ಕನ್ನಡ ಸುದ್ದಿ  /  ಮನರಂಜನೆ  /  Chef ಚಿದಂಬರ ಚಿತ್ರದ ಮೊದಲ ಹಾಡು ರಿಲೀಸ್;‌ ಶೀರ್ಷಿಕೆ ಗೀತೆಗೆ ಧ್ವನಿಯಾದ ನಾಯಕ ಅನಿರುದ್ಧ ಜತ್ಕರ್

chef ಚಿದಂಬರ ಚಿತ್ರದ ಮೊದಲ ಹಾಡು ರಿಲೀಸ್;‌ ಶೀರ್ಷಿಕೆ ಗೀತೆಗೆ ಧ್ವನಿಯಾದ ನಾಯಕ ಅನಿರುದ್ಧ ಜತ್ಕರ್

ನಟ ಅನಿರುದ್ಧ ಜತ್ಕರ್‌ ನಾಯಕ ನಟನಾಗಿ ಬೆಳ್ಳಿತೆರೆಗೆ ಕಂಬ್ಯಾಕ್‌ ಮಾಡುತ್ತಿದ್ದಾರೆ. chef ಚಿದಂಬರ ಸಿನಿಮಾದಲ್ಲಿ ಟೈಟಲ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಇದೇ ಚಿತ್ರದ ಶೀರ್ಷಿಕೆ ಗೀತೆ ರಿಲೀಸ್‌ ಆಗಿದ್ದು, ಆ ಹಾಡಿಗೆ ಸ್ವತಃ ಅನಿರುದ್ಧ ಧ್ವನಿ ನೀಡಿದ್ದಾರೆ.

chef ಚಿದಂಬರ ಚಿತ್ರದ ಮೊದಲ ಹಾಡು ರಿಲೀಸ್;‌ ಶೀರ್ಷಿಕೆ ಗೀತೆಗೆ ಧ್ವನಿಯಾದ ನಾಯಕ ಅನಿರುದ್ಧ ಜತ್ಕರ್
chef ಚಿದಂಬರ ಚಿತ್ರದ ಮೊದಲ ಹಾಡು ರಿಲೀಸ್;‌ ಶೀರ್ಷಿಕೆ ಗೀತೆಗೆ ಧ್ವನಿಯಾದ ನಾಯಕ ಅನಿರುದ್ಧ ಜತ್ಕರ್

Chef Chidambara title track: ಕಿರುತೆರೆಯಲ್ಲಿ ಜೊತೆ ಜೊತೆಯಲಿ ಸೀರಿಯಲ್‌ ಮೂಲಕ ಕಮಾಲ್‌ ಮಾಡಿದ್ದ ನಟ ಅನಿರುದ್ಧ ಜತ್ಕರ್‌, ಒಂದಷ್ಟು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಆ ಪಾತ್ರದಿಂದಲೇ ಹಿಂದೆ ಸರಿದರು. ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಂದು, ಸೂರ್ಯವಂಶ ಸೀರಿಯಲ್‌ ಘೋಷಣೆ ಮಾಡಿದರು. ಅದರ ಜತೆಯಲ್ಲಿಯೇ chef ಚಿದಂಬರ ಸಿನಿಮಾ ಸಹ ಘೋಷಣೆ ಮಾಡಿ ಸುದ್ದಿಯಾಗಿದ್ದರು. ಈಗ ಇದೇ chef ಚಿದಂಬರ ಸಿನಿಮಾ ಬಿಡುಗಡೆಯ ಸನಿಹಕೆ ಬಂದು ನಿಂತಿದೆ. ಅಂದರೆ, ಸದ್ದಿಲ್ಲದೆ ಸಿನಿಮಾ ಪ್ರಚಾರಕ್ಕೆ ಅಣಿಯಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಟೀಸರ್‌ ಮೂಲಕ ಗಮನ ಸೆಳೆದಿದ್ದ ಸಿನಿಮಾ

ಎಂ.ಆನಂದರಾಜ್ ನಿರ್ದೇಶನದ chef ಚಿದಂಬರ ಸಿನಿಮಾದಲ್ಲಿ ಬಹು ವರ್ಷಗಳ ಬಳಿಕ ಬೆಳ್ಳಿತೆರೆಮೇಲೆ ಮತ್ತೆ ನಾಯಕರಾಗಿ ಎಂಟ್ರಿಕೊಟ್ಟಿದ್ದಾರೆ ನಟ ಅನಿರುದ್ಧ ಜತ್ಕರ್.‌ ವಿಶೇಷ ಎನಿಸುವ ಪಾತ್ರವನ್ನೇ ಆಯ್ಕೆ ಮಾಡಿಕೊಂಡು, ಕುತೂಹಲ ಮೂಡಿಸಿದ್ದರು. ಅದಾದ ಬಳಿಕ ಬಂದ chef ಚಿದಂಬರ ಚಿತ್ರದ ಫಸ್ಟ್‌ ಲುಕ್‌, ಕಿರು ಟೀಸರ್‌ ಗಮನ ಸೆಳೆದಿತ್ತು. ಈಗ ಇದೇ ಚಿತ್ರದ ಟೈಟಲ್‌ ಟ್ರ್ಯಾಕ್‌ ಹೊರಬಂದಿದೆ. ವಿಶೇಷ ಏನೆಂದರೆ, ಈ ಟೈಟಲ್‌ ಟ್ರ್ಯಾಕ್‌ಗೆ ಸ್ವತಃ ಅನಿರುದ್ಧ ಧ್ವನಿ ನೀಡಿದ್ದಾರೆ.

ಟೈಟಲ್‌ ಟ್ರ್ಯಾಕ್‌ಗೆ ಅನಿರುದ್ಧ ಧ್ವನಿ

chef ಚಿದಂಬರ ಚಿತ್ರದ ಚಿತ್ರೀಕರಣ ಹಾಗೂ ಪೊಸ್ಟ್ ಪ್ರೊಡಕ್ಷನ್ ವರ್ಕ್ ಪೂರ್ಣವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಆರಂಭದ ಫಸ್ಟ್ ಲುಕ್ ಪೋಸ್ಟರ್ ನಿಂದಲೇ ಈ ಚಿತ್ರ ಸಾಕಷ್ಟು ಕುತೂಹಲ ಹುಟ್ಟಿಸಿತ್ತು. ಇತ್ತೀಚಿಗೆ ಈ ಚಿತ್ರದ ಟೈಟಲ್ ಟ್ರ್ಯಾಕ್ A2 music ಮೂಲಕ ಬಿಡುಗಡೆಯಾಗಿದೆ. ಈ ಚಿತ್ರದ ಮೊದಲ ಗೀತೆಯಾಗಿ ಇದು ಬಿಡುಗಡೆಯಾಗುತ್ತಿದೆ. ಶ್ರೀಗಣೇಶ್ ಪರಶುರಾಮ್ ಬರೆದು, ರಿತ್ವಿಕ್ ಮುರಳಿಧರ್ ಸಂಗೀತ ನೀಡಿರುವ ಈ ಕ್ಯಾಚಿ ಸಾಹಿತ್ಯವುಳ್ಳ ಹಾಡನ್ನು ನಾಯಕ ಅನಿರುದ್ಧ್ ಅವರೇ ಹಾಡಿದ್ದಾರೆ.

ಸದ್ಯ ಬಿಡುಗಡೆಯಾಗಿರುವ ಶೀರ್ಷಿಕೆ ಗೀತೆಯಲ್ಲಿ ರ್ಯಾಪ್‌ ಶೈಲಿಯನ್ನೂ ಅಳವಡಿಸಿಕೊಳ್ಳಲಾಗಿದೆ. ಆ ಭಾಗಕ್ಕೆ ರೋಹಿತ್ ಧ್ವನಿ ನೀಡಿದ್ದಾರೆ. ಮೊದಲ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ದಮ್ತಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ chef ಚಿದಂಬರ ಸಿನಿಮಾ ನಿರ್ಮಾಣವಾಗಿದೆ. ರೂಪ ಡಿ.ಎನ್ ಈ ಚಿತ್ರದ ನಿರ್ಮಾಪಕರು. ಆನಂದ್‌ರಾಜ್‌ ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ರಿತ್ವಿಕ್‌ ಮುರಳೀಧರ್‌ ಮ್ಯೂಸಿಕ್‌, ಉದಯಲೀಲಾ ಅವರ ಕ್ಯಾಮರಾ ವರ್ಕ್‌, ವಿಜೇತ ಚಂದ್ರ ಅವರ ಸಂಕಲನ ಈ ಸಿನಿಮಾಕ್ಕಿದೆ.

ಬಹುತಾರಾಗಣ, ಬಲಿಷ್ಠ ತಾಂತ್ರಿಕ ಬಳಗ

ಮಾಧುರಿ ಪರಶುರಾಮ್‌ ಅವರ ಡಾನದ್ಸ್‌ ಕೋರಿಯೋಗ್ರಾಫಿ, ನರಸಿಂಹಮೂರ್ತಿ ಸ್ಟಂಟ್‌ ನಿರ್ದೇಶಕರಾಗಿ ದುಡಿದಿದ್ದಾರೆ. ವಿಕ್ರಾಂತ್‌ ರೋಣ ಸಿನಿಮಾಕ್ಕೆ ಡಿಐ ವಿಭಾಗದಲ್ಲಿ ಕೆಲಸ ಮಾಡಿದ್ದ ಆಶಿಕ್‌ ಕುಸಗೊಳ್ಳಿ chef ಚಿದಂಬರನಿಗೂ ಕೈ ಜೋಡಿಸಿದ್ದಾರೆ. ಬಲಿಷ್ಠ ತಾಂತ್ರಿಕ ವರ್ಗದ ಜತೆಗೆ ನುರಿತ ತಾರಾಗಣವೂ ಈ ಸಿನಿಮಾದಲ್ಲಿದೆ. ಅನಿರುದ್ಧ್‌ಗೆ ನಟಿ ನಿಧಿ ಸುಬ್ಬಯ್ಯ ಮತ್ತು ಲವ್‌ ಮಾಕ್‌ಟೇಲ್‌ ಸಿನಿಮಾ ಖ್ಯಾತಿಯ ರೆಚೆಲ್‌ ಡೇವಿಡ್‌ ನಟಿಸಿದ್ದಾರೆ. ಇನ್ನುಳಿದಂತೆ ಶರತ್‌ ಲೋಹಿತಾಶ್ವ, ಕೆ. ಎಸ್‌ ಶ್ರೀಧರ್‌, ಶಿವಮಣಿ ಸೇರಿ ಇನ್ನೂ ಹಲವರು ಪಾತ್ರವರ್ಗದಲ್ಲಿದ್ದಾರೆ. ಕೇವಲ 29 ದಿನಗಳಲ್ಲಿ ಶೂಟಿಂಗ್‌ ಮುಗಿಸಿಕೊಂಡಿದೆ chef ಚಿದಂಬರ ಸಿನಿಮಾ.

IPL_Entry_Point