ನಟಿ ರಮ್ಯಾಗೆ 41ನೇ ವಯಸ್ಸಿಗೆ ಕೂಡಿ ಬಂತಾ ಕಂಕಣಭಾಗ್ಯ? ಇವರೇ ನೋಡಿ ವರ, ಉದ್ಯಮಿಯನ್ನು ವರಿಸಲಿದ್ದಾರೆ ಮೋಹಕ ತಾರೆ-sandalwood news actress mohaka taare ramya to marry soon ramya marriage gossip on social media mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಟಿ ರಮ್ಯಾಗೆ 41ನೇ ವಯಸ್ಸಿಗೆ ಕೂಡಿ ಬಂತಾ ಕಂಕಣಭಾಗ್ಯ? ಇವರೇ ನೋಡಿ ವರ, ಉದ್ಯಮಿಯನ್ನು ವರಿಸಲಿದ್ದಾರೆ ಮೋಹಕ ತಾರೆ

ನಟಿ ರಮ್ಯಾಗೆ 41ನೇ ವಯಸ್ಸಿಗೆ ಕೂಡಿ ಬಂತಾ ಕಂಕಣಭಾಗ್ಯ? ಇವರೇ ನೋಡಿ ವರ, ಉದ್ಯಮಿಯನ್ನು ವರಿಸಲಿದ್ದಾರೆ ಮೋಹಕ ತಾರೆ

ಸ್ಯಾಂಡಲ್‌ವುಡ್‌ನ ಮೋಹಕ ತಾರೆ ನಟಿ ರಮ್ಯಾ ಶೀಘ್ರದಲ್ಲಿ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಉದ್ಯಮಿಯೊಬ್ಬರನ್ನು ವರಿಸಲಿದ್ದು, ನವೆಂಬರ್‌ನಲ್ಲಿ ತಮ್ಮ ಬರ್ತ್‌ಡೇ ದಿನವೇ ರಮ್ಯಾ ಅವರ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ.

ಸ್ಯಾಂಡಲ್‌ವುಡ್‌ನ ಮೋಹಕ ತಾರೆ ನಟಿ ರಮ್ಯಾ ಶೀಘ್ರದಲ್ಲಿ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಸ್ಯಾಂಡಲ್‌ವುಡ್‌ನ ಮೋಹಕ ತಾರೆ ನಟಿ ರಮ್ಯಾ ಶೀಘ್ರದಲ್ಲಿ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Ramya wedding Gossip: ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಇನ್ನೇನು ಶೀಘ್ರದಲ್ಲಿ ಮದುವೆ ಆಗಲಿದ್ದಾರೆ. ಈ ಮೂಲಕ ಬ್ಯಾಚುಲರ್‌ ಲೈಫ್‌ಗೆ ಗುಡ್‌ ಬಾಯ್‌ ಹೇಳುವ ಸಮಯ ಹತ್ತಿರ ಬಂದಿದೆ. ಹೌದು, ನಟಿ ರಮ್ಯಾ ಅವರ ಮದುವೆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಹಲವರ ಜತೆಗೆ ನಟಿಯ ಹೆಸರು ತಳುಕು ಹಾಕಿಕೊಂಡಿತ್ತು. ಅವರು, ಇವರು ಎಂದೆಲ್ಲ ಕೆಲವರ ಫೋಟೋಗಳ ಜತೆಗೆ ನಟಿಯೂ ಕಾಣಿಸಿಕೊಂಡಿದ್ದರು. ಆದರೆ, ಅದೆಲ್ಲವನ್ನು ಅಷ್ಟೇ ನಯವಾಗಿಯೇ ತಿರಸ್ಕರಿಸಿದ್ದರು. ಇದೀಗ ಮತ್ತೆ ಅದೇ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹೌದು, ನಟಿ ರಮ್ಯಾ ಸಕ್ರಿಯ ಸಿನಿಮಾ ನಟನೆಯಿಂದ ದೂರ ಉಳಿದಿದ್ದಾರೆ. ಇತ್ತೀಚೆಗೆ ಒಂದಷ್ಟು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರೂ, ನಟಿಯಾಗಿಯೇ ಅವರನ್ನು ನೋಡುವ ಆಸೆ ಅವರ ಅಭಿಮಾನಿಗಳದ್ದು. ಈ ನಡುವೆ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳಿಗೆ ಮದುವೆ ಯಾವಾಗ ಎಂಬ ಕಾಮೆಂಟ್‌ಗಳೇ ಹೆಚ್ಚು. ಇದೀಗ ಇದೇ ನಟಿಯ ಮದುವೆ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಇನ್ನೇನು ಬರ್ತ್‌ಡೇ ದಿನ ರಮ್ಯಾ ಕಲ್ಯಾಣ ನೆರವೇರಲಿದೆ ಎಂದೇ ಹೇಳಲಾಗುತ್ತಿದೆ.

ಉದ್ಯಮಿಯನ್ನು ವರಿಸ್ತಾರಾ ರಮ್ಯಾ?

 ಹಾಗಾದರೆ ರಮ್ಯಾ ಅವರನ್ನು ವರಿಸಲಿರುವ ಹುಡುಗ ಯಾರು? ಸಿನಿಮಾ ನಟರಾ ಅಥವಾ ಉದ್ಯಮಿಯಾ? ಸದ್ಯದ ಕೆಲ ಮೂಲಗಳ ಪ್ರಕಾರ ಉದ್ಯಮಿಯೊಬ್ಬರನ್ನು ವರಿಸಲಿದ್ದಾರಂತೆ ರಮ್ಯಾ. ಇನ್ನೇನು ನವೆಂಬರ್‌ನಲ್ಲಿ ರಮ್ಯಾ ಅವರ ಬರ್ತ್‌ಡೇ. ಆ ತಿಂಗಳಲ್ಲಿಯೇ ಮದುವೆಯೂ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಚೌಧರಿ ಗಾರ್ಮೆಂಟ್ಸ್‌ ಓನರ್‌ ಪ್ರಭವ್‌ ಚೌಧರಿ ಅವರ ಜತೆಗೆ ರಮ್ಯಾ ಅವರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ನಟಿ ರಮ್ಯಾ ಮದುವೆ ವಿಚಾರದ ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಗಾಸಿಪ್‌ಗಳು ಗುಲ್ಲೆಬ್ಬಿಸಿದ್ದವು. ಇದೀಗ ಅಂಥದ್ದೇ ಮತ್ತೊಂದು ವದಂತಿ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಇದು ನಿಜವಾ? ಬೆಂಕಿ ಇಲ್ಲದೆ ಹೊಗೆಯಾಡದು ಎಂಬ ಮಾತಂತೆ ರಮ್ಯಾ ಮದುವೆ ಆಗಲಿದ್ದಾರೆ ಎಂದೂ ದೊಡ್ಡ ಮಟ್ಟದ ಸದ್ದು ಜೋರಾಗಿದೆ. ಆದರೆ, ಈ ಬಗ್ಗೆ ರಮ್ಯಾ ಅವರೇ ಅಧಿಕೃತವಾಗಿ ಹೇಳಬೇಕಿದೆ.

ಸಿನಿಮಾ ವಿಚಾರಕ್ಕೆ ಬಂದ್ರೆ...

ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ, ಕಳೆದ ವರ್ಷ ರಾಜ್‌ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್‌ ಮುಖ್ಯಭೂಮಿಕೆಯಲ್ಲಿದ್ದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾವನ್ನು ತಮ್ಮದೇ ಆಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಹೆಸರಿನ ನಿರ್ಮಾಣ ಸಂಸ್ಥೆ ತೆರೆದು ನಿರ್ಮಾಣ ಮಾಡಿದ್ದರು ರಮ್ಯಾ. ಅದಾದ ಬಳಿಕ ಸದ್ಯ ಉತ್ತರಕಾಂಡ ಸಿನಿಮಾದಲ್ಲಿಯೂ ರಮ್ಯಾ ನಟಿಸುತ್ತಿದ್ದಾರೆ. ಈ ನಡುವೆ ಆ ಸಿನಿಮಾದಿಂದಲೂ ಅವರು ಹೊರನಡೆದಿದ್ದಾರೆ ಎಂಬ ಮಾತಿದೆ.

mysore-dasara_Entry_Point