ತರುಣ್‌ ಸುಧೀರ್‌- ಸೊನಾಲ್‌ ಹನಿಮೂನ್‌ ಎಲ್ಲಿ, ಫಸ್ಟ್‌ ನೈಟ್‌ ಆಯ್ತಾ? ಆಂಕರ್‌ ಅನುಶ್ರಿ ಜತೆ ನವಜೋಡಿಯ ಖಾಸಗಿಬಾತ್‌!-sandalwood news after tharun sudhir sonal marriage anchor anushree interview with fun questions viral video pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ತರುಣ್‌ ಸುಧೀರ್‌- ಸೊನಾಲ್‌ ಹನಿಮೂನ್‌ ಎಲ್ಲಿ, ಫಸ್ಟ್‌ ನೈಟ್‌ ಆಯ್ತಾ? ಆಂಕರ್‌ ಅನುಶ್ರಿ ಜತೆ ನವಜೋಡಿಯ ಖಾಸಗಿಬಾತ್‌!

ತರುಣ್‌ ಸುಧೀರ್‌- ಸೊನಾಲ್‌ ಹನಿಮೂನ್‌ ಎಲ್ಲಿ, ಫಸ್ಟ್‌ ನೈಟ್‌ ಆಯ್ತಾ? ಆಂಕರ್‌ ಅನುಶ್ರಿ ಜತೆ ನವಜೋಡಿಯ ಖಾಸಗಿಬಾತ್‌!

Anchor Anushree with Tharun Sudhir Sonal: ಸ್ಯಾಂಡಲ್‌ವುಡ್‌ನ ನವವಿವಾಹಿತರಾದ ತರುಣ್‌ ಸುಧೀರ್‌ ಮತ್ತು ಸೋನಲ್‌ ಮೊಂಥೆರೋ ಜತೆ ಆಂಕರ್‌ ಅನುಶ್ರೀ ತನ್ನ ಯೂಟ್ಯೂಬ್‌ ಚಾನೆಲ್‌ಗಾಗಿ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮದುವೆ ನಂತರದ ಶಾಸ್ತ್ರಗಳು, ಹನಿಮೂನ್‌ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಶ್ನಿಸಿದ್ದಾರೆ.

ಆಂಕರ್‌ ಅನುಶ್ರಿ ಯೂಟ್ಯೂಬ್‌ ಸಂದರ್ಶನದಲ್ಲಿ ತರುಣ್‌ ಸುಧೀರ್‌ ಮತ್ತು ಸೋನಲ್‌
ಆಂಕರ್‌ ಅನುಶ್ರಿ ಯೂಟ್ಯೂಬ್‌ ಸಂದರ್ಶನದಲ್ಲಿ ತರುಣ್‌ ಸುಧೀರ್‌ ಮತ್ತು ಸೋನಲ್‌

Tharun Sudhir Sonal Lovestory: ಆಂಕರ್‌ ಅನುಶ್ರೀ ಯೂಟ್ಯೂಬ್‌ ಚಾನೆಲ್‌ನಲ್ಲಿ ಸದ್ಯದಲ್ಲಿಯೇ ಕಾಟೇರ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಸ್ಯಾಂಡಲ್‌ವುಡ್‌ ನಟಿಯರ ಪ್ರೇಮಕಥೆ ಹೊರಬೀಳಲಿದೆ. ಇತ್ತೀಚೆಗಷ್ಟೇ ಶುಭವಿವಾಹದ ಕನ್ನಡ ಸಿನಿಮಾ ಉದ್ಯಮದ ಈ ಕ್ಯೂಟ್‌ ಜೋಡಿಯ ವಿವಾಹ, ಲವ್‌ ಸ್ಟೋರಿ ಕುರಿತು ಅನುಶ್ರೀ ಸಾಕಷ್ಟು ಮಾಹಿತಿ ಹೊರತೆಗೆಯುವ ನಿರೀಕ್ಷೆಯಿದೆ. "ಮುದ್ದಾದ ಪ್ರೇಮ, ಬ್ಲಾಕ್‌ಬಸ್ಟರ್‌ ಸಿನಿಮಾ, ಸೋನಲ್‌ ಜತೆ ನಮ್ಮ ತರುಣ" ಎಂದು ಪ್ರಮೋ ವಿಡಿಯೋವನ್ನು ಆಂಕರ್‌ ಅನುಶ್ರೀ ಹಂಚಿಕೊಂಡಿದ್ದಾರೆ. ಈ ಪ್ರಮೋದಲ್ಲಿ ಸಾಕಷ್ಟು ತರಲೆ, ತಮಾಷೆಯ ಪ್ರಶ್ನೆಗಳು ಇವೆ.

ಫಸ್ಟ್‌ ನೈಟ್‌ ಆಯ್ತಾ?

"ಮದುವೆ ನಂತರದ ಎಲ್ಲಾ ಶಾಸ್ತ್ರಗಳು ಮುಗೀತಾ?" ಎಂದು ಅನುಶ್ರೀ ಪ್ರಶ್ನಿಸಿದಾಗ ತರುಣ್‌ ಮತ್ತು ಸೋನಲ್‌ ಗೊಳ್ಳೆಂದು ನಕ್ಕಿದ್ದಾರೆ. "ಅವತ್ತೊಂದಿನ ದರ್ಶನ್‌ ಅರ್ಧ ಗಂಟೆ ಬೇಗ ಬಂದ್ರು. ಅದೇನು ಇವಳಿಗೆ ಮಾತ್ರ ಚೆನ್ನಾಗಿ ಫ್ರೇಮ್‌ ಇಡ್ತಿ ನೀನು ಎಂದು ಹೇಳಿದ್ರು" ಎಂದು ಹೇಳಿ ತರುಣ್‌ ನಗುವ ದೃಶ್ಯವೂ ಪ್ರಮೋದಲ್ಲಿದೆ. ಇದೇ ಸಂದರ್ಭದಲ್ಲಿ ವಿಡಿಯೋ ಕಾಲ್‌ ಮೂಲಕ ಒಬ್ಬರು ಪ್ರಶ್ನೆ ಕೇಳಿದ್ದಾರೆ. "ನನ್ನ ಎರಡನೇ ಪ್ರಶ್ನೆ, ಹನಿಮೂನ್‌ಗೆ ಎಲ್ಲಿಗೆ ಹೋಗ್ತಿರಾ ಸರ್‌" ಎಂದು ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ತರುಣ್‌ "ಕ್ಲೈಮೇಟು, ಬಜೆಟು... " ಎಂದು ಉತ್ತರಿಸುತ್ತಾರೆ.

ನಿಮ್ಮಿಬ್ಬರಲ್ಲಿ ಜಾಸ್ತಿ ರೊಮ್ಯಾಂಟಿಕ್‌ ಯಾರು?

ಅನುಶ್ರೀ ಈ ಪ್ರಶ್ನೆ ಕೇಳಿದಾಗ ತರುಣ್‌ ಸುಧೀರ್‌ "ನಾನು ರವಿಚಂದ್ರನ್‌ ಪಿಕ್ಚರ್‌ ತರಹ" ಎನ್ನುತ್ತ ಕೆಂಪು ಬಲೂನ್‌ ಎತ್ತಿಕೊಂಡಿರುವ ದೃಶ್ಯವಿದೆ. ಬಲೂನ್‌ ಎತ್ತಿಕೊಂಡು ಬಲೂನ್‌ ಮರೆಯಲಿ ಸೋನಲ್‌ಗೆ ಸಿಹಿಮುತ್ತು ನೀಡುವ ದೃಶ್ಯವೂ ಇದೆ.

ಇದೇ ಸಮಯದಲ್ಲಿ "ಎಲ್ಲಾ ಪುರೋಹಿತರ ಸಮ್ಮುಖದಲ್ಲಿ, ಕುಟುಂಬದ ಸಮ್ಮುಖದಲ್ಲಿ ಗಂಡ ಹೆಂಡತಿ ಅನ್ನೋದು ಮೊದಲ ಸುಳ್ಳು" ಎಂದು ತರುಣ್‌ ಹೇಳಿದ್ದಾರೆ. ಇಷ್ಟುಮಾತ್ರವಲ್ಲದೆ ಸೋನಾಲ್‌ ಗುಲಾಬಿ ಹೂವು ಹಿಡಿದುಕೊಂಡಿರುವುದು, ತರುಣ್‌ ಜ್ಯೂಸ್‌ ಕುಡಿಸಲು ಪ್ರಯತ್ನಿಸುವುದು ಇತ್ಯಾದಿ ಚಿತ್ರಣಗಳೂ ಈ ಪ್ರಮೋ ವಿಡಿಯೋದಲ್ಲಿವೆ. "ಹೆಂಡತಿಗೆ ಚೆನ್ನಾಗಿ ಟೈಂ ಕೊಟ್ರೆ ಮಕ್ಕಳಾಗುತ್ತೆ, ಹಠ ಮಾಡ್ತಾವೆ" ಎಂದು ನೆನಪಿರಲಿ ಪ್ರೇಮ್‌ ಡೈಲಾಗು ಇದೆ. ಇಷ್ಟು ಮಾತ್ರವಲ್ಲದೆ ತರುಣ್‌ ಸುಧೀರ್‌ನನ್ನ ಹತ್ತಿರ ಸೆಳೆದು ಸೋನಲ್‌ ಮುತ್ತು ನೀಡುವ ದೃಶ್ಯವೂ ಇದೆ.

ಅಪ್ಪನ ನೆನಪು

ಈ ಸಂದರ್ಶನದಲ್ಲಿ ಫನ್‌ ಜೊತೆಗೆ ಒಂದಿಷ್ಟು ಭಾವುಕ ಅಂಶಗಳೂ ಇರುವ ಸೂಚನೆ ಇವೆ. ತರುಣ್‌ ಸುಧೀರ್‌ ತನ್ನ ತಂದೆಯನ್ನು ನೆನಪಿಸಿಕೊಂಡಿದ್ದಾರೆ. ಮದುವೆ ಮನೆಯಲ್ಲಿ ತಂದೆಯ ಫೋಟೋ ಇಟ್ಟು, ನನ್ನ ಮದುವೆಯನ್ನು ತಂದೆ ನೋಡ್ತಾ ಇದ್ದಾರೆ ಎಂಬ ಫೀಲ್‌ ಕುರಿತು ಮಾತನಾಡಿದ್ದಾರೆ.

ಒಟ್ಟಾರೆ ಅನುಶ್ರೀ ಸಂದರ್ಶನದಲ್ಲಿ ತರುಣ್‌ ಸುಧೀರ್‌ ಮತ್ತು ಸೋನಲ್‌ ನಡುವಿನ ಪ್ರೀತಿಯ ಮಾತುಗಳು ಅತ್ಯಂತ ಸೊಗಸಾಗಿರುವ ಸೂಚನೆ ಈ ಪ್ರಮೋದಲ್ಲಿ ದೊರಕಿದೆ. ಈ ವಿಡಿಯೋ ಯಾವಾಗ ಪ್ರಸಾರವಾಗಲಿದೆ ಎಂಬ ಮಾಹಿತಿ ಹೊರಬಿದ್ದಿಲ್ಲ. ಸುಮಾರು ನಾಲ್ಕು ತಿಂಗಳಿನಿಂದ ಅನುಶ್ರೀ ಯೂಟ್ಯೂಬ್‌ ಅಪ್‌ಡೇಟ್‌ ಆಗಿಲ್ಲ. ಇದೀಗ ತರುಣ್‌ ಸೋನಾಲ್‌ ಇಂಟರ್‌ವ್ಯೂ ಮೂಲಕ ಮತ್ತೆ ಬ್ಲಾಕ್‌ಬಸ್ಟರ್‌ ಆಗುವ ಸೂಚನೆ ಇದೆ.