Kaatera Release Date: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ, ಫ್ಯಾನ್ಸ್‌ಗೆ ಖುಷಿಯೋ ಖುಷಿ
Kaatera Movie release date: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಕನ್ನಡ ಸಿನಿಮಾ ಕಾಟೇರ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಇದೇ ಡಿಸೆಂಬರ್ 29ರಂದು ಕಾಟೇರ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬೆಂಗಳೂರು: ದರ್ಶನ್ ತೂಗುದೀಪ ನಟನೆಯ ಬಹುನಿರೀಕ್ಷಿತ ಕನ್ನಡ ಸಿನಿಮಾ ಕಾಟೇರ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಡಿಸೆಂಬರ್ 29, 2023ರಂದು ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಚಿತ್ರದ ದಿನಾಂಕ ಪ್ರಕಟಿಸುವುದರ ಜತೆಗೆ ಈ ಸಿನಿಮಾದ ಸಣ್ಣ ಝಲಕ್ ಅನ್ನೂ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
ದರ್ಶನ್ ನಟನೆಯ ಕಾಟೇರ' ಚಿತ್ರವನ್ನು ರಾಕ್‌ಲೈನ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿ ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನವಿದೆ. ತರುಣ್ ನಿರ್ದೇಶನದ 'ಚೌಕ' ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಇವರದ್ದೇ ನಿರ್ದೇಶನದ ಕಾಟೇರ ಸಿನಿಮಾ ಈ ವರ್ಷದ ಅಂತ್ಯಕ್ಕೆ ಅಂದರೆ ಮುಂದಿನ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಟಿಸಿದ್ದಾರೆ. ಇದನ್ನೂ ಓದಿ: 'ಅಮ್ಮ ನೋಡಿಲ್ಲಿ, ಯಾರ್ ಬಂದಿದಾರೆ.. ದರ್ಶನ್ ಬಂದಿದಾನಮ್ಮ'; ಲೀಲಾವತಿ ಆರೋಗ್ಯ ವಿಚಾರಿಸಿದ ದಚ್ಚು
ಇದೀಗ ಕಾಟೇರ ಚಿತ್ರದ ಬಿಡುಗಡೆ ದಿನಾಂಕದ ವಿಡಿಯೋದಲ್ಲಿ ಚಿತ್ರದ ಶೂಟಿಂಗ್ ದೃಶ್ಯಗಳು, ಕತ್ತಿಗಳು, ದರ್ಶನ್ ಲುಕ್‌ನ ಝಲಕ್ ತೋರಿಸಲಾಗಿದೆ. ಕಾಟೇರ ಚಿತ್ರದಲ್ಲಿ ನಟಿ ಶ್ರುತಿ ಕೂಡಾ ನಟಿಸಿದ್ದಾರೆ. ಸ್ಯಾಂಡಲ್‌ವುಡ್ ನಟ ದರ್ಶನ್ ನಟನೆಯ ಕಾಟೇರ್ ಸಿನಿಮಾ ಬಹುತೇಕ ಶೂಟಿಂಗ್ ಮುಗಿಸಿಕೊಂಡಿದೆ. ಹಿರಿಯ ನಟರಾದ ಅವಿನಾಶ್, ಜಗಪತಿ ಬಾಬು, ವಿನೋದ್ ಆಳ್ವ, ಕುಮಾರ್ ಗೋವಿಂದ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ರೆಬಲ್ ಸ್ಟಾರ್ ಅಂಬರೀಶ್‌ಗೆ ಜೂನಿಯರ್, ಅಭಿಷೇಕ್ ಅಂಬರೀಶ್‌ಗೆ ಸೀನಿಯರ್, ಯಾರಿವರು; ಬ್ಯಾಡ್ ಮ್ಯಾನರ್ಸ್ ವೇದಿಕೆಯಲ್ಲಿ ದರ್ಶನ್ ಗುಣಗಾನ
ಕಾಟೇರ ಚಿತ್ರದಲ್ಲಿ ಹಿರಿಯ ನಟ ವೈಜ್ಯನಾಥ್ ಬಿರಾದಾರ್ ಹಾಗೂ ಒಂದಲ್ಲಾ ಎರಡಲ್ಲಾ ಸಿನಿಮಾ ಖ್ಯಾತಿಯ ಬಾಲನಟ ಮಾಸ್ಟರ್ ರೋಹಿತ್ ಕೂಡಾ ನಟಿಸಿದ್ದಾರೆ. 'ಕಾಟೇರ', ದರ್ಶನ್ ಅಭಿನಯದ 56ನೇ ಸಿನಿಮಾ. ಇದು 70ರ ದಶಕದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗುತ್ತಿರುವ ಸಿನಿಮಾ. ಈ ಚಿತ್ರ 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಹೊಂದಿದೆ ಎಂದು ಈ ಹಿಂದೆ ಚಿತ್ರತಂಡ ಮಾಹಿತಿ ನೀಡಿತ್ತು.
ಸದ್ಯ ಕಾಟೇರ ಬಿಡುಗಡೆ ದಿನಾಂಕದ ಘೋಷಣೆಯನ್ನು ನೋಡಿ ಡಿಬಾಸ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಹಾಯ್ ಡಿ ಬಾಸ್ ಫ್ಯಾನ್ಸ್ ಕಾಟೇರ ಹವಾ ಶುರುವಾಯಿತು ಎಂದು ನೂರಾರು ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಒಟ್ಟಾರೆ, ಕಾಟೇರ ಚಿತ್ರದ ದಿನಾಂಕ ಘೋಷಣೆ ಮಾಡಿರುವುದು ಅಭಿಮಾನಿಗಳಿಗೆ ಹೊಸ ಹುಮ್ಮಸ್ಸು ತಂದಿದೆ. ಇದನ್ನು ಓದಿದ್ದೀರಾ?: ನೀವೇ ನೋಡ್ರಪ್ಪ ಯಾರು ಹೈಟು ಅಂತ.. ಅಭಿ, ಧನ್ವೀರ್, ವಿಕ್ಕಿಗಿಂತ್ಲೂ ನಾವೇ ಕುಳ್ಳರು! ದರ್ಶನ್ ಹಾಸ್ಯ ಕಚಗುಳಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಕಾಟೇರ ಸಿನಿಮಾದ ಹೊಸ ಪೋಸ್ಟರ್ ಹಂಚಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಕಾಟೇರ ನಿರ್ದೇಶಕರಾದ ತರುಣ್ ಸುಧೀರ್ ಕೂಡ ಇದೇ ಪೋಸ್ಟರ್ ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ಗಳಿಗೆ ಡಿಬಾಸ್ ಅಭಿಮಾನಿಗಳು ಜೈಹೋ ಎಂದಿದ್ದರು. ಇದೀಗ ಯೂಟ್ಯೂಬ್‌ನಲ್ಲಿ ಮಾಡಿರುವ ಹೊಸ ಘೋಷಣೆಯಿಂದ ಅಭಿಮಾನಿಗಳು ಹರ್ಷ ಹೆಚ್ಚಾಗಿದೆ.