಿಲ್‌ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ತಾರಕ್‌ ಸಿನಿಮಾ ಬಳಿಕ ಮಿಲನಾ ಪ್ರಕಾಶ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಈಗಾಗಲೇ ಶೀರ್ಷಿಕೆ ಟೀಸರ್‌ ಮೂಲಕವೇ ಈ ಚಿತ್ರ ಬಾರೀ ನಿರೀಕ್ಷೆ ಹುಟ್ಟುಹಾಕಿದೆ.

ಈಗಾಗಲೇ ಡೆವಿಲ್‌ ಸಿನಿಮಾದ ಶೂಟಿಂಗ್‌ನಲ್ಲಿ ನಟ ದರ್ಶನ್‌ ಭಾಗವಹಿಸಿದ್ದಾರೆ. ಇದ್ಯಾವ ರೀತಿಯ ಸಿನಿಮಾ, ತಾರಾಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಸುಳಿವು ಬಿಟ್ಟು ಕೊಡದ ಡೆವಿಲ್‌, ಇದೇ ವರ್ಷದಲ್ಲಿಯೇ ತೆರೆಗೆ ಬರಲಿದೆ. ಇಂತಿಪ್ಪ ಸಿನಿಮಾ ಶೂಟಿಂಗ್‌ನ ಗ್ಯಾಪ್‌ನಲ್ಲಿಯೇ ದರ್ಶನ್‌ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಿಶೇಷವಾಗಿಯೇ ರಾತ್ರಿ ಕಳೆದಿದ್ದಾರೆ. ಹಾಗಂತ ಫಾರ್ಮ್‌ಹೌಸ್‌ ಎಸಿ ಕೋಣೆಯಲ್ಲಿ ಅವರೇನು ವಾಸ್ತವ್ಯ ಹೂಡಿಲ್ಲ ಬದಲಿಗೆ. ಫಾರ್ಮ್‌ಹೌಸ್‌ ಬಳಿಯ ಕೆರೆಯ ದಂಡೆಯಲ್ಲಿ ಹಾಯಾಗಿ ನಿದ್ರಿಸಿದ್ದಾರೆ.

ಜೋಡೆತ್ತಿನ ಬಂಡಿ ಏರಿದ ದರ್ಶನ್‌

ದರ್ಶನ್‌ ಮತ್ತವರ ಫಾರ್ಮ್‌ಹೌಸ್‌ನಲ್ಲಿನ ಆಪ್ತರ ಜತೆಗೆ ಜೋಡೆತ್ತಿನ ಬಂಡಿಯನ್ನು ಹೂಡಿದ್ದಾರೆ. ಇನ್ನೊಂದು ಬಂಡಿಯಲ್ಲಿ ಆರೇಳು ಮಂಚಗಳನ್ನೂ ಲೋಡ್‌ ಮಾಡಿದ್ದಾರೆ. ಪಕ್ಕದಲ್ಲಿ ಐಷಾರಾಮಿ ಕಾರ್‌ಗಳಿದ್ದರೂ, ಅದೆಲ್ಲವನ್ನು ಬಿಟ್ಟು, ತಾವೇ ಎತ್ತುಗಳನ್ನು ಕರೆತಂದು ಬಂಡಿ ಏರಿ, ಟಾರ್ಚ್‌ ಬೆಳಕಲ್ಲೇ ಕೆರೆದಂಡೆಗೆ ತೆರಳಿದ್ದಾರೆ. ವಿಶೇಷ ಏನೆಂದರೆ, ದರ್ಶನ್‌ ಅವರ ಜತೆಗೆ ಅವರ ಪುತ್ರ ವಿನೀಶ್‌ ಸಹ ಅಪ್ಪನ ಜತೆ ಎತ್ತಿನ ಬಂಡಿ ಏರಿದ್ದರು. ಅದಾದ ಬಳಿಕ ಕೆರೆದಂಡೆಯಲ್ಲಿ ಬೆಂಕಿ ಹಾಕಿ, ಒಂದಿಡಿ ರಾತ್ರಿಯನ್ನು ಬೆಳದಿಂಗಳ ಬೆಳಕಲ್ಲಿ ಕಳೆದಿದ್ದಾರೆ.

ಕೆರೆದಂಡೆಯಲ್ಲೇ ಸುಖನಿದ್ರೆ

ಹೀಗೆ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ದರ್ಶನ್‌ ಅವರ ಅಪಾರ ಅಭಿಮಾನಿಗಳು ಸರಳತೆಯ ಸರದಾರ, ಆಳಾಗಿ ದುಡಿಯೋಕು ಸೈ ರಾಜನಾಗಿ ಮೇರೆಯೋಕು ಸೈ..... ಜೈ ಡಿ ಬಾಸ್ ಎಂದೂ ಕಾಮೆಂಟ್‌ ಹಾಕುತ್ತಿದ್ದಾರೆ. ನಟ ದರ್ಶನ್‌ ಈ ರೀತಿ ಕಾಣಿಸಿಕೊಳ್ಳುವುದು ಇದೇ ಮೊದಲೇನಲ್ಲ. ಫಾರ್ಮ್‌ಹೌಸ್‌ನಲ್ಲಿ ತಮ್ಮಿಷ್ಟದ ಪ್ರಾಣಿಗಳ ಪಕ್ಕದಲ್ಲಿಯೇ ಮಂಚ ಹಾಕಿಕೊಂಡು ಮಲಗಿದ ಉದಾಹರಣೆಗಳಿವೆ. ತಾನೊಬ್ಬ ದೊಡ್ಡ ಸ್ಟಾರ್‌ ಎಂಬುದನ್ನು ಮರೆತು, ಸಾಮಾನ್ಯ ವ್ಯಕ್ತಿಯಂತೆಯೇ ದರ್ಶನ್‌ ಅವರನ್ನು ನೋಡುವುದೇ ಅವರ ಫ್ಯಾನ್ಸ್‌ ಕಣ್ಣಿಗೆ ಹಬ್ಬ.

ಇನ್ನು ಶೂಟಿಂಗ್‌ ಹೊರತುಪಡಿಸಿ ದರ್ಶನ್‌ ಅತಿ ಹೆಚ್ಚು ಸಮಯ ಕಳೆಯುವುದು ಮೈಸೂರು ಬಳಿಯ ಫಾರ್ಮ್‌ಹೌಸ್‌ನಲ್ಲಿ. ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕಿರುವ ದರ್ಶನ್‌, ಆಗಾಗ ಅವುಗಳಿಗೂ ಒಂದಷ್ಟು ಸಮಯ ಮೀಸಲಿಡುತ್ತಾರೆ. ಅದರಲ್ಲೂ ಹಬ್ಬ ಹರಿದಿನಗಳಲ್ಲಿ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ, ಹಬ್ಬಕ್ಕೆಂದೇ ಸಿಂಗರಿಸಿ ಸಂಕ್ರಾಂತಿ ನಿಮಿತ್ತ ಕಿಚ್ಚು ಹಾಯಿಸುವುದುಂಟು.‌