ಕನ್ನಡ ಸುದ್ದಿ  /  ಮನರಂಜನೆ  /  ನನ್ನ ಮಗಳೇ ದುಡಿದು ದೊಡ್ಮನೆಯ 3 ಕೋಟಿ ಸಾಲ ತೀರಿಸಿದ್ದಾಳೆ, ಯುವ ಓದಿದ್ದು ಬರೀ.. ; ಶ್ರೀದೇವಿ ತಂದೆ ಮಾತು

ನನ್ನ ಮಗಳೇ ದುಡಿದು ದೊಡ್ಮನೆಯ 3 ಕೋಟಿ ಸಾಲ ತೀರಿಸಿದ್ದಾಳೆ, ಯುವ ಓದಿದ್ದು ಬರೀ.. ; ಶ್ರೀದೇವಿ ತಂದೆ ಮಾತು

ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ವಿಚ್ಛೇದನದ ವಿಚಾರವಾಗಿ ಶ್ರೀದೇವಿ ತಂದೆ ಭೈರಪ್ಪ ಪ್ರತಿಕ್ರಿಯಿಸಿದ್ದಾರೆ. ನನ್ನ ಮಗಳಿಗೆ ದೊಡ್ಮನೆಯವರು ಕಿರುಕುಳ ನೀಡಿದ್ದಾರೆ. ಯುವ ಸಿನಿಮಾ ಶುರುವಾದ ಮೇಲೆ ಈ ರೀತಿಯ ಬೆಳವಣಿಗೆಗಳು ನಡೆದಿವೆ ಎಂದೂ ಅವರು ಆರೋಪಿಸಿದ್ದಾರೆ.

ನನ್ನ ಮಗಳೇ ದುಡಿದು ದೊಡ್ಮನೆಯ 3 ಕೋಟಿ ಸಾಲ ತೀರಿಸಿದ್ದಾಳೆ, ಅಪ್ಪು ಇದ್ದಿದ್ರೆ ಇವೆಲ್ಲ ಆಗ್ತಿರಲಿಲ್ಲ; ಶ್ರೀದೇವಿ ತಂದೆ ಮಾತು
ನನ್ನ ಮಗಳೇ ದುಡಿದು ದೊಡ್ಮನೆಯ 3 ಕೋಟಿ ಸಾಲ ತೀರಿಸಿದ್ದಾಳೆ, ಅಪ್ಪು ಇದ್ದಿದ್ರೆ ಇವೆಲ್ಲ ಆಗ್ತಿರಲಿಲ್ಲ; ಶ್ರೀದೇವಿ ತಂದೆ ಮಾತು

Sridevi Yuvarajkumar Divorce Case: ಚಂದನವನದಲ್ಲಿ ಡಿವೋರ್ಸ್‌ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್‌ ಬಳಿಕ ದೊಡ್ಮನೆಯ ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ಭೈರಪ್ಪ ಜೋಡಿ ನಡುವೆಯೂ ಯಾವುದೂ ಸರಿಯಿಲ್ಲ ಎಂಬುದು ಈಗಾಗಲೇ ಬಹಿರಂಗವಾಗಿದೆ. ವಿಚ್ಛೇದನಕ್ಕೆ ರಾಘವೇಂದ್ರ ರಾಜ್‌ಕುಮಾರ್‌ ಕಿರಿ ಮಗ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಗೆ ಪ್ರತಿಯಾಗಿ ಶ್ರೀದೇವಿ ಅವರಿಂದ ಉತ್ತರವೂ ರವಾನೆಯಾಗಿದೆ. ಅಷ್ಟಕ್ಕೂ ಈ ದಂಪತಿ ನಡುವೆ ನಡೆದಿದ್ದೇನು? ಈ ಬಗ್ಗೆ ಶ್ರೀದೇವಿ ಅವರ ತಂದೆ ಭೈರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಮಗಳನ್ನು ಕೀಳಾಗಿ ನೋಡಿದ್ದಾರೆ…

"ನನ್ನ ಮಗಳಿಗೆ ರಾಘವೇಂದ್ರ ರಾಜ್‌ಕುಮಾರ್‌ ಕುಟುಂಬದವರು ತುಂಬ ಟಾರ್ಚರ್‌ ಕೊಟ್ಟಿದ್ದಾರೆ. ಕೀಳಾಗಿ ನೋಡಿದ್ದಾರೆ. ಬೇಕಾಬಿಟ್ಟಿಯಾಗಿ ಆಕೆಯನ್ನು ಇರಿಸಿಕೊಂಡಿದ್ದಾರೆ. ಮಗಳ ಜತೆಗೆ ಗೌರವಯುತವಾಗಿ ನಡೆದುಕೊಳ್ಳಲಿಲ್ಲ. ಇಷ್ಟಿದ್ದರೂ ರಾಜ್‌ಕುಮಾರ್‌ ಅಕಾಡೆಮಿ ಮಾಡಿದ್ದೇ ನನ್ನ ಮಗಳು. ನನ್ನ ಮಗಳಿಂದ ಅವರಿಗೆ ಕೋಟ್ಯಂತರ ರೂಪಾಯಿ ಲಾಭ ಆಗಿದೆ. ಕೋಟ್ಯಂತರ ರೂಪಾಯಿ ಸಾಲ ತೀರಿಸಿದ್ದೇ ಅವಳು. ಯುವ ಅವರ ತಂದೆ ಸಾಲ ಆಗಿದ್ದೇಕೆ ಹೊಟೇಲ್‌ ಮಾರುವ ನಿರ್ಧಾರಕ್ಕೆ ಬಂದಿದ್ದರು. ಅದನ್ನ ಮಾರಬೇಡಿ ಅಂತ ಮೂರು ಕೋಟಿ ಸಾಲ ತೀರಿಸಿದ್ದು ನನ್ನ ಮಗಳು. ಸಾಲ ತೀರಿಸಿದ ಮೇಲೆ ಮತ್ತೆ ಸಾಲ ಮಾಡಲು ಶುರು ಮಾಡಿದ್ರು.

ಟ್ರೆಂಡಿಂಗ್​ ಸುದ್ದಿ

ಯುವ ಸಿನಿಮಾ ವೇಳೆ ಇದೆಲ್ಲ ಶುರುವಾಯ್ತು

ನವೆಂಬರ್‌ನಲ್ಲಿ ಇದೇ ವಿಚಾರಕ್ಕೆ ಜಗಳ ಆಗಿತ್ತು. ಆಗ ನಾನು ನನ್ನ ಹೆಂಡತಿ ಅವರ ಮನೆಗೆ ಹೋಗಿದ್ವಿ. ಆಗ ನನ್ನ ಮಗಳ ಜತೆಗೆ ಮಾತನಾಡಲು ಯುವ ತಂದೆ ಅವಕಾಶವೇ ಕೊಡಲಿಲ್ಲ. ಯುವ ಸಿನಿಮಾ ಶುರುವಾದ ಮೇಲೆ ಸಮಸ್ಯೆ ಶುರುವಾಯ್ತು. ಅರ್ಧ ಸಿನಿಮಾ ಆಗೋವರೆಗೂ ಎಲ್ಲವೂ ಸರಿಯಾಗಿತ್ತು. ನನ್ನ ಮಗಳೂ ಯುವ ಜತೆಗೆ ಸೆಟ್‌ಗೆ ಹೋಗಿ ಬರುತ್ತಿದ್ದಳು. ಅವಳು ಯಾವಾಗ ಅಮೆರಿಕಕ್ಕೆ ಹೋದಳೋ ಅಲ್ಲಿಂದ ಈ ಸಮಸ್ಯೆ ಶುರುವಾಯ್ತು. ಒಂದಾಗಿ ಇರಬೇಕು ಎಂಬುದೇ ಎಲ್ಲ ತಂದೆ ತಾಯಿಗಳಿಗೆ ಇರೋ ಆಸೆ. ಸದ್ಯ ನಾವು ಕಾನೂನು ಪ್ರಕಾರವೇ ಮುಂದುವರಿಯುತ್ತೇವೆ.

ಮಗಳು ಯೂಎಸ್‌ನಿಂದ ಬಂದ ಮೇಲೆ ಇಷ್ಟೆಲ್ಲ ಶುರುವಾಯ್ತು. ನನಗೆ ಇಷ್ಟ ಇಲ್ಲ, ನನಗೆ ನೀನು ಬೇಡ ಎಂದು ಆ ಹುಡುಗ ಹೇಳತೊಡಗಿದ. ನಾವೂ ಮನೆಗೆ ಹೋಗಿ ಮಾತನಾಡಲು ಕೂತರೆ, ಅವರ ಅಪ್ಪ ಅಮ್ಮ ನಮ್ಮನ್ನು ಮಾತನಾಡಿಸೋಕೆ ಬಿಡಲಿಲ್ಲ. ಮದುವೆ ಆಗೋಕೂ ಮುಂಚೆ ಪ್ರತಿ ಸಲ ಮನೆಗೆ ಬಂದು ಮದುವೆ ಮಾಡಿಕೊಡಿ ಅಂದಿದ್ದ. ಆರು ತಿಂಗಳು ಎಜುಕೇಶನ್‌ ಮುಗಿಸಿಕೊಂಡು ಬಂದ ಮೇಲೆ ಇದೆಲ್ಲ ಶುರುವಾಯ್ತು. ಸಿನಿಮಾ ಮಾಡುವಾಗಲೇ ಅವನ ಬಗ್ಗೆ ತಿಳಿದ ನಿರ್ಮಾಪಕರು, ನಿರ್ದೇಶಕರು ಬುದ್ದಿ ಹೇಳಿದ್ರು.

ಅಪ್ಪು ಇದ್ದಿದ್ರೆ ಹೀಗೆ ಆಗ್ತಿರಲಿಲ್ಲ..

ಯುವ ಹೀಗೆ ಆಗಬೇಕಾದರೆ, ಅವರ ಅಪ್ಪ ಅಮ್ಮನೇ ಕಾರಣ. ಈ ಮೊದಲು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬೈದು ಬುದ್ಧಿ ಹೇಳಿದ್ದಾರೆ. ಅವರ ಮಾತು ಕೇಳಿಲ್ಲ. ಪುನೀತ್‌ ಇದ್ದಿದ್ರೆ ಇವೆಲ್ಲ ಆಗ್ತಿರಲಿಲ್ಲ. ಎಲ್ಲ ಸರಿಯಾಗಿರೋದು. ಶಿವರಾಜ್‌ಕುಮಾರ್‌ ಅವರ ಗಮನಕ್ಕೂ ತರ್ತೀನಿ. ಮಗಳು ಬಂದ ಮೇಲೆ ಅವರ ಮನೆಗೆ ಹೋಗಿ ಬರ್ತಿವಿ. ಈ ಡಿವೋರ್ಸ್‌ ಅಪ್ಲೈ ಮಾಡಿದ್ದು ಅವರು, ಅವರ ಪ್ರಶ್ನೆಗಳಿಗೆ ಮಗಳು ಉತ್ತರ ಕೊಟ್ಟಿದ್ದಾಳೆ. ನನ್ನ ಮಗಳೇ ಚಿತ್ರಹಿಂಸೆ ಮಾಡ್ತಾಳೆ ಅಂತ ದೂರಿದ್ದಾರೆ. ಚಿಕ್ಕ ಮಕ್ಕಳಿಗೆ ಗೌರವ ಕೊಡುವಂಥವರು ನನ್ನ ಮಕ್ಕಳು ಎಂದು ಶ್ರೀದೇವಿ ತಂದೆ ಭೈರಪ್ಪ ಮಾಧ್ಯಮಗಳ ಜತೆಗೆ ಮಾತನಾಡಿದ್ದಾರೆ.